Homeಕರ್ನಾಟಕನಿಮ್ಮ ಪ್ರೀತಿ ನನಗೆ ತಲುಪಿದೆ: ಕನ್ನಡಿಗರಿಗೆ ಹಂಸಲೇಖ ಪತ್ರ

ನಿಮ್ಮ ಪ್ರೀತಿ ನನಗೆ ತಲುಪಿದೆ: ಕನ್ನಡಿಗರಿಗೆ ಹಂಸಲೇಖ ಪತ್ರ

- Advertisement -
- Advertisement -

“ನಿಮ್ಮ ಪ್ರೀತಿ ನನಗೆ ತಲುಪಿದೆ” ಎಂದು ಖ್ಯಾತ ಸಂಗೀತ ನಿರ್ದೇಶಕ, ನೆಲದ ಕವಿ ಹಂಸಲೇಖ ಪತ್ರ ಬರೆದಿದ್ದಾರೆ. “ಯಾವುದೇ ಆವೇಶಗಳಿಗೆ ಒಳಗಾಗಬಾರದು” ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಮಾಂಸಾಹಾರ ಸಂಬಂಧಿಸಿದಂತೆ ಹಂಸಲೇಖ ಅವರು ಮೈಸೂರಿನಲ್ಲಿ ಮಾಡಿದ ಭಾಷಣ ವಿವಾದಕ್ಕೆ ಕಾರಣವಾಗಿತ್ತು. “ದಲಿತರ ಮನೆಗಳಿಗೆ ಹೋಗುವುದಷ್ಟೇ ಅಲ್ಲ. ಅವರು ಕೊಟ್ಟಿದ್ದು ತಿನ್ನಲು ಆಗುತ್ತದೆಯೇ? ಕೋಳಿ, ಕುರಿ ಮಾಂಸ ಕೊಟ್ಟರೆ ತಿನ್ನುತ್ತಾರೆಯೇ? ಎಂದು ಪೇಜಾವರ ಮಠದ ದಿವಂಗತ ವಿಶ್ವೇಶತೀರ್ಥರನ್ನು ಉಲ್ಲೇಖಿಸಿ ಮಾತನಾಡಿದ್ದರು.

ಹಂಸಲೇಖರ ಹೇಳಿಕೆ ವಿವಾದದ ಸ್ವರೂಪ ಪಡೆದ ಬಳಿಕ ಹಂಸಲೇಖ ಕ್ಷಮೆಯಾಚಿಸಿದ್ದರು. ಆದರೂ ಸುಮ್ಮನಾಗದ ಕೆಲವರು, ಬೃಂದಾವನಕ್ಕೆ ಬಂದು ಹಂಸಲೇಖ ಅವರು ಕ್ಷಮೆ ಕೇಳಬೇಕು ಎಂದು ವಾದಿಸಿದಾಗ ಹಂಸಲೇಖರ ಮಾತಿನಲ್ಲಿ ಯಾವ ತಪ್ಪಿದೆ ಎಂಬ ಚರ್ಚೆ ಆರಂಭವಾಯಿತು. ಮಾಂಸಾಹಾರಿಗಳನ್ನು ತುಚ್ಛವಾಗಿ ಕಾಣುವ ವಿಡಿಯೊವೊಂದು ಹರಿದಾಡಿತು. ಅದಕ್ಕೆ ಪ್ರತಿರೋಧವಾಗಿ ಜನರು ‘ಬಾಡೇ ನಮ್‌ ಗಾಡು’ ಅಭಿಯಾನ ಆರಂಭಿಸಿ, ಆಹಾರ ಸಂಸ್ಕೃತಿಯನ್ನು ಹೀಗಳೆಯುವವರಿಗೆ ಉತ್ತರ ಕೊಟ್ಟರು. ಹಂಸಲೇಖ ಅವರ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿರುವ ಶ್ರಮ ಸಂಸ್ಕೃತಿಯ ಸಾಲುಗಳನ್ನು ಹೆಕ್ಕಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು.

