Homeಮುಖಪುಟದೆಹಲಿ: ಹಾಸ್ಯನಟ ಮುನಾವರ್ ಫಾರೂಕಿ ಕಾರ್ಯಕ್ರಮ ರದ್ದುಗೊಳಿಸಲು ಪೊಲೀಸರಿಗೆ ಪತ್ರ ಬರೆದ BJP ಬೆಂಬಲಿತ ಸಂಘಟನೆ

ದೆಹಲಿ: ಹಾಸ್ಯನಟ ಮುನಾವರ್ ಫಾರೂಕಿ ಕಾರ್ಯಕ್ರಮ ರದ್ದುಗೊಳಿಸಲು ಪೊಲೀಸರಿಗೆ ಪತ್ರ ಬರೆದ BJP ಬೆಂಬಲಿತ ಸಂಘಟನೆ

- Advertisement -
- Advertisement -

ಆಗಸ್ಟ್ 28 ರಂದು ದೆಹಲಿಯಲ್ಲಿ ನಡೆಯಲಿದ್ದ ಹಾಸ್ಯನಟ ಮುನಾವರ್ ಫಾರೂಕಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಬಿಜೆಪಿ ಬೆಂಬಲಿತ ಸಂಘಟನೆ ವಿಹೆಚ್‌ಪಿ ಗುರುವಾರ ದೆಹಲಿ ಪೊಲೀಸರಿಗೆ ಪತ್ರ ಬರೆದಿದೆ ಎಂದು ಎಎನ್‌ಐ ವರದಿ ಮಾಡಿದೆ. ಪೊಲೀಸರು ಕಾರ್ಯಕ್ರಮವನ್ನು ರದ್ದುಪಡಿಸಲು ವಿಫಲವಾದರೆ ಬಿಜೆಪಿ ಬೆಂಬಲಿತ ಮತ್ತೊಂದು ಸಂಘಟನೆಯಾದ ಬಜರಂಗದಳದೊಂದಿಗೆ ಪ್ರತಿಭಟನೆ ನಡೆಸುವುದಾಗಿ ಸಂಘಟನೆಯು ಎಚ್ಚರಿಕೆ ನೀಡಿದೆ.

ವಿಹೆಚ್‌ಪಿ ದೆಹಲಿ ಅಧ್ಯಕ್ಷ ಸುರೇಂದ್ರ ಕುಮಾರ್ ಗುಪ್ತಾ ಅವರ ಸಹಿ ಇರುವ ಪತ್ರದಲ್ಲಿ “ಈ ವ್ಯಕ್ತಿಯು ತನ್ನ ಪ್ರದರ್ಶನದಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಅಪಹಾಸ್ಯ ಮಾಡುತ್ತಾನೆ. ಇದರ ಪರಿಣಾಮವಾಗಿ ಹೈದರಾಬಾದ್‌ ಕೋಮು ಉದ್ವಿಗ್ನತೆಗೊಂಡಿತ್ತು” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದೀಗ ಅಮಾನತುಗೊಂಡಿರುವ ಬಿಜೆಪಿ ನಾಯಕ ಟಿ.ರಾಜಾ ಸಿಂಗ್ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಪಕ್ಷದ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರು ನೀಡಿದ್ದ ಅವಹೇಳನಕಾರಿ ಹೇಳಿಕೆಗಳನ್ನೆ ಪುನರಾವರ್ತಿಸಿ ಆ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ನಂತರ ಹೈದರಾಬಾದ್‌ನಲ್ಲಿ ಸೋಮವಾರದಂದು ದೊಡ್ಡ ಪ್ರಮಾಣದ ಪ್ರತಿಭಟನೆಗಳು ಭುಗಿಲೆದ್ದವು.

ಇದನ್ನೂ ಓದಿ: ಹೈದರಾಬಾದ್‌: ಮುನಾವರ್‌ ಫಾರೂಖಿ ಕಾರ್ಯಕ್ರಮ ನಡೆಯದಂತೆ ನೋಡಿಕೊಳ್ಳಲು ಕಾರ್ಯಕರ್ತರಿಗೆ ಬಿಜೆಪಿ ಕರೆ

ಗುರುವಾರ ಬಂಧನಕ್ಕೊಳಗಾದ ರಾಜಾ ಸಿಂಗ್, ಆಗಸ್ಟ್ 20 ರಂದು ಹೈದರಾಬಾದ್‌ನಲ್ಲಿ ನಡೆದ ಮುನಾವರ್ ಫಾರೂಕಿ ಅವರ ಕಾರ್ಯಕ್ರಮಕ್ಕೆ ಪ್ರತಿಕ್ರಿಯೆಯಾಗಿ ಹಾಸ್ಯ ವೀಡಿಯೊವನ್ನು ಪೋಸ್ಟ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಆಗಸ್ಟ್ 19 ರಂದು, ಶ್ರೀ ರಾಮಸೇನೆ ಎಂಬ ಬಲಪಂಥೀಯ ಸಂಘಟನೆಯು ಹಾಸ್ಯನಟ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ದೂರು ದಾಖಲಿಸಿದ ನಂತರ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮುನಾವರ್ ಫಾರೂಕಿ ಅವರ ಪ್ರದರ್ಶನವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಯಿತು.

