Homeಮುಖಪುಟನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್‌ ಹೆಸರು ‘Tek Fog’: ‘ದಿ ವೈರ್‌’...

ನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್‌ ಹೆಸರು ‘Tek Fog’: ‘ದಿ ವೈರ್‌’ ಸ್ಪೋಟಕ ವರದಿ

ಕೋಮು ರಾಜಕಾರಣದ ಆಯಾಮವನ್ನು ‘ದಿ ವೈರ್‌‌’ ವರದಿ ಬಯಲಿಗೆಳೆದಿದೆ. (ಈ ವರದಿಯಲ್ಲಿ ಮಹಾಪ್ರಾಣ ಬಳಕೆ ಕಡಿತಗೊಳಿಸಲಾಗಿದೆ.)

- Advertisement -
- Advertisement -

(ಇದು ‘ಎಲ್ಲರ ಕನ್ನಡ’ದ ಪ್ರಾಯೋಗಿಕ ವರದಿಯಾಗಿದೆ)

ದ್ವೇಶವನ್ನು ವ್ಯವಸ್ತಿತವಾಗಿ ಹರಡಲೆಂದೇ ಬಿಜೆಪಿ ತನ್ನದೇ ಆದ ಅಪ್ಲಿಕೇಶನ್‌ ಚಾಲ್ತಿಗೆ ತಂದಿರುವ ಆತಂಕಕಾರಿ ವಿಶಯವನ್ನು ದಿ ವೈರ್‌ ಸುದ್ದಿ ಜಾಲತಾಣ ಹೊರಗೆಳೆದಿದೆ. ಆಯುಶ್ಮಾನ್‌ ಕೌಲ್‌ ಹಾಗೂ ದೇವೇಶ್‌ ಕುಮಾರ್‌ ಮಾಡಿರುವ ವಿಶೇಶ ವರದಿಯು ಹಲವು ಆತಂಕಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದೆ. ತನ್ನ ರಾಜಕೀಯ ವಿರೋದಿಗಳ ವಿರುದ್ದ ದ್ವೇಶ ಹರಡಲು, ಅವರಿಗೆ ಕಿರುಕುಳ ನೀಡಲು ಈ ಅಪ್ಲಿಕೇಶನ್‌ಗಳು ಬಳಕೆಯಾಗುತ್ತಿವೆ ಎಂಬ ವಿಚಾರವನ್ನು ‘ದಿ ವೈರ್‌’ ವರದಿ ಬಯಲಿಗೆಳೆದಿದೆ.

ಆರತಿ ಶರ್‍ಮಾ ಎಂಬವರು 2020ರ ಏಪ್ರಿಲ್‌ ತಿಂಗಳಲ್ಲಿ ಬಿಜೆಪಿ ಐಟಿ ಸೆಲ್‌ ವಿರುದ್ದ ಅಸಮಾದಾನ ಹೊರಹಾಕಿ ಸರಣಿ ಟ್ವೀಟ್ ಮಾಡಿದ್ದರು. ಅದರ ಜಾಡು ಹಿಡಿದು ಹೊರಟ ದಿ ವೈರ್‌‌, ಬಿಜೆಪಿ ಐಟಿ ಸೆಲ್‌ ಚಾಲ್ತಿಗೆ ತಂದಿದ್ದ ಟೆಕ್‌ ಪಾಗ್‌ (Tek Fog) ಎಂಬ ಅಪ್ಲಿಕೇಶನ್‌ ಮಾಡುತ್ತಿದ್ದ ಕಾರ್‍ಯವೈಕರಿಯನ್ನು ಹೊರಗೆಡವಿದೆ.

Tek Fog ಅಪ್ಲಿಕೇಶನ್ ಮೂಲಕ ಆಡಳಿತ ರೂಡ ಬಿಜೆಪಿಯ ವಿರೋದಿ ರಾಜಕೀಯ ಪಕ್ಷಗಳನ್ನು ಟೀಕಿಸಲು, ಸರ್ಕಾರವನ್ನು ವಿಮರ್‍ಶಿಸುವವರ ವಿರುದ್ದ ವ್ಯಕ್ತಿಗತ ಟ್ರಾಲ್ ಮಾಡಲು ಸ್ವಯಂಚಾಲಿತ ತಂತ್ರಗ್ನಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರತಿ ಶರ್‍ಮಾ ಅವರ ಸರಣಿ ಟ್ವೀಟ್‌ನಲ್ಲಿ ಹೇಳಲಾಗಿತ್ತು.

