Homeಫ್ಯಾಕ್ಟ್‌ಚೆಕ್ಭಗತ್‌ಸಿಂಗ್‌ಗೆ ಗಲ್ಲುಶಿಕ್ಷೆಯಾಗಲು ಆರ್‌ಎಸ್‌ಎಸ್ ನಾಯಕ ಹೆಡ್ಗೆವಾರ್‌ ಸಹವರ್ತಿ ಕಾರಣವೆ?

ಭಗತ್‌ಸಿಂಗ್‌ಗೆ ಗಲ್ಲುಶಿಕ್ಷೆಯಾಗಲು ಆರ್‌ಎಸ್‌ಎಸ್ ನಾಯಕ ಹೆಡ್ಗೆವಾರ್‌ ಸಹವರ್ತಿ ಕಾರಣವೆ?

- Advertisement -
- Advertisement -

‘ಅಸೆಂಬ್ಲಿ ಬಾಂಬ್ ಸ್ಫೋಟ’ ಪ್ರಕರಣದಲ್ಲಿ ಭಗತ್ ಸಿಂಗ್ ಅವರ ವಿಚಾರಣೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿರುವ ಪೋಸ್ಟ್ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಎಲ್ಲಾ ವಕೀಲರು ಪ್ರಕರಣವನ್ನು ನಿರಾಕರಿಸಿದಾಗ ನ್ಯಾಯಾಲಯದಲ್ಲಿ ಭಗತ್ ಸಿಂಗ್ ಪರವಾಗಿ ಮುಸ್ಲಿಂ ವಕೀಲ ಆಸಫ್ ಅಲಿ ವಾದಿಸಿದರು” ಎಂದು ಪೋಸ್ಟ್ ಹೇಳುತ್ತದೆ; ಆದರೆ ಆರ್‌‌ಎಸ್‌ಎಸ್‌ ಸದಸ್ಯ ಮತ್ತು ಆರ್‌ಎಸ್‌ಎಸ್‌ ಸಂಸ್ಥಾಪಕ ಸದಸ್ಯ ಹೆಡ್ಗೆವಾರ್ ಅವರ ನಿಕಟ ಸಹವರ್ತಿ ರಾಯ್ ಬಹದ್ದೂರ್ ಸೂರ್ಯವಂಶಂ ಶರ್ಮಾ ಅವರು ಬ್ರಿಟಿಷ್ ಸಾಮ್ರಾಜ್ಯದ ಪರವಾಗಿ ವಾದಿಸಿ ಭಗತ್ ಸಿಂಗ್‌ ಅವರಿಗೆ ಮರಣದಂಡನೆ ವಿಧಿಸಲು ಕಾರಣರಾದರು ಎಂದು ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ.


ಭಗತ್ ಸಿಂಗ್ ಪರವಾಗಿ ಮುಸ್ಲಿಂ ವ್ಯಕ್ತಿ ಆಸಫ್ ಅಲಿ ವಾದಿಸಿದರು. ಆರ್‌ಎಸ್‌ಎಸ್‌ಸದಸ್ಯ ರಾಯ್ ಬಹದ್ದೂರ್ ಸೂರ್ಯವಂಶಂ ಶರ್ಮಾ ಬ್ರಿಟಿಷ್ ಸಾಮ್ರಾಜ್ಯವನ್ನು ಪ್ರತಿನಿಧಿಸಿದರು ಮತ್ತು ಭಗತ್ ಸಿಂಗ್‌ಗೆ ಮರಣದಂಡನೆ ವಿಧಿಸಿದರು ಎಂಬುದು ಈ ವೈರಲ್‌ ವಿಡಿಯೊ ಪ್ರತಿಪಾದನೆಯಾಗಿದೆ. ಈ ವಿಡಿಯೊದಲ್ಲಿನ ಸತ್ಯಾಸತ್ಯತೆಯನ್ನು ‘ಫ್ಯಾಕ್ಟ್‌ಲಿ.ಇನ್‌’ ತೆರೆದಿಟ್ಟಿದೆ.

ಸತ್ಯಾಂಶವೇನು?

