Homeಮುಖಪುಟನಡೆ ಓಕೆ ಈ ನುಡಿ ಯಾಕೆ?- ’ಸನಾತನ ಪ್ರಗತಿಪರ’ ಜಾಹಿರಾತಿಗೊಂದು ಪ್ರತಿಕ್ರಿಯೆ

ನಡೆ ಓಕೆ ಈ ನುಡಿ ಯಾಕೆ?- ’ಸನಾತನ ಪ್ರಗತಿಪರ’ ಜಾಹಿರಾತಿಗೊಂದು ಪ್ರತಿಕ್ರಿಯೆ

ಬಸವಣ್ಣನವರು ಸನಾತನ ಪ್ರಗತಿಪರರಲ್ಲ, ಜಾತಿ, ಮೌಡ್ಯ, ಜೋತಿಷ್ಯ, ಪೂರೋಹಿತಶಾಹಿ, ಮೂಡನಂಬಿಕೆ, ಗೊಡ್ಡುದೇವರಗಳ ಎದೆಗೊದ್ದು ನವಸಮಾಜಕ್ಕೆ ಭುನಾದಿ ಹಾಕಿ ಸಮಸಮಾಜವನ್ನು ಕಟ್ಟಿದ ವಿಶ್ವಗುರು.

- Advertisement -
- Advertisement -

ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ, ಈ ಒಂದು ಅಡಿ ಬರಹದಲ್ಲಿ ಇವತ್ತಿನ ಎಲ್ಲ ಪತ್ರಿಕೆಯಲ್ಲಿ ಮೂಡಿ ಬಂದ ಬಸವ ಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಬಸವಣ್ಣನವರ ಅನುಭವ ಮಂಟಪಕ್ಕೆ ಭೂಮಿ ಪೂಜೆ ಕಾರ್ಯಕ್ರಮದ ಜಾಹಿರಾತಿಗೆ ನಾವು ಏಕೆ ವಿರೋಧ ಮಾಡಬೇಕು?

ಇವತ್ತು ಸನಾತನ ಪ್ರಗತಿಪರ ಚಿಂತಕ ಎಂದಿದ್ದಾರೆ, ಇದನ್ನ ವಿರೋಧ ಮಾಡದೇ ಇದ್ದರೆ ನಾಳೆ ಇನ್ನೊಂದು ಅಡಿಬರಹದಲ್ಲಿ ಸನಾತನ ಧರ್ಮದ ಚಿಂತಕ ಎನ್ನುತ್ತಾರೆ, ಆಗಲು ಸುಮ್ಮನಿದ್ದರೆ, ಇನ್ನೊಬ್ಬ ವಿವೇಕಾನಂದ, ಶಿವಾಜಿಯ ಸ್ಥಾನದಲ್ಲಿ ಬಸವಣ್ಣನವರನ್ನು ಕೂರಿಸುವ ಕುತಂತ್ರದ ಒಂದು ಭಾಗವಿದು. ಬಸವಣ್ಣನವರು ಸನಾತನ ಪ್ರಗತಿಪರರಲ್ಲ, ಜಾತಿ, ಮೌಡ್ಯ, ಜೋತಿಷ್ಯ, ಪೂರೋಹಿತಶಾಹಿ, ಮೂಡನಂಬಿಕೆ, ಗೊಡ್ಡುದೇವರಗಳ ಎದೆಗೊದ್ದು ನವಸಮಾಜಕ್ಕೆ ಭುನಾದಿ ಹಾಕಿ ಸಮಸಮಾಜವನ್ನ ಕಟ್ಟಿದ ವಿಶ್ವಗುರು.

