Homeಕರೋನಾ ತಲ್ಲಣಕೊವ್ಯಾಕ್ಸಿನ್: ಒಂದು ಪೊಲಿಟಿಕಲ್ ಜುಮ್ಲಾ, ಆತ್ಮ್‌ನಿರ್ಭರ್ ಹಪಾಹಪಿಗೊಂದು ನಿದರ್ಶನ

ಕೊವ್ಯಾಕ್ಸಿನ್: ಒಂದು ಪೊಲಿಟಿಕಲ್ ಜುಮ್ಲಾ, ಆತ್ಮ್‌ನಿರ್ಭರ್ ಹಪಾಹಪಿಗೊಂದು ನಿದರ್ಶನ

ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ 110% ಸುರಕ್ಷಿತ ಎಂದು ಯಾವುದೇ ದತ್ತಾಂಶಗಳ ಆಧಾರವಿಲ್ಲದೇ ಘೋಷಣೆ ಮಾಡಿರುವ ವಿಷಯವಾರು ತಜ್ಞರ ಸಮಿತಿಯ ಸದಸ್ಯರ ಹೆಸರು ಸಾರ್ವಜನಿಕ ವಲಯಕ್ಕೆ ಗೊತ್ತೇ ಇಲ್ಲ.

- Advertisement -
- Advertisement -

ರಾಜಕಾರಣಿಗಳ ವರಸೆಯಲ್ಲಿ ಹಲವು ವಿಜ್ಞಾನಿಗಳು ಕೂಡ ಇದರ ಸಮರ್ಥನೆ ಮಾಡುತ್ತಿರುವುದು, ಒಟ್ಟಿನಲ್ಲಿ ಮೋದಿಯ ’ಆತ್ಮನಿರ್ಭರ್ ಭಾರತ್’ನಲ್ಲಿ ಒಂದು ದೇಸಿ ಲಸಿಕೆ ಅಭಿವೃದ್ಧಿಯಾಗಿತು ಎಂಬುದನ್ನು ತೋರಿಸುವುದಕ್ಕೆ! ಹಾಗಾಗಿ ಇದೊಂದು ಪಾಲಿಟಿಕಲ್ ಜುಮ್ಲಾ ಅಷ್ಟೇ.

ಕೊವ್ಯಾಕ್ಸಿನ್ ಲಸಿಕೆಗೆ ಔಷಧ ನಿಯಂತ್ರಕರು ಅನುಮತಿ ನೀಡಿರುವುದರ ಹಿಂದೆ ವಿಶ್ವಾಸಾರ್ಹವಲ್ಲದ ವೈಜ್ಞಾನಿಕೇತರ ಕಾರಣಗಳಿವೆ. ಈ ಲಸಿಕೆ ಮೂರನೆ ಹಂತದ ಟ್ರಯಲ್ ಪೂರ್ಣಗೊಳಿಸಿಲ್ಲ, ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ದತ್ತಾಂಶವನ್ನೂ ಪ್ರಕಟಿಸಿಲ್ಲ.

ಇದನ್ನೂ ಓದಿ: ಪ್ರಯೋಗ ಪೂರೈಸದ ಲಸಿಕೆಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆಯೆ?: ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ಆರ್‌ಟಿಐ ಕಾರ್ಯಕರ್ತ

