Homeಕರ್ನಾಟಕಗೋಕರ್ಣ ಅರ್ಬನ್ ಬ್ಯಾಂಕ್ ಭಾನಗಡಿ; ಹಾಲಕ್ಕಿ ಬುಡಕಟ್ಟಿನ ಅಟೆಂಡರ್‌ಗೆ ಬಲವಂತದ ನಿವೃತ್ತಿ!

ಗೋಕರ್ಣ ಅರ್ಬನ್ ಬ್ಯಾಂಕ್ ಭಾನಗಡಿ; ಹಾಲಕ್ಕಿ ಬುಡಕಟ್ಟಿನ ಅಟೆಂಡರ್‌ಗೆ ಬಲವಂತದ ನಿವೃತ್ತಿ!

- Advertisement -
- Advertisement -

ಗೋಕರ್ಣ ಮಹಾಬಲೇಶ್ವರ ಸಹಕಾರ ಬ್ಯಾಂಕ್ ಯಾನೆ ಗೋಕರ್ಣ ಅರ್ಬನ್ ಬ್ಯಾಂಕ್ ಪಟ್ಟಭದ್ರರ ಕಪಿಮುಷ್ಠಿಯಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿದೆ. ಸರ್ಕಾರದ ಕಾನೂನು ಕಟ್ಟಳೆ, ಸಹಕಾರ ಇಲಾಖೆಯ ಸೂಚನೆ ಸುತ್ತೋಲೆಗೆಲ್ಲ ಇಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ! ಜನರಲ್ ಮ್ಯಾನೇಜರ್ ಸಾಹೇಬರ ಏಕಪಕ್ಷೀಯ ಆಡಳಿತ, ಗ್ರಾಹಕರು ಮತ್ತು ಸಾರ್ವಜನಿಕರನ್ನು ದಿಗಿಲುಗೊಳಿಸಿಬಿಟ್ಟಿದೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗ ಸಮುದಾಯದ ಬಡಪಾಯಿ ಅಟೆಂಡರ್ ಒಬ್ಬರನ್ನು ಬಲಾತ್ಕಾರದಿಂದ ನಿವೃತ್ತಿಗೊಳಿಸಿರುವ ಪ್ರಕರಣವಂತೂ ಸದರಿ ಬ್ಯಾಂಕ್ ಬಗೆಗಿದ್ದ ನಂಬಿಕೆ, ದಿನದಿಂದ ದಿನಕ್ಕೆ ಕುಸಿಯುವಂತೆ ಮಾಡಿಬಿಟ್ಟಿದೆ.

ಬ್ಯಾಂಕಿನಲ್ಲಿ ಬರೋಬ್ಬರಿ 28 ವರ್ಷದಿಂದ ನಿಷ್ಠೆ ನಿಯತ್ತಿನಿಂದ ಚಾಕರಿ ಮಾಡಿಕೊಂಡಿದ್ದ ರಾಮ ತಿಮ್ಮಗೌಡರಿಗೆ ಮೋಸ ಮಾಡಿರುವ ಬ್ಯಾಂಕ್ ಮಂಡಳಿ ನಮ್ಮ ಹಣಕ್ಕೆ ಅದೆಂಥ ಭದ್ರತೆ ಸೌಲಭ್ಯ ಒದಗಿಸಬಹುದೆಂಬ ಆತಂಕದ ವಾದ ಗ್ರಾಹಕರದು. ರಾಮಗೌಡ 1-10-1994ರಂದು ಅಟೆಂಡರ್ ಹುದ್ದೆಗೆ ನೇಮಕಾತಿ ಪಡೆದುಕೊಂಡಿದ್ದರು. ಸಹಕಾರ ಇಲಾಖೆ ಮತ್ತು ಸರ್ಕಾರದ ಹಲವು ನಿಯಮ ನಿರ್ದೇಶನಗಳ ಪ್ರಕಾರ ರಾಮಗೌಡರಿಗೆ 2023ರ ತನಕ ಬ್ಯಾಂಕಲ್ಲಿ ಉದ್ಯೋಗ ಮಾಡುವ ಅವಕಾಶವಿದೆ. ಆದರೆ ಬ್ಯಾಂಕ್‌ನ ಅಷ್ಟೂ ಆಡಳಿತವನ್ನು ತನ್ನಿಚ್ಛೆಯಂತೆ ನಡೆಸುತ್ತಿರುವ ಜನರಲ್ ಮ್ಯಾನೇಜರ್ 29-4-2021 ರಂದು ಗೌಡರಿಗೆ “ನಿವೃತ್ತಿ ಸಂದೇಶ” ರವಾನಿಸಿದ್ದಾರೆ!

