Homeಮುಖಪುಟ2021 ರಾಸಾಯನಶಾಸ್ತ್ರ ನೊಬೆಲ್; ಪರಿಸರ ಸ್ನೇಹಿ ರಾಸಾಯನಿಕ ವೇಗವರ್ಧಕಗಳ ಸಂಶೋಧನೆಗೆ ಸಂದ ಗೌರವ

2021 ರಾಸಾಯನಶಾಸ್ತ್ರ ನೊಬೆಲ್; ಪರಿಸರ ಸ್ನೇಹಿ ರಾಸಾಯನಿಕ ವೇಗವರ್ಧಕಗಳ ಸಂಶೋಧನೆಗೆ ಸಂದ ಗೌರವ

- Advertisement -
- Advertisement -

ಇಡೀ ವಿಶ್ವದ ಒಟ್ಟು ಆಂತರಿಕ ಉತ್ಪನ್ನ (GDP – Gross Domestic Product) ಹತ್ತಿರಹತ್ತಿರ 90 ಟ್ರಿಲಿಯನ್ ಡಾಲರುಗಳು (1 ಟ್ರಿಲಿಯನ್ ಡಾಲರ್ ಅಂದರೆ 75 ಲಕ್ಷ ಕೋಟಿ ರೂಪಾಯಿಗಳು). ಈ 90 ಟ್ರಿಲಿಯನ್ ಡಾಲರುಗಳಲ್ಲಿ ಬಹುತೇಕ 30 ಟ್ರಿಲಿಯನ್ ಡಾಲರುಗಳಷ್ಟು (ಜಗತ್ತಿನ ಜಿಡಿಪಿಯ ಶೇ.35 ರಷ್ಟು!) ಜಿಡಿಪಿ ರಾಸಾಯನಿಕ ವೇಗವರ್ಧಕಗಳನ್ನು (Chemical catalysts) ಒಳಗೊಂಡ ಕೈಗಾರಿಕಾ ಪ್ರಕ್ರಿಯೆಗಳನ್ನು (Industrial process) ಅವಲಂಬಿಸಿದೆ.

ಕಚ್ಚಾತೈಲದಿಂದ ಹೆಚ್ಚು ಪೆಟ್ರೋಲನ್ನು ಪಡೆಯುವ ಪ್ರಕ್ರಿಯೆ ಇರಬಹುದು (ಝಿಯೋಲೈಟ್Zeolite ಕೆಟಲಿಸ್ಟ್), ಜೈವಿಕ ತ್ಯಾಜ್ಯವನ್ನು ಅನಿಲ ರೂಪದ ಇಂಧನವನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಇರಬಹುದು (ನಿಕ್ಕಲ್-Nickel ಕೆಟಲಿಸ್ಟ್), ಮುಂದುವರೆದು ವಿದ್ಯುತ್ ಉತ್ಪಾದನೆ ಮತ್ತು ವಿದ್ಯುತ್‌ಚಾಲಿತ ವಾಹನ ಕ್ಷೇತ್ರಗಳಲ್ಲಿ ಕ್ರಾಂತಿಯನ್ನೇ ತರಲಿರುವ ಫ್ಯೂಯೆಲ್ ಸೆಲ್ (Fuel cell) ಇರಬಹುದು (ಪ್ಲಾಟಿನಮ್, ರೋಡಿಯಮ್-Platinum, Rhodium ಇತ್ಯಾದಿ ಕೆಟಲಿಸ್ಟ್), ನೀರನ್ನು ವಿಭಜಿಸಿ ಜಲಜನಕ ಇಂಧನವನ್ನು ಉತ್ಪಾದಿಸುವ ಕ್ರಿಯೆ ಇರಬಹುದು (ಸಿಲ್ವರ್, ಟೈಟಾನಿಯಮ್ ಡೈ ಆಕ್ಸೈಡ್ ಇತ್ಯಾದಿ ಕೆಟಲಿಸ್ಟ್), ಇನ್ನೂ ಕೆಲವು ಮುಖ್ಯ ಪಾಲಿಮರ್‌ಗಳ ಉತ್ಪಾದನೆ ಇರಬಹುದು (ಝೀಗ್ಲರ್ ನಟ್ಟಾ ಕೆಟಲಿಸ್ಟ್), ಸಲ್ಫ್ಯೂರಿಕ್ ಆಸಿಡ್ ಉತ್ಪಾದನೆ ಇರಬಹುದು (ಪ್ಲಾಟಿನಮ್ ಮತ್ತು ವೆನೆಡಿಯಮ್ ಪೆಂಟಾಕ್ಸೈಡ್ ಕೆಟಲಿಸ್ಟ್) – ಹೀಗೆ ಜಗತ್ತಿನ ಅತಿಮುಖ್ಯ ಕೈಗಾರಿಕಾ ಕ್ಷೇತ್ರಗಳ ಉತ್ಪಾದನಾ ಪ್ರಕ್ರಿಯೆಗಳು ವಿವಿಧ ಕೆಟಲಿಸ್ಟುಗಳ ಮೇಲೇಯೇ ಅವಲಂಬಿತವಾಗಿವೆ. ಆದ್ದರಿಂದಲೇ ಈ ಜಗತ್ತಿನ ಶೇ.35ರಷ್ಟು ಜಿಡಿಪಿ ಒಂದಲ್ಲಾ ಒಂದು ರೀತಿ ರಾಸಾಯನಿಕ ವೇಗವರ್ಧಕಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ.