ರಾಜಕಾರಣಿಗಳು ಮತ್ತು ರಾಜಕೀಯ ವಿಶ್ಲೇಷಕರೇನೋ ತಮ್ಮದೇ ಕಾರಣಗಳಿಗಾಗಿ ಈ ಲಸಿಕೆ ಬಳಕೆಯ ಸಮ್ಮತ್ತಿಯನ್ನು ಸಾರ್ವಜನಿಕ ಆರೋಗ್ಯದ ನೆಪದಲ್ಲಿ ಬೆಂಬಲಿಸುತ್ತಾರೆ. ಆದರೆ ವೈಜ್ಞಾನಿಕ ಸಮುದಾಯದ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವ ಹಲವರು ಕೂಡ ಇದನ್ನು ಕುರುಡಾಗಿ ಬೆಂಬಲಿಸುವುದನ್ನು ನೋಡಿದರೆ, ಮೋದಿಯವರ ಆತ್ಮನಿರ್ಭರ್ ಭಾರತದಲ್ಲಿ ಒಂದು ದೇಸಿ ಲಸಿಕೆ ತಯಾರಾಗಿತು ಎಂದು ಸಾಧಿಸುವ ಹಠವೇ ಎದ್ದು ಕಾಣುತ್ತಿದೆ. ಸೀರಂ ಕಂಪನಿಯ ಕೊವಿಶೀಲ್ಡ್ ಬಳಕೆಗೆ ಅನುಮತಿ ನೀಡುವ ಸಂದರ್ಭದಲ್ಲೇ ಇದಕ್ಕೂ ಅನುಮತಿ ನೀಡಿರುವುದು ಇದೇ ಉದ್ದೇಶಕ್ಕಾಗಿ.

ಭಾರತ ರಿಪಬ್ಲಿಕ್‌ನ ಉನ್ನತ ನ್ಯಾಯಾಂಗವು ಜನ ಪ್ರತಿರೋಧದ ಅಲೆಗಳನ್ನು ತಡೆಯಲು ಹಿಂಜರಿಂಯುತ್ತಿರುವ ಒಳ್ಳೆಯ ಬೆಳವಣಿಗೆಯ ನಡುವೆಯೇ ಔಷಧ ನಿಯಂತ್ರಕರು ’ನಿಯಂತ್ರಿತ ಬಳಕೆ’ ಎಂದು ಭಾಷಾ ನೈಪುಣ್ಯತೆಯ ಹೊದಿಕೆಯಲ್ಲಿ ಈ ಲಸಿಕೆಗೆ ಅನುಮತಿ ನೀಡಿದ್ದಾರೆ.

ಈ ಕ್ರಮದಿಂದ ಅಂತಹ ದೊಡ್ಡ ಪೊಲಿಟಿಕಲ್ ರಿಸ್ಕ್ ಏನೂ ಇಲ್ಲ, ಇದನ್ನು ಮ್ಯಾನೇಜ್ ಮಾಡಬಹುದು ಎಂದು ಮೋದಿ ಸರ್ಕಾರ ಅಂದಾಜಿಸಿರಬಹುದು. ಮೂರನೆ ಹಂತದಲ್ಲಿ ಲಸಿಕೆಯ ಸಮಸ್ಯೆಗಳು ಕಾಣಿಸಿದರೆ, ಅದನ್ನು ಕೈಬಿಡಬೇಕಾಗಬಹುದು. ಸಮಸ್ಯೆಗಳು ನಂತರದಲ್ಲಿ ಗೋಚರಿಸಿದರೆ ಸಾರ್ವಜನಿಕರ ’ಶಾರ್ಟ್ ಮೆಮರಿ’ ಮತ್ತು ಜನರನ್ನು ಬೇರೆ ವಿಷಯಗಳತ್ತ ತಿರುಗಿಸುವ ಸರ್ಕಾರದ ’ಕುಶಲತೆ’ಯಿಂದಾಗಿ ಅದು ಮುಚ್ಚಿಯೂ ಹೋಗಬಹುದು.

ಇದನ್ನೂ ಓದಿ: ಮಧ್ಯಪ್ರದೇಶ: ‘ಇದು ಪ್ರಯೋಗ’ ಎಂದು ಹೇಳದೆ ಸಾರ್ವಜನಿಕರಿಗೆ ಲಸಿಕೆ ನೀಡಿದ ಖಾಸಗಿ ಆಸ್ಪತ್ರೆ!