ಭಗತ್ ಸಿಂಗ್ ಎರಡು ವಿಚಾರಣೆಗಳನ್ನು ಎದುರಿಸಿದರು. ಮೊದಲ ವಿಚಾರಣೆಯು ದೆಹಲಿಯಲ್ಲಿನ ಭಾರತೀಯ ಕೇಂದ್ರ ಶಾಸನ ಸಭೆಯ (CLA) ಬಾಂಬ್ ದಾಳಿಯಲ್ಲಿ ಕೊಲೆಯ ಯತ್ನ ಮತ್ತು ಪಿತೂರಿಯ ಆರೋಪಗಳಿಗೆ ಸಂಬಂಧಿಸಿತ್ತು. ಆದರೆ ಎರಡನೆಯದ್ದು ಲಾಹೋರ್‌ನಲ್ಲಿ ಸಹಾಯಕ ಸೂಪರಿಂಟೆಂಡೆಂಟ್ ಸ್ಯಾಂಡರ್ಸ್ ಹತ್ಯೆಯ ಆರೋಪವಾಗಿತ್ತು. ಈ ಪ್ರಕರಣವನ್ನು ಲಾಹೋರ್ ಪಿತೂರಿ ಪ್ರಕರಣ ಎಂದೂ ಕರೆಯುತ್ತಾರೆ.

ಅಸೆಂಬ್ಲಿ ಬಾಂಬ್ ಸ್ಫೋಟ ಪ್ರಕರಣ

08 ಏಪ್ರಿಲ್ 1929ರಂದು, ಭಗತ್ ಸಿಂಗ್ ಬಟುಕೇಶ್ವರ ದತ್ (ದತ್ತ) ಜೊತೆಗೆ ದೆಹಲಿಯ ಕೇಂದ್ರ ಅಸೆಂಬ್ಲಿಗೆ ಕಡಿಮೆ ತೀವ್ರತೆಯ ಬಾಂಬ್ ಎಸೆದರು. ಅಲ್ಲಿ ಭಗತ್ ಸಿಂಗ್ ಮತ್ತು ದತ್ ಇಬ್ಬರೂ ಶರಣಾದರು. ವಿಚಾರಣೆಯು 07 ಮೇ 1929ರಂದು ಪ್ರಾರಂಭವಾಯಿತು ಮತ್ತು 12 ಜೂನ್ 1929ರಂದು ನ್ಯಾಯಾಲಯವು ಭಗತ್ ಸಿಂಗ್ ಮತ್ತು ದತ್ ಇಬ್ಬರಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸುವ ತೀರ್ಪು ಪ್ರಕಟಿಸಿತು.

ಈ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನ ಡಿಜಿಟಲ್ ದಾಖಲೆಗಳು ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾಅಭಿಲೇಖ್ ಪಾತಾಳ ಪೋರ್ಟಲ್‌ನಲ್ಲಿ ಲಭ್ಯವಿವೆ. ಅದೇ ಡಾಕ್ಯುಮೆಂಟ್ ಇಂಡಿಯನ್‌ ಕಲ್ಚರ್‌‌ ಪೋರ್ಟಲ್‌ನಲ್ಲಿಯೂ ಲಭ್ಯವಿದೆ (ಸಂಪುಟ 1 ಮತ್ತು ಸಂಪುಟ 2).


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಬ್ರಿಟನ್ ರಾಣಿಗಿಂತ ಸೋನಿಯಾ ಶ್ರೀಮಂತೆ ಎಂಬುದು ಸುಳ್ಳು ಸುದ್ದಿ


ಈ ತೀರ್ಪಿನ ದಾಖಲೆಗಳಲ್ಲಿ, ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ಆರೋಪಿಗಳಾಗಿದ್ದು ಮತ್ತು ಅಸಫ್ ಅಲಿ ಇಬ್ಬರಿಗೂ ವಕೀಲರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದಲ್ಲದೆ, ರಾಯ್ ಬಹದ್ದೂರ್ ಸೂರಜ್ ನಾರಾಯಣ್ ಅವರು ಬ್ರಿಟಿಷರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು ಎಂದು ಡಾಕ್ಯುಮೆಂಟ್ ಹೇಳುತ್ತದೆ.