ಈ ಟ್ವಿಟರ್ ಕಾತೆಯನ್ನು ಸಂಪರ್ಕಿಸಿರುವ ದಿ ವೈರ್ ತಂಡಕ್ಕೆ ಅಪ್ಲಿಕೇಶನ್ ನಿರ್‍ವಹಿಸುವ ರಹಸ್ಯ ಕೆಲಸಗಳ ಕುರಿತು ಮಾಹಿತಿ ದೊರೆತಿದ್ದು, ಬಿಜೆಪಿ ಪರವಾಗಿರುವ ವಾಟ್ಸಪ್ ಗುಂಪುಗಳನ್ನು ರಚಿಸುವುದು, ಐಟಿ ಸೆಲ್ ಉದ್ಯೋಗಿಗಳಿಗೆ ಟ್ರೆಂಡಿಂಗ್‌ ಹ್ಯಾಶ್‌ಟ್ಯಾಗ್‌ಗಳನ್ನು ರಚಿಸಿಕೊಡುವುದು, ವಿರೋದಿಗಳನ್ನು ಗುರಿಮಾಡಿಸಲು ವಿಶಯಗಳನ್ನು ಕೊಡುವುದು ಮೊದಲಾದ ಹಲವು ಕೆಲಸವನ್ನು ಈ ಆಪ್ ಮೂಲಕ ನಿರ್‍ವಹಿಸಲಾಗುತ್ತಿತ್ತು ಎನ್ನಲಾಗಿದೆ.

“2019ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸರ್‍ಕಾರಿ ಉದ್ಯೋಗ ನೀಡುವುದಾಗಿ ಆಮಿಶಗಳನ್ನು ನೀಡಲಾಗಿತ್ತು” ಎಂಬ ಆರೋಪವನ್ನೂ ಆ ಟ್ವಿಟ್ಟರ್ ಕಾತೆ ಮಾಡಿತ್ತು. ಹೀಗಾಗಿ ಅಸಮಾದಾನಗೊಂಡು ಕಾತೆಯಲ್ಲಿ ಬೇಸರ ವ್ಯಕ್ತಪಡಿಸಲಾಗಿತ್ತು.

ಎರಡು ವರ್‍ಶಗಳ ಕಾಲ ತನಿಕೆ ನಡೆಸಿರುವ ದಿ ವೈರ್‌ ಹಲವು ಮಾಹಿತಿಗಳನ್ನು ಕಲೆ ಹಾಕಿದೆ. ಈ ಆಪ್‌ ಒಂದು ಪಕ್ಶದಪರ ಹೇಗೆ ಕೆಲಸ ಮಾಡಿದೆ ಎನ್ಬುದನ್ನು ವೈರ್‌ ವಿಶ್ಲೇಶಿಸಿದೆ.

1. ಟ್ವಿಟ್ಟರ್‌‌ನ ‘ಟ್ರೆಂಡಿಂಗ್‌’ ಫೇಸ್‌ಬುಕ್‌ನ ಟ್ರೆಂಡ್‌ ವಿಬಾಗವನ್ನು ಹೈಜಾಕ್‌ ಮಾಡುವುದು:

ಇದರ ಅರ್ತವೇನು?

ಅಪ್ಲಿಕೇಶನ್ ಆಪರೇಟರ್‌ಗಳೇ ವ್ಯಕ್ತಿಗಳು ಅತವಾ ಗುಂಪುಗಳ ಟ್ವೀಟ್‌ಗಳನ್ನು, ಪೋಸ್ಟ್‌ಗಳನ್ನು ‘ತಂತಾನೇ- ರೀಟ್ವೀಟ್’ ಅಥವಾ ‘ತಂತಾನೇ- ಹಂಚಿಕೊಳ್ಳಬಹುದು. ಆಪರೇಟರ್‌ಗಳು ವಾಸ್ತವದಲ್ಲಿ ಇರುವುದಕ್ಕಿಂತ ಅತಿರೇಕದ ನಿರೂಪಣೆ ಹಾಗೂ ರಾಜಕೀಯ ಅಬಿಯಾನವು ಕಾಣಿಸಿಕೊಳ್ಳುವಂತೆ ನೋಡಿಕೊಳ್ಳುವುದು.

ಸಮಸ್ಯೆಯೇನು?

