Homeಚಳವಳಿ2 ನಿಮಿಷದ ಕಿರುಚಿತ್ರ ದೂಸ್ರಾ: CAA-NRC-NPR ವಿರುದ್ಧ ಸಂದೇಶ ಸಾರಿದ ಇರ್ಫಾನ್-ಪಾ.ರಂಜಿತ್ ಜೋಡಿ

2 ನಿಮಿಷದ ಕಿರುಚಿತ್ರ ದೂಸ್ರಾ: CAA-NRC-NPR ವಿರುದ್ಧ ಸಂದೇಶ ಸಾರಿದ ಇರ್ಫಾನ್-ಪಾ.ರಂಜಿತ್ ಜೋಡಿ

ನೀವು ನಿರಂತರವಾಗಿ ನಮ್ಮನ್ನು ಬೇಟೆಯಾಡಬಹದು, ಆದರೆ ನಿಮ್ಮ ಕಾರಾಗೃಹಗಳು ಸಾಕಾಗುವುದಿಲ್ಲ. ನಿಮ್ಮ ದುಷ್ಟ ಸರಪಳಿಗಳು ಮುರಿದುಬಿದ್ದಾಗ, ನ್ಯಾಯದ ಸಮಯ ಆಗಮಿಸುತ್ತದೆ. 

- Advertisement -
- Advertisement -

ಇಬ್ಬರು ಮುಸ್ಲಿಂ ಯುವಕರು ಕ್ರಿಕೆಟ್ ಆಡಲು ಬಹುದೂರದಿಂದ ಓಡೋಡಿ ಬಂದು ಮೈದಾನ ಸೇರುತ್ತಾರೆ. ಆದರೆ ಅಲ್ಲಿದ್ದ ತಂಡದ ನಾಯಕ ಅವರ ಧರ್ಮದ ಕಾರಣಕ್ಕೆ ಅವರನ್ನು ಆಟಕ್ಕೆ ಸೇರಿಸಿಕೊಳ್ಳುವುದಿಲ್ಲ. ‘ನೀನು ಕೆಲದಿನ ಇಲ್ಲದಿದ್ದಾಗ ಇವರೊಡನೆ ನಾವು ಆಡಿದ್ದೇವೆ’ ಎಂದು ಸಹ ಆಟಗಾರ ನಾಯಕನಿಗೆ ತಿಳಿಸುತ್ತಾನೆ. ಆಗ ನಾಯಕ, ‘ಯಾರನ್ನು ಕೇಳಿ ಸೇರಿಸಿಕೊಂಡಿರಿ? ಈ ಈಡಿಯಟ್‌ಗಳಿಗೆ ಅವಕಾಶವಿಲ್ಲ, ಇಲ್ಲಿಂದ ಹೊರದಬ್ಬಿರಿ’ ಎಂದು ಕೆಟ್ಟದಾಗಿ ಬೈಯ್ಯುತ್ತಾನೆ. ನಂತರ ಆಟ ಮುಂದುವರೆಸಿದಾಗ ನಾಯಕ ದೂಸ್ರಾ ಬೌಲ್‌ಗೆ ಸಿಕ್ಸರ್ ಎತ್ತಲು ಪ್ರಯತ್ನಿಸುತ್ತಾನೆ, ಆದರೆ ಮೈದಾನಕ್ಕೆ ಬಂದ 45-50 ವರ್ಷದ ಒಬ್ಬ ಮುಸ್ಲಿಂ ವ್ಯಕ್ತಿ ಒಂದೇ ಕೈಯಲ್ಲಿ ಕ್ಯಾಚ್ ಹಿಡಿಯುತ್ತಾನೆ. ಆತನ ಹಿಂದೆ 20ಕ್ಕೂ ಹೆಚ್ಚು ಎಲ್ಲಾ ಧರ್ಮದ ಯುವಕರು, ಮಕ್ಕಳು ಒಟ್ಟುಗೂಡಿರುತ್ತಾರೆ. ‘REACT ON EXCLUSION’ (ಹೊರಗಿಡುವಿಕೆಗೆ ಪ್ರತಿಕ್ರಿಯೆ) ಎಂಬ ಅಕ್ಷರಗಳು ಪರದೆಯ ಮೇಲೆ ಮೂಡುತ್ತವೆ. “ತಾರತಮ್ಯವೆಣಿಸುವ ಎಲ್ಲಾ ಕಾಯ್ದೆಗಳ ವಿರುದ್ಧ ಹೋರಾಟ, “NO CAA NRC NPR” ಎಂಬ ಸಂದೇಶದೊಂದಿಗೆ ದೂಸ್ರಾ ಕಿರುಚಿತ್ರ ಮುಕ್ತಾಯವಾಗುತ್ತದೆ.