ಆದರೂ ಪ್ರಖ್ಯಾತ ಕಾನೂನು ವಿದ್ವಾಂಸರಾದ ಎ.ಜಿ.ನೂರಾನಿ ಅವರು ತಮ್ಮ ಪುಸ್ತಕ ‘ದಿ ಟ್ರಯಲ್ ಆಫ್ ಭಗತ್ ಸಿಂಗ್ — ಪಾಲಿಟಿಕ್ಸ್ ಆಫ್ ಜಸ್ಟಿಸ್’ನಲ್ಲಿ ಅಸಫ್ ಅಲಿ ಬಟುಕೇಶ್ವರ್ ದತ್ ಅವರನ್ನು ಪ್ರತಿನಿಧಿಸಿದರೆ, ಭಗತ್ ಸಿಂಗ್ ಅವರಿಂದ ಕಾನೂನು ಸಲಹೆ ಪಡೆದು ತಮ್ಮ ಪರವಾಗಿ ತಾವೇ ವಾದಿಸಿದರು ​​ಎಂದು ಹೇಳಿದ್ದಾರೆ. ಭಗತ್ ಸಿಂಗ್ ತನ್ನ ತಂದೆಗೆ ಬರೆದ ಪತ್ರದ ಆಯ್ದ ಭಾಗವನ್ನು ನೂರಾನಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಕಾನೂನು ಸಲಹೆಗಾರರನ್ನು ಕೋರಿರುವುದು ಉಲ್ಲೇಖಿಸಲಾಗಿದೆ. ಪುಸ್ತಕದಲ್ಲಿ ಹಂಚಿಕೊಂಡ ಆಯ್ದ ಭಾಗವು “ವಕೀಲರನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ನಾನು ಕೆಲವು ವಿಷಯಗಳ ಬಗ್ಗೆ ಕಾನೂನು ಅಭಿಪ್ರಾಯವನ್ನು ತೆಗೆದುಕೊಳ್ಳಲು ಬಯಸುತ್ತೇನೆ, ಆದರೆ ಅವು ಅಷ್ಟು ಮುಖ್ಯವಲ್ಲ”. “ಕರಡು ಭಗತ್ ಸಿಂಗ್ ಅವರದ್ದಾಗಿದ್ದರೂ, ಅವರು ಭಾಷೆಯನ್ನು ಪಾಲಿಶ್ ಮಾಡಿದ್ದಾರೆ ಎಂದು ಆಸಫ್‌ಅಲಿ ಪ್ರತಿಪಾದಿಸಿದ್ದಾರೆ” ಎಂದು ಪುಸ್ತಕದ ಇನ್ನೊಂದು ಉಲ್ಲೇಖಿತ ಭಾಗದಿಂದ ಸ್ಪಷ್ಟವಾಗಿದೆ. ಅಸಫ್ ಅಲಿ ಅವರು ದತ್ ಅವರನ್ನು ಪ್ರತಿನಿಧಿಸಿದರು ಮತ್ತು ಭಗತ್ ಸಿಂಗ್ ಸ್ವತಃ ವಾದಿಸಲು ಸಲಹೆ ನೀಡಿದರು ಎಂದು ‘ದಿ ಹಿಂದೂ’ ವರದಿ ಮಾಡಿದೆ.

ಈ ಪುಸ್ತಕವು “ರಾಯ್ ಬಹದ್ದೂರ್ ಸೂರಜ್ ನಾರಾಯಣ್ ಬ್ರಿಟಿಷರನ್ನು ಪ್ರತಿನಿಧಿಸಿದರು” ಎಂಬ ಅಂಶವನ್ನು ಪುನರುಚ್ಚರಿಸಿದೆ. ಆದರೆ, ರಾಯ್ ಬಹದ್ದೂರ್ ಸೂರಜ್ ನಾರಾಯಣ್ ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ ಅಥವಾ ಆರ್‌ಎಸ್‌ಎಸ್ ಸಂಸ್ಥಾಪಕ ಸದಸ್ಯ ಹೆಡ್ಗೆವಾರ್ ಅವರೊಂದಿಗಿನ ನಿಕಟವರ್ತಿಯಾಗಿದ್ದಾರೆ ಎಂದು ತೀರ್ಮಾನಿಸಲು ನಮಗೆ ಯಾವುದೇ ಮಹತ್ವದ ಪುರಾವೆಗಳು ಕಂಡುಬಂದಿಲ್ಲ.

ಲಾಹೋರ್ ಪಿತೂರಿ ಪ್ರಕರಣ

ಈ ಪ್ರಕರಣದಲ್ಲಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ ಗುರು ಅವರು ಸಹಾಯಕ ಸೂಪರಿಂಟೆಂಡೆಂಟ್ ಸ್ಯಾಂಡರ್ಸ್ ಅವರನ್ನು ಕೊಂದ ಆರೋಪದಲ್ಲಿ ಮರಣದಂಡನೆ ವಿಧಿಸಲಾಯಿತು. ಅಂತಿಮವಾಗಿ, ಮೂವರನ್ನು 23 ಮಾರ್ಚ್ 1931ರಂದು ಗಲ್ಲಿಗೇರಿಸಲಾಯಿತು.