ಈ ಎಲ್ಲ ಹಿನ್ನೆಲೆಯಲ್ಲಿ, ಈ ಬಾರಿಯ ರಾಸಾಯನಶಾಸ್ತ್ರದ ನೊಬೆಲ್ ತಂದುಕೊಟ್ಟಿರುವ “Asymmetric Organocatalysis” ಯಾಕೆ ಕ್ರಾಂತಿಕಾರಕ ಸಂಶೋಧನೆ ಎಂಬುದನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಎದ್ದು ಕಾಣಿಸುತ್ತದೆ.

ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯ ವಿಜ್ಞಾನಿ ಬೆಂಜಮಿನ್ ಲಿಸ್ಟ್ ಮತ್ತು ಸ್ಕಾಟ್‌ಲೆಂಡ್ ಸಂಜಾತ ಅಮೆರಿಕದ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ವಿಜ್ಞಾನಿ ಡೇವಿಡ್ ಮೆಕ್ಮಿಲನ್ ಅವರಿಗೆ “Asymmetric Organocatalysis” ಮೇಲಿನ ಸಂಶೋಧನೆಗಾಗಿ ಈ ಬಾರಿ ನೊಬೆಲ್ ಬಹುಮಾನ ಬಂದಿದೆ.

ಹಾಗೆ ನೋಡಿದರೆ ಈ ಇಬ್ಬರೂ ವಿಜ್ಞಾನಿಗಳು ಈ ಹೊಸಬಗೆಯ ಕೆಟಲಿಸ್ಟುಗಳನ್ನು 2000ನೇ ಇಸ್ವಿಯಲ್ಲಿಯೇ ಸಂಶೋಧಿಸಿದ್ದಾರೆ. ಈ ಇಪ್ಪತ್ತು ವರ್ಷಗಳಲ್ಲಿ ಈ ಹೊಸ ಆರ್ಗಾನಿಕ್ ಕೆಟಲಿಸ್ಟುಗಳು ಉಂಟುಮಾಡಿದ ಕ್ರಾಂತಿಕಾರಕ ಬದಲಾವಣೆಗಳನ್ನು ಗಮನಿಸಿ ಈಗ ಈ ಇಬ್ಬರು ವಿಜ್ಞಾನಿಗಳಿಗೆ ನೊಬೆಲ್ ನೀಡಲಾಗಿದೆ.

