Homeಮುಖಪುಟಮೈಸೂರು ಬೆಂಗಳೂರು ದಶಪಥ ರಸ್ತೆ ಕಾಮಗಾರಿಯಲ್ಲಿ ಲೋಪದೋಷ ಕಂಡುಬಂದಿದೆ: ಬಸವರಾಜ ಬೊಮ್ಮಾಯಿ

ಮೈಸೂರು ಬೆಂಗಳೂರು ದಶಪಥ ರಸ್ತೆ ಕಾಮಗಾರಿಯಲ್ಲಿ ಲೋಪದೋಷ ಕಂಡುಬಂದಿದೆ: ಬಸವರಾಜ ಬೊಮ್ಮಾಯಿ

- Advertisement -
- Advertisement -

ಮೈಸೂರು ಬೆಂಗಳೂರು ದಶಪಥ ರಸ್ತೆ ಕಾಮಗಾರಿಯಲ್ಲಿ ಲೋಪದೋಷ ಕಂಡುಬಂದಿದೆ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಒಪ್ಪಿಕೊಂಡಿದ್ದಾರೆ.

ಬಹು ನಿರೀಕ್ಷೆಯ ಈ ದಶಪಥ ರಸ್ತೆಯ ಕಾಮಗಾರಿಗಳು ಇನ್ನೂ ಮುಗಿದಿಲ್ಲ. ಕಳೆದ ವರ್ಷ ಸುರಿದ ಮಹಾಮಳೆಗೆ ಹಲವು ಕಡೆ ರಸ್ತೆಗಳು ಮುಳುಗಿ ಜನರು ಪರದಾಡುವಂತಾಗಿತ್ತು. ಇಂತಹ ಸಂದರ್ಭದಲ್ಲಿ ಈ ರಸ್ತೆಗಳು ಮುಕ್ತ ಸಾರ್ವಜನಿಕ ಬಳಕೆಗೆ ಬರಲು ಇನ್ನಷ್ಟು ಕಾಲಾವಕಾಶ ಬೇಕು ಎನ್ನಲಾಗಿದೆ.

ಇಂದು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿಯವರು, “ದಶಪಥ ರಸ್ತೆಯ ವೈಮಾನಿಕ ಸಮೀಕ್ಷೆಯಲ್ಲಿ ಲೋಪದೋಷಗಳು ಕಂಡುಬಂದಿರುವುದು ನಿಜ. ಅದನ್ನೆಲ್ಲ ಪರಿಶೀಲಿಸಿ ಕೆಲಸ ಸಂಪೂರ್ಣವಾದ ನಂತರವೇ ಲೋಕಾರ್ಪಣೆ ಮಾಡಲಾಗುವುದು” ಎಂದಿದ್ದಾರೆ.

“ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನೀತಿನ್ ಗಡ್ಕರಿ ಅವರೊಂದಿಗೆ ಇಂದು ಸಂಜೆ ಸಭೆ ಇದೆ. ಅಲ್ಲಿ ಚರ್ಚಿಸಿ, ಪರಿಸ್ಥಿತಿ ಪರಿಶೀಲಿಸಿ ‌ಮುಂದಿನ ತೀರ್ಮಾನಕ್ಕೆ ಬರಲಾಗುವುದು” ಎಂದು ತಿಳಿಸಿದ್ದಾರೆ.

ಈ ನಡುವೆ ಮೈಸೂರು ಬೆಂಗಳೂರು ದಶಪಥ ರಸ್ತೆ ಕಾಮಗಾರಿಯಲ್ಲಿ ಹಗರಣ ನಡೆದಿದ್ದು, ಕಳಪೆ ಗುಣಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿಯಲ್ಲಿ ಭೂಸ್ವಾಧೀನ ಮಾಡಿಕೊಳ್ಳುವ ವೇಳೆ ಯೋಜನಾ ನಿರ್ದೇಶಕರು 800 ಕೋಟಿ ರೂ ಹಗರಣ ನಡೆಸಿದ್ದು, ಈ ಕುರಿತು ಸಿಬಿಐ ತನಿಖೆ ಮಾಡಬೇಕೆಂದು ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್ ಒತ್ತಾಯಿಸಿದ್ದರು.

ಈ ಸಮಸ್ಯೆಗಳಿಗೆಲ್ಲ ಪ್ರಾಜೆಕ್ಟ್ ಡೈರೆಕ್ಟರ್ ಡಿ.ಬಿ ಶ್ರೀಧರ್ ನೇರ ಹೊಣೆಯಾಗಿದ್ದಾರೆ. ಅವರಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹರವರ ಬೆಂಬಲವಿದೆ. ಹಾಗಾಗಿ ಈ ಹಗರಣದ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂದು ಮನವಿ ಸಲ್ಲಿಸಲು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರನ್ನು ಭೇಟಿಯಾಗುತ್ತೇವೆ ಮತ್ತು ಪ್ರಧಾನಿಯವರ ಗಮನಕ್ಕೆ ತರುತ್ತೇವೆ ಎಂದಿದ್ದರು.

ಮುಗಿಯದ 6 ನಗರಗಳಿಗೆ ಪ್ರವೇಶ-ನಿರ್ಗಮನ ದ್ವಾರದ ಗೊಂದಲ

ಬೆಂಗಳೂರಿನ ನೈಸ್ ರಸ್ತೆಯ ನಂತರದಿಂದ ಆರಂಭವಾಗುವ ದಶಪಥ ರಸ್ತೆಯು ಮೈಸೂರಿನ ಮಣಿಪಾಲ್ ಆಸ್ಪತ್ರೆ ವೃತ್ತದವರೆಗೂ ಒಟ್ಟು 118 ಕಿ.ಮೀ ಸಾಗುತ್ತದೆ. ಆರು ಪಥ ಹೈವೇ ಇದ್ದರೆ ನಾಲ್ಕು ಪಥಗಳನ್ನು ಸರ್ವೀಸ್ ರಸ್ತೆಗೆ ಮೀಸಲಿಡಲಾಗಿದೆ. ಆದರೆ ಬೆಂಗಳೂರಿನಿಂದ ಮೈಸೂರಿನವರೆಗೆ ಹೈವೇಯಲ್ಲಿ ಸಿಗುವ 6 ನಗರಗಳಿಗೆ ಪ್ರವೇಶ-ನಿರ್ಗಮನ ದಾರಿಯ ಕಾಮಗಾರಿ ಗೊಂದಲದ ಗೂಡಾಗಿದೆ.

ಮೊದಲು ಹೆದ್ದಾರಿ ಪ್ರಾಧಿಕಾರವು 118 ಕಿ.ಮೀ ವ್ಯಾಪ್ತಿಯಲ್ಲಿ ಕೇವಲ 1 ಪ್ರವೇಶ ನಿರ್ಗಮನದ ದಾರಿಗೆ ಮಾತ್ರ ಅವಕಾಶ ನೀಡಿತ್ತು. ಆದರೆ ಜನರ ಒತ್ತಾಯದ ನಂತರ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣಗಳಿಗೆ ಪ್ರವೇಶ-ನಿರ್ಗಮನದ ದಾರಿ ಮಾಡಲು ಒಪ್ಪಿತ್ತು. ಅದಕ್ಕಾಗಿ ಹಣಕಾಸಿನ ಅಂದಾಜು ಸಹ ಮಾಡಿದೆ. ಆದರೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

ಇದನ್ನೂ ಓದಿ: ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿಯಲ್ಲಿ 800 ಕೋಟಿ ಹಗರಣ: ಮಾಗಡಿ ಶಾಸಕ ಎ.ಮಂಜುನಾಥ್ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read