Homeಮುಖಪುಟಹೊಸ ವರುಷದ ಆವಿಷ್ಕಾರಗಳ ನಿರೀಕ್ಷೆಯಲ್ಲಿ, ಹಳೆ ವರುಷದ ವಿಜ್ಞಾನ ಕಸುವಿನ ನೆನಪುಗಳು

ಹೊಸ ವರುಷದ ಆವಿಷ್ಕಾರಗಳ ನಿರೀಕ್ಷೆಯಲ್ಲಿ, ಹಳೆ ವರುಷದ ವಿಜ್ಞಾನ ಕಸುವಿನ ನೆನಪುಗಳು

- Advertisement -
- Advertisement -

ನಾವು 2020ರ ವರ್ಷ ಕಳೆದು, 2021ರ ನಿರೀಕ್ಷೆಯಲ್ಲಿ ಇದ್ದೇವೆ. 2020ರ ವರ್ಷ ಕೋವಿಡ್-19, ಲಾಕ್‌ಡೌನ್, ಅನ್‌ಲಾಕ್ (1.0,2.0) ಎನ್ನುತ್ತಲೇ ಕಳೆದಿದ್ದೇವೆ. ಇವೆಲ್ಲದರ ಮಧ್ಯೆಯು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹಲವು ಅಭಿವೃದ್ಧಿಗಳಾಗುತ್ತಲೇ ಇವೆ.

ಪ್ರಸ್ತುತ ದಿನಗಳಲ್ಲಿ, ಬಹಳ ಮುಖ್ಯವಾದ ಹವಾಮಾನ ಬದಲಾವಣೆ, ಭೂಮಿಯ ಸರಾಸರಿ ತಾಪಮಾನ ಏರಿಕೆ, ಇದಕ್ಕೆ ಸಂಬಂಧಿಸಿದಂತೆ ಜಗತ್ತಿನ ದೇಶಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಿಸುವ ನೀತಿನಿಯಮಗಳು ಬಹಳ ಪ್ರಮುಖವಾಗಿವೆ. ಮುಂದಿನ ದಶಕದಲ್ಲಿ ಹವಾಮಾನ ಬದಲಾವಣೆಯ ಬಗ್ಗೆ ಚಿಂತನೆ ಅತಿ ಅಗತ್ಯ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ವೇಗದ ಕ್ರಮಗಳಿಗೆ ಒತ್ತು ಕೊಡುವುದೇ ಆಗಿದೆ. ಇಂತಹ ಹಲವು ಚರ್ಚೆಗಳ ನಡವೆ, ಪ್ರತಿ ವರ್ಷದಂತೆ ಈ ವರ್ಷವೂ ಜಗತ್ತಿನ ಅಂತ್ಯದ ಬಗ್ಗೆ (ನಿರ್ನಾಮದ ಬಗ್ಗೆಯೇ) ಅಗಾಧ ’ಒಲವುಳ್ಳ ಮಾಧ್ಯಮಗಳು, ಈಗ 2020 ಮುಗಿದಿರುವುದರಿಂದ 2021ರಲ್ಲಿ ಜಗತ್ತು ಅಂತ್ಯವನ್ನು ಕಾಣುತ್ತದೆ ಎಂದು ತರ್ಕವಿಲ್ಲದ ವಾದವನ್ನು ಮುಂದಿಟ್ಟು, ಜನರನ್ನು ಭಯಪಡಿಸುತ್ತಿದ್ದಾರೆ. ಇದಕ್ಕೆ ಕೊರೊನಾ ವೈರಾಣು ಸಾಕಷ್ಟು ಆಹಾರವನ್ನು ನೀಡಿದೆ. ಇರಲಿ, ಹೊಸ ವರ್ಷದ ಆರಂಭದಲ್ಲಿ ಇರುವ ನಾವು, ಇವರನ್ನು ಪಕ್ಕಕ್ಕಿಟ್ಟು ಕಳೆದ ವರ್ಷದಲ್ಲಿ ಪ್ರಮುಖವಾದ ಆಸಕ್ತಿದಾಯಕ ವೈಜ್ಞಾನಿಕ ಬೆಳವಣಿಗೆಯ ಬಗ್ಗೆ ಒಂದು ಪಕ್ಷಿನೋಟವನ್ನು ನೋಡೋಣ.