ಈ ಹೊಸ ಆರ್ಗಾನಿಕ್ ಕೆಟಲಿಸ್ಟುಗಳು ಹೇಗೆ ರಾಸಾಯನಿಕ ವಸ್ತುಗಳ ಉತ್ಪಾದನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯುವ ಪ್ರಯತ್ನ ಮಾಡೋಣ.

ರಾಸಾಯನಿಕ ವೇಗವರ್ಧಕಗಳು (Chemical catalyst) ಎಂದರೆ?

ಹಲವಾರು ರಾಸಾಯನಿಕ ಕ್ರಿಯೆಗಳು ಅತ್ಯಂತ ನಿಧಾನಗತಿಯಲ್ಲಿ ಅಂದರೆ ನಿರುಪಯುಕ್ತವಾಗುವಷ್ಟು ನಿಧಾನವಾಗಿ ಜರುಗುತ್ತವೆ. ಇಂತಹ ನೂರಾರು ಮುಖ್ಯ ರಾಸಾಯನಿಕ ಕ್ರಿಯೆಗಳ ವೇಗವನ್ನು ಹೆಚ್ಚಿಸಲು ಬಳಸುವ ರಾಸಾಯನಿಕ ಸಂಯುಕ್ತಗಳನ್ನೇ ಕೆಟಲಿಸ್ಟುಗಳು ಅಥವಾ ವೇಗವರ್ಧಕಗಳು ಎನ್ನುತ್ತೇವೆ.

ಈ ಕೆಟಲಿಸ್ಟುಗಳು ಒಂದು ರಾಸಾಯನಿಕ ಕ್ರಿಯೆಯ ವೇಗವನ್ನು ಹೆಚ್ಚಿಸಿದ ನಂತರ ತಾವು ಯಾವುದೇ ಬದಲಾವಣೆ ಹೊಂದದೆ ಮತ್ತು ಉತ್ಪನ್ನದ ಭಾಗವೂ ಆಗದೆ ಪ್ರತ್ಯೇಕವಾಗಿ ಉಳಿಯುತ್ತವೆ. ಆದುದರಿಂದ ಒಂದು ರಾಸಾಯನಿಕ ಕ್ರಿಯೆ ಮುಗಿದನಂತರ ಬಹುತೇಕ ಈ ಕೆಟಲಿಸ್ಟುಗಳನ್ನು ಪ್ರತ್ಯೇಕಿಸುವುದಕ್ಕೆ ಸಾಧ್ಯ.

ಇಲ್ಲಿಯತನಕ ಯಾವ ರೀತಿಯ ಕೆಟಲಿಸ್ಟುಗಳನ್ನು ಬಳಸುತ್ತಿದ್ದರು?

ಮುಖ್ಯವಾಗಿ ಭಾರೀ ಲೋಹ (Heavy metals) ಮತ್ತು ಕಿಣ್ವಗಳನ್ನು (Enzymes) ಕೆಟಲಿಸ್ಟುಗಳನ್ನಾಗಿ ಬಳಸುತ್ತಿದ್ದರು (ಈಗಲೂ ಹಲವಾರು ಕೈಗಾರಿಕೆಗಳಲ್ಲಿ ಬಳಸುತ್ತಿದ್ದಾರೆ).

ಈ ಭಾರೀ ಲೋಹ ಮತ್ತು ಎನ್‌ಜೈಮುಗಳನ್ನು ಬಳಸುವಲ್ಲಿ ಇದ್ದ ತೊಂದರೆಗಳೇನು?

ಭಾರೀ ಲೋಹಗಳನ್ನು (ಪ್ಲಾಟಿನಮ್, ಪೆಲೆಡಿಯಮ್, ನಿಕ್ಕಲ್, ಕಾಪರ್, ರೋಡಿಯಮ್ ಇತ್ಯಾದಿ) ಕೆಟಲಿಸ್ಟುಗಳಾಗಿ ಬಳಸುವಲ್ಲಿ ಹಲವು ಮುಖ್ಯ ತೊಂದರೆಗಳಿದ್ದವು. ಅವುಗಳಲ್ಲಿ ಕೆಲವು..