ಇದನ್ನೂ ಓದಿ: ಸುಳ್ಳು, ದ್ವೇಷ ಹರಡುವ ಹಿಂದುತ್ವದ ವೆಬ್‌ಸೈಟ್ ‘ಒಪಿ ಇಂಡಿಯಾ’ಗೆ ಜಾಹಿರಾತು ನಿಲ್ಲಿಸಿದ MUBI

ಜಾತಿ ವರ್ಗ ವರ್ಣ ರಹಿತ ಕಲ್ಯಾಣ ರಾಜ್ಯವನ್ನು ಕಟ್ಟಲು ಒಂದು ಸಾಧನವನ್ನಾಗಿ ಬಸವಾದಿ ಪ್ರಮಥರು ಅನುಭವ ಮಂಟಪವನ್ನು ಕಟ್ಟಿದರು. ಅನುಭವ ಮಂಟಪ ದೇವರಲ್ಲ, ದೇವಾಲಯವಲ್ಲ. ದೇವಾಲಯಗಳನ್ನು ದೇವರನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿದರೆ, ಅನುಭವ ಮಂಟಪ ನಾಲ್ಕು ಗೋಡೆಗಳ ಮಧ್ಯೆ ಇದ್ದ ದೇವರನ್ನು ಬಂಧಮುಕ್ತಗೊಳಿಸಿತು. ಸರ್ವ ಜಾತಿ ಧರ್ಮದವರನ್ನ ಬಾಚಿತಬ್ಬಿ ಸಮಸಮಾಜದ ಕನಸನ್ನ ಸಾಕಾರಗೊಳಿಸಿದ ಕಲ್ಯಾಣದ ಕ್ರಾಂತಿದ್ಯೋತಕ ನಮ್ಮ ಅನುಭವ ಮಂಟಪ ಸರ್ವ ಜನಾಂಗದ ಹೆಮ್ಮೆ.

ಸನಾತನ ಎಂಬ ಪದವೇ ತುಂಬಾ ಶೋಷಣೆಯಿಂದ ಕೂಡಿದ್ದು, ಹೀಗಾಗಿಯೇ ಅದರಿಂದ ಸಿಡಿದೆದ್ದು ಬೌದ್ಧ, ಜೈನ ಮತ್ತು ಇನ್ನಿತರ ಧರ್ಮಗಳು 2000 ವರ್ಷಗಳ ಹಿಂದೆಯೇ ಸ್ಥಾಪನೆಯಾದವು. ವೇದ, ಆಗಮ, ಪುರಾಣಗಳ ವಿರೋಧವಾಗಿಯೇ ಈ ಹೊಸ ಧರ್ಮಗಳನ್ನು ಸ್ಥಾಪಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಧರ್ಮಗಳ ಹೊಸ ಆಲೋಚನೆಗಳು ಪುರೋಹಿತಶಾಹಿಗಳಲಿಗೆ ಮಗ್ಗುಲು ಮುಳ್ಳಾದಾಗ, ಹೊಸ ಧರ್ಮಗಳನ್ನ ಹತ್ತಿಕ್ಕಿದರು. ಇದರ ಒಂದು ಭಾಗವೇ ಭಾರತದಿಂದ ಬೌದ್ಧ ಧರ್ಮವನ್ನು ಹೊರಹಾಕಲಾಯಿತು. ಸಿಕ್ಕ ಸಿಕ್ಕ ಕಡೆ ಭೌದ್ದ ಬಿಕ್ಕುಗಳನ್ನು ಕೊಲ್ಲಲಾಯಿತು. ನಳಂದ ವಿಶ್ವವಿದ್ಯಾಲಯದ ಕಳೇಬರಹದ ಬೂದಿ ಇದರ ಕಥೆ ಈಗಲೂ ಹೇಳುತ್ತವೆ.

ತದನಂತರ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಎಂಬ ಚಾತುರ್ವಣ ವ್ಯವಸ್ಥೆಯನ್ನು ಜಾರಿಗೆ ತಂದರು. ಜಾತಿವ್ಯವಸ್ಥೆಯನ್ನ ಕಟ್ಟಿದರು, ಮನುಷ್ಯರನ್ನು ಪ್ರಾಣಿಗಳಿಗಿಂತ ಕೀಳಾಗಿ ನೋಡುವ ಒಂದು ಬಲಿಷ್ಠ ವರ್ಗಗಳ ಹುಟ್ಟಿಗೆ ಕಾರಣರಾದರು. ಮೂಢನಂಬಿಕೆ ಮತ್ತು ಮೌಡ್ಯಗಳನ್ನ ಬಿತ್ತಿ ಸಮಾಜದಲ್ಲಿ ತಮಗೆ ಬೇಕಾದ ಬೆಳೆ ತೆಗೆದರು. ಈ ಸನಾತನಿ ಸಮುದಾಯದ ಕಟ್ಟಳೆಗಳು ಶತ ಶತಮಾನಗಳ ಕಾಲ ಆಚರಣೆಯಲ್ಲಿರುವಾಗಲೇ 12 ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಬಸವಣ್ಣನ ಪ್ರವೇಶವಾಯಿತು.