ಬ್ಯಾಂಕ್ ಆಡಳಿತ ಮಂಡಳಿ ಆದೇಶದಂತೆ 31-5-2021ರಂದು ನೌಕರಿಯಿಂದ ಬಿಡುಗಡೆ ಮಾಡಲಾಗುತ್ತದೆಂದು ತಿಳಿಸಿದ್ದಾರೆ. ಈ ಅನಿರೀಕ್ಷಿತ ಆಘಾತದಿಂದ ಹೌಹಾರಿದ ಅಸಹಾಯಕ ಗೌಡರು “ಸರ್, ನನಗಿನ್ನೂ 58 ವರ್ಷ ವಯಸ್ಸು 2ವರ್ಷ ಸೇವಾವಧಿ ಇನ್ನೂ ಬಾಕಿಯಿದೆ ಅನ್ಯಾಯ ಮಾಡಬೇಡಿ” ಎಂದು ಪರಿಪರಿಯಾಗಿ ಅಲವತ್ತುಕೊಂಡಿದ್ದಾರೆ, ಇದ್ಯಾವುದಕ್ಕೂ ಕೇರ್ ಮಾಡದ ಜನರಲ್ ಮ್ಯಾನೇಜರ್ ಹಠದಿಂದ ರಾಮಗೌಡರನ್ನು 31-5-2021 ರಂದು ನಿವೃತ್ತಿಗೊಳಿಸಿ ಆದೇಶ ಕೊಟ್ಟು ಹೊರಹಾಕಿದ್ದಾರೆ!

ನೌಕರರನ್ನು 58 ವರ್ಷಕ್ಕೆ ನಿವೃತ್ತಿಗೊಳಿಸುವ ಸಹಕಾರ ಸಂಘ ಅಥವಾ ಸಹಕಾರ ಬ್ಯಾಂಕ್‌ಗಳ 1960ರ ನಿಯಮ 18(2)ನ್ನು ರಾಜ್ಯ ಸರ್ಕಾರದ ಅಧಿಸೂಚನೆ ಸ.ಸಿಎಲ್‌ಎಮ್/2008 ದಿನಾಂಕ 17-9-2008 ರಂತೆ ಎರಡು ವರ್ಷ ಹೆಚ್ಚಿಗೆ ಸೇವಾವಧಿ ಕಲ್ಪಿಸಿ ಬದಲಾಯಿಸಲಾಗಿದೆ. ಈ ನಿಯಮ ಎಲ್ಲ ಸಹಕಾರಿ ಸಂಘ/ಸಹಕಾರಿ ಬ್ಯಾಂಕ್ ಬೈಲಾದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸರ್ಕಾರ ಕಟ್ಟುನಿಟ್ಟಿನ ಸೂಚನೆ ಸಹ ನೀಡಿದ್ದೂ ಇದೆ. ಆದರೆ ಸರ್ಕಾರದ ಈ ನಿಯಮ ಗೋಕರ್ಣ ಅರ್ಬನ್ ಬ್ಯಾಂಕ್ ಆಡಳಿತಗಾರರು ಕಡೆಗಣಿಸಿ 58 ವರ್ಷಕ್ಕೆ ನೌಕರರನ್ನು ಮನೆಗಟ್ಟುತ್ತಿದ್ದಾರೆ!