ಚಂದ್ರನ ಮೇಲೆ ನೀರು

ಭಾರತದ ಚಂದ್ರಯಾನ-1 ನೌಕೆಯು ಚಂದ್ರನ ಮೇಲೆ ನೀರು ಇರುವುದನ್ನು ಸಾಬೀತುಪಡಿಸಿದ ಹತ್ತು ವರ್ಷದ ನಂತರ, ನಾಸಾ ಕಳೆದ ನವೆಂಬರ್‌ನಲ್ಲಿ Stratospheric Observatory for Infrared Astronomy (SOFIA) ಮತ್ತು Lunar Reconnaissance Orbiter (LRO) ದೂರದರ್ಶಕಗಳ ಮೂಲಕ ಅಧ್ಯಯನ ಮಾಡಿದ ವರದಿಗಳನ್ನು Nature Astronomyಯಲ್ಲಿ ಪ್ರಕಟಿಸಿತು. ಇದರ ಪ್ರಕಾರ ಇದೇ ಮೊದಲ ಬಾರಿಗೆ ಚಂದ್ರನಲ್ಲಿ ಸೂರ್ಯನ ಬೆಳಕು ಬೀಳುವ ಪ್ರದೇಶದಲ್ಲಿ ನೀರು ಇರುವುದನ್ನು ಪತ್ತೆ ಮಾಡಲಾಗಿದೆ. ಅಲ್ಲದೆ, ಚಂದ್ರನ ನೆರಳಿನ ಪ್ರದೇಶದಲ್ಲಿ, ಈ ಹಿಂದೆ ಘನೀಕೃತ ರೂಪದಲ್ಲಿ ಇದ್ದಿದ್ದಕ್ಕಿಂತಲೂ ನೀರು ಹೆಚ್ಚಾಗಿ ಇದೆ ಎಂದು ಅಂದಾಜಿಸಲಾಗಿದೆ. ಭವಿಷ್ಯದಲ್ಲಿ, ಮಾನವನು ಚಂದ್ರನ ಮೇಲೆ ಅನೇಕ ಪ್ರಯೋಗಗಳನ್ನು ನಡೆಸಲು ಮತ್ತು ಇತರ ಗ್ರಹಗಳಿಗೆ ಅಂತರಿಕ್ಷಯಾನ ಮಾಡಲು ಸೂಕ್ತ ನಿಲ್ದಾಣವನ್ನು ರೂಪಿಸಲು ಇಂತಹ ಅನ್ವೇಷಣೆಗಳು ಉಪಯೋಗವಾಗಬಲ್ಲವು.