ಇದನ್ನೂ ಓದಿ: ಸರ್ಕಾರದ ಜಾಹಿರಾತುಗಳ ವೆಚ್ಚದ ಲೆಕ್ಕ ಕೇಳಿದ ವಾಕ್ಪಟು ಸಂಸದೆ ಮಹುವಾ ಮೊಹಿತ್ರಾ

ಕಾರ್ತೀಕದ ಕತ್ತಲಲಿ ಆಕಾಶದೀಪವಾಗಿ ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದಿ ದಿಕ್ಕಾಗಿ,
ಎಂಟು ಶತಮಾನಗಳ ಹಿಂದೆ,
ಅಗ್ನಿ ಖಡ್ಗವನಾಂತ ಓ ಆಧ್ಯಾತ್ಮ ಕ್ರಾಂತಿವೀರ,
ದೇವದಯೆಯೊಂದು ಹೇ ಧೀರಾವತಾರ,
ಶ್ರೀ ಬಸವೇಶ್ವರಾ!
– ಕುವೆಂಪು

’ಚಾತುರ್ವಣಗಳೇ ಸರ್ವೋತ್ತಮ’ ಅನ್ನುತ್ತಿದ್ದ ಸನಾತನ ಪರಂಪರೆಗೆ ವಿರುದ್ಧವಾಗಿ ಮನುಷ್ಯ ಕುಲವೇ ಶ್ರೇಷ್ಠ ಎಂಬ ಮತವನ್ನ ಸ್ಥಾಪಿಸಿದರು. ಅಲ್ಲಿಯವರೆಗೂ ಜ್ಞಾನವನ್ನು ಒಂದು ವರ್ಗದ ಸ್ವತ್ತನ್ನಾಗಿ ಮಾಡಲಾಗಿತ್ತು. ವೇದಗಳನ್ನು ಕೇಳಿಸಿಕೊಂಡರೆ ಕಿವಿಗೆ ಸೀಸ ಹೊಯ್ಯುವ, ನಾಲಿಗೆ ಕತ್ತರಿಸುವ ಪುರೋಹಿತಶಾಹಿಗಳ ಅನಿಷ್ಠಗಳನ್ನು ಅವರು ವಿರೋಧಿಸಿದರು.  ಜ್ಞಾನ ಒಂದು ವರ್ಗದ ಅಡಿಯಲ್ಲಿ ಬಿದ್ದು ನರಳುತ್ತಿದ್ದಾಗ, ಜ್ಞಾನಕ್ಕೆ ದಾಸ್ಯದ ಸಂಕೋಲೆಯನ್ನ ಬಿಡಿಸಿದವರು ಬಸವಣ್ಣ. ಅನುಭವ ಮಂಟಪವನ್ನು ಸ್ಥಾಪಿಸಿ ಪುರಾಣಗಳನ್ನು, ದೇವರನ್ನು, ವೇದ ಶಾಸ್ತ್ರಗಳನ್ನು ಅನುಭವ ಮಂಟಪದ ವೈಚಾರಿಕ ವಿಚಾರವಾದದ ಕಟಕಟೆಯಲ್ಲಿಟ್ಟು ಸುಳ್ಳು/ಸತ್ಯದ ನಿಜ ದರ್ಶನವನ್ನ ಸಮಾಜಕ್ಕೆ ತೋರಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಅಫ್ಘಾನಿಸ್ತಾನದ ಕಡೆಯಿಂದ ಸೂಫಿ ಸಂತರೂ ಕೂಡ ಬಸವಣ್ಣನ ಈ ಹೊಸ ವಿಚಾರ ಹೋರಾಟದ ಭಾಗವಾದರು. ಅನುಭವ ಮಂಟಪದಲ್ಲಿ 770 ಜನರ ವಿಚಾರವಾದಿಗಳ ತಂಡ ಕಟ್ಟಿ ಸಮಾಜದ ಓರೇ-ಕೋರೆಗಳನ್ನ ತಿದ್ದುತ್ತಾ ಹೋದರು. ಸನಾತನಿ ಪರಂಪರೆಯ ಶೋಷಣೆಯನ್ನು ಜನರ ಮುಂದಿಟ್ಟು ಯಾವುದು ಸರಿ ಯಾವುದು ತಪ್ಪು ಅದನ್ನ ಜನರೇ ನಿರ್ಧಾರ ಮಾಡಬೇಕೆಂಬ ವಿಚಾರವನ್ನು ಸಮಾಜದ ಮುಂದಿಟ್ಟರು. ಬಲಿಷ್ಠ ಪೌರೋಹಿತ್ಯ ವರ್ಗಕ್ಕೆ ಸೆಡ್ಡು ಹೊಡೆದು, ಸಮಾನತೆಯ ಗಂಟೆಯನ್ನು ಸಮಾಜದಲ್ಲಿ ಬಾರಿಸಿ ಸರ್ವರಲ್ಲೂ ಜಾಗೃತಿ ಮೂಡಿಸಿ ಐತಿಹಾಸಿಕ ಕಲ್ಯಾಣ ಕ್ರಾಂತಿಗೆ ಕಾರಣರಾದವರು ನಮ್ಮ ಬಸವಾದಿ ಪ್ರಮಥರು.

