Homeಚಳವಳಿಜೈಲಿನಲ್ಲಿ 10 ದಿನ ಉಪವಾಸ ಸತ್ಯಾಗ್ರಹ ಕೈಗೊಂಡ ಪ್ರೊ. ಜಿ.ಎನ್. ಸಾಯಿಬಾಬ!

ಜೈಲಿನಲ್ಲಿ 10 ದಿನ ಉಪವಾಸ ಸತ್ಯಾಗ್ರಹ ಕೈಗೊಂಡ ಪ್ರೊ. ಜಿ.ಎನ್. ಸಾಯಿಬಾಬ!

ಪುಸ್ತಕ, ಪತ್ರಿಕೆ ಮತ್ತು ಕಾಗದಗಳನ್ನು ನೀಡಬೇಕು ಎಂಬ ಬೇಡಿಕೆ ಈಡೇರಿದ ನಂತರ 10 ದಿನದಿಂದ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ.

- Advertisement -
- Advertisement -

ಭೀಮಾ ಕೊರೊಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಪಾಶ್ವವಾಯು ಪೀಡಿತರಾಗಿ ಗಾಲಿಕುರ್ಚಿಯಲ್ಲೇ ಇರುವ ಮಾನವ ಹಕ್ಕು ಹೋರಾಟಗಾರ ಪ್ರೊ. ಜಿ. ಎನ್. ಸಾಯಿಬಾಬ, ತನಗೆ ಪುಸ್ತಕ, ಪತ್ರಿಕೆ ಮತ್ತು ಕಾಗದಗಳನ್ನು ನೀಡಬೇಕು ಎಂದು 10 ದಿನದಿಂದ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಜೈಲಿನ ಅಧಿಕಾರಿಗಳು ಅವರ ಬೇಡಿಕೆಗೆ ಒಪ್ಪಿಗೆ ಸೂಚಿಸಿದ ನಂತರ ಕೊನೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ನವೆಂಬರ್‌ 6 ರಂದು ಅವರು “ಸಂಕ್ಷಿಪ್ತ ಕರೆ’’ ಮಾಡಿ ಈ ಬಗ್ಗೆ ತಿಳಿಸಿದ್ದು, ನಾನು ಅಘಾತಕ್ಕೊಳಗಾದೆ ಎಂದಿರುವ ಅವರ ಪತ್ನಿ ವಸಂತ ಕುಮಾರಿ, “ಅವರು 10 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆಂದು ನನಗೆ ತಿಳಿದಿರಲಿಲ್ಲ. ಸಾಮಾನ್ಯ ದಿನಗಳಲ್ಲಿಯೂ ಅವರ ಆರೋಗ್ಯ ಉತ್ತಮವಾಗಿರಲಿಲ್ಲ. ನಾನು ತುಂಬಾ ಆತಂಕಕ್ಕೊಳಗಾಗಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕ್ರಾಂತಿಕಾರಿ ರಾಜಕೀಯವನ್ನು ಜೀವನದ ಭಾಗವಾಗಿಸಿಕೊಂಡ ಡಾ.ಜಿ.ಎನ್. ಸಾಯಿಬಾಬಾ

ಕಳೆದ ತಿಂಗಳಷ್ಟೇ ಅವರೊಂದಿಗೆ ಉಪವಾಸ ಸತ್ಯಾಗ್ರಹ ಮಾಡಬಾರದು ಎಂದು ಮನವರಿಕೆ ಮಾಡಿದ್ದ ವಸಂತ ಕುಮಾರಿ, ತನಗೆ ಈ ಉಪವಾಸ ಸತ್ಯಾಗ್ರಹದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ. ಸಾಯಿಬಾಬ ಅವರು ಅಕ್ಟೋಬರ್‌ 28 ರಿಂದ ನವೆಂಬರ್‌ 6 ವರೆಗೆ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ ಎಂದು ಅವರೇ ಸ್ವತಃ ಹೇಳದ್ದಾಗಿ ವಸಂತ ಕುಮಾರಿ ಹೇಳಿದ್ದಾರೆ.

ಕೊರೊನಾ ನಿಯಮಗಳು ಜಾರಿಯಲ್ಲಿ ಇರುವುದರಿಂದ ಸಾಯಿಬಾಬಾ ಅವರನ್ನು ಭೇಟಿಯಾಗಲು ಅನುಮತಿಯಿಲ್ಲ, ಸುಧೀರ್ಘ ಉಪವಾಸ ಸತ್ಯಾಗ್ರಹದ ಕಾರಣದಿಂದ ಅವರು ಹೇಗಿದ್ದಾರೆಂದು ನನಗೆ ತಿಳಿಯುತ್ತಿಲ್ಲ ಎಂದು ವಸಂತ ಕುಮಾರಿ ಹೇಳಿದ್ದಾರೆ.