ಭೂಮಿಯ ಮೇಲೆ ಸಿಕ್ಕ ಅತ್ಯಂತ ಪುರಾತನ ವಸ್ತು
PC : wwwHECKETAL.PNAS 2020

ಇಲೆಕ್ಟ್ರಾನ್ ಮೈಕ್ರೋಸ್ಕೋಪ್ ಮುಖಾಂತರ ತೆಗೆದ ಉಲ್ಕೆಯ ಧೂಳಿನ ಕಣ ಭೂಮಿಯ ಮೇಲೆ ಪತ್ತೆಯಾದ ಒಂದು ವಸ್ತುವಿನಲ್ಲಿನ ಕಣಗಳು ಅತ್ಯಂತ ಪುರಾತನವಾದದ್ದು ಎಂದು ಇತ್ತೀಚೆಗೆ ವಿಜ್ಞಾನಿಗಳು ಹೇಳಿದ್ದಾರೆ. ಇದು ಯಾವ ಕಾಲದ್ದು ಎಂದರೆ, ನಮ್ಮ ಸೌರ ಮಂಡಲಕ್ಕಿಂತಲೂ ಪ್ರಾಚೀನವಾದದ್ದು! ಹೀಗಂತ ವಿಜ್ಞಾನಿಗಳೆ ನಿರೂಪಿಸಿದ್ದಾರೆ. 1969ರಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ, ಆಕಾಶದಲ್ಲಿ ಪ್ರಕಾಶಮಾನವಾಗಿ ಬೆಳಗಿ ಭೂಮಿಗೆ ಬಿದ್ದಿದ್ದ ಉಲ್ಕೆಯು ಇದಾಗಿದೆ. ಈ ಉಲ್ಕೆಯು ಸಾಯುತ್ತಿರುವ ನಕ್ಷತ್ರದಿಂದ ಉಂಟಾದ ನಕ್ಷತ್ರಧೂಳಿನ ಕಣಗಳಿಂದ ಉಂಟಾಗಿರುವುದು ಎಂದು ವಿವರಿಸಲಾಗಿತ್ತು. ಈ ಉಲ್ಕೆಯ ಕಣಗಳನ್ನು ಹಲವು ರೀತಿಯ ಪರೀಕ್ಷೆಗೆ ಒಳಪಡಿಸಿ, ಇದರ ಕಾಲವನ್ನು ಲೆಕ್ಕ ಹಾಕಿದಾಗ, ಇದು ಸುಮಾರು 7 ಬಿಲಿಯನ್ ವರ್ಷದ ಹಿಂದಿನದು ಎಂದು ಅಂದಾಜಿಸಲಾಗಿದೆ. ಒಟ್ಟು ಉಲ್ಕೆಯಲ್ಲಿ ಶೇ.5ರಷ್ಟು ಕಣಗಳು ಮಾತ್ರ ಇಷ್ಟು ಹಳೆಯದಾಗಿದ್ದು, ಇನ್ನುಳಿದ ಭಾಗದ ಪರೀಕ್ಷೆಗಳು ನಡೆಯುತ್ತಿವೆ. ಈ ಕಣಗಳು ನಮ್ಮ ಗ್ಯಾಲಾಕ್ಸಿಯಾದ ಹಾಲು ಹಾದಿ ಗ್ಯಾಲಾಕ್ಸಿಯ ಹಲವು ರಹಸ್ಯ ಮಾಹಿತಿಯನ್ನು ತನ್ನೊಳಗಿಟ್ಟುಕೊಂಡಿದ್ದು, ಇದರ ಪರೀಕ್ಷೆಗಳು ಮುಂದುವರೆದಂತೆ ಹೊಸ ವಿಚಾರಗಳು ಹೊರಬರುತ್ತವೆ.

