Homeಮುಖಪುಟಅಮೆರಿಕಾದಲ್ಲಿ ಮೋದಿಗೆ ಪ್ರಶ್ನೆ ಕೇಳಿದ ಪತ್ರಕರ್ತೆಗೆ ಟ್ವಿಟರ್‌ನಲ್ಲಿ ಹಿಂದುತ್ವವಾದಿಗಳಿಂದ ನಿಂದನೆ

ಅಮೆರಿಕಾದಲ್ಲಿ ಮೋದಿಗೆ ಪ್ರಶ್ನೆ ಕೇಳಿದ ಪತ್ರಕರ್ತೆಗೆ ಟ್ವಿಟರ್‌ನಲ್ಲಿ ಹಿಂದುತ್ವವಾದಿಗಳಿಂದ ನಿಂದನೆ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಸಂದರ್ಭದಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರ ತಾರತಮ್ಯದ ಕುರಿತು ವಾಲ್ ಸ್ಟ್ರೀಟ್ ಜರ್ನಲ್‌ನ ಶ್ವೇತಭವನದ ವರದಿಗಾರ್ತಿ ಸಬ್ರಿನಾ ಸಿದ್ದಿಕಿ ಅವರು ಪ್ರಶ್ನೆಯನ್ನು ಕೇಳಿದ್ದರು. ಆ ಬಳಿಕ ಅವರ ಮೇಲೆ ಹಿಂದುತ್ವದವಾದಿಗಳು ಟ್ವಿಟರ್‌ನಲ್ಲಿ ದಾಳಿ ನಡೆಸಿದ್ದಾರೆ.

ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವಿಯಾ ನೇತೃತ್ವದಲ್ಲಿ ಪತ್ರಕರ್ತೆ ಸಿದ್ದಿಕಿ ಅವರ ಮೇಲೆ ಆನ್‌ಲೈನ್ ದಾಳಿ ನಡೆಯುತ್ತಿದ್ದು, ”ಸಬ್ರಿನಾ ಸಿದ್ದಿಕಿ ಮುಸ್ಲಿಂ ಸಮುದಾಯದವಳಾಗಿದ್ದು, ಪಾಕಿಸ್ತಾನದೊಂದಿಗಿನ ಸಂಪರ್ಕವನ್ನು ಹೊಂದಿದ್ದಾಳೆ. ಅವರು ಟೂಲ್‌ಕಿಟ್ ಗ್ಯಾಂಗ್‌ನ ಭಾಗವಾಗಿದ್ದಾರೆ” ಎಂದು ಮಾಳವಿಯ ಟ್ವೀಟ್ ಮಾಡಿದ್ದಾರೆ.

ಸಬ್ರಿನಾ ಸಿದ್ದಿಕಿ ಮೋದಿಯವರನ್ನು ಕೇಳಿದ ಪ್ರಶ್ನೆ:

”ಭಾರತವು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ದೀರ್ಘಕಾಲ ಹೆಮ್ಮೆಪಡುತ್ತಿದೆ, ಆದರೆ ನಿಮ್ಮ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡಿದೆ ಮತ್ತು ಅದರ ಟೀಕಾಕಾರರನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳುವ ಅನೇಕ ಮಾನವ ಹಕ್ಕುಗಳ ಗುಂಪುಗಳಿವೆ. ನಿಮ್ಮ ದೇಶದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ಸುಧಾರಿಸಲು ಮತ್ತು ಎತ್ತಿಹಿಡಿಯಲು ನೀವು ಮತ್ತು ನಿಮ್ಮ ಸರ್ಕಾರವು ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದೀರಿ?” ಎಂದು ಪ್ರಶ್ನೆ ಮಾಡಿದ್ದಾರೆ.

ಭಾರತದಲ್ಲಿ ಮೋದಿಯವರು ಪ್ರಧಾನಿಯಾದ ಅವಧಿಯಲ್ಲಿ ಅಲ್ಪಸಂಖ್ಯಾತರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಆರೋಪ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ”ತಮ್ಮ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಭಾವಿಸಿರುವುದು ”ಆಶ್ಚರ್ಯ” ತಂದಿದೆ. ಪ್ರಜಾಪ್ರಭುತ್ವ ನಮ್ಮ ಆತ್ಮ. ಪ್ರಜಾಪ್ರಭುತ್ವ ನಮ್ಮ ರಕ್ತನಾಳಗಳಲ್ಲಿ ಹರಿಯುತ್ತದೆ. ನಾವು ಪ್ರಜಾಪ್ರಭುತ್ವವನ್ನು ಬದುಕುತ್ತೇವೆ… ನಮ್ಮ ಸರ್ಕಾರವು ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಅನುಸರಿಸುತ್ತಿದೆ… ನಮ್ಮಲ್ಲಿ ಜಾತಿ, ಧರ್ಮ, ಧರ್ಮ, ಲಿಂಗ ತಾರತಮ್ಯಕ್ಕೆ ಅವಕಾಶವಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಸರ್ಕಾರ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ ದೇಶ ವಿಭಜನೆಯಾಗಬಹುದು: ಬರಾಕ್ ಒಬಾಮಾ ಎಚ್ಚರಿಕೆ