1. ಈ ಲೋಹಗಳನ್ನು ಹೊರತೆಗೆಯುವ ಕ್ರಿಯೆ ಭಾರೀ ದುಬಾರಿ ಮತ್ತು ಪರಿಸರ ಸ್ನೇಹಿಯಲ್ಲದ್ದು.

2. ಲೋಹಗಳನ್ನು ಹೊರತೆಗೆಯುವ ಕ್ರಿಯೆ ಹೆಚ್ಚು ಇಂಧನ ವೆಚ್ಚವನ್ನು ಬೇಡುವಂತದ್ದು.

3. ಹಲವು ಲೋಹಗಳು ತೇವಾಂಶ ಮತ್ತು ಆಮ್ಲಜನಕ ಇರುವಲ್ಲಿ ಪರಿಣಾಮಕಾರಿಯಾಗಿ ಕೆಟಲಿಸ್ಟಿನ ಕೆಲಸ ಮಾಡಲಾರವು. ಹಾಗಾಗಿ, ಈ ಲೋಹಗಳ ಬಳಕೆಗೆ ತೇವಾಂಶ ಮತ್ತು ಆಮ್ಲಜನಕ ಇಲ್ಲದಂತೆ ಮಾಡುವ ಯಂತ್ರಗಳ ಅವಶ್ಯವಿದ್ದು ಇದು ಇಡೀ ಪ್ರಕ್ರಿಯೆಯನ್ನು ಮತ್ತಷ್ಟು ದುಬಾರಿಗೊಳಿಸುತ್ತದೆ.

4. ಕಡೆಯದಾಗಿ, ಒಂದು ರಾಸಾಯನಿಕ ಕ್ರಿಯೆ ಮುಗಿದನಂತರ ಬಂದ ಉತ್ಪನ್ನದಿಂದ ಈ ಲೋಹಗಳನ್ನು (ಕೆಟಲಿಸ್ಟ್) ನೂರಕ್ಕೆ ನೂರರಷ್ಟು ಬೇರ್ಪಡಿಸಲು ಅತ್ಯಂತ ಕಷ್ಟ. ಇದರಿಂದ ಸಂಪೂರ್ಣ ಶುದ್ಧ ಉತ್ಪನ್ನವನ್ನು ಪಡೆಯುವುದು ಅಸಾಧ್ಯವಾಗಿತ್ತು. ಅದರಲ್ಲೂ ಔಷಧ ಉತ್ಪನ್ನಗಳ ವಿಷಯದಲ್ಲಿ ಇದು ಗಂಭೀರ ಪರಿಣಾಮ ಬೀರುವಂತಿತ್ತು.

ಇನ್ನು ಕಿಣ್ವ ಅಥವಾ ಎನ್‌ಜೈಮುಗಳನ್ನು ಬಳಸುವಲ್ಲಿ ಲೋಹ ವೇಗವರ್ಧಕಗಳಿಗೆ ಹೋಲಿಸಿದರೆ ಹಲವು ಅನುಕೂಲತೆಗಳಿದ್ದರೂ ಒಂದೆರಡು ಸಣ್ಣಪುಟ್ಟ ಕೊರತೆಗಳೂ ಇದ್ದವು.

1. ಲೋಹಗಳಿಗೆ ಹೋಲಿಸಿದರೆ ಎನ್‌ಜೈಮುಗಳು ಹೆಚ್ಚು ನಿಖರವಾಗಿ ಕೆಲಸಮಾಡಬಲ್ಲವು.