ಗಂಟೆಗೆ ಸುಮಾರು 900 ಕಿಲೋ ಮೀಟರ್ ಸಂಚರಿಸುವ ಹೈಪರ್‌ಲೂಪ್

ಅಮೆರಿಕದ ಲಾಸ್‌ವೇಗಸ್‌ನ ನವೇಡಾದಲ್ಲಿ ನವೆಂಬರ್ 08, 2020ರಂದು ನಡೆದ ಅತಿ ವೇಗದ ಸಾರಿಗೆ ತಂತ್ರಜ್ಞಾನವಾದ – ಹೈಪರ್‌ಲೂಪ್‌ನ ಪರೀಕ್ಷಾರ್ಥ ಸಂಚಾರದಲ್ಲಿ ಪ್ರಪ್ರಥಮವಾಗಿ ವರ್ಜಿನ್ ಹೈಪರ್‌ಲೂಪ್ ತಂಡದವರಾದ ಜೊಶ್ ಗಿಗೆಲ್, ಮತ್ತು ಸಾರಾ ಲೂಚಿನ್ ಇವರಿಬ್ಬರು ಸಂಚರಿಸಿ (ಗಂಟೆಗೆ ಸರಿಸುಮಾರು 900 ಕಿಲೋಮೀಟರ್ ವೇಗದಲ್ಲಿ), ಇತಿಹಾಸ ಸೃಷ್ಟಿಸಿದ್ದಾರೆ. ಇದು, ಜಗತ್ತಿನ ಆಧುನಿಕ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಒಂದು ಮೈಲುಗಲ್ಲಾಗಿದೆ. ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆ ಎಂದರೆ, ಸಂಚರಿಸಬೇಕಾದ ನಿರ್ದಿಷ್ಟವಾದ ಎರಡು ಸ್ಥಳಗಳ ನಡುವೆ ಬೃಹದಾಕಾರದ ಟ್ಯೂಬ್‌ಅನ್ನು ರಚಿಸಿ, ಅದರ ಒಳಗಿನ ಪ್ರದೇಶವನ್ನು ನಿರ್ವಾತಗೊಳಿಸಿ, ಟ್ಯೂಬ್‌ನ ಒಳಗೆ ಪ್ರಯಾಣಿಕರು ಕುಳಿತಿರುವ ಪಾಡ್‌ಅನ್ನು ಗಾಳಿಯ ಪ್ರತಿರೋಧ ಮತ್ತು ಇತರೆ ಘರ್ಷಣೆ ಇಲ್ಲದೆ ಅತೀ ವೇಗದಲ್ಲಿ ಸಂಚರಿಸುವ ತಂತ್ರಜ್ಞಾನ. ಪ್ರಪಂಚದಾದ್ಯಂತ ಇಂತಹ ಹೈಪರ್‌ಲೂಪ್ ತಂತ್ರಜ್ಞಾನದ ಸಾರಿಗೆ ವ್ಯವಸ್ಥೆಯ ಪರೀಕ್ಷಾರ್ಥ ಸಂಚಾರಗಳು ಕೆಲವು ವರ್ಷಗಳಿಂದ ನಡೆಯುತ್ತಿದೆ. ಆದರೆ ಇಲ್ಲಿಯವರೆಗೂ ಮಾನವರು ಸಂಚರಿಸಿರಲಿಲ್ಲ. ಇದು, ತಂತ್ರಜ್ಞಾನ ಆಧಾರಿತದ ಭವಿಷ್ಯದ ಅತಿ ವೇಗದ ಸಾರಿಗೆ ವ್ಯವಸ್ಥೆಗೆ ನಾಂದಿ ಹಾಡಿದೆ.

ವಿಡಿಯೋ: ಮೊದಲ ಹೈಪರ್‌ಲೂಪ್ ಪ್ರಯಾಣಿಕರ ಪರೀಕ್ಷೆ

Crispar-Cas 9

ಈ ವರ್ಷದ ರಸಾಯನ ವಿಜ್ಞಾನಕ್ಕೆ ದೊರೆತ ನೊಬೆಲ್ ಪ್ರಶಸ್ತಿಯ ವಿಷಯ Crispar-Cas 9. ಈ ಪ್ರಶಸ್ತಿಯು ಇಮಾನ್ಯೂಯೆಲಿ ಚಾರ್ಪೆಂಟಿಯರ್ ಮತ್ತು ಜನಿಫರ್ ಡೋಡುನಾರವರಿಗೆ ದೊರೆತಿದೆ. Crispar-Cas 9 ಜೀವ ವಿಜ್ಞಾನದ ಕತ್ತರಿ. ಅಂದರೆ, ಜೀನ್ ವ್ಯತ್ಯಯವಾದ (Gene Mutation) DNAಗಳನ್ನು ಕತ್ತರಿಸಲು ಉಪಯೋಗಿಸುವ ಕತ್ತರಿ ಎಂದು. ದೇಹದಲ್ಲಿ ಜೀನ್ ವ್ಯತ್ಯಯದಿಂದ ಕಾಣಬರುವ ಸಮಸ್ಯೆಗಳನ್ನು ಸರಿಪಡಿಸಲು Crispar-Cas 9 ಪರಿಣಾಮಕಾರಿಯಾಗಿ ಉಪಯೋಗಿಸಬಹುದಾಗಿದೆ ಎಂಬುದು ವಿಜ್ಞಾನಿಗಳ ವಾದ. ಕಳೆದ ಮಾರ್ಚನಲ್ಲಿ ಒರೆಗಾನ್ ಹೆಲ್ತ್ & ಸೈನ್ಸ್ ವಿಶ್ವವಿದ್ಯಾನಿಲಯದಲ್ಲಿ, ವ್ಯಕ್ತಿಯೊಬ್ಬನಲ್ಲಿ ಜೀನ್ ವ್ಯತ್ಯಯದಿಂದ ಉಂಟಾಗಿದ್ದ ಕುರುಡನ್ನು ಇದೆ Crispar-Cas 9 ಬಳಸಿ, ನ್ಯೂನತೆಯುಳ್ಳ DNAಗಳನ್ನು ಕತ್ತರಿಸಿ, ಸರಿಪಡಿಸಿದ್ದಾರೆ. ಅದಾಗ್ಯೂ Crispar-Cas 9 ಇನ್ನೂ ವೈದ್ಯಕೀಯ ಕ್ಷೇತ್ರದಲ್ಲಿ ಪ್ರ್ರಾಯೋಗಿಕವಾಗಿಯೇ ಬಳಸಲಾಗುತ್ತಿದೆ. ಇದರ ಸಾಧಕ ಭಾಧಕಗಳ ಬಗ್ಗೆ ವೈದ್ಯಕೀಯ ಲೋಕದಲ್ಲಿ ಹಲವು ಚರ್ಚೆಗಳಾಗುತ್ತಿವೆ.