ಇದು ಸಂವೇದನಾವೇದಿ ಮತ್ತು ಪಾ.ರಂಜಿತ್‌ರವರ ನೀಲಂ ಬ್ಯಾನರ್‌ನಡಿ ನಿರ್ಮಾಣಗೊಂಡ, ಇರ್ಫಾನ್ ಹದಿ ನಿರ್ದೇಶನದ ಕೇವಲ 2 ನಿಮಿಷದ ದೂಸ್ರಾ ಎಂಬ ಹಿಂದಿ ಕಿರುಚಿತ್ರ. ರೈತರೊಂದಿಗೆ ಐಕ್ಯಮತ್ಯ (In Solidarity with Farmers) ಎಂಬ ಆರಂಭಿಕ ಸಾಲುಗಳೊಂದಿಗೆ ಆರಂಭವಾಗುವ ಈ ಕಿರುಚಿತ್ರದಲ್ಲಿ ಕೇವಲ ಎರಡೇ ನಿಮಿಷದಲ್ಲಿ ನಿರ್ದೇಶಕರು ದಾಟಿಸಬೇಕಾದ ಸಂದೇಶವನ್ನು ಪರಿಣಾಮಕಾರಿಯಾಗಿ ಮುಟ್ಟಿಸಿದ್ದಾರೆ. ಕಳೆದ ವರ್ಷ ಭಾರೀ ಪ್ರತಿಭಟನೆಗೆ ಗುರಿಯಾದ ಪೌರತ್ವ ತಿದ್ದಪಡಿ ಕಾಯ್ದೆ, ರಾಷ್ಟ್ರೀಯ ನಾಗರೀಕ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಗಳಿಗೆ ಪ್ರತಿರೋಧವಾಗಿ ಇದು ಮೂಡಿಬಂದಿದೆ.

ನಮ್ಮ ಸ್ವಂತ ಮಣ್ಣಿನಲ್ಲಿ ಬದುಕುಳಿಯಲು ಹೋರಾಡಬೇಕಿದೆ.

ಜನರ ನಂಬಿಕೆ ಮತ್ತು ಚರ್ಮದಿಂದ ಅವರ ಸ್ವಾತಂತ್ರ್ಯವನ್ನು ನಿರ್ಧರಿಸಲಾಗುತ್ತಿದೆ.

ನೀವು ನಿರಂತರವಾಗಿ ನಮ್ಮನ್ನು ಬೇಟೆಯಾಡಬಹದು, ಆದರೆ ನಿಮ್ಮ ಕಾರಾಗೃಹಗಳು ಸಾಕಾಗುವುದಿಲ್ಲ.

ನಿಮ್ಮ ದುಷ್ಟ ಸರಪಳಿಗಳು ಮುರಿದುಬಿದ್ದಾಗ, ನ್ಯಾಯದ ಸಮಯ ಆಗಮಿಸುತ್ತದೆ. 

ಈ ಪರಿಣಾಮಕಾರಿ ಸಂದೇಶದೊಂದಿಗೆ ಕಿರುಚಿತ್ರ ಅಂತ್ಯಗೊಂಡಿದೆ. ದೇಶಾದ್ಯಂತ ಭಾರೀ ಪ್ರತಿಭಟನೆಗಳಿಗೆ ಕಾರಣವಾದ ಆ ಮೂರು ಕಾಯ್ದೆಗಳನ್ನು ಕೇಂದ್ರ ಸರ್ಕಾರ 2021ರ ಜನವರಿಯಿಂದ ಜಾರಿಗೊಳಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ.

