Homeಮುಖಪುಟನೆಹರೂ ವಿಡಿಯೊ ಮರೆಮಾಚಿ ಕಾರ್ಯಕ್ರಮ ಪ್ರಸಾರ ಮಾಡಿದ ಆಜ್‌ತಖ್‌ ಸುದ್ದಿವಾಹಿನಿ!

ನೆಹರೂ ವಿಡಿಯೊ