Homeಕರ್ನಾಟಕಫ್ಯಾಕ್ಟ್‌ಚೆಕ್: ಪುನೀತ್‌ರವರ ‘ಬೊಂಬೆ ಹೇಳುತೈತೆ’ ಹಾಡನ್ನು ಪಾಕ್ ಅಭಿಮಾನಿ ಹಾಡಿದ್ದು 2018 ರಲ್ಲಿ!

ಫ್ಯಾಕ್ಟ್‌ಚೆಕ್: ಪುನೀತ್‌ರವರ ‘ಬೊಂಬೆ ಹೇಳುತೈತೆ’ ಹಾಡನ್ನು ಪಾಕ್ ಅಭಿಮಾನಿ ಹಾಡಿದ್ದು 2018 ರಲ್ಲಿ!

ಟಿವಿ9 ಸೇರಿದಂತೆ ಹಲವು ಕನ್ನಡದ ಮಾಧ್ಯಮಗಳು ಇದನ್ನು ‘ತಪ್ಪಾಗಿ’ ವರದಿ ಮಾಡಿವೆ

- Advertisement -
- Advertisement -

ಕನ್ನಡದ ಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌ ಶುಕ್ರವಾರ ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದ್ದಾರೆ. ಪ್ರತಿಭಾವಂತ ನಟನ ಅಕಾಲಿಕ ನಿಧನಕ್ಕೆ ದೇಶದಾದ್ಯಂತ ಸಂತಾಪ ವ್ಯಕ್ತವಾಗುತ್ತಿದೆ. ನಟನ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇಡಲಾಗಿದ್ದು, ನಾಳೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಶನಿವಾರ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಪಾಕಿಸ್ತಾನಿ ಯುವಕನೊಬ್ಬ ಹಾಡಿರುವ “ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ” ಕನ್ನಡ ಹಾಡೊಂಡು ವೈರಲ್‌ ಆಗಿದ್ದು, ಕನ್ನಡದ ಪ್ರಮುಖ ಮಾಧ್ಯಮವಾದ ಟಿವಿ9 “ಪುನೀತ್​ಗೆ ಪಾಕಿಸ್ತಾನದ ಅಭಿಮಾನಿಯ ಗಾನ ನಮನ; ಕನ್ನಡದಲ್ಲಿ ಹಾಡು ಹೇಳುವ ಮೂಲಕ ಶ್ರದ್ಧಾಂಜಲಿ” ಎಂದು ಸುದ್ದಿ ಮಾಡಿದೆ.(ಆರ್ಕೈವ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ). ಅಲ್ಲದೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲೂ ಅದೇ ಸುದ್ದಿಯ ವಿಡಿಯೊ ವರದಿ ಮಾಡಿದ್ದು, “ಅಪ್ಪು ನಿಧನಕ್ಕೆ ಪಾಕಿಸ್ತಾನ ಅಭಿಮಾನಿಯ ಸಂತಾಪ” ಎಂದು ಶೀರ್ಷಿಕೆ ನೀಡಿದೆ.(ಆರ್ಕೈವ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ)

ಇದನ್ನೂ ಓದಿ: ಪುನೀತ್‌ ಫಿಟ್‌ನೆಟ್‌‌: ಡಾ.ದೇವಿ ಶೆಟ್ಟಿ ಹೆಸರಲ್ಲಿ ಫೇಕ್‌ ನ್ಯೂಸ್‌ ಹರಿದಾಟ

ಟಿವಿ9 ಈ ವಿಡಿಯೊವನ್ನು ನಮ್ ರೇಡಿಯೊ’ ಎಂಬ ಯೂಟ್ಯೂಬ್ ಚಾನೆಲ್‌ನಿಂದ ಪಡೆದಿದ್ದು, ನಮ್‌ ರೇಡಿಯೊ ಇದನ್ನು ಪುನೀತ್‌ ರಾಜ್‌ಕುಮಾರ್‌ ನಿಧನ ಹೊಂದಿದ ಆಕ್ಟೋಬರ್‌ 29 ರಂದು ತನ್ನ ಚಾನೆಲ್‌ಗೆ, “ಪುನೀತ್‌ ರಾಜ್‌ಕುಮಾರ್‌ ಅವರ ಪಾಕಿಸ್ತಾನದ ಅಭಿಮಾನಿ” ಎಂಬ ಶೀರ್ಷಿಕೆ ನೀಡಿ ಅಪ್ಲೋಡ್ ಮಾಡಿತ್ತು.(ಆರ್ಕೈವ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ).