ಹಂಸಲೇಖ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿ ಪ್ರತಿಭಟನೆ ಮಾಡಿದನ್ನು ಖಂಡಿಸಿ, ದಲಿತ ಯುವಕರು ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಮತ್ತು ಸಂಸದ ಪ್ರತಾಪ್‌ ಸಿಂಹ ಅವರ ಫೋಟೋಗಳನ್ನು ಇಟ್ಟು ಪೇಜಾವರ ಅಭಿಮಾನಿಗಳ ರೀತಿಯೇ ಪ್ರತಿಕ್ರಿಯಿಸುವ ಘಟನೆಯೂ ನಡೆಯಿತು. ಇಂತಹ ಘಟನೆಗಳಿಗೆಲ್ಲ ಹಂಸಲೇಖರ ಪ್ರಕರಣ ಸಾಕ್ಷಿಯಾಗಿದ್ದು, ಹಂಸಲೇಖ ಅವರು ಕನ್ನಡಿಗರಿಗೆ ಪತ್ರ ಬರೆದಿದ್ದಾರೆ.

ಸಂಗೀತ ನಿರ್ದೇಶಕ ಹಂಸಲೇಖ ಅವರ ಪತ್ರ

“ಪೂಜ್ಯ ಕರ್ನಾಟಕವೇ ನಮಸ್ಕಾರ, ನಾನು ಆರೋಗ್ಯವಾಗಿದ್ದೇನೆ. ನನಗೆ ಆರೋಗ್ಯ ತಪ್ಪಿದೇ ಎಂತ ಇಡೀ ಕರ್ನಾಟಕದಿಂದ ಕರೆಗಳು ಬಂದಿದೆ. ಎಲ್ಲರೂ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನನಗೆ ಗೊತ್ತಾಗಿದೆ ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು. ಈ ಪ್ರೀತಿ ಪಡೆಯೋಕೆ ನಾನು ತುಂಬಾನೇ ಸವೆದಿದ್ದೀನಿ. ಅದರ ಸುಖ ಇವತ್ತು ಅನುಭವಿಸುತ್ತಿದ್ದೀನಿ.

ನಾನು ಕೇಳದೆ ನನ್ನ ಮನೆಗೆ ಸರ್ಕಾರ ಭದ್ರತೆ ಕೊಟ್ಟಿದೆ. ನಾನು ಕೇಳದೆ ಇಡೀ ಕರ್ನಾಟಕದಲ್ಲಿ ಲಕ್ಷಾಂತರ ಜನ ಅಭಿಮಾನಿಗಳು ನನ್ನ ಪರವಾಗಿ ಮಾತನಾಡುತ್ತಿದ್ದಾರೆ. ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯ ತೋರಿದ್ದಾರೆ. ಈಗ ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅಭಿಮಾನದಲ್ಲಿ ತೇಲಿಸುತ್ತಿದ್ದಾರೆ.”

“ಅಭಿಮಾನ ಆವೇಶವಾಗಬಾರದು: ಆವೇಶ ಅವಘಡಗಳಿಗೆ ಕಾರಣವಾಗಬಾರದು. ಅಭಿಮಾನ ಹಾಡಿನಂತೆ ಇರಬೇಕು. ಹಾಡು ಕೇಳಿಸುತ್ತದೆ… ಮುಟ್ಟಿಸುತ್ತದೆ. ನಿಮ್ಮ ಪ್ರೀತಿ ನನಗೆ ತಲುಪಿದೆ. ನಿಮ್ಮ ಪ್ರೀತಿಗೆ ನನ್ನ ಹೃದಯ ತುಂಬಿದ ನಮಸ್ಕಾರಗಳು- ನಿಮ್ಮ ಹಂಸಲೇಖ”

ಹೀಗೆ ಹಂಸಲೇಖ ಅವರು ಕನ್ನಡಿಗರಿಗೆ ಪತ್ರ ಬರೆದಿದ್ದು, ಅದು ವೈರಲ್ ಆಗಿದೆ. ಯಾವುದೇ ಆವೇಶಗಳಿಗೆ ಒಳಗಾಗದಂತೆ ಅಭಿಮಾನಿಗಳಿಗೆ ಹಂಸಲೇಖ ಅವರು ಮನವಿ ಮಾಡಿದ್ದಾರೆ.


ಇದನ್ನೂ ಓದಿರಿ: ಕಸಾಪ ನೂತನ ಅಧ್ಯಕ್ಷರಾದ ಮಹೇಶ್‌ ಜೋಶಿ ಬಿಜೆಪಿ ಬೆಂಬಲಿತರು ಎಂಬುದಕ್ಕೆ ಇಲ್ಲಿದೆ ಪುರಾವೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