ಸಹಕಾರ ಸಂಘಗಳ ನಿಬಂಧಕರು ದಿನಾಂಕ 25-9-2008ರಂದು ಹೊರಡಿಸಿದ ಸುತ್ತೋಲೆ ಕ್ರಮ ಸಂಖ್ಯೆ ಆರ್‌ಎಸ್‌ಆರ್/ಎಎಸ್‌ಸಿ/02/2008-09ರಲ್ಲಿ ಎಲ್ಲ ಸಹಕಾರ ಸಂಘ/ಸಹಕಾರ ಬ್ಯಾಂಕ್‌ಗಳು ನೌಕರರ ನಿವೃತ್ತಿ ವಯಸ್ಸಿನಲ್ಲಾದ ಬದಲಾವಣೆ ತಿದ್ದುಪಡಿ ನಿಯಮ ತಮ್ಮ ಸಂಸ್ಥೆಯ ಪೋಟ್ ನಿಯಮದಲ್ಲಿ ಅಳವಡಿಸಿಕೊಳ್ಳಲು ಸೂಚಿಸಿದ ಆದೇಶವನ್ನು ಗೋಕರ್ಣ ಅರ್ಬನ್ ಬ್ಯಾಂಕ್ ಆಡಳಿತ ಅಧಿಕಾರಿಗಳು ಧಿಕ್ಕರಿಸಿ ಕೂತಿದ್ದಾರೆ!!

“ನಮ್ಮ ಬ್ಯಾಂಕಿನಲ್ಲಿ 58 ವರ್ಷಕ್ಕೆ ನಿವೃತ್ತಿಗೊಳಿಸುವ ಪೋಟ್ ನಿಯಮ ಬದಲಾಯಿಸಿಲ್ಲ; ಬದಲಾಯಿಸೋದೂ ಇಲ್ಲ; ನೀನು ಕೆಲಸಕ್ಕೆ ಬರುವುದು ಬೇಡ” ಎಂದು ಪಾಪದ ರಾಮಗೌಡರಿಗೆ ಜನರಲ್ ಮ್ಯಾನೇಜರ್ ಮತ್ತು ಆತನ ಕಣ್ಸನ್ನೆಗೆ ತಕ್ಕಂತೆ ಕುಣಿಯುವ ಕೆಲವು ನಿರ್ದೇಶಕರು ಏರು ಸ್ವರದಲ್ಲಿ ಹೇಳಿ ಹೊರಹಾಕಿದ್ದಾರೆ. ಈ ದಬ್ಬಾಳಿಕೆಯಿಂದ ಹೈರಾಣಾದ ರಾಮಗೌಡ ತನಗಾದ ಅನ್ಯಾಯವನ್ನು ಸಹಕಾರ ಸಂಘಗಳ ಉಪ ನಿಬಂಧಕರಿಗೆ ನಿವೇದಿಸಿಕೊಂಡಿದ್ದಾರೆ.

ದಾವೆ ವಿಚಾರಣೆ ನಡೆಸಿದ ಉಪ ನಿಬಂಧಕರಿಗೆ, ಗೋಕರ್ಣ ಅರ್ಬನ್ ಬ್ಯಾಂಕ್‌ನವರು ಎಲ್ಲ ನಿಯಮ ನೀತಿಗಳನ್ನು ಪ್ರಜ್ಞಾಪೂರ್ವಕವಾಗೇ ಮೂಲೆಗೊತ್ತಿ ರಾಮಗೌಡರನ್ನು ಎರಡು ವರ್ಷ ಮೊದಲೇ ನೀವೃತ್ತಿ ಮಾಡಿದ್ದಾರೆಂದು ಖಾತ್ರಿಯಾಗಿದೆ. ಅಂತೆಯೇ ಬ್ಯಾಂಕ್ ಗೌಡರಿಗೆ ಕೊಟ್ಟಿರುವ ನಿವೃತ್ತಿ ಆದೇಶಕ್ಕೆ ತಡೆಯಾಜ್ಞೆಯನ್ನೂ ಉಪ ನಿಬಂಧಕರು ನೀಡಿದ್ದಾರೆ. ಇಷ್ಟಾದರೂ ಬ್ಯಾಂಕ್‌ನವರು ಮಾತ್ರ ಗೌಡರನ್ನು ಕರ್ತವ್ಯಕ್ಕೆ ಸೇರಿಸಿಕೊಳ್ಳದೆ ಸತಾಯಿಸುತ್ತಿದ್ದಾರೆ. ಬ್ಯಾಂಕಿನ ಅಧ್ಯಕ್ಷರು ಎರಡು ಬಣದ ನಡುವೆ ಸಿಕ್ಕಿಬಿದ್ದಂತೆ ಒದ್ದಾಡುತ್ತಿರುವುದು ಅನೇಕ ಅನುಮಾನಕ್ಕೆ ಎಡೆ ಮಾಡಿದೆ!