2. ಕೆಲವು ರಾಸಾಯನಿಕ ಸಂಯುಕ್ತಗಳು ಒಂದೇ ರೀತಿಯ ರಚನೆ ಹೊಂದಿದ್ದು ಕೆಲವು ಘಟಕಗಳ ಅರೇಂಜ್‌ಮೆಂಟ್‌ನಲ್ಲಿ ಮಾತ್ರ ಭಿನ್ನತೆ ಹೊಂದಿರುತ್ತವೆ. ಒಂದು ಸಂಯುಕ್ತದಲ್ಲಿ ಒಂದು ಘಟಕ (ಉದಾ: OH group) ಮುಖ್ಯ ಕಾರ್ಬನ್ ಚೈನಿನ ಬಲಕ್ಕಿದ್ದರೆ ಮತ್ತೊಂದು ಸಂಯುಕ್ತದಲ್ಲಿ ಇದೇ ಘಟಕ ಎಡಕ್ಕಿರುತ್ತದೆ.

ಈ ಎರಡೂ ಸಂಯುಕ್ತಗಳನ್ನು ಮಿರರ್ ಇಮೇಜುಗಳು (ನಮ್ಮ ಎರಡೂ ಹಸ್ತಗಳಿದ್ದಂತೆ) ಎನ್ನುತ್ತೇವೆ. ಈ ರೀತಿಯ ಪ್ರತಿ ಮಿರರ್ ಇಮೇಜ್ ಸಂಯುಕ್ತವು ತನ್ನದೇ ಗುಣಗಳನ್ನು ಹೊಂದಿರುತ್ತದೆ. ಉದಾಹರಣೆಗೆ, ಲಿಮೋನೀನ್ (Limonene) ಎಂಬ ಸಂಯುಕ್ತವೇ ಲಿಂಬೆ ಮತ್ತು ಕಿತ್ತಲೆ ಎರಡರಲ್ಲೂ ಇರುವುದು. ಇದರಲ್ಲಿ S – Limonene ಮಿರರ್ ಇಮೇಜ್ ಸಂಯುಕ್ತವು ಲಿಂಬೆ ಹಣ್ಣಿನಲ್ಲಿದೆ ಮತ್ತು R – Limonene ಸಂಯುಕ್ತವು ಕಿತ್ತಲೆ ಹಣ್ಣಿನಲ್ಲಿದೆ.

ಅಂದರೆ, ಒಂದು ಸಂಯುಕ್ತ ಒಂದೇ ರಾಸಾಯನಿಕ ರಚನೆ ಹೊಂದಿದ್ದರೂ ಕೇವಲ ಒಂದೆರಡು ಘಟಕಗಳ ಸ್ಥಾನ ವ್ಯತ್ಯಾಸದಿಂದಾಗಿ ಬೇರೆ ಗುಣಗಳನ್ನೇ ಪಡೆಯುವ ಆಶ್ಚರ್ಯಚಕಿತ ಸತ್ಯ ಇದು. ಎನ್‌ಜೈಮುಗಳನ್ನು ಕೆಟಲಿಸ್ಟುಗಳಾಗಿ ಬಳಸುವ ಮುಖ್ಯ ಅನುಕೂಲವೆಂದರೆ ನಮಗೆ ಬೇಕಾದ ಮಿರರ್ ಇಮೇಜ್ ಸಂಯುಕ್ತವನ್ನು ಉತ್ಪಾದಿಸಬಹುದು.

1950-60ರ ದಶಕದಲ್ಲಿ ಗರ್ಭಿಣಿ ಮಹಿಳೆಯರಲ್ಲಿ ವಾಕರಿಕೆ ಲಕ್ಷಣವನ್ನು ತಡೆಗಟ್ಟಲು ವ್ಯಾಪಕವಾಗಿ ಬಳಕೆಯಾಗುತ್ತಿದ್ದ ಥ್ಯಾಲಿಡೊಮೈಡ್ (Thalidomide) ಮಾತ್ರೆಗಳು ನಂತರ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯ ಉಂಟುಮಾಡುತ್ತಿದ್ದವು. ಅದೇ ಥ್ಯಾಲಿಡೋಮೈಡಿನ ಮಿರರ್ ಇಮೇಜ್ ಮಾತ್ರೆಯಲ್ಲಿ ಈ ಅಡ್ಡ ಪರಿಣಾಮ ಇಲ್ಲ ಎಂದು ತಿಳಿಯಲು ಒಂದು ದಶಕವೇ ಬೇಕಾಯಿತು.