ಇಂಡಿಯನ್‌ ಕಲ್ಚರ್‌ ಪೋರ್ಟಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಬಹು ಡಿಜಿಟಲ್ ದಾಖಲೆಗಳು ಲಭ್ಯವಿವೆ. ಈ ಪೋರ್ಟಲ್‌ನಲ್ಲಿ ಲಭ್ಯವಿರುವ ತೀರ್ಪಿನ ದಾಖಲೆಯ ಪ್ರಕಾರ, ಈ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಗತ್ ಸಿಂಗ್‌ಗೆ ಸಲಹೆ ನೀಡಿದವರು ಅಸಫ್ ಅಲಿ ಅಲ್ಲ ಬದಲಿಗೆ ಲಾಲಾ ದುನಿ ಚಂದ್ ಆಗಿದ್ದಾರೆ. ಮತ್ತೊಂದೆಡೆ, ಅಸಫ್ ಅಲಿ ಅವರು ನ್ಯಾಯಾಲಯದಲ್ಲಿ ಪ್ರತಿವಾದಿ ವಕೀಲರಾಗಿ ಸುಖ್‌ದೇವ್ ರವರನ್ನು ಪ್ರತಿನಿಧಿಸಿದರು.

ದಾಖಲೆಗಳ ಪ್ರಕಾರ, ನೋದ್ ಅವರು ಬ್ರಿಟಿಷ್ ಸಾಮ್ರಾಜ್ಯದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾಣಿಸಿಕೊಂಡರು. ಇದಲ್ಲದೆ, ದಾಖಲೆಯಲ್ಲಿ ರಾಯ್ ಬಹದ್ದೂರ್ ಸೂರ್ಯವಂಶಂ ಶರ್ಮಾ ಎಂಬ ಯಾವುದೇ ವ್ಯಕ್ತಿಯ ಉಲ್ಲೇಖವಿಲ್ಲ. ನೂರಾನಿ ಅವರ ಪುಸ್ತಕದಲ್ಲಿಯೂ, ಭಗತ್ ಸಿಂಗ್ ಅವರು ಕಾನೂನು ಸಲಹೆಗಾಗಿ ಲಾಲಾ ದುನಿ ಚಂದ್ ಅವರನ್ನು ಆಯ್ಕೆ ಮಾಡಿಕೊಂಡರು ಮತ್ತು ನೋದ್ ಅವರು ಬ್ರಿಟಿಷರ ಪರವಾಗಿ ಕಾಣಿಸಿಕೊಂಡರು ಎಂದು ಉಲ್ಲೇಖಿಸಿದ್ದಾರೆ. ಲಭ್ಯವಿರುವ ಎಲ್ಲಾ ಮಾಹಿತಿಗಳಿಂದ ಹೇಳುವುದಾದರೆ ಗಲ್ಲುಶಿಕ್ಷೆಗೆ ಕಾರಣವಾದ ಪ್ರಕರಣದಲ್ಲಿ ಭಗತ್ ಸಿಂಗ್ ವಿರುದ್ಧ ವಾದಿಸಿದ ವ್ಯಕ್ತಿ ಆರ್‌ಎಸ್‌ಎಸ್‌ಗೆ ಸಂಬಂಧ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಭಗತ್ ಸಿಂಗ್ ಲಾಲಾ ದುನಿ ಚಂದ್ ಅವರಿಂದ ಕಾನೂನು ಸಲಹೆಯನ್ನು ಪಡೆದರು; ಆರೆಸ್ಸೆಸ್ ಸಹವರ್ತಿಯೊಬ್ಬರು ವಿಚಾರಣೆಯಲ್ಲಿ ಬ್ರಿಟಿಷರನ್ನು ಪ್ರತಿನಿಧಿಸಿರಲಿಲ್ಲ.


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಮಂಗಳೂರಿನಲ್ಲಿ ಮತ್ಸ್ಯಕನ್ಯೆ ಸಿಕ್ಕಿದೆ ಎಂಬುದು ನಿಜವಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ಕಮ್ಯುನಿಸ್ಟ್ ರವರಿಗೆ ಸ್ವಾತಂತ್ರ್ಯದ ಪೂರ್ವದಿಂದಲೂ ಸುಳ್ಳು ಇತಿಹಾಸ ಬರೆದು ,ಅದನ್ನೇ ಜನರಿಗೆ ನಂಬಿಸುವ ಪ್ರಯತ್ನ ನಡಿತಲೇ ಇದೆ ,ಅದರಲ್ಲಿ ಇದೂ ಸಹ ಒಂದು ,ಭಗತ್ ಸಿಂಗ್ ಪರ ಕೋರ್ಟ್ ನಲ್ಲಿ ವಾದ ಮಾಡಿದ್ದು ಮುಸ್ಲಿಮ್ ಅನ್ನೋದು ಶುದ್ದ ಸುಳ್ಳು ,ನಿಮ್ಮ ಯೋಗ್ಯತೆಗೆ ಒಂದು ಸತ್ಯವಾದ ಮಾಹಿತಿಯಾದರೂ ನೀಡಿ ಇನ್ನಾದರು

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....