ಇದನ್ನೂ ಓದಿ: ’ಏಕತ್ವಂ’; ಇದು ತನಿಷ್ಕ್‌‌ನ ಜಾಹಿರಾತಲ್ಲ, ನಿಜ ಜೀವನದ ’ವಿಶ್ವಕುಟುಂಬ’!

ನೆಲವೊಂದೆ,ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಮನಕ್ಕೆ
ಕುಲವೊಂದೆ ತನ್ನ ತಾನರಿದಂಗೆ
ಫಲವೊಂದೆ ಷಡುದರುಶನ
ಮುಕ್ತಿಗೆ ನಿಲುವೊಂದೆ
ಕೂಡಲಸಂಗಮದೇವಾ ನಿಮ್ಮನರಿದವಂಗೆ.

ನಾವು ಆಚರಿಸುವ ಆಚರಣೆಗಳಿಂದ ಮಾತ್ರ ಉತ್ತಮ, ಅಧಮರೆನಿಸಿಕೊಳ್ಳುತ್ತೇವೆ ಹೊರತು ಕುಲದಿಂದಲ್ಲ. ನೆಲ ಒಂದೇ ಅಲ್ಲಿ ಶಿವಾಲಯ ಕಟ್ಟಿದರೆ ಪುಣ್ಯಕ್ಷೇತ್ರ, ಕೆಟ್ಟವರ ತಾಣವಾದರೆ ಅದು ಪುಣ್ಯಸ್ಥಳವಲ್ಲ. ನೀರು ಒಂದೇ ಅದು ಪೂಜೆಗೆ ಬಳಸಿದರೆ ತೀರ್ಥ, ಶೌಚಕ್ಕೆ ಬಳಸಿದರೆ ಹೊಲಸು ನೀರು. ಅಂತೆಯೇ ಕಾರ್ಯದಿಂದ ಮಾನವ ಕುಲವೊಂದೆ ಉತ್ತಮ. ಜ್ಞಾನದಿಂದ ಉತ್ತಮ, ಅಜ್ಞಾನದಿಂದ ಅಧಮ ಆಯಾ ಜಾತಿಗಳ ಗುರಿ ಒಂದೇ ಅದುವೇ ಮುಕ್ತಿ ಮೇಲು ಕೀಳೆಂದು ಜಾತಿಯನ್ನು ವಿಂಗಡಿಸುವದನ್ನು ಈ ವಚನದಲ್ಲಿ ಸನಾತನಿ ಆಚರಣೆಗಳನ್ನ ಖಂಡಿಸಿದ್ದಾರೆ.

