Homeಕರ್ನಾಟಕಕೊರಗ ತನಿಯ ಹಿಂದೂ ಧರ್ಮದ ಸಂಕೇತವಲ್ಲ: ಕೊರಗ ಮುಖಂಡ ಶ್ರೀಧರ ನಾಡ ಸ್ಪಷ್ಟನೆ

ಕೊರಗ ತನಿಯ ಹಿಂದೂ ಧರ್ಮದ ಸಂಕೇತವಲ್ಲ: ಕೊರಗ ಮುಖಂಡ ಶ್ರೀಧರ ನಾಡ ಸ್ಪಷ್ಟನೆ

"ಇಡೀ ಕೊರಗ ಸಮುದಾಯದ ಅಸ್ತಿತ್ವವನ್ನು ಬುಡಮೇಲು ಮಾಡಿದವರು ಕೊರಗ ತನಿಯನ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು"

- Advertisement -
- Advertisement -

ಕೊರಗ ತನಿಯನಿಗೆ ಸಂಬಂಧಿಸದೆ ಇರುವ ವೇಷವನ್ನು ಕೊರಗ ತನಿಯನ ವೇಷವೆಂದು ಬಣ್ಣಿಸಿ ಜನರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಪದೇ ಪದೇ ಕೊರಗಜ್ಜ ಮತ್ತು ಕೊರಗ ಸಮುದಾಯವನ್ನು ಅಪಮಾನ ಮಾಡಲಾಗುತ್ತಿದೆ ಎಂದು ಕೊರಗ ಸಮುದಾಯದ ಮುಖಂಡ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲಾ ಸಂಚಾಲಕರಾದ ಶ್ರೀಧರ ನಾಡ ಬೇಸರ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, “ಕರಾವಳಿ ಜಿಲ್ಲೆಗಳ ಮೂಲನಿವಾಸಿಗಳಾದ ಕೊರಗ ಸಮುದಾಯ ಮತ್ತು ನಮ್ಮ ಗುರಿಕಾರ ಕೊರಗ ತನಿಯನ ಮೇಲೆ ಇತ್ತೀಚೆಗೆ ಪ್ರೀತಿ, ಅಭಿಮಾನ ಉಕ್ಕಿಹರಿದಂತೆ ಕಾಣುತ್ತಿದೆ. ಕೊರಗ ಸಮುದಾಯದ ನಾವು ಹೇಳುತ್ತೇವೆ- ಕೊರಗ ತನಿಯ ದೇವರು ಅಲ್ಲಾ, ದೈವವು ಅಲ್ಲಾ, ನಮ್ಮ ಸಮುದಾಯದ ಒಬ್ಬ ಗುರಿಕಾರ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಿಮ್ಮ ಮಡಿವಂತಿಕೆಯ ಮೋಸ ಕುತಂತ್ರಕ್ಕೆ ಬಲ್ಲಿಯಾದ ಕೊರಗ ತನಿಯನು ಸಾಮಾಜಿಕ ನ್ಯಾಯದ ಪ್ರತೀಕ. ಹುಭಾಶಿಕನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ ಮೋಸದಿಂದ ಸಾಯಿಸಿ ಇಡೀ ಸಮುದಾಯವನ್ನು ನಿರ್ಗತಿಕ ಪರಿಸ್ಥಿತಿಗೆ ದೂಡಿದಿರಿ. ಹಾಗೆಯೇ ಕೊರಗ ತನಿಯನ ಬದುಕು ಸಹ ದುರಂತ ಕಥೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಒಂದು ಪಾಡ್ದಾನದ ಪ್ರಕಾರ ಮೈರಕ್ಕನ ಆಶ್ರಮದಲ್ಲಿ ಬೆಳೆದ ತನಿಯ ದೊಡ್ಡವನಾದ ಬಳಿಕ ಎಣಸೂರು ಬಾಳಿಕೆಯ ರಾಜ ದೈವಗಳ ನೇಮಕ್ಕೆ ತೆಂಗಿನ ಎಳೆ ಗರಿ, ಸೀಯಾಳ, ಬಾಳೆದಿಂಡು, ಸಿಂಗಾರ ಇತ್ಯಾದಿ ಹೊರೆಯನ್ನು ಹೊರಲು ಏಳು ಮಂದಿ ಕೆಲಸದವರು ಬರದೆ ಇದ್ದಾಗ ತನಿಯ ಒಬ್ಬನೇ ತಂದು ಕೊಡುತ್ತಾನೆ. ಆದರೆ ಕಾಡು ಕೊರಗ ಎನ್ನುವ ಕಾರಣಕ್ಕೆ ಅವನನ್ನು ದೇವಸ್ಥಾನದ ಒಳಗೆ ಬರಲು ನಿರಾಕರಿಸಲಾಗಿದೆ. ಇದನ್ನು ತನಿಯ ಪ್ರತಿಭಟಿಸುತ್ತಾನೆ. ತಾನು ತಂದ ವಸ್ತುಗಳು ಆಗುತ್ತದೆ, ಆದರೆ ನಾನು ಆಗುವುದಿಲ್ಲವೆ ಎಂದು ಪ್ರಶ್ನಿಸುತ್ತಾನೆ. ಅಲ್ಲೇ ಪಕ್ಕದಲ್ಲಿ ಇರುವ ಮರದಿಂದ ತನ್ನ ಹೆಂಡತಿಗೆ ಮಾಪಲ ಹಣ್ಣು ಕೊಯ್ದು ತರುತ್ತಾನೆ. ಆಗ ಅಲ್ಲಿನ ಮೈಸಂದಾ ಮತ್ತು ಕೊಡಂಗೆನಾರ್ ದೈವಗಳ ಕೆಂಗಣ್ಣಿಗೆ ಗುರಿಯಾಗಿ ಮಾಯವಾದನು. ಈಗಲೂ ಆ ದೈವಗಳು ಶ್ರೇಣೀಕಣದಲ್ಲಿ ಕೊರಗ ತನಿಯನಿಗಿಂತ ಮೇಲಿವೆ ಎಂಬುದನ್ನು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.

