ರಾಷ್ಟ್ರಪಿತ ಮೋಹನದಾಸ್ ಕರಮಚಂದ್ರ ಗಾಂಧಿ ಅವರ 150ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ದೇಶದ ಶಾಲೆ, ಕಾಲೇಜು, ಕಚೇರಿಗಳು ಸಿದ್ಧಗೊಂಡಿವೆ. ಅಹಿಂಸಾವಾದಿ, ಸ್ವಚ್ಛತಾ ಮಿಷನ್ ಹರಿಕಾರ, ಸ್ವದೇಶಿ ಚಳವಳಿಗಾರ, ಮಹಾತ್ಮ ಗಾಂಧೀಜಿಯವರಿಗೆ ಗೌರವ ಸಲ್ಲಿಸಲು ಸಜ್ಜುಗೊಂಡಿವೆ. ಗುಜರಾತ್ ನ ಪೋರಬಂದರ್ ನಲ್ಲಿ ಜನಿಸಿದ ಶಾಂತಿದಾತನ ಸ್ಮರಣೆಗೆ ರಾಜ್ಯ ಉತ್ಸುಕವಾಗಿದೆ.

ದೇಶದಾದ್ಯಂತ ಮಹಾತ್ಮನ ಜನ್ಮದಿನವನ್ನು ಸಡಗರ, ಸಂಭ್ರಮದಿಂದ ಆಚರಿಸಲು ರಾಜ್ಯ ಹಾಗೂ ಜಿಲ್ಲಾಡಳಿತಗಳು ತಯಾರಿ ಮಾಡಿಕೊಂಡಿವೆ. ಆದರೆ ಗುಜರಾತ್ ನಲ್ಲಿ ಬಾಪೂಜಿಯನ್ನು ಮಕ್ಕಳು ವಿಶೇಷವಾಗಿ ಸ್ಮರಿಸಲು ಸಿದ್ಧರಾಗಿದ್ದಾರೆ. ಅಹಮದಾಬಾದ್ ನ ಎಚ್.ಬಿ.ಕಪಾಡಿಯಾ ಶಾಲೆಯ ವಿದ್ಯಾರ್ಥಿಗಳು 150 ಶಬ್ದಗಳಲ್ಲಿ ಮಹಾತ್ಮನನ್ನು ಚಿತ್ರಿಸಿ ನುಡಿ ನಮನ ಸಲ್ಲಿಸಲು ಸಜ್ಜಾಗಿದ್ದಾರೆ.

ಸುಮಾರು 150 ಶಬ್ದಗಳನ್ನು ಬರೆಯುವ ಮೂಲಕ ಬಾಪೂಜಿ ಭಾವಚಿತ್ರ ರಚಿಸಿ, ವಿಶಿಷ್ಟತೆ ಮೆರೆದಿದ್ದಾರೆ. ಇನ್ನು ಶಾಲೆಯ 150 ವಿದ್ಯಾರ್ಥಿಗಳು ಬಿಳಿ ವಸ್ತ್ರ, ಕೈಯಲ್ಲಿ ಬಡಿಗೆ, ದಪ್ಪ ಕನ್ನಡಕ ಹಾಕಿ, ಗಾಂಧಿ ವೇಷ ತೊಟ್ಟು, 150ನೇ ಜಯಂತಿಯನ್ನು ಸ್ವಾಗತಿಸಿದ್ದಾರೆ. ಬಾಪೂಜಿಯವರ 150ನೇ ಜಯಂತಿ ಹಿನ್ನೆಲೆ ಮಕ್ಕಳು 150 ಶಬ್ದಗಳಲ್ಲಿ ಗಾಂಧೀಜಿ ಅವರನ್ನು ಚಿತ್ರಿಸಿ, #GandhiAt150 ಎಂದು ಬರೆದಿದ್ದಾರೆ.

LEAVE A REPLY

Please enter your comment!
Please enter your name here