ತನ್ನ ಏಕೈಕ ಮಾಹಿತಿಯ ಮೂಲ ಮಾಧ್ಯಮವಾಗಿ ಸಾಯಿಬಾಬ ಅವರು ಅಪರೂಪದ ದೂರವಾಣಿ ಕರೆಯಾಗಿದೆ ಎನ್ನುವ ವಸಂತ ಕುಮಾರಿ, “ಪೊಲೀಸರು ಕೇವಲ ಇಂಗ್ಲಿಷ್‌‌ನಲ್ಲಿ ಮಾತ್ರ ಮಾತನಾಡಲು ಹೇಳುತ್ತಿದ್ದು, ನಮ್ಮ ಮಾತೃಭಾಷೆ ತೆಲುಗಿನಲ್ಲಿ ಆರಾಮವಾಗಿ ಮಾತನಾಡಲು ಅನುಮತಿಸುವುದಿಲ್ಲ. ಪತ್ರಗಳನ್ನು ಕೂಡಾ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಅನುಮತಿ ಇದೆ. ನನ್ನ ಇಂಗ್ಲಿಷ್ ಅಷ್ಟೇನೂ ಉತ್ತಮವಾಗಿಲ್ಲದ ಕಾರಣ ನಾನು ಹೇಳಬೇಕಿರುವುದನ್ನು ವ್ಯಕ್ತಪಡಿಸಲು ಹೆಣಗಾಡುತ್ತೇನೆ. ನಾನು ಎಂದಿಗೂ ವೈಯಕ್ತಿಕ ಭಾವನೆಗಳನ್ನು ಇಂಗ್ಲಿಷ್‌ನಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಔಷಧಿ, ಪುಸ್ತಕ, ಪತ್ರಗಳ ನಿರಾಕರಣೆ: ಜೈಲಿನಲ್ಲಿ ಉಪವಾಸ ಆರಂಭಿಸಲಿರುವ ಪ್ರೊ.ಜಿ.ಎನ್ ಸಾಯಿಬಾಬಾ

“ನಾನು ಆರೋಗ್ಯದ ಬಗ್ಗೆ ಕೇಳಲು ಮಾತ್ರ ಮಾತನಾಡುತ್ತೇನೆ. ಇತರ ಕೈದಿಗಳಿಗೆ ಅವರು ಮಾತೃಭಾಷೆಯಾಗಿದ್ದರೆ ಮರಾಠಿಯನ್ನು ಮಾತನಾಡಲು ಅನುಮತಿ ಇರುವತ್ತದೆ. ಆದರೆ ಸಾಯಿಬಾಬಾ ಮತ್ತು ನನಗೆ ಮಾತ್ರ ಅವರು ಈ ಭಾಷಾ ಸಮಸ್ಯೆಯನ್ನು ಸೃಷ್ಟಿಸುತ್ತಾರೆ. ಇದು ಯಾಕೆಂದು ನನಗೆ ತಿಳಿದಿಲ್ಲ. ಪೊಲೀಸರು ನಮ್ಮ ಎಲ್ಲಾ ಸಂಭಾಷಣೆಗಳನ್ನು ರೆಕಾರ್ಡ್ ಮಾಡುತ್ತಾರೆ ಮತ್ತು ನಮ್ಮ ಎಲ್ಲಾ ಅಕ್ಷರಗಳನ್ನು ಓದುತ್ತಾರೆ. ನಾವು ಯಾವುದನ್ನೂ ಮರೆಮಾಚುತ್ತಿಲ್ಲ. ಆದರೂ ಯಾಕೆ?” ಎಂದು ವಸಂತ ಕುಮಾರಿ ಪ್ರಶ್ನಿಸಿದ್ದಾರೆ.

ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 53 ವರ್ಷದ ಪ್ರಾಧ್ಯಾಪಕ, ದೆಹಲಿ ವಿಶ್ವವಿದ್ಯಾಲಯದ ರಾಮ್ ಲಾಲ್ ಆನಂದ್ ಕಾಲೇಜಿನಲ್ಲಿ ಇಂಗ್ಲಿಷ್ ಭೋಧಿಸುತ್ತಿದ್ದರು. 2014 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಅವರನ್ನು ಬಂಧಿಸಲಾಯಿತು.

ಡಾ. ಜಿ.ಎನ್. ಸಾಯಿಬಾಬ ಗಾಲಿಕುರ್ಚಿಯನ್ನು ಅವಲಂಭಿಸಿದ್ದು, 90% ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಅಲ್ಲದೆ ಅವರು ಕೊಮೊರ್ಬಿಡಿಟಿ( ಸಹ ಕಾಯಿಲೆ)ಗಳಿಂದ ಬಳಲುತ್ತಿದ್ದಾರೆ. ನಾಗ್ಪುರ ಜೈಲಿನಲ್ಲಿ ವೈಯಕ್ತಿಕ ಪತ್ರಗಳು, ಪುಸ್ತಕಗಳು ಮತ್ತು ಔಷಧಿಗಳನ್ನು ಸ್ವೀಕರಿಸಲು ಅವಕಾಶವಿಲ್ಲದಿದ್ದರೆ ಅಕ್ಟೋಬರ್ 21 ರಿಂದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಈ ಮಧ್ಯೆ, ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ತಿಳಿಯುತ್ತಿದ್ದಂತೆ ಮಾನವ ಹಕ್ಕುಗಳ ಸಮಿತಿ ಅವರ ರಕ್ಷಣೆ ಮತ್ತು ಬಿಡುಗಡೆಗಾಗಿ ಆಗ್ರಹಿಸಿ ಪತ್ರ ಬರೆದಿದೆ.


ಇದನ್ನೂ ಓದಿ: ಜೈಲಿನ ಬಾಗಿಲು ತೆರೆಯುತ್ತದೆ, ನೀವು ನಮ್ಮ ಬಳಿಗೆ ಹಿಂತಿರುಗುತ್ತೀರಿ: ಜೈಲಲ್ಲಿರುವ ಸ್ನೇಹಿತ ಸಾಯಿಬಾಬಾಗೆ ಅರುಂಧತಿ ರಾಯ್ ಬರೆದ ಭಾವನಾತ್ಮಕ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...