ಇನ್ನೊಂದು ಪಾಡ್ದಾನದಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ಇರುವ ಮಾಫಲ ಹುಳಿ ಕೊಯ್ಯಲು ಹೋಗುವಾಗ ಆತನನ್ನು ಬ್ರಾಹ್ಮಣರು ಕಡಿದು ಕೊಲ್ಲುತ್ತಾರೆ. ಕೊರಗ ತನಿಯ ಯಾವತ್ತೂ ಹಿಂದೂ ಧರ್ಮದ ಸಂಕೇತವಲ್ಲ. ಆತ ಕರಾವಳಿ ಜಿಲ್ಲೆಗಳ ಕೊರಗ ಸಮುದಾಯ ಮತ್ತು ಆದಿಮ ಸಂಸ್ಕೃತಿಯ ಪ್ರತೀಕ. ಕೊರಗ ತನಿಯನ ಕುರಿತು ಮಾತನಾಡುವ ಮೊದಲು ನಿಮ್ಮವರು ಹಾಗೂ ನೀವು ಮಾಡಿದ, ಮಾಡುತ್ತಿರುವ ಮಹಾ ಮೋಸಗಳ ಬಗ್ಗೆ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಹಿಂದೂ ಇರಲಿ ಮುಸ್ಲಿಂ ಇರಲಿ ಮದುವೆ, ಜಾತ್ರೆ, ತಂಬಿಲದಲ್ಲಿ ನಮ್ಮ ಗುರಿಕಾರ ಕೊರಗ ತನಿಯನ ವೇಷ ಹಾಕಲು ನಿಮಗೆ ಒಪ್ಪಿಗೆ ಕೊಟ್ಟವರು ಯಾರು? ಕೊರಗರ ವೇಷದಲ್ಲಿ ಕೊರಗ ಸಮುದಾಯದ ಘನತೆ ಗೌರವದ ಬದುಕಿಗೆ ಅವಮಾನ ಮಾಡಿ ಪದ ಪ್ರಯೋಗ ಮಾಡುವುದು ಎಷ್ಟು ಸರಿ? ಯಕ್ಷಗಾನದಲ್ಲಿ ಬ್ರಾಹ್ಮಣ ವೇಷ, ಮುಸ್ಲಿಂ ವೇಷ ಹಾಕಿದಕ್ಕೆ ತಾವೇಲ್ಲರೂ ಬಹಳ ಪ್ರತಿಕ್ರಿಯೆ ನೀಡುವವರು, ವಿರೋಧಿಸುವವರು, ಕೊರಗರ ವೇಷ ಹಾಕಿ ನಮ್ಮನ್ನು ಹೀಯಾಳಿಸುವಿರಲ್ಲ ಆಗ ನಿಮ್ಮ ಹಿಂದೂ ಧರ್ಮದಲ್ಲಿ ಮತ್ತು ಈ ಪ್ರಜಾಪ್ರಭುತ್ವದ ನ್ಯಾಯಯುತ ಸಮಾಜದಲ್ಲಿ ಕೊರಗರು ಇರುವುದಿಲ್ಲವೇ? ಎಂದು ಶ್ರೀಧರ್‌ ನಾಡಾ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಇಡೀ ಕೊರಗ ಸಮುದಾಯದ ಅಸ್ತಿತ್ವವನ್ನು ಬುಡಮೇಲು ಮಾಡಿದವರು ಕೊರಗ ತನಿಯನ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ವಿನಾಶದಂಚಿಗೆ ಬಂದಿರುವ ಕೊರಗ ಸಮುದಾಯದ ಉಳಿಯುವಿಗೆ ನಿಮ್ಮ ಕೊಡುಗೆ ಏನು ತಿಳಿಸಿ. ಕೊರಗ ತನಿಯ ಮತ್ತು ಕೊರಗ ಸಮುದಾಯವನ್ನು ರಾಜಕೀಯಕ್ಕೆ ಬಳಸಿ ಅಪಮಾನ ಮಾಡಿರುವುದನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಖಂಡಿಸುತ್ತದೆ. ಹಾಗೆ ಎಲ್ಲರೂ ಸಾಲೆತ್ತೂರಿನ ಕೊರಗಜ್ಜ ವೇಷದ ವಿವಾದಕ್ಕೆ ಸಂಬಂಧಿಸಿದಂತೆ ದ್ವೇಷ ಹರಡಲು ಮಾಡಿರುವ ಹುನ್ನಾರಗಳನ್ನು ವಿಫಲಗೊಳಿಸಿ ಶಾಂತಿ ಸೌಹಾರ್ದತೆ ಕಾಪಾಡಬೇಕು ಎಂದು ಅವರು ಕೋರಿದ್ದಾರೆ.


ಇದನ್ನೂ ಓದಿರಿ: ಕ್ಷಮೆ ಕೇಳಿದರೂ ಮುಗಿಯದ ಕೊರಗಜ್ಜ ಪ್ರಕರಣ: ಇಬ್ಬರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...