ಪುನೀತ್‌ ರಾಜ್‌ಕುಮಾರ್‌ ಅವರ ನಿಧನಕ್ಕೆ ಪಾಕಿಸ್ತಾನದ ಯುವ ಅಭಿಮಾನಿ ಗಾನ ನಮನ ಸಲ್ಲಿಸಿದ್ದಾರೆ ಎಂದು ಹಲವು ಕನ್ನಡದ ಚಾನೆಲ್‌ಗಳು, ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

OnePlus News Kannada’ ಎಂಬ ಚಾನೆಲ್‌, ‘ಅಪ್ಪುಗಾಗಿ ಪಾಕಿಸ್ತಾನಿ ಅಭಿಮಾನಿ ಹಾಡಿದ!’ ಎಂದು ಶೀರ್ಷಿಕೆ ನೀಡಿ ವಿಡಯೊ ವರದಿ ಮಾಡಿದೆ. ಸುಮಾರು ಏಳು ಲಕ್ಷ ಚಂದಾದಾರರನ್ನು ಹೊಂದಿರುವ Karnataka TV ಎಂಬ ಯೂಟ್ಯೂಬ್ ಚಾನೆಲ್‌, ‘ಪಾಕಿಸ್ತಾನ ಅಭಿಮಾನಿಯಿಂದ ಪುನೀತ್ ಗೆ ಗಾನ ನಮನ’ ಎಂಬ ಶೀರ್ಷಿಕೆ ನೀಡಿ ವರದಿ ಮಾಡಿದೆ. ಇಷ್ಟೇ ಅಲ್ಲದೆ ಹಲವಾರು ಜನರು ಬೇರೆ ಬೇರೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಇದೇ ರೀತಿಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಪಾಕಿಸ್ತಾನಿ ಯುವಕ ಪುನೀತ್‌ ಅವರಿಗೆ ‘ಶ್ರದ್ದಾಂಜಲಿ ಕೋರಿ’ ಬೊಂಬೆ ಹೇಳುತೈತೆ ಹಾಡಿದರೇ?

ವಿಡಿಯೊದಲ್ಲಿ ಇರುವ ಯುವಕನ ಚಿತ್ರವನ್ನು ನಾನುಗೌರಿ.ಕಾಂ ರಿವರ್ಸ್ ಇಮೇಜ್‌ ಮೂಲಕ ಇಂಟರ್‌ನೆಟ್‌ನಲ್ಲಿ ಹುಡುಕಾಡಿದೆ. ಈ ವೇಳೆ ನಮಗೆ ಅಜ್ಮಲ್ ಮುಘಲ್ ಎಂಬ ಯೂಟ್ಯಬ್‌ ಚಾನೆಲ್‌ ಸಿಕ್ಕಿದೆ. ಅಜ್ಮಲ್ ಮುಘಲ್ ಅವರ ಬಗ್ಗೆ ನಾವು ಮತ್ತಷ್ಟು ಹುಡುಕಿದ್ದು ಅವರ ಇನ್‌ಸ್ಟಾಗ್ರಾಂ ಪ್ರೋಫೈಲ್ ಸಿಕ್ಕಿದೆ. ಅದರಲ್ಲಿ ಅವರು ತಾನೊಬ್ಬ ಸಂಗೀತಗಾರ ಎಂದು ಹೇಳಿಕೊಂಡಿದ್ದಾರೆ.

ಅಜ್ಮಲ್ ಮುಘಲ್ ತನ್ನ ಯೂಟ್ಯೂಬ್ ಚಾನೆಲ್‌ ಅನ್ನು 2012 ರ ಜೂನ್ 11 ರಂದು ಪ್ರಾರಂಭಿಸಿದ್ದರು. ಅಜ್ಮಲ್ ತನ್ನ ಚಾನೆಲ್‌ನಲ್ಲಿ ಒಟ್ಟು 18 ವಿಡಿಯೊಗಳನ್ನು ಅಪ್ಲೋಡ್ ಮಾಡಿದ್ದಾರೆ. ತನ್ನ ಚಾನೆಲ್‌ನಲ್ಲಿ ಅವರು ಅಪ್ಲೋಡ್‌ ಮಾಡಿದ್ದ ಹಾಡು ಪುನೀತ್ ಅಭಿನಯದ ‘ಮಿಲನ’ ಚಿತ್ರದ ನಿನ್ನಿಂದಲೇ ಹಾಡನ್ನು ಹಾಡಿದ್ದಾರೆ. ಅಜ್ಮಲ್ ತನ್ನ ಚಾನೆಲ್‌ನಲ್ಲಿ ‘ಮುಂಗಾರು ಮಳೆ’, ‘ಮುಗುಳುನಗೆ’, ‘ಗೆಳೆಯ’, ‘ಗಾಳಿಪಟ’ ಚಿತ್ರಗಳ ಹಾಡನ್ನು ಹಾಡಿದ್ದಾರೆ.