ಕಿರು ಚಿತ್ರದ ‘ದೂಸ್ರಾ’ ಹೆಸರೇ ಅರ್ಥಗರ್ಭಿತವಾಗಿದೆ. ಇದಕ್ಕೆ ಹಿಂದಿಯಲ್ಲಿ ಎರಡನೆಯ ಅಥವಾ ಇತರ ಎನ್ನುವ ಅರ್ಥ ಬರುತ್ತದೆ. ಹಾಗಾಗಿ ದೇಶದಲ್ಲಿನ ಅಲ್ಪಸಂಖ್ಯಾತರನ್ನು ಈ ಕಾಯ್ದೆಗಳ ಮೂಲಕ ಎರಡನೇ ದರ್ಜೆಯ ಪ್ರಜೆಗಳಾಗಿ ನೋಡಲಾಗುತ್ತದೆ ಎಂದು ಅರ್ಥೈಸಬಹುದು. ಅದೇ ರೀತಿಯಲ್ಲಿ ಈ ಚಿತ್ರದಲ್ಲಿ ಕ್ರಿಕೆಟ್ ಆಟವನ್ನು ಸಾಂಕೇತಿಕವಾಗಿ ತೋರಿಸಲಾಗಿದೆ. ಕ್ರಿಕೆಟ್‌ ಪರಿಭಾಷೆಯಲ್ಲಿ ದೂಸ್ರಾ ಎಂದರೆ ಆಫ್‌ ಸ್ಪಿನ್ನರ್ ಬೌಲರ್‌ ಪ್ರಯೋಗಿಸುವ ವಿಭಿನ್ನ ಬೌಲ್. ದೂಸ್ರಾ ಬೌಲ್ ಆಫ್ ಬ್ರೇಕ್‌ಗೆ (ಆಫ್-ಸ್ಪಿನ್ನರ್‌ನ ಸಾಮಾನ್ಯ ಎಸೆತ) ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ, ಮತ್ತು ಬ್ಯಾಟ್ಸ್‌ಮನ್‌ನನ್ನು ಕಳಪೆ ಶಾಟ್ ಆಡುವಂತೆ ಗೊಂದಲಗೊಳಿಸುವ ಗುರಿ ಹೊಂದಿರುತ್ತದೆ. ಈ ಚಿತ್ರದಲ್ಲಿ ತಂಡದ ನಾಯಕ ಸಹ ದೂಸ್ರಾ ಬೌಲ್‌ಗೆ ಔಟಾಗುತ್ತಾರೆ. ಹಾಗೆಯೇ ಕೇಂದ್ರ ಸರ್ಕಾರ ಸಹ ಈ ಕಾಯ್ದೆಗಳನ್ನು ತಂದಲ್ಲಿ ಬಹುಜನರ ದೂಸ್ರಾ ದಾಳಿಗೆ ತತ್ತರಿಸುವುದು ಖ‍ಚಿತ ಎಂಬುದಾಗಿ ಕೂಡ ಅರ್ಥ ಮಾಡಿಕೊಳ್ಳಬಹುದಾಗಿದೆ.

ಪಾ ರಂಜಿತ್ ತಳಸಮುದಾಯದ, ಜಾತಿಯತೆಯ ವಿಷಯಗಳನ್ನು ಸಂಕೇತಗಳ ಮೂಲಕ ಮುಖ್ಯವಾಹಿನಿ ಸಿನಿಮಾದಲ್ಲಿ ತೋರಿಸುವುದರಲ್ಲಿ ನಿಸ್ಸೀಮರು. ಇದನ್ನು ಅವರ ನಿರ್ದೇಶನದ ಕಾಲಾ, ಕಬಾಲಿ, ಮದ್ರಾಸ್ ಮತ್ತು ಅಟ್ಟಕತ್ತಿಗಳಲ್ಲಿ, ಅವರ ನಿರ್ಮಾಣದ ಪರಿಯುರಮ್ ಪೆರುಮಾಳ್, ಗುಂಡು ಚಿತ್ರಗಳಲ್ಲಿ ಕಾಣಬಹುದು. ಅವರೀಗ ತಮ್ಮ ನೀಲಂ ಪ್ರೊಡಕ್ಷನ್ ಮೂಲಕ ಯೂಟ್ಯೂಬ್‌ನಲ್ಲಿ ಅಂಬೇಡ್ಕರ್, ಪೆರಿಯಾರ್ ಕುರಿತು, ಜಾತಿ-ಲಿಂಗ ತಾರತಮ್ಯದ ವಿಷಯಗಳನ್ನು ಪರಿಣಾಮಕಾರಿಯಾಗಿ ಹೇಳುತ್ತಿದ್ದಾರೆ. ಅದಕ್ಕೆ ಹೊಸ ಸೇರ್ಪಡೆ ಈ ಕಿರುಚಿತ್ರವಾಗಿದೆ.

ನಿನ್ನೆ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡಿರುವ ಸಂವೇದನಾವೇದಿ ನಿರ್ಮಾಣದ ಕೇವಲ ಎರಡು ನಿಮಿಷದ ‘ದೂಸ್ರಾ’ ನೋಡಲು ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...