ಹೀಗೆ ಬೇಕಾದ ಮಿರರ್ ಇಮೇಜ್ ಸಂಯುಕ್ತವನ್ನು ಪಡೆಯಲು ಎನ್‌ಜೈಮ್ ಕೆಟಲಿಸ್ಟುಗಳಿಂದ ಸಾಧ್ಯವಿದ್ದು, ಇದು ಇವುಗಳ ಬಹುಮುಖ್ಯ ಅನುಕೂಲವಾಗಿದೆ.

ಈ ಎನ್‌ಜೈಮ್ ಕೆಟಲಿಸ್ಟುಗಳೂ ಒಂದೆರಡು ಮುಖ್ಯ ಅನಾನುಕೂಲತೆಗಳನ್ನು ಹೊಂದಿವೆ.

1. ಎನ್‌ಜೈಮುಗಳು ನೈಸರ್ಗಿಕವಾಗಿ ಮಾತ್ರ ದೊರೆಯುತಿದ್ದು, ಲಭ್ಯವಿರುವ ಎನ್‌ಜೈಮುಗಳಿಂದ ನಿರ್ದಿಷ್ಟ ಕ್ರಿಯೆಗಳನ್ನಷ್ಟೇ ಕೆಟಲೈಸ್ ಮಾಡಲು ಸಾಧ್ಯ.

2. ಎನ್‌ಜೈಮುಗಳು ಪ್ರೋಟೀನುಗಳಾಗಿದ್ದು ಎಷ್ಟೋ ಬಾರಿ ಒಂದು ಕ್ರಿಯೆಯಲ್ಲಿ ಉತ್ಪತ್ತಿಯಾಗುವ ಔಷದ ವಸ್ತುವಿಗಿಂತ ಗಾತ್ರದಲ್ಲಿ ಹತ್ತುಸಾವಿರ ಪಟ್ಟು ದೊಡ್ಡದಿರುತ್ತವೆ. ಇದು ಇಡೀ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಸಾಧ್ಯತೆಯಿರುತ್ತದೆ. ಹಾಗಿದ್ದರೆ, ಈ ಹೊಸ ಆರ್ಗಾನಿಕ್ ಕೆಟಲಿಸ್ಟುಗಳು ಲೋಹ ಮತ್ತು ಎನ್‌ಜೈಮ್ ಕೆಟಲಿಸ್ಟುಗಳಿಗಿಂತ ಹೇಗೆ ಉತ್ತಮ? ಇವು ರಾಸಾಯನಿಕ ಸಂಯುಕ್ತಗಳ ಉತ್ಪಾದನೆಯಲ್ಲಿ ಹೇಗೆ ಕ್ರಾಂತಿಕಾರಕ ಬದಲಾವಣೆ ತರಬಲ್ಲವು?

1. ಮೊದಲನೆಯದಾಗಿ ಆರ್ಗಾನಿಕ್ ಕೆಟಲಿಸ್ಟುಗಳು ಎಂದರೆ ಸರಳ ಆರ್ಗಾನಿಕ್ ಸಂಯುಕ್ತಳಾಗಿದ್ದು ಮುಖ್ಯ ಕಾರ್ಬನ್ ಚೇನಿನ ಜೊತೆ ಆಕ್ಸಿಜನ್, ಸಲ್ಫರ್, ನೈಟ್ರೋಜನ್ ಇತ್ಯಾದಿ ಅಣುಗಳನ್ನು ಹೊಂದಿರುತ್ತವೆ. ಇವುಗಳನ್ನು ಒಂದೇ ಒಂದು ಅಮಿನೋ ಆಸಿಡ್‌ನಿಂದ ಮಾಡಲ್ಪಟ್ಟಿರುತ್ತವೆ ಎಂದೂ ಹೇಳಬಹುದು.