ಪತ್ರಕತೆ ಮೋದಿ ಅವರಿಗೆ ಪ್ರಶ್ನೆ ಕೇಳಿದ ಬೆನ್ನಲ್ಲೇ ಬಿಜೆಪಿ ಪರ ಮತ್ತು ಹಿಂದುತ್ವವಾದಿಗಳು ಟ್ವಿಟರ್‌ನಲ್ಲಿ ಸಿದ್ದಿಕಿ ಅವರನ್ನು ‘ಪಾಕಿಸ್ತಾನಿ ಇಸ್ಲಾಮಿಸ್ಟ್’ ಎಂದು ಲೇಬಲ್ ಮಾಡಿದವು. ಈ ಪ್ರಶ್ನೆಯನ್ನು ಮೋದಿಯ ಮುಂದೆ ಕೇಳಲು ಆಕೆಗೆ ಉದ್ಯೋಗದಾತ ಅವಕಾಶ ನೀಡುವ ಪಿತೂರಿ ಎಂದಿದ್ದಾರೆ. ”ಅವಳು ಭಾರತದ ಮೇಲೆ ಮಾತ್ರ ದಾಳಿ ಮಾಡುತ್ತಾಳೆ. ದ್ವೇಷವು ಪಾಕಿಸ್ತಾನಿಗಳ ಡಿಎನ್‌ಎಯಲ್ಲಿದೆ” ಎಂದು ಟ್ವೀಟ್ ಮಾಡಿದ್ದಾರೆ.

OpIndiaದಂತಹ ಬಿಜೆಪಿ ಪರ ವೆಬ್‌ಸೈಟ್‌ಗಳು ಆಕೆ ”ಪಾಕಿಸ್ತಾನಿ ಪೋಷಕರ” ಮಗಳು ಮತ್ತು ”ಇಸ್ಲಾಮಿಸ್ಟ್‌ಗಳ ಹಕ್ಕುಗಳನ್ನು ಪ್ರತಿಧ್ವನಿಸುತ್ತಿದ್ದಾರೆ” ಎಂಬ ವರದಿಯನ್ನು ಪ್ರಕಟಿಸುವ ಮೂಲಕ ಒಂದು ಹೆಜ್ಜೆ ಮುಂದಿಟ್ಟಿವೆ.

”ಭಾರತದಲ್ಲಿ ಮುಸ್ಲಿಮರ ಮೇಲಿನ ಕಿರುಕುಳವನ್ನು ಆರೋಪಿಸಿದ ಪತ್ರಕರ್ತೆ ಸಬ್ರಿನಾ ಸಿದ್ದಿಕ್ ಬೇರೆ ಯಾರೂ ಅಲ್ಲ … ಪಾಕಿಸ್ತಾನಿ ಪೋಷಕರ ಮಗಳು” ಎಂದು ಟ್ವೀಟ್ ಮಾಡಿದ್ದಾರೆ.

ತನ್ನನ್ನು ‘ಭಾರತ ವಿರೋಧಿ’ ಎಂದು ಕರೆಯುವ ಆನ್‌ಲೈನ್ ದಾಳಿಗೆ ಸಿದ್ದಿಕಿ ಪ್ರತ್ಯತ್ತರವಾಗಿ ಟ್ವೀಟ್ ಮಾಡಿದ್ದಾರೆ. ಭಾರತ ಮೂಲದ ತನ್ನ ತಂದೆಯೊಂದಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಹುರಿದುಂಬಿಸುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ”ಕೆಲವರು ನನ್ನ ವೈಯಕ್ತಿಕ ಹಿನ್ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಹಾಗಾಗಿ ಸಂಪೂರ್ಣ ಚಿತ್ರವನ್ನು ಒದಗಿಸುವುದು ಸರಿ ಎನಿಸುತ್ತದೆ” ಎಂದು ಅವರು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read