ಇದನ್ನೂ ಓದಿ: Puneeth Rajkumar | ಭಾನುವಾರ ಪುನೀತ್‌ ರಾಜ್‌ಕುಮಾರ್‌ ಅಂತ್ಯಕ್ರಿಯೆ: ಸಿಎಂ ಸ್ಪಷ್ಟನೆ

ಅದರಂತೆ ಬೊಂಬೆ ಹೇಳುತೈತೆ ಹಾಡನ್ನು ಮೂರು ವರ್ಷಗಳ ಹಿಂದೆ 2018 ರ ಜನವರಿ 12 ರಂದು ತನ್ನ ಯೂಟ್ಯೂಬ್‌ ಚಾನೆಲ್‌ಗೆ ಅಪ್‌ಲೋಡ್ ಮಾಡಿದ್ದರು.

ಅಜ್ಮಲ್ ಮುಘಲ್ ಈ ಈ ಹಾಡಿನ ವಿವರಣೆಯಲ್ಲಿ, “ನಾನೊಬ್ಬ ಪಾಕಿಸ್ತಾನಿಯಾಗಿದ್ದು, ಕನ್ನಡವು ಕಠಿಣ ಮತ್ತು ಮಧುರವಾದ ಭಾಷೆಯಾಗಿದೆ. ಅದನ್ನು ನಾನು ಚೆನ್ನಾಗಿ ಹಾಡಲು ಇಷ್ಟಪಡುತ್ತೇನೆ. ಮತ್ತೊಂದು ವಿಷಯವೇನೆಂದರೆ, ನನಗೆ ಹಾಡಿನ ಅರ್ಥ ಗೊತ್ತಿಲ್ಲದಿದ್ದರೂ ನಾನಿದನ್ನು ಆನಂದಿಸುತ್ತೇನೆ’’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜಿಮ್‌ನಲ್ಲಿ ಕುಸಿದು ಬೀಳುತ್ತಿರುವ ಈ ವಿಡಿಯೊ ‘ಪುನೀತ್‌ ರಾಜ್‌ಕುಮಾರ್‌’ ಅವರದಲ್ಲ

ಅಜ್ಮಲ್‌ ಇದೇ ಹಾಡನ್ನು 2017 ಮೇ 14 ರಂದು ಸಹ ಹಾಡಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದರು.

ಈ ಹಾಡನ್ನೇ ಕನ್ನಡದ ಯೂಟ್ಯೂಬ್ ಚಾನೆಲ್‌ಗಳು ಮತ್ತು ಮಾಧ್ಯಮಗಳು ತೆಗೆದುಕೊಂಡು, ‘ಪಾಕಿಸ್ತಾನಿ ಯುವಕ ಪುನೀತ್ ರಾಜ್‌ಕುಮಾರ್‌ ಅವರಿಗೆ ಗಾನ ನಮನ ಸಲ್ಲಿಸಿದ್ದಾರೆ’ ಎಂದು ತಪ್ಪಾಗಿ ವರದಿ ಮಾಡಿವೆ.

ಒಟ್ಟಿನಲ್ಲಿ ಹೇಳುವುದೇನೆಂದರೆ, ಯುವಕ ಪಾಕಿಸ್ತಾನಿ ಎಂಬುವುದು ನಿಜವೇ ಆಗಿದೆ. ಪಾಕಿಸ್ತಾನದ ಲಾಹೋರ್‌ನ ಐತಿಹಾಸಿಕ ಸ್ಥಳವಾದ ‘ಮಿನಾರ್‌-ಇ-ಪಾಕಿಸ್ತಾನ’ ಸ್ಥಂಭದ ಮುಂದೆಯೆ ವಿಡಿಯೊ ಮಾಡಿದ್ದಾರೆ. ಆದರೆ ಕನ್ನಡ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ವಿಡಿಯೊವನ್ನು ಅವರು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮೂರು ವರ್ಷಗಳ ಹಿಂದೆಯೆ ಅಪ್‌ಲೋಡ್ ಮಾಡಿದ್ದರು.

ನಾನುಗೌರಿ.ಕಾಂ ಪಾಕಿಸ್ತಾನಿ ಯುವಕ ಅಜ್ಮಲ್ ಅವರನ್ನು ವಿಡಿಯೋ ಕಾಲ್ ಮತ್ತು ಫೋನ್ ಕರೆ ಮೂಲಕ ಸಂಪರ್ಕಿಸಿತು. ಆದರೆ ನೆಟ್‌ವರ್ಕ್‌ ಕಾರಣಗಳಿಗಾಗಿ ಸಂವಹನ ಸಾಧ್ಯವಾಗಿಲ್ಲ. ಅವರ ಪ್ರತಿಕ್ರಿಯೆ ಸಿಕ್ಕ ತಕ್ಷಣ ಅವರ ಪ್ರತಿಕ್ರಿಯೆಯನ್ನೂ ಇಲ್ಲಿ ಅಪ್ಡೇಟ್ ಮಾಡುತ್ತೇವೆ.

ಇದನ್ನೂ ಓದಿ: ಚಿತ್ರರಂಗದ ’ಯುವರತ್ನ’ ಪುನೀತ್ ರಾಜ್‌ಕುಮಾರ್‌ ಅವರ ಅಪರೂಪದ ಚಿತ್ರಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...