ಹೋಟೆಲ್ ಒಂದರ ಮೇಲೆ ದಾಳಿ ಮಾಡಿರುವ ಬಜರಂಗದಳದ ಸದಸ್ಯರು ಅಲ್ಲಿ ತಂಗಿದ್ದ ಅನ್ಯ ಧರ್ಮಕ್ಕೆ ಸೇರಿದ ಯುವಕ ಯುವತಿಯರಿಬ್ಬರನ್ನು ಬಲವಂತವಾಗಿ ಪೊಲೀಸರಿಗೆ ಒಪ್ಪಿಸಿರುವ ಮತೀಯ ಗೂಂಡಾಗಿರಿ ಘಟನೆ ಗುರುವಾರ ಮಂಗಳೂರಿನಲ್ಲಿ ನಡೆದಿದೆ.
ವಿಜಯಪುರದ ಹಿಂದು ಯುವತಿ ಹಾಗೂ ಹಾವೇರಿಯ ಮುಸ್ಲಿಂ ಯುವಕ ಇಬ್ಬರು ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಬಜರಂಗದಳದ ಕಾರ್ಯಕರ್ತರು ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ. ಯುವಕ-ಯುವತಿಯನ್ನು ಮಂಗಳೂರಿನ ಬಂದರು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಯುವಕ ಯುವತಿಯರಿಬ್ಬರು ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಪರಿಚಯಗೊಂಡಿದ್ದರು ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಏಕಾಏಕಿಯಾಗಿ ಹೋಟೆಲ್ ಮೇಲೆ ದಾಳಿ ನಡೆಸುವ ಅಧಿಕಾರವನ್ನು ಬಜರಂಗದಳದವರಿಗೆ ಕೊಟ್ಟಿದ್ಯಾರು? ಪರಸ್ಪರ ಸಮ್ಮತಿ ಮೇರೆಗೆ ಇಬ್ಬರು ಸ್ನೇಹಿತರು ಒಟ್ಟಿಗೆ ಇದ್ದಾಗಲೂ ಅದನ್ನು ತಪ್ಪು ಎಂದು ಹೇಳಿ ಪೊಲೀಸರಿಗೆ ಒಪ್ಪಿಸಲು ಮತೀಯ ಗೂಂಡಾಗಳಿಗೆ ಅಧಿಕಾರವಿದೆಯೇ? ಪೊಲೀಸರು ಬಜರಂಗದಳದವನ್ನು ಬಂಧಿಸದೇ ಆ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದೇಕೆ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿವೆ. ಅಲ್ಲದೇ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು, ಮಂಡ್ಯದಲ್ಲಿ, ವಿಜಯಪುರದಲ್ಲಿ ನಡೆದಿದ್ದ ಮತೀಯ ಗೂಂಡಾಗಿರಿ ಘಟನೆಗಳು ಮಾಸುವ ಮುಂಚೆಯೇ ಮಂಗಳೂರಿನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಈ ಹಿಂದೆಯೂ ಮಂಗಳೂರಿನಲ್ಲಿ ಹಲವು ಇದೇ ರೀತಿಯ ಘಟನೆಗಳು ನಡೆದಿದ್ದವು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೆ ಇತ್ತೀಚೆಗೆ ಮತೀಯ ಗೂಂಡಾಗಿರಿಯನ್ನು ಸಮರ್ಥಿಸಿ ಮಾತನಾಡಿದ್ದರು. ಅದಕ್ಕೆ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿತ್ತು. ಅಕ್ಟೋಬರ್ 21 ರಂದು ಬೆಂಗಳೂರಿನಲ್ಲಿ ಪ್ರೀತಿ ಬೇಕು, ದ್ವೇಷ ಸಾಕು ಹೆಸರಿನಲ್ಲಿ ಮತೀಯ ಗೂಂಡಾಗಿರಿ ಮತ್ತು ಅದನ್ನು ಸಮರ್ಥಿಸುವ ಮುಖ್ಯಮಂತ್ರಿಗಳ ಹೇಳಿಕೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆದಿದೆ. ಸಿಎಂ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ಸ್ ಸಂಘಟನೆಯು ನೋಟೀಸ್ ಜಾರಿ ಮಾಡಿದೆ.
ಇದನ್ನೂ ಓದಿ: ಬೆಳಗಾವಿ: ಪಾರ್ಕ್‌ಗೆ ಹೊರಟಿದ್ದ ಯುವಕ-ಯುವತಿಗೆ ಥಳಿಸಿ ಮತೀಯ ಗೂಂಡಾಗಿರಿ



Election ಹತ್ತಿರ ಬಂದಾಗ ನಾನು ಗೌರಿ ನೀನು ಗೌರಿ ಅಂತಾ ಹೊಸ ಹೊಸ website ಗಳು ಹುಟ್ಟಿಕೊಳ್ಳುತ್ತವೆ ಏನೇನೇ ನ್ಯೂಸ್ ಗಳನ್ನು ಬಿತ್ತಲು ಸುರು ಮಾಡುತ್ತವೆ.
ನೈತಿಕ ಪೋಲಿಸ್ ಗರಿ ತಪ್ಪು, ಇದನ್ನು ಒಪ್ಪಿಕೊಳ್ಳುತ್ತೇವೆ. ಆದರೆ
ಇಲ್ಲಿ ಹಿಂದೂ ಯುವತಿ – ಮುಸ್ಲಿಂ ಯುವಕ ವಿಷಯ ಬಂದಾಗ ಎದ್ದೇಳುವ ವೆಬ್ ಸೈಟ್ ಗಳು , ಮುಸ್ಲಿಂ ಯುವತಿ- ಹಿಂದೂ ಯುವಕರ ವಿಷಯ ಬಂದ ಸಂದರ್ಭದಲ್ಲಿ ಯಾಕೆ ಮಲಗಿದ್ದವು. ಇಂತಹ ವಿಷಯ ಬಂದಾಗ ನಡೆದ ಧಾಳಿಗಳ ಸಂದರ್ಭದಲ್ಲಿ ಯಾಕೆ ಮಾಧ್ಯಮ ಗಳು ಜಾಣ ಮೌನ ತೋರಿಸುತ್ತಿವೆ. ಅಂದರೆ ಮಾಧ್ಯಮ ವೆಬ್ ಸೈಟ್ ಗಳು ಏನನ್ನು ಪ್ರಚೋದಿಸುತ್ತಾ ಇವೆ ?
ಹಾಗೂ ಇಲ್ಲಿ ಪೋಲೀಸರ ರಿಪೋರ್ಟ್ ಬರದೆ ಯಾವುದೇ ಘಟನೆಯನ್ನು ನೈತಿಕ ಹಾಗೂ ಅನೈತಿಕ ಎಂದು ಘೋಷಿಸಲು ಮಾಧ್ಯಮ ಗಳಿಗೆ ಅಧಿಕಾರ ಕೊಟ್ಟವರು ಯಾರು?
What is wrong in that? Have you any idea of religiou goondagiri? Arrest those two along with editor of this dubba Nanu Gowri for distrbing religious harmony
What is wrong in this, if your daughter stayed in hotel with other religion guy then you will get to know.
Bajaranga Dal is the custodian of Hindu honor.All should support them.They maintain religious balance.
ಮಾಧ್ಯಮಗಳು ನಮ್ಮನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ
Awru madidhu correct aghe edhe.. nale ondh dhina nim mane maglu bere darmadha hudugan jothe edhagnu edhé helthira…?