6 COMMENTS

  1. ನಾಡಿನ ಸಜ್ಜನರನ್ನು ಅವಹೇಳನ ಮಾಡಿ, ಕೀಳು ಅಭಿರುಚಿಯ ಹಿಯ್ಯಾಳಿಕೆ ಸಾಮಾನ್ಯವಾಗಿರುವ ವಿಚಿತ್ರ ಕಾಲಘಟ್ಟದಲ್ಲಿ ನಾವಿದ್ದೇವೆ. ಮೃದು ಮಾತಿನ , ಮಗು ಮನಸ್ಸಿನ ಹಂಸಲೇಖ ಅವರಾಡಿದ ಒಂದು ಮಾತು ಕುರಿತು ವಿಮರ್ಶೆ ಮಾಡುವ; ವಿಮರ್ಶೆ ವಿಷಯಕ್ಕೆ ಸೀಮಿತವಾಗಿರಬೇಕೆ ಅಥವಾ, ವ್ಯಕ್ತಿವಧೆವರೆಗೆ ಹೋಗಬೇಕೆ?

    ಸರ್, ನಿಮ್ಮೊಂದಿಗೆ ನಾವಿದ್ದೇವೆ, ನಾವು ಆಗಬೇಕಿದ್ದ ಮಾತು ನಿಮ್ಮ ಬಾಯಲ್ಲಿ ಬಂದಿದೆ. ಒರಟು ಎನ್ನಿಸಿದರೂ ಸತ್ಯ, ಸತ್ಯವೇ!

  2. ನಾಡಿನ ಸಜ್ಜನರನ್ನು ಅವಹೇಳನ ಮಾಡಿ, ಕೀಳು ಅಭಿರುಚಿಯ ಹಿಯ್ಯಾಳಿಕೆ ಸಾಮಾನ್ಯವಾಗಿರುವ ವಿಚಿತ್ರ ಕಾಲಘಟ್ಟದಲ್ಲಿ ನಾವಿದ್ದೇವೆ. ಮೃದು ಮಾತಿನ , ಮಗು ಮನಸ್ಸಿನ ಹಂಸಲೇಖ ಅವರಾಡಿದ ಒಂದು ಮಾತು ಕುರಿತು ವಿಮರ್ಶೆ ಮಾಡುವ; ವಿಮರ್ಶೆ ವಿಷಯಕ್ಕೆ ಸೀಮಿತವಾಗಿರಬೇಕೆ ಅಥವಾ, ವ್ಯಕ್ತಿವಧೆವರೆಗೆ ಹೋಗಬೇಕೆ?

    ಸರ್, ನಿಮ್ಮೊಂದಿಗೆ ನಾವಿದ್ದೇವೆ, ನಾವು ಆಡಬೇಕಿದ್ದ ಮಾತು ನಿಮ್ಮ ಬಾಯಲ್ಲಿ ಬಂದಿದೆ. ಒರಟು ಎನ್ನಿಸಿದರೂ ಸತ್ಯ, ಸತ್ಯವೇ!

  3. I think Hamsalekha will henceforth think more than twice before talking on sensitive and communal issues.
    This is good lesson for u . Go ahead with ur musical work.Definately as music is concerned
    we all like ur music.

  4. If u have guts Mr Hamsalekha why dont u talk about Muslims, Christian’s or Lingayats.
    U thought Brahmins are soft and minority so u can talk .No sir change ur attitude all love music but all dont like ur philosophy or advice outside music.
    I think u will follow this principle

  5. HAMSALEKHA ALIAS GAGARAJU WHO IS CALLED MAHAGURU AND NAADH BRAMHA SHOULD INTROSPECT HIMSELF WHAT HE SPOKE ABOUT PEJAWAR SHREE AND BRAMHINS HE HAD TO THINK BEFORE HE SPEAK FOR HIS SPEACH HE MIGHT HAVE GOT CLAPS AND LAUGHS FROM AUDIENCE BUT HOW MUCH IT HAS HURT FOLLOWERS OF PEJAWR SHREE AND BRAMHINS. HE IS CALLED A GREAT PERSON DOES HE NOT HAVE THINKING POWER WHAT TO SPEAK AND WHAT NOT. WHY HE SHOULD HAVE ALLOWED HIS TONGUE TO GO IN ITS OWN WAY UNNECESSARILY MAKE PEOPLE TO BECOME ANGRY AND AGAINST HIM. IF HE WHOLEHEARTELY LOVE ALL PEOPLE OF ALL COMMUNITY SUCH WORDS SHOULD NOT HAVE COME OUT OF HIS MOUTH. I HOPE THAT HE HAS LEARNT AT LEAST IN FUTURE BEFORE UTTERING HE WILL THINK TWICE AND SPEAK. GOD BLESS HIM

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...