ರಾಮಗೌಡ ದಿನವೂ ಡಿಆರ್ ಕೋರ್ಟಿನ ತಡೆಯಾಜ್ಞೆ ಹಿಡಿದುಕೊಂಡು ಬ್ಯಾಂಕಿಗೆ ಉದ್ಯೋಗಕ್ಕೆಂದು ಹೋಗುತ್ತಿದ್ದಾರೆ. ಆದರೆ ಅವರಿಗೆ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಅವರು ಬೆಳಗಿಂದ ಸಂಜೆವರೆಗೆ ಬ್ಯಾಂಕಿನ ಮೂಲೆಯಲ್ಲಿ ಕುಳಿತು ಎದ್ದು ಬರುತ್ತಿದ್ದಾರೆ. ಈಗ ಅವರಿಗೆ ಬ್ಯಾಂಕಿನ ಬ್ಯಾಚ್, ಸಮವಸ್ತ್ರ ಧರಿಸದಂತೆ ಜಿಎಂ ಸಾಹೇಬರು ಧಮಕಿ ಹಾಕಹತ್ತಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಬ್ಯಾಂಕಿನ ಆವರಣದಲ್ಲಿ ಅಹಿತಕರ ಘಟನೆ ಸಂಭವಿಸುವ ದುಗುಡದ ವಾತಾವರಣ ಸೃಷ್ಟಿಯಾಗಿದೆ!

ಧ್ವನಿಯಿಲ್ಲದ ಬುಡಕಟ್ಟು ಸಮುದಾಯದ ರಾಮಗೌಡ ಅಧಿಕಾರಸ್ಥರ ದರ್ಪಕ್ಕೆ ಕಂಗಾಲಾಗಿದ್ದಾರೆ. ಹಾಲಕ್ಕಿ ಒಕ್ಕಲು ಸಮುದಾಯದವರು ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಅಥವಾ ಸಹಕಾರ ಸಂಘದಂಥ ಸಂಸ್ಥೆಗಳಲ್ಲಿ ನೌಕರಿ ಗಿಟ್ಟಿಸುವುದೇ ಅಪರೂಪ. ಅಂಥದ್ದರಲ್ಲಿ ಶೋಷಿತ ಜನಾಂಗದ ಅಮಾಯಕನ ಹೊಟ್ಟೆಪಾಡಿನ ಉದ್ಯೋಗವೇ ಕಸಿಯುವ ಕ್ರೌರ್ಯಕ್ಕೆ ಗೋಕರ್ಣ ಅರ್ಬನ್ ಬ್ಯಾಂಕ್ ಆಡಳಿತಗಾರರು ಕೈ ಹಾಕಿರುವುದು ಘೋರ ದುರಂತ ಎಂದು ಅಂತಃಕರಣವುಳ್ಳ ಜನರ ಆಕ್ರೋಶವಾಗಿದೆ.

ಅಷ್ಟಕ್ಕೂ ಈ ಅನ್ಯಾಯದ ನಿವೃತ್ತಿ ಮಸಲತ್ತಿನ ಅಸಲಿಯತ್ತೇನೆಂದು ಹುಡುಕುತ್ತ ಹೋದರೆ, ಹೊಸ ನೇಮಕಾತಿ ಹರಾಜು ಹಾಕಿದರೆ ದೊಡ್ಡ ಗಂಟು ದಕ್ಕುತ್ತದೆಂಬ ಆಸೆ ಇರಬಹುದಾ ಎಂಬ ಪ್ರಶ್ನೆಗಳು ಕೂಡ ಏಳುತ್ತವೆ.

ಸಹಕಾರ ಇಲಾಖೆಯ ಅಧಿಕಾರಿಗಳು ಗೋಕರ್ಣ ಅರ್ಬನ್ ಬ್ಯಾಂಕ್‌ನತ್ತ ಕಣ್ಣಗಲಿಸಿ ನೋಡಬೇಕಿದೆ; ಮುಗ್ಧ ರಾಮಗೌಡರಿಗೆ ನ್ಯಾಯ ಒದಗಿಸಬೇಕಿದೆ.


ಇದನ್ನೂ ಓದಿ: 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ- ಹೊಸ ಮಾರ್ಗಸೂಚಿ ಪ್ರಕಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...