ಸೌರ ಮಂಡಲದ ಹೊರಗಿನಿಂದ ಬಂದ ಮೊದಲ ಸಂದೇಶ

ಭೂಮಿಯನ್ನು ಹೊರತುಪಡಿಸಿ, ಇಲ್ಲಿಯವರೆಗೂ ಜೀವವಿರುವ ಯಾವುದೇ ಗ್ರಹ ಪತ್ತೆಯಾಗಿಲ್ಲ. ಆದರೆ, ಅಂತಹ ಗ್ರಹವನ್ನು ಕಂಡುಹಿಡಿಯುವುದಕ್ಕೆ ಮತ್ತು ಅನ್ಯಗ್ರಹದ ಜೀವಿಗಳ ಜೊತೆಗೆ ಸಂಪರ್ಕ ಸಾಧಿಸಲು ಮನುಷ್ಯ ಪ್ರಯತ್ನಿಸುತ್ತಲೇ ಇದ್ದಾನೆ. ಇದಕ್ಕಂತಲೇ, ಹಲವು ದೊಡ್ಡ ದೊಡ್ಡ ರೇಡಿಯೋ ದೂರದರ್ಶಕಗಳನ್ನು ಭೂಮಿಯ ಮೇಲೆ ಮತ್ತು ಆಕಾಶದಲ್ಲಿಯೂ ಹಾರಿಸಿ ಅದರ ಮುಖಾಂತರ ಪ್ರತಿದಿನ ಅಧ್ಯಯನಗಳನ್ನು ನಡೆಸುತ್ತಲೇ ಇದ್ದಾನೆ. ಈ ರೇಡಿಯೋ ದೂರದರ್ಶಕಗಳಿಂದ ನಮ್ಮ ಮಾಹಿತಿಯನ್ನು (ಭೂಮಿಯ ಬಗ್ಗೆ, ಭೂಮಿಯಲ್ಲಿರುವ ಜೀವರಾಶಿಯ ಬಗ್ಗೆ ಮತ್ತು ಸೌರಮಂಡಲದ ಬಗ್ಗೆ…) ಆಕಾಶಕ್ಕೆ ಕಳುಹಿಸುತ್ತಲೇ ಇದ್ದೇವೆ ಹಾಗೂ ಅನ್ಯಗ್ರಹ ಜೀವಿಗಳು ಕಳುಹಿಸಬಹುದಾದ ಸಂದೇಶವನ್ನು/ ಸಂಕೇತಗಳನ್ನು ಗ್ರಹಿಸಿ ಭೇದಿಸಲು ಪ್ರಯತ್ನಿಸುತ್ತಿದ್ದೇವೆ. ಆದರೂ, ಇಲ್ಲಿಯವರೆಗೂ ಯಾವುದೇ ಒಂದು ಸಂದೇಶವೂ ಬಂದಿರಲಿಲ್ಲ. ಇತ್ತೀಚೆಗೆ ಅಂದರೆ, ಡಿಸೆಂಬರ್ 16ರಂದು Astronomy & Astrophysics ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ, ಸೌರ ಮಂಡಲದಿಂದ ಆಚೆ ಇರುವ ಅನ್ಯಗ್ರಹದಿಂದ ಬಂದ ಒಂದು ಸಂದೇಶವನ್ನು ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದು ಅನ್ಯ ಗ್ರಹಗಳಲ್ಲಿ ಜೀವಿಗಳನ್ನು ಹುಡುಕುವ ನಮ್ಮ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಗ್ಗೆ ಮುಂದಿನ ವರ್ಷದಲ್ಲಿ ಹಲವು ಮಾಹಿತಿಗಳು ನಮಗೆ ಸಿಗಲಿವೆ ಎನ್ನಬಹುದೇನೋ!