ಯಾವುದು ನಿಯಂತ್ರಿಸಲ್ಪಡುತ್ತಿದೆ ಯಾವುದು ನಿಜವಾಗಿದೆ ಎಂಬುದನ್ನು ತಿಳಿಯದಂತಾಗುತ್ತೇವೆ. ಸದ್ಯದ ಟ್ರೆಂಡ್‌ಗಳನ್ನು ಬುಡಮೇಲು ಮಾಡಿ ಕೆಲವು ಗುಂಪುಗಳ, ಕೆಲವು ವ್ಯಕ್ತಿಗಳನ್ನು ಗುರಿಮಾಡಲಾಗುತ್ತದೆ. ಕಿರುಕುಳ ನೀಡಲಾಗುತ್ತದೆ.

ವೈರ್‌ಗೆ ಸಿಕ್ಕಿರುವ ಆಧಾರ

#CongressAgainstLabourers, #कर्मयोगी ಟ್ರೆಂಡಿಂಗ್‌ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುವ ಮೊದಲು ಒದಗಿಸಲಾದ ಮೂಲಗಳು ಅನುಮಾನಾಸ್ಪದ, ಅನದಿಕೃತವಾಗಿದ್ದು ಆನ್‌ಲೈನ್‌ ವೇದಿಕೆಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ.

2. ನಿಶ್ಕ್ರಿಯ ವಾಟ್ಸ್‌ಆಪ್‌‌ ಖಾತೆಗಳ ಪಿಶಿಂಗ್‌ (ಪಾಸ್‌ವರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಸಂಕ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲು ವ್ಯಕ್ತಿಗಳನ್ನು ಪ್ರೇರೇಪಿಸುವ ಸಲುವಾಗಿ ಪ್ರತಿಶ್ಟಿತ ಕಂಪನಿಗಳಿಂದ ಇಮೇಲ್‌ಗಳನ್ನು ಕಳುಹಿಸುವ ಮೋಸದ ಅಬ್ಯಾಸ):

ಇದರ ಅರ್ತವೇನು?

ಆಪ್ ಆಪರೇಟರ್‌ಗಳು ಕಾಸಗಿ ವ್ಯಕ್ತಿಯ ‘ನಿಶ್ಕ್ರಿಯ’ ವಾಟ್ಸ್‌ಅಪ್‌‌ ಕಾತೆಗಳನ್ನು ಹೈಜಾಕ್ ಮಾಡಬಹುದು. ‘ಪದೇ ಪದೇ ಸಂಪರ್‍ಕಿಸುವ’ ಅತವಾ ‘ಎಲ್ಲಾ ಸಂಪರ್‍ಕಗಳಿಗೆ’ ಸಂದೇಶ ಕಳುಹಿಸಲು ಕಾಸಗಿ ವ್ಯಕ್ತಿಯ ಪೋನ್‌ ನಂಬರ್‌ಗಳನ್ನು ಬಳಸಬಹುದು.

ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಸಂಪರ್‍ಕ ಪಟ್ಟಿಯನ್ನು ಟೆಕ್ ಪಾಗ್ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಮುಂದೆ ನಡೆಸಬಹುದಾದ ಕಿರುಕುಳ ಮತ್ತು ಟ್ರೋಲಿಂಗ್ ಅಬಿಯಾನಗಳಿಗೆ ಬಳಸಲಾಗುತ್ತದೆ.

ನಾನೇಕೆ ಚಿಂತೆಪಡಬೇಕು?

ಇದು ನಿಮ್ಮ ಕಾಸಗಿತನದ ಹಕ್ಕನ್ನು ಉಲ್ಲಂಗಿಸಿದೆ.

ವೈರ್‌ಗೆ ಲಭ್ಯವಾದ ಆಧಾರ

ವಾಟ್ಸ್‌ಅಪ್‌ನ ಶೋಶಣೆಯ ರಿಯಲ್‌ ಟೈಮ್‌ ತೋರಿಸಲು ಮೂಲವನ್ನು ಕೇಳಲಾಯಿತು. ಪ್ರಾತಿಕ್ಷಿಕೆಯ ಮೂಲಕ ಹೈಜಾಕ್‌ ಮಾಡುವ ರೀತಿಯನ್ನು ದೃಡಪಡಿಸಿಕೊಳ್ಳಲಾಗಿದೆ.

3. ಉದ್ದೇಶಿತ ಕಿರುಕುಳಕ್ಕಾಗಿ ಕಾಸಗಿ ನಾಗರಿಕರ ಡೇಟಾಬೇಸ್ ಬಳಸುವುದು

ಇದರ ಅರ್ತವೇನು?