2. ಈ ಆರ್ಗಾನಿಕ್ ಕೆಟಲಿಸ್ಟುಗಳು ಬಹುತೇಕ ಎನ್‌ಜೈಮುಗಳ ಹಾಗೇ ಕೆಲಸಮಾಡುವುದರಿಂದ ಎನ್‌ಜೈಮುಗಳ ಎಲ್ಲ ಅನುಕೂಲತೆಗಳೂ ಇವಕ್ಕೂ ಇವೆ.

3. ಆರ್ಗಾನಿಕ್ ಕೆಟಲಿಸ್ಟುಗಳು ಗಾತ್ರದಲ್ಲಿ ಚಿಕ್ಕದಾಗಿದ್ದು ಇವುಗಳ ಉತ್ಪಾದನೆ ಸುಲಭವಾಗಿದೆ (ಎನ್‌ಜೈಮುಗಳು ನೈಸರ್ಗಿಕವಾಗಿ ಮಾತ್ರ ಲಭ್ಯ). ಅಂದರೆ, ಯಾವುದೇ ರಾಸಾಯನಿಕದ ಪ್ರಕ್ರಿಯೆಗೆ ಬೇಕಾದ ಆರ್ಗಾನಿಕ್ ಕೆಟಲಿಸ್ಟನ್ನು ಬಹುತೇಕ ಸುಲಭವಾಗಿ ಉತ್ಪಾದಿಸಬಹುದು.

4. ಆರ್ಗಾನಿಕ್ ಕೆಟಲಿಸ್ಟುಗಳನ್ನು ಬಳಸಿ ನಮಗೆ ಬೇಕಾದ ಮಿರರ್ ಇಮೇಜ್ ಸಂಯುಕ್ತವನ್ನು
Zಉತ್ಪಾದಿಸಬಹುದು. ಇದರಿಂದ ನಮಗೆ ಬೇಕಾದ ನಿರ್ದಿಷ್ಟ ಸಂಯುಕ್ತವನ್ನು ಸುಲಭವಾಗಿ ಉತ್ಪಾದಿಸಲು ಸಾಧ್ಯ. ಹಾಗಾಗಿಯೇ ಇವುಗಳನ್ನು asymmetric organic catalysts ಎನ್ನುತ್ತೇವೆ.

5. ಒಮ್ಮೆ ರಾಸಾಯನಿಕ ಪ್ರಕ್ರಿಯೆ ಮುಗಿದ ನಂತರ ಆರ್ಗಾನಿಕ್ ಕೆಟಲಿಸ್ಟುಗಳನ್ನು ಅತ್ಯಂತ ಸುಲಭವಾಗಿ ಉತ್ಪನ್ನದಿಂದ ಬೇರ್ಪಡಿಸಬಹುದು. ಇದರಿಂದ ಶೇ.ನೂರರಷ್ಟು ಶುದ್ಧ ಸಂಯುಕ್ತಗಳನ್ನು ಉತ್ಪಾದಿಸಲು ಸಾಧ್ಯವಿದ್ದು (ಈಗಾಗಲೇ ಆಗಿದೆ) ಇದು ಔಷಧೀಯ ಕ್ಷೇತ್ರಕ್ಕೆ ಭಾರೀ ಅನುಕೂಲ ತರಲಿದೆ.