ಅಧಿವಾಹಕತೆ

ಅಧಿವಾಹಕತೆ ಎಂದರೆ superconductivity. ಸಾಮಾನ್ಯವಾಗಿ ವಿದ್ಯುತ್, ವಾಹಕದಲ್ಲಿ ಚಲಿಸಿದಾಗ ಪ್ರತಿರೋಧ ಇರುತ್ತೆ. ಇದನ್ನು ರೋಧ (resistance)ಎಂದು ಕರೆಯುತ್ತೇವೆ. ಈ ರೋಧದಿಂದ ವಿದ್ಯುತ್ ಶಕ್ತಿಯ ನಷ್ಟ ಹೆಚ್ಚಿರುತ್ತದೆ. ಆದರೆ, ಅಧಿವಾಹಕಗಳಲ್ಲಿ ಇಂತಹ ರೋಧ ಇರುವುದಿಲ್ಲ. ಅಂದರೆ, ಅಧಿವಾಹಕಗಳಲ್ಲಿ ವಿದ್ಯುತ್ ಶಕ್ತಿಯ ನಷ್ಟ ಸೊನ್ನೆ. ಇಂತಹ ಹಲವು ಅಧಿವಾಹಕಗಳನ್ನು ನಾವು ಈಗಾಗಲೇ ಉಪಯೋಗಿಸುತ್ತಿದ್ದೇವೆ. ಆದರೆ ಇವೆಲ್ಲವೂ ಕಾರ್ಯನಿರ್ವಹಿಸಲು ನಿಯಂತ್ರಿತ ಅಂದರೆ ಅತಿಶೀತ ತಾಪಮಾನ ಅಗತ್ಯ ಮತ್ತು ಇದರ ವೆಚ್ಚವು ಅತಿಹೆಚ್ಚು. ಹಾಗಾಗಿ, ಕೊಠಡಿ ತಾಪಮಾನದಲ್ಲಿ (room temperature) ಕಾರ್ಯನಿರ್ವಸಬಲ್ಲ ಅಧಿವಾಹಕಗಳ ಅನ್ವೇಷಣೆ ಹೆಚ್ಚು ಅಗತ್ಯವಿತ್ತು. ಈ ನಿಟ್ಟಿನಲ್ಲಿ, ರೊಚೆಸ್ಟ್‌ರ್ ಮತ್ತು ನಾವೇಡಾ ವಿಶ್ವವಿದ್ಯಾನಿಲಯದ ಸಂಶೋಧಕರು ಕಾರ್ಬೊನೇಸಿಯಸ್ ಸಲ್ಫರ್ ಹೈಡ್ರೈಡ್ ವಸ್ತುವಿನಿಂದ ಅಧಿವಾಹಕವನ್ನು ತಯಾರಿಸಿದ್ದಾರೆ. ಇದು ಕೊಠಡಿ ತಾಪಮಾನದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಇದು, ಮುಂದಿನ ದಿನಗಳಲ್ಲಿ ನಾವು ಊಹಿಸಲೂ ಅಸಾಧ್ಯವಾದ ತಂತ್ರಜ್ಞಾನಗಳಿಗೆ ಮುನ್ನುಡಿಯಾಗಬಹುದೇನೊ!