ಕಾಸಗಿ ನಾಗರಿಕರ ಉದ್ಯೋಗ, ದರ್ಮ, ಬಾಷೆ, ವಯಸ್ಸು, ಲಿಂಗ, ರಾಜಕೀಯ ಒಲವು ಅಷ್ಟೇ ಅಲ್ಲದೆ ಚರ್ಮದ ಬಣ್ಣ, ಸ್ತನದ ಗಾತ್ರದಂತಹ ದೈಹಿಕ ಗುಣಲಕ್ಷಣಗಳಿಗೆ ಅನುಗುಣವಾಗಿಯೂ ಡೇಟ್‌‌ಬೇಸ್‌ ಅನ್ನು ವರ್ಗೀಕರಿಸಲಾಗಿದೆ.

ನಾನೇಕೆ ಚಿಂತಿಸಬೇಕು?

ವಿಶುವಲ್‌ ಪುರಾವೆ

ವೈರ್‌ ಹೇಗೆ ಕಚಿತಪಡಿಸಿಕೊಂಡಿದೆ?

ಅಪ್ಲಿಕೇಶನ್‌ನಲ್ಲಿ ತೋರಿಸಲಾದ ಉದ್ದೇಶಿತ ಗುಂಪುಗಳಲ್ಲಿ ಒಂದಾದ ‘ಮಹಿಳಾ ಪತ್ರಕರ್‍ತರಿಗೆ’ ಕಳುಹಿಸಲಾದ ಪ್ರತ್ಯುತ್ತರಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ.

ಈ ರೀತಿಯಾಗಿ ಈ ವರದಿ ಪ್ರಕಟಗೊಂಡ ನಂತರ ದೊಡ್ಡ ಚರ್ಚೆಗಳು ಆರಂಬವಾಗಿವೆ. ಬಿಜೆಪಿಯು ಚುನಾವಣೆಯ ಹೊಸ್ತಿಲಲ್ಲಿ ಎಂತಹ ಹೀನಕೃತ್ಯಕ್ಕಿಳಿದಿದೆ ಎಂದು ಹಲವರು ವಿರೋದ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿರಿ: ಛತ್ತೀಸ್‌ಗಡ: ಗ್ರಾಮಸ್ಥರಿಂದ ಮುಸ್ಲಿಮರನ್ನು ಬಹಿಷ್ಕರಿಸುವ ಪ್ರತಿಜ್ಞೆ ಮಾಡಿಸಿದ ದುಷ್ಕರ್ಮಿಗಳು; ತನಿಖೆಗೆ ಪೊಲೀಸ್‌ ಆದೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ‘ಎಲ್ಲರ ಎಂದರೆ ಮಹಾಪ್ರಾಣ ಅಕ್ಕರಗಳನ್ನು ಬಳಸದಿರುವುದೊಂದೇ ಅಲ್ಲ.
    ಆದಶ್ಟು ಕನ್ನಡ ಬೇರಿನ ಪದಗಳನ್ನು ಬಳಸುವುದು.
    ಮೇಲುನೋಟಕ್ಕೆ “ವಿಜಾತಿಯ” ಒತ್ತಕ್ಶರ” ಗಳಿಲ್ಲದ ಪದಗಳು.
    ಎತ್ತಗೆ:
    ದ್ವೇಶ…ಹಗೆತನ

    ಪ್ರತ್ಯುತ್ತರ..ಮರುಹೇಳಿಕೆ/ ಮರುಉತ್ತರ
    ಹೀನಕೃತ್ಯ..ಕೇಡುಕಿನ ಕೆಲಸ
    ….

  2. ಎಲ್ಲರ ಕನ್ನಡ ಎಂದರೆ, ಕೇವಲ ಮಹಾಪ್ರಾಣ ಗಳನ್ನು ಕಯ್ಬಿಡುವುದಲ್ಲ.
    ಹೆಚ್ಚು ಕನ್ನಡ ಬೇರಿನ ಪದಗಳ ಬಳಕೆ.
    ಎತ್ತುಗೆ,
    ಹೀನಕೃತ್ಯ..ಕೆಡುಕಿನ ಕೆಲಸ.
    ಕನ್ನಡಪದಗಳಲ್ಲಿ ವಿಜಾತಿಯ ಒತ್ತಕ಼್ಶರ ಇರುವುದಿಲ್ಲ.

  3. ದನ್ಯವಾದಗಳು
    “ಹ್ಯಾಶ್‌ಟ್ಯಾಗ್‌ಗಳನ್ನು ರಚಿಸಿಕೊಡುವುದು, ವಿರೋಧಿಗಳನ್ನು”….ಇಲ್ಲಿ ಒಂದೇ ಒಂದು ಮಹಾಪ್ರಾಣ ನುಸುಳಿದೆ. ದಯವಿಟ್ಟು ತಿದ್ದಿ.

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...