ವೇದವೆಂಬುದು ಓದಿನ ಮಾತು: ಶಾಸ್ತ್ರವೆಂಬುದು ಸಂತೆಯ ಸುದ್ದಿ
ಪುರಾಣವೆಂಬುದು ಪುಂಡರ ಗೋಷ್ಟಿ; ತರ್ಕವೆಂಬುದು ತಗರ ಹೋರಟೆ
ಭಕ್ತಿ ಎಂಬುದು ತೋರಿ ಉಂಬುವ ಲಾಭ
ಗುಹೆಶ್ವರನೆಂಬುದು ಮೀರಿದ ಘನವು.
-ಅಲ್ಲಮ ಪ್ರಭು

ಹೀಗೆ ಬಸವಾದಿ ಪ್ರಮಥರೆಲ್ಲರೂ ಸನಾತನ ಪರಂಪರೆಯ ವಿರೋಧವಾಗಿಯೇ ಹೊಸ ಮತದ ಅನ್ವೇಷಣೆ ಮಾಡಿ ಸಮ ಸಮಾಜದ ಕನಸನ್ನ ಕಂಡು ಅನುಭವ ಮಂಟಪಮವನ್ನ ನಿರ್ಮಿಸಿದ ಜಗತ್ತಿನ ಶ್ರೇಷ್ಠ ಪರಂಪರೆ ನಮ್ಮದು.

ಇದನ್ನೂ ಓದಿ: ವಿಷಕಾರುವ, ದ್ವೇಷ ಹರಡುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ: ರಾಜೀವ್‌ ಬಜಾಜ್

11 -12ನೇ ಶತಮಾನದಲ್ಲಿ ಆರಂಭವಾದ ಈ ಮತದ ಪ್ರಖರತೆಯನ್ನು ಮತ್ತು ಪ್ರಶ್ನೆ ಮಾಡುವ ಸಮಾಜದ ನಡೆಯನ್ನ ಕಂಡ  ಸನಾತನವಾದಿಗಳು ಇದರ ವಿರುದ್ಧ ಸಿಡಿದೆದ್ದರು. ಹುನ್ನಾರ ಮಾಡಿದರು. ಕಲ್ಯಾಣದಿಂದ ಬಸವಣ್ಣವರನ್ನು ಹೊರಹಾಕಿದರು, ಶರಣರನ್ನು ಬೆನ್ನಟ್ಟಿ ಕೊಲ್ಲಲಾಯಿತು. ಕೋಟಿ ಕೋಟಿ ವಚನ ಕಟ್ಟುಗಳನ್ನ ಸುಟ್ಟರು. ಬಸವಣ್ಣನವರು ಕಟ್ಟಿದ ಅನುಭವ ಮಂಟಪವನ್ನ ಹಾಳುಗೆಡವಿದವರು ಇದೆ ಸನಾತನಿಗಳು.