6. ಆರ್ಗಾನಿಕ್ ಕೆಟಲಿಸ್ಟುಗಳು ಭಾರೀ ಲೋಹಗಳ ಬಳಕೆಯನ್ನು ಗರಿಷ್ಟ ಪ್ರಮಾಣದಲ್ಲಿ ಕಡಿಮೆ ಮಾಡುತ್ತಾ ಹೋಗುವುದರಿಂದ ಅತ್ಯಂತ ಪರಿಸರ ಸ್ನೇಹಿ ಸಂಯುಕ್ತಗಳಾಗಿವೆ.

7. ಲೋಹಗಳಿಗೆ ಹೋಲಿಸಿದರೆ, ಆರ್ಗಾನಿಕ್ ಕೆಟಲಿಸ್ಟುಗಳು ಸಂಬಂಧಿಸಿದ ಯಾವುದೇ ರಾಸಾಯನಿಕ ಕ್ರಿಯೆಯ ವೇಗವನ್ನು ಗರಿಷ್ಟ ಪ್ರಮಾಣದಲ್ಲಿ ಹೆಚ್ಚಿಸುವುದರಿಂದ ಇಡೀ ಪ್ರಕ್ರಿಯೆ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ.

ಆರ್ಗಾನಿಕ್ ಕೆಟಲಿಸ್ಟುಗಳಿಗೆ ಇರುವ ಈ ಮೇಲ್ಕಂಡ ಕೆಲವು ಅನುಕೂಲತೆಗಳಿಂದಾಗಿ ಈಗಾಗಲೇ ಇರುವ ಮತ್ತು ಹೊಸ ಸಂಯುಕ್ತಗಳ ಉತ್ಪಾದನೆಯ ದಿಕ್ಕೇ ಬದಲಾಗಲಿದೆ. ಇದರಿಂದ ಇಡೀ ಉತ್ಪಾದನಾ ವಿಧಾನ ಹೆಚ್ಚು ಪರಿಸರ ಸ್ನೇಹಿಯೂ, ಕ್ಷಿಪ್ರವೂ ಮತ್ತು ಅಗ್ಗವೂ ಆಗಲಿದೆ. ಮತ್ತು ಈ ಇಪ್ಪತ್ತು ವರ್ಷಗಳಲ್ಲಿ ಹಲವಾರು ಸಂಯುಕ್ತಗಳ ಉತ್ಪಾದನೆಯಲ್ಲಿ ಮೇಲಿನೆಲ್ಲ ಅನುಕೂಲತೆಗಳೂ ಸಾಧಿಸಲ್ಪಟ್ಟಿವೆ.

ಹೀಗಾಗಿಯೇ ಇಡೀ ಜಗತ್ತು ಪರಿಸರ ಉಳಿವಿನ ಬಗ್ಗೆ ಅತಿಹೆಚ್ಚು ಕಾಳಜಿ ಹೊಂದಿರುವಂತ ಈ ಸಂದರ್ಭದಲ್ಲಿ ಈ ಆರ್ಗಾನಿಕ್ ಕೆಟಲಿಸ್ಟುಗಳ ಸಂಶೋಧನೆ ಮತ್ತು ಬಳಕೆ ನಿಜಕ್ಕೂ ಒಂದು ಕ್ರಾಂತಿಕಾರಕ ಸಂಶೋಧನೆ ಎಂದೇ ಹೇಳಬಹುದು. ಹಾಗೂ, ಈ ಸಂಶೋಧನೆ ಮಾಡಿದ ಇಬ್ಬರೂ ವಿಜ್ಞಾನಿಗಳಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು

ಡಾ. ಬಿ.ಸಿ. ಬಸವರಾಜು

ಡಾ. ಬಿ.ಸಿ. ಬಸವರಾಜು
ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವಾರಾಜು ಹಾಡುಗಾರರೂ, ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ


ಇದನ್ನೂ ಓದಿ: 2021ರ ಫಿಸಿಕ್ಸ್ ನೊಬೆಲ್; Butterfly Effect ಮತ್ತು ಹವಾಮಾನ ಬದಲಾವಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...