Homeಎಕಾನಮಿ'ಭಾರತದ ಆರ್ಥಿಕ ಸ್ಥಿತಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ': ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ

‘ಭಾರತದ ಆರ್ಥಿಕ ಸ್ಥಿತಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ’: ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ

- Advertisement -
- Advertisement -

ಭಾರತದ ಆರ್ಥಿಕ ಪರಿಸ್ಥಿತಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ ಎಂಬುದು ಅರ್ಥಶಾಸ್ತ್ರಜ್ಞ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವ ಭಾರತೀಯ ಮೂಲದ ಅಮೆರಿಕ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಯವರು ಹೊರಹಾಕಿರುವ ಆತಂಕ.

ಅಕ್ಟೋಬರ್ 9ರಂದು ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಭಾರತದ ಆರ್ಥಿಕತೆ ಕುಸಿತ ಅಪಾಯದ ಮಟ್ಟ ತಲುಪಿದೆ. ಅಲ್ಲದೇ ಸರಕು ಮತ್ತು ಸೇವಾ ತೆರಿಗೆ, ನೋಟು ಅಮಾನ್ಯೀಕರಣ ನೀತಿಗಳು ಹೆಚ್ಚು ಸಮಸ್ಯೆ ತಂದೊಡ್ಡಿವೆ. ಬೇಡಿಕೆಯ ಮಟ್ಟ ಕುಸಿದಿದೆ. ನನ್ನ ಸಹವರ್ತಿಗಳೊಂದಿಗೆ ಹೂಡಿಕೆ ಬಗ್ಗೆ ಮಾತನಾಡಿದಾಗ ಹೂಡಿಕೆ ಮಾಡುವುದು ಅಸಾಧ್ಯ. ಇದರಿಂದ ಸಾಕಷ್ಟು ತೊಂದರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು ಎಂದು ಹೇಳಿದ್ದಾರೆ.

ಯಾರೂ ಸಹ ಹೆಚ್ಚು ದಿನಗಳವರೆಗೆ ಕಾಯುವುದಿಲ್ಲ. ಒಂದೇ ವಿಷಯಕ್ಕೆ ಅಂಟಿಕೊಂಡು ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಪಿಎಂಒ ಜತೆ ಮಾತನಾಡಿ ಎಲ್ಲವನ್ನೂ ಬಗೆಹರಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಇದರಿಂದ ಏನೂ ಆಗುವುದಿಲ್ಲ ಎಂದು ಅಭಿಜಿತ್ ಟೀಕಿಸಿದ್ದಾರೆ. ನಾಲ್ಕು ವರ್ಷಗಳಲ್ಲಿ ಸರಾಸರಿ ಬಳಕೆ ಕಡಿಮೆಯಾಗಿದೆ. ಹಣದುಬ್ಬರ ಸಮಸ್ಯೆ ಸರಿಪಡಿಸಿದ ನಂತರವೂ ಸಮಸ್ಯೆ ಕಡಿಮೆಯಾಗಿಲ್ಲ. 70ರ ದಶಕಕ್ಕಿಂತಲೂ ಈ ಬಾರಿಯ ಆರ್ಥಿಕ ಕುಸಿತ ಹೆಚ್ಚು ಗಂಭೀರವಾಗಿದೆ ಎಂದು ಟೀಕಿಸಿದ್ದಾರೆ.

ಇನ್ನು ಶೇ.75ರಷ್ಟು ಹೂಡಿಕೆಯ ಪ್ರಮಾಣ ಸಂಪೂರ್ಣವಾಗಿ ಕುಸಿದಿದೆ. ರಫ್ತು ಪ್ರಕ್ರಿಯೆಯಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಇದು ದೇಶಕ್ಕೆ ಆರ್ಥಿಕ ಬಿಕ್ಕಟ್ಟು ಎಂದು ಹೇಳಬಹುದು. ಆದರೆ ನಾವೇ ಬಿಕ್ಕಟ್ಟಿನಲ್ಲಿದ್ದೇವೆ. ಚಟುವಟಿಕೆಯಿಂದಿದ್ದ ಸಂಸ್ಥೆಗಳು ಈಗ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಪ್ರಮುಖವಾಗಿ 2016ರಲ್ಲಿ ನಡೆದ ನೋಟು ನಿಷೇಧ ಮತ್ತು ಜಿಎಸ್ ಟಿ ಅನುಷ್ಠಾನ ಆರ್ಥಿಕತೆಯ ಕುಸಿತಕ್ಕೆ ಕಾರಣ. ಇದರಿಂದ ಬೇಡಿಕೆ ಮತ್ತು ಹೂಡಿಕೆ ಸಮಸ್ಯೆ ಹೆಚ್ಚಿದೆ. ಹಣದುಬ್ಬರ ತಗ್ಗಿಸಲು ಸಾಕಷ್ಟು ಪ್ರಯತ್ನಿಸಲಾಗುತ್ತಿದೆಯಾದ್ರೂ ಇದು ಋಣಾತ್ಮಕ ಪರಿಣಾಮ ಬೀರುತ್ತಿದೆ. ಹೀಗಾಗಿಯೇ ಆರ್ ಬಿಐ ಮಾಜಿ ಗವರ್ನರ್ ಕೂಡ ಭಾರತದ ಆರ್ಥಿಕತೆಯ ಅಸ್ವಸ್ಥತೆಯ ಲಕ್ಷಣಗಳ ಬಗ್ಗೆ ಹೇಳಿದ್ದರು. ಭಾರತ ತನ್ನ ಆರ್ಥಿಕ ಮಾರ್ಗವನ್ನು ಕಳೆದುಕೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದರು ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...