ಇದನ್ನೂ ಓದಿ: ವೈಯಕ್ತಿಕ ದ್ವೇಷದ ಪ್ರಕರಣಕ್ಕೆ ಕೋಮು ಆಯಾಮ ನೀಡಿ ‘ಮುಸ್ಲಿಂ ದ್ವೇಷ’ ಹರಡಿದ ದಿಗ್ವಿಜಯ & ಪಬ್ಲಿಕ್ ಟಿವಿ

ಆಯೋಜಕರು ಅನುಮತಿ ಕೇಳದ ಕಾರಣ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.

ಗುರುವಾರದಂದು ವಿಹೆಚ್‌ಪಿ ವಕ್ತಾರ ವಿನೋದ್ ಬನ್ಸಾಲ್ ಅವರು ದೆಹಲಿಯಲ್ಲಿ ಮುನಾವರ್ ಫಾರೂಕಿ ಅವರ ‘ಹಿಂದೂ ವಿರೋಧಿ’ ಪ್ರದರ್ಶನವು ಕೋಮು ಉದ್ವಿಗ್ನತೆಯನ್ನು ಉಂಟುಮಾಡುತ್ತದೆ ಎಂದು ಆರೋಪಿಸಿದ್ದಾರೆ. “ನಾವು ನಗರದಲ್ಲಿ ಶಾಂತಿಯನ್ನು ಬಯಸುತ್ತೇವೆ. ಅವರು ನಮ್ಮ ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡುವುದು ನಮಗೆ ಇಷ್ಟವಿಲ್ಲ” ಎಂದು ತಿಳಿಸಿದ್ದಾರೆ.

ಈ ಮಧ್ಯೆ ಕಾರ್ಯಕ್ರಮದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪ್ರದರ್ಶನವನ್ನು ರದ್ದುಪಡಿಸುವ ಬಗ್ಗೆಗಿನ ಯಾವುದೆ ಸೂಚನೆ ನಮಗೆ ತಿಳಿದಿಲ್ಲ ಎಂದು ಮುನಾವರ್ ಫಾರೂಕಿ ಅವರ ತಂಡವು ಹೇಳಿದೆ.

ಕಳೆದ ವರ್ಷದಲ್ಲಿ, ಬೆಂಗಳೂರು, ಗುರುಗ್ರಾಮ್, ರಾಯ್‌ಪುರ, ಸೂರತ್, ಅಹಮದಾಬಾದ್, ವಡೋದರಾ, ಗೋವಾ ಮತ್ತು ಮುಂಬೈನಲ್ಲಿ ಫಾರುಕಿ ಅವರ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿತ್ತು.

ಇದನ್ನೂ ಓದಿ: ಬಿಜೆಪಿ ಆಗ್ರಹದ ಬಳಿಕ ಮುನಾವರ್‌ ಫಾರೂಖಿಯ ಮತ್ತೊಂದು ಕಾರ್ಯಕ್ರಮ ರದ್ದು

ಕಳೆದ ವರ್ಷ ಜನವರಿಯಲ್ಲಿ, ಬಿಜೆಪಿ ನಾಯಕರೊಬ್ಬರ ಮಗ ಮುನಾವರ್ ಫಾರೂಕಿ ಅವರು ಕಾರ್ಯಕ್ರಮದಲ್ಲಿ ಹಿಂದೂ ದೇವರನ್ನು ಅವಹೇಳನ ‘ಮಾಡಲಿದ್ದಾರೆ’ ಎಂದು ದೂರು ನೀಡಿದ್ದರಿಂದ ಇಂದೋರ್‌ನ‌ಲ್ಲಿ ಅವರನ್ನು ಬಂಧಿಸಲಾಗಿತ್ತು. ದೂರಿನಲ್ಲಿ, ಮುನಾವರ್ ಫಾರೂಕಿ ತನ್ನ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ‘ನೀಡಲಿದ್ದಾರೆ’ ಎಂದು ಆರೋಪಿಸಿದ್ದರು. ಅವರ ಬಂಧನವಾಗಿ 37 ದಿನಗಳ ನಂತರ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...