2020ರ ಅಂತ್ಯಕ್ಕೆ ನಾವು ಬಂದು ನಿಂತಿದ್ದೇವೆ. ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ, 2020ರಲ್ಲಿ ಸೂಕ್ಷ್ಮ ವೈರಾಣು ಜಗತ್ತು ಜನರ ಬದುಕನ್ನೇ ಬದಲಾಯಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ಕೋವಿಡ್ ನಂತರದ ದಿನನಿತ್ಯದ ಬದುಕು ಹಲವು ಬದಲಾವಣೆಗಳನ್ನು ಕಾಣುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕೋವಿಡ್-19ರ ಲಸಿಕೆಗೆ ಸಂಬಂಧಿಸಿದಂತೆ ರಾಜಕೀಯ ಲಾಭಕ್ಕಾಗಿ ಪೈಪೋಟಿಗೆ ಇಳಿದವರಂತೆ ದಿನಕ್ಕೊಂದು ಹೇಳಿಕೆಗಳನ್ನು ಎಸೆಯುವ ಜಗತ್ತಿನ ರಾಜಕಾರಣಿಗಳ ಜೊತೆಗೆ, ವೈಜ್ಞಾನಿಕವಾಗಿ ಅವಿರತ ಸಂಶೋಧನೆಗಳನ್ನು ನಡೆಸುತ್ತಿರುವ ವಿಜ್ಞಾನಿಗಳ ಗುಂಪು ಮತ್ತು ಸಂಸ್ಥೆಗಳು ಜಗತ್ತಿನಲ್ಲಿವೆ. ಅವರ ಕಾರ್ಯ ಸಾಗುತ್ತಲೇ ಇದೆ. ಲಸಿಕೆಗೆ ನಾವು ಎಷ್ಟು ಹತ್ತಿರ ಇದ್ದೇವೆ, ಎಷ್ಟು ದೂರವಿದ್ದೇವೆ ಎಂಬುದನ್ನು ಇಂದಿನ ಕಲ್ಮಷಯುಕ್ತ ಮಾಧ್ಯಮದ ಮೂಲಕ ನಾವು ತಿಳಿಯಲು ಸಾಧ್ಯವಿಲ್ಲ. ಆದರೆ, ಭಾರತವೂ ಸೇರಿದಂತೆ ಜಗತ್ತಿನ ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರ್ರಾಯೋಗಿಕವಾಗಿ ಉಪಯೋಗಿಸುತ್ತಿರುವ ಲಸಿಕೆಗಳು ಪರಿಣಾಮಕಾರಿಯಾಗಿ ಫಲಿತಾಂಶ ತೋರುತ್ತಿದ್ದರು, ಲಸಿಕೆಯ ಎಲ್ಲಾ ಪರೀಕ್ಷೆಗಳನ್ನು ಮಾಡಿಮುಗಿಸಲು ಇನ್ನೂ ಹೆಚ್ಚು ಸಮಯ ಬೇಕಾಗಬಹುದೇನೊ.

ಇರಲಿ, ಕೋವಿಡ್-19ರ ಮುನ್ನೆಚರಿಕೆಯೊಂದಿಗೆ, ಮುಂದಿನ ವರ್ಷ ಇನ್ನು ಹೆಚ್ಚು ವೈಜ್ಞಾನಿಕ ಚಿಂತನೆಗಳು, ಚಟುವಟಿಕೆಗಳು ಮತ್ತು ಸಂಶೋಧನೆಗಳಿಗೆ ಸಾಕ್ಷಿಯಾಗಬಹುದು ಎಂಬ ನಿರೀಕ್ಷೆಯೊಂದಿಗೆ ಅದಕ್ಕೆ ಅಗತ್ಯವಾದ ಕುತೂಹಲವನ್ನು ಕಾಪಿಟ್ಟುಕೊಂಡು 2021ನ್ನು ಬರಮಾಡಿಕೊಳ್ಳುವ.


ಇದನ್ನೂ ಓದಿ: ಆಕಾಶ ವೀಕ್ಷಣೆ ಮಾರ್ಗದರ್ಶಿ: ಅನಂತದಿಂ.. ದಿಗಂತದಿಂ.. ನೋಡೆ ನೋಡೆ ಮೂಡಿತೊಂದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...