ಸಾರ್ವಜನಿಕ ಆರೋಗ್ಯ ಮತ್ತು ಮೋದಿ ಸರ್ಕಾರದ ’ರಾಜಕೀಯ ಆರೋಗ್ಯ’ಕ್ಕೆ ಮುಂದೆ ಒದಗಬಹುದಾದ ರಿಸ್ಕ್ ಅನ್ನು ಹೇಗೋ ಸಂಭಾಳಿಸಬಹುದು, ಆದರೆ ಆರೋಗ್ಯ ಸೇವೆ ಮತ್ತು ಫಾರ್ಮಾಟಿಕ್ಸ್‌ನಲ್ಲಿ ಭಾರತಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆಗೆ ಒದಗುವ ರಿಸ್ಕ್ ಅನ್ನು ನಿವಾರಿಸಲಾಗದು. ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ 110% ಸುರಕ್ಷಿತ ಎಂದು ಯಾವುದೇ ದತ್ತಾಂಶಗಳ ಆಧಾರವಿಲ್ಲದೇ ಘೋಷಣೆ ಮಾಡಿರುವ ವಿಷಯವಾರು ತಜ್ಞರ ಸಮಿತಿಯ ಸದಸ್ಯರ ಹೆಸರು ಸಾರ್ವಜನಿಕ ವಲಯಕ್ಕೆ ಗೊತ್ತೇ ಇಲ್ಲ.

’ನಾವು ತಜ್ಞರು, ನಮ್ಮನ್ನು ನಂಬಿ’, ’ಭಾರತೀಯ ವಿಜ್ಞಾನಿಗಳನ್ನು ನಂಬಿ’ ಎಂಬ ರಮಿಸುವ ಆಟಗಳು ದೇಶದೊಳಗಡೆಯಷ್ಟೇ ಯಶಸ್ವಿಯಾಗಬಹುದು. ಆದರೆ ವಿದೇಶಿ ಕ್ಷೇತ್ರದಲ್ಲಿ ಇಂತದ್ದೆಲ್ಲ ನಡೆಯಲಾರದು. ಈ ಕಾರಣಕ್ಕೇ ಸಾಕಷ್ಟು ಪಾರದರ್ಶಕತೆ, ವ್ಯಾಪಕ ಟ್ರಯಲ್ಸ್ ಮತ್ತು ವೈಜ್ಞಾನಿಕ ಪುರಾವೆ ಹೊಂದಿರುವ ಪಾಶ್ಚಾತ್ಯ ಲಸಿಕೆಗಳಿಗೆ ರಷ್ಯಾ ಮತ್ತು ಚೀನಾದ ಲಸಿಕೆಗಳಿಗಿಂತ ಹೆಚ್ಚು ಬೇಡಿಕೆಯಿದೆ.

ಲಸಿಕೆ ಮತ್ತು ಔಷಧಿ ತಯಾರಿಕೆಯಲ್ಲಿ ಜಗತ್ತಿನ ಪ್ರಮುಖ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಮೋದಿ ಸರ್ಕಾರ ಈ ಹೆಮ್ಮೆಗೆ ಮಸುಕಾಗದಂತೆ ಈ ದೇಸಿ ಕೈಗಾರಿಕೆಗೆ ಉತ್ತೇಜನ ನೀಡಬೇಕು. ಈ ಸರ್ಕಾರ ನೆನಪಿನಲ್ಲಿ ಇಡಬೇಕು: ’ಅಹಿಂಸಾ’ ಎಂಬುದು ಮೂಲಧರ್ಮ. ವೈದ್ಯಕೀಯದಲ್ಲಿ ಮೂಲಧರ್ಮ “primum non nocere”… ಇವೆರಡರ ಅರ್ಥ ಒಂದೇ: ‘Do No Harm’

ಕೃಪೆ: ದಿ ಪ್ರಿಂಟ್- ನಿತಿನ್ ಪೈ (ತಕ್ಷಶಿಲಾ ಸಂಸ್ಥೆಯ ನಿರ್ದೇಶಕರು)
ಅನುವಾದ: ಮಲ್ಲನೌಡರ್‌ ಪಿ.ಕೆ

ಇದನ್ನೂ ಓದಿ: ‘ಲಸಿಕೆಯಲ್ಲಿ ಹಂದಿ ಮಾಂಸವಿಲ್ಲ’ – ಆಧಾರರಹಿತ ಸುದ್ದಿ ಕಡೆಗಣಿಸಲು ಮುಸ್ಲಿಂ ವಿದ್ವಾಂಸರ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...