ಕೊರೊನಾ ವೈರಸ್ ಹಾವಳಿ ಮುಂದುವರೆದಿದ್ದು, ಇಲ್ಲಿಯವರೆಗೆ ಹತ್ತು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿ ಲಾಕ್‌ಡೌನ್‌ ಅನಿವಾರ್ಯವಾದರೂ ಅದನ್ನು ಹೇರಿದ ರೀತಿಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಮೋದಿಯವರು ಚಪ್ಪಾಳೆ ತಟ್ಟಲು, ದೀಪ ಹಚ್ಚಲು ಮೂರು ದಿನ ಸಮಯ ಕೊಟುತ್ತಾರೆ, ಆದರೆ ಲಾಕ್‌ಡೌನ್‌ಗೆ ಕೊಟ್ಟಿದ್ದು ಕೇವಲ 4 ಗಂಟೆ ಎಂಬ ಅಸಮಾಧಾನ ಭುಗಿಲೆದ್ದಿದೆ.

ಈ ಹಿನ್ನೆಲೆಯಲ್ಲಿ ಮೋದಿಯವರ ಲಾಕ್‌ಡೌನ್‌ ಕುರಿತು 10 ವರ್ಷದ ಶಾಲಾ ಬಾಲಕ ಕಬೀರ್‌ ಬರೆದ ಪತ್ರವೊಂದು ಗಮನಸೆಳೆಯುವಂತಿದೆ. ಪತ್ರ ಓದಿ

ನಮಸ್ಕಾರ,
ನಾನು ಕಬೀರ್ ಎಸ್ ಸಿರಸಂಗಿ.

ನಾನು ಇಂದು ಮೋದಿಯವರು ಕೊರೊನಾ ವಿರುದ್ಧ ಕೈಗೊಂಡಿರುವ ಕಾರ್ಯಾಚರಣೆಯ ಬಗ್ಗೆ ಮಾತನಾಡುತ್ತಿದ್ದೇನೆ.

ಮೋದಿಯವರು ಯಾವುದೇ ಆಲೋಚನೆಯೂ ಇಲ್ಲದೆ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದ್ದಾರೆ. ಅವರು ಇದೂವರೆಗೂ ಮುಂದಾಲೋಚನೆ ಇಲ್ಲದೆ ಮಾಡಿರುವ ನೋಟು ಅಮಾನ್ಯೀಕರಣ, ಸಿಎಎ, ಎನ್ಆರ್‌ಸಿ, ಎನ್‌ಪಿಆರ್ ನಂತಹ ನಿರ್ಧಾರಗಳಲ್ಲಿ ಇದೂ ಒಂದು. ನಾವು ಅವರ ನಿರ್ಧಾರಗಳನ್ನು ನೋಡಿದರೆ ತಿಳಿಯುತ್ತದೆ ಅದರಲ್ಲಿ ಯಾವುದೇ ಆಲೋಚನೆ ಇಲ್ಲವೆಂದು. ಆದರೆ ಅವೆಲ್ಲವೂ ಭಾರತೀಯ ಜನರಿಗೆ ತೊಂದರೆಯನ್ನು ಉಂಟುಮಾಡುತ್ತಿವೆ.

21 ದಿನಗಳ ಲಾಕ್‌ಡೌನ್‌ ಮಾಡಿರುವುದು ತಪ್ಪಾದುದಲ್ಲ. ಹಾಗಂತ ಇದು ಸರಿಯಾದದ್ದೂ ಅಲ್ಲ. ಇದರ ಒಳ್ಳೆಯ ಭಾಗವೆಂದರೆ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವುದು. ಆದರೆ ಇದರಲ್ಲಿ ತಪ್ಪಾಗಿದ್ದು, ದೇಶದ ಹಲವಾರು ಜನರು ಬಡವರಿದ್ದಾರೆ. ಈಗ ಮಾರುಕಟ್ಟೆ ಮುಚ್ಚಿದ್ದು, ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ಹಲವರು ಮನೆಯಿಲ್ಲದೆ, ಹಣವಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆ ಉಳಿಯಲು ಜಾಗವೂ ಇಲ್ಲ – ತಿನ್ನಲು ಆಹಾರವೂ ಇಲ್ಲದಂತಾಗಿದೆ. ಮೋದಿಯವರು ಇಂತಹ ಜನರು ಅವರವರ ಹಳ್ಳಿಗಳನ್ನು ಸೇರಲು ಅಥವಾ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕಾಲಾವಕಾಶವನ್ನು ನೀಡಬೇಕಾಗಿತ್ತು. ಹಾಗಾಗದೇ ಅವರೆಲ್ಲರೂ ಪರಿತಪಿಸುತ್ತಿದ್ದಾರೆ.

ಕಬೀರ್ ಎಸ್ ಸಿರಸಂಗಿ

ಮೋದಿಯವರ ತಪ್ಪು ನಿರ್ಧಾರದಿಂದಾಗಿ ನಾನು ನಮ್ಮ ಪೋಷಕರನ್ನು ಸೇರಲು ಸಾಧ್ಯವಾಗಿಲ್ಲ. 21 ದಿನಗಳ ಕಾಲ ನಾನು ಅವರಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇದು ನನ್ನೊಬ್ಬನ ಸಮಸ್ಯೆಯಷ್ಟೇ ಅಲ್ಲ. ನನ್ನಂತಹ ಹಲವು ಮಕ್ಕಳ ಸ್ಥಿತಿಯೂ ಹೀಗೆ ಆಗಿದೆ. ನಾವೆಲ್ಲರೂ ಇದನ್ನು ನಿಲ್ಲಿಸಬೇಕು ಮತ್ತು ಬದಲಾಯಿಸಬೇಕು.

1 COMMENT

LEAVE A REPLY

Please enter your comment!
Please enter your name here