ಅಂದು ಆದ ಆ ಮಹೋನ್ನತ ಶ್ರೇಷ್ಠ ಕ್ರಾಂತಿಯ ಅನುಭವ ಇಂದಿನ ಸುಶಿಕ್ಷಿತರಲ್ಲಿ ಜಾಗೃತವಾಗುವದನ್ನು ಕಂಡು ಹೆದರಿ, ಮತ್ತದೇ ಒಂದು ವರ್ಗ ಅಳುವ ವರ್ಗದ ತಲೆ ಹಿಡಿದು ಬಸವಾದಿ ಪ್ರಮಥರು ಕಟ್ಟಿದ ಅನುಭವ ಮಂಟಪದ ತತ್ವಗಳನ್ನು ತುಳಿದು ತಮ್ಮ ಮೌಢ್ಯವನ್ನು ಬಸವಣ್ಣವರ ಹೆಸರು ಹೇಳಿ ಬಿತ್ತುವ ಕಾರ್ಯಕ್ಕೆ ನಾವು ತಡೆಗೋಡೆಯಾಗಿ ನಿಲ್ಲಬೇಕಿದೆ. ಇಲ್ಲವಾದಲ್ಲಿ ಮುಂದಿನ ಜನಾಂಗ ನೈತಿಕ ಗುಲಾಮಗಿರಿಗೆ ಬಿದ್ದು ಆಂತರಿಕ ಸಂಕೋಲೆಯಲ್ಲಿ ಬಂಧಿತರಾಗುತ್ತಾರೆ. ಬಸವಣ್ಣನವರ ಅಸ್ತಿತ್ವಕ್ಕೆ ಕೊಡಲಿ ಏಟು ಹಾಕುತ್ತಿರುವ ಈ ಸನಾತನಿಗಳನ್ನು ತಡೆಯಬೇಕಿದೆ. ಬೇಕಾದರೆ ಪ್ರಾಣ ಹೋಗಲಿ ಬಸವಣ್ಣನವರ ಆಶಯಗಳು ಬದಲಾಗದಂತೆ ಉಳಿಸಿಕೊಂಡು ಬದುಕಬೇಕಾದ ಸ್ಥಿತಿ ಇಂದು ನಮ್ಮಲ್ಲರ ಮುಂದಿದೆ.

ಇದನ್ನೂ ಓದಿ: ‘ಸನಾತನ ಚಿಂತನೆಯ ಮರುಸೃಷ್ಟಿ’ ಪತ್ರಿಕಾ ಜಾಹೀರಾತು: ಬಸವ ತತ್ವದ ಅನುಯಾಯಿಗಳಿಂದ ವ್ಯಾಪಕ ಖಂಡನೆ

ಒಂದು ಶರಣಾಗು ಇಲ್ಲವೇ ಶರಣನಾಗು ಬಸವಣ್ಣನವರ ಅನುಭವಕ್ಕೆ ತೊಂದರೆ ಆದಾಗ ಸಿಡಿದೇಳು. ಬಸವ ತತ್ವಗಳಲ್ಲಿ ನಾವೆಲ್ಲ ಲೀನರಾಗಬೇಕಿದೆ. ಆದರೆ ಇಲ್ಲಿ ಸನಾತನಿಗಳು ಈ ತತ್ವಗಳನ್ನೆ ಲೀನಮಾಡಲು ಹೊರಟಿದ್ದಾರೆ. ಇದರ ವಿರುದ್ಧ ನಾವುಗಳು ಸಿಡಿದು ನಿಲ್ಲಬೇಕಿದೆ. ಬಸವಣ್ಣನವರ ಆಶಯಗಳನ್ನು ಮುಳುಗಲು ಬಿಡಲೇಬಾರದು ಎಂಬ ನಿರ್ಣಯಕ್ಕೆ ಬದ್ಧರಾಗಬೇಕಿದೆ. ಲಿಂಗಾಯತವನ್ನು ಮತ್ತೆ ಸನಾತನ ಧರ್ಮದೊಳಕ್ಕೆ ಎಳೆದುಕೊಂಡು ಹೋಗಲು ಪ್ರಯತ್ನಿಸುವ ಜನರಿಂದ ಅದನ್ನು ರಕ್ಷಿಸಬೇಕಾಗಿದೆ.

ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯಾ ಒಬ್ಬ ಶರಣನ!
ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ
ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿತಂದು
ಅಮರಗಣಂಗಳೆಂದು ಹೆಸರಿಟ್ಟು ಕರೆದು


ಅಗಣಿತಗಣಂಗಳೆಲ್ಲರ ಹಿಡಿತಂದು

ಅಸಂಖ್ಯಾತರೆಂಬ ಹೆಸರಿಟ್ಟು ಕರೆದು
ಭಕ್ತಿಯ ಕುಳಸ್ಥಲವ
ಶ್ರುತದೃಷ್ಟಪವಾಡದಿಂದ ಮರೆದು ತೋರಿ
ಜಗವರಿಯಲು ಶಿವಾಚಾರವ ಧ್ವಜವನೆತ್ತಿಸಿ
ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಿಣಿಗೆಯಾದನು

ಆ ಶಿವಶರಣನ ಮನೆಯೊಳಗಿಪ್ಪ

ಶಿವಗಣಂಗಳ ತಿಂಥಿಣಿಯ ಕಂಡು
ಎನ್ನಮನ ಉಬ್ಬಿಕೊಬ್ಬಿ ಓಲಾಡುತ್ತಿದ್ದೆನಯ್ಯಾ!
ನಮ್ಮ ಗುಹೇಶ್ವರನ ಶರಣ ಸಂಗನಬಸವಣ್ಣನ
ದಾಸೋಹದ ಘನವನೇನೆಂದೆನಬಹುದು ನೋಡಾ ಸಿದ್ಧರಾಮಯ್ಯಾ

ಇದನ್ನೂ ಓದಿ: ‘ಶೂದ್ರ’ ಪದಬಳಕೆ: ಪ್ರಗ್ಯಾ ಠಾಕೂರ್‌ಗೆ ತಿರುಗೇಟು ಕೊಟ್ಟ ಮೀನಾ ಕಂದಸಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಸ್ರೇಲ್ ಚುನಾವಣೆ: ನೆತನ್ಯಾಹು, ಐಸೆನ್‌ಕೋಟ್ ಬಣಗಳಿಗೆ ಬಹುಮತದ ಕೊರತೆ; ಸರ್ಕಾರ ರಚನೆಯಲ್ಲಿ ಅರಬ್ ಪಕ್ಷಗಳೇ ನಿರ್ಣಾಯಕ!

ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಆಡಳಿತಾರೂಢ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಬಣಗಳೆರಡಕ್ಕೂ ಭಾರಿ ಸವಾಲು ತಂದೊಡ್ಡಿದೆ. 120 ಸದಸ್ಯ ಬಲದ...

ನ.1ರ ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಬೆಂಬಲ ಘೋಷಿಸಿದ ‘ಪೀಪಲ್ ಅಗೆನ್ಸ್ಟ್ ಎಸ್‌ಐಆರ್’

ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸಲಿರುವ ಬೃಹತ್ ರ‍್ಯಾಲಿಗೆ ಪೀಪಲ್ ಅಗೆನೆಸ್ಟ್ ಎಸ್‌ಐಆರ್‌ ಬೆಂಬಲ ಘೋಷಿಸಿದೆ. ಪ್ರಜಾಪ್ರಭುತ್ವವನ್ನು ಉಳಿಸಲು, ಎಸ್‌ಐಆರ್ ರದ್ದುಗೊಳಿಸಲು, ಮುಖ್ಯ ಚುನಾವಣಾ ಆಯುಕ್ತ...

‘ನುಸುಳುಕೋರರನ್ನು’ ಹೊರಹಾಕಲು SIR ಎಂದಿತ್ತು ಬಿಜೆಪಿ ಮತ್ತು ಚು. ಆಯೋಗ : ಆರು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಕೇವಲ 1,600 ವಿದೇಶಿಯರು ಮಾತ್ರ

'ನುಸುಳುಕೋರರನ್ನು' ಪತ್ತೆ ಹಚ್ಚುವುದು ಅಥವಾ 'ವಿದೇಶಿ ಅಕ್ರಮ ವಲಸಿಗರನ್ನು' ಪತ್ತೆ ಹಚ್ಚುವುದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳಿತ್ತು....

ಸಂತ್ರಸ್ತೆ ಮತ್ತು ಆರೋಪಿ ನಡುವಿನ ‘ಒಪ್ಪಂದ’ವನ್ನಷ್ಟೇ ಆಧರಿಸಿ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಪಕ್ಷಕಾರರ (ಸಂತ್ರಸ್ತೆ ಮತ್ತು ಆರೋಪಿ) ನಡುವಿನ ರಾಜಿ ಸಂಧಾನದ ಆಧಾರದ ಮೇಲೆ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೇವಲ ಒಪ್ಪಂದದ ಆಧಾರದ ಮೇಲೆ ಗಂಭೀರ ಅಪರಾಧಗಳನ್ನು...

DELHI SIR : 2026ರ ಮತದಾರರ ಪಟ್ಟಿಯಲ್ಲಿದ್ದರೂ ಕೂಡ ಡಿಲಿಟೆಡ್ ವೋಟರ್ಸ್ ಫಾರಂ-6 ಸಲ್ಲಿಸುವಂತೆ ಸೂಚಿಸಿದ್ದು ಏಕೆ? ಚು. ಆಯೋಗಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ, 2026ರ ಮತದಾರರ ಪಟ್ಟಿಯಲ್ಲಿದ್ದರೂ ಸಹ ಗಣತಿ ನಮೂನೆಗಳನ್ನು (enumeration forms) ಭರ್ತಿ ಮಾಡದ ಕಾರಣಕ್ಕಾಗಿ ಕರಡು ಪಟ್ಟಿಯಿಂದ ಹೆಸರನ್ನು ಕಳೆದುಕೊಂಡಿರುವ ವ್ಯಕ್ತಿಗಳು,...

ಮರ್ಯಾದೆಗೇಡು ಹತ್ಯೆ ಶಂಕೆ: ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿಯ ಸಹೋದರ ಬಂಧನ

ಉತ್ತರ ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನನ್ನು ಇಟ್ಟಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಮರ್ಯಾದೆಗೇಡು ಹತ್ಯೆ ಶಂಕೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಪತ್ನಿಯ ಹಿರಿಯ...

Karnataka SIR | ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಿದ ಹೋರಾಟಗಾರರು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ಗೆ ಬಹಿರಂಗ ಸವಾಲು

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮಂಗಳವಾರ (ಅ.27) ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಹೋರಾಟಗಾರರು ತಿರಸ್ಕರಿಸಿದ್ದು, ಹೋರಾಟ ಮುಂದುವರಿಸುವ ಘೋಷಣೆ ಮಾಡಿದ್ದಾರೆ. ಬುಧವಾರ (ಅ.28) ಬೆಂಗಳೂರಿನ ಶಾಸಕರ ಭವನದಲ್ಲಿ...

ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ; ಪ್ರತಿಭಟನಾ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ಸಾಧ್ಯತೆ

ಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡುವ ನಿರೀಕ್ಷೆಯಿರುವ ಬೆನ್ನಲ್ಲೇ, ವಿದ್ಯಾರ್ಥಿಗಳ ಹೋರಾಟಕ್ಕೆ ಪಕ್ಷವು ಬೆಂಬಲ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಸಂಘವನ್ನು (ಜೆಎಂಐಎಸ್‌ಯು)...

ಎಂಎಲ್‌ಸಿ ಚುನಾವಣೆ ಸೋಲಿನ ಹಿಂದಿರುವ ರಾಜಕೀಯ – ಸಂಘಟನಾತ್ಮಕ ಕಾರಣಗಳ ಕುರಿತು ಪರಾಮರ್ಶಿಸುತ್ತೇವೆ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್

ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಸೋಲಿನ ಹಿಂದಿರುವ ರಾಜಕೀಯ ಹಾಗೂ ಸಂಘಟನಾತ್ಮಕ ಕಾರಣಗಳ ಕುರಿತು ಸಮಗ್ರ ಪರಾಮರ್ಶೆ ನಡೆಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್...

ಸ್ಪೇನ್‌ನಲ್ಲಿ ಅತಿ ವೇಗದ ರೈಲುಗಳ ನಡುವೆ ಡಿಕ್ಕಿ; ಕನಿಷ್ಠ 46 ಮಂದಿ ಸಾವು

ಸ್ಪೇನ್‌ನ ಟೊಲೆಡೊ ಪ್ರಾಂತ್ಯದಲ್ಲಿ ಬುಧವಾರ ಬೆಳಿಗ್ಗೆ ಎರಡು ಅತಿ ವೇಗದ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 46 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಪೇನ್‌ನ ಎಬಿಸಿ (ಎಬಿಸಿ) ಸುದ್ದಿ ಸಂಸ್ಥೆ ವರದಿ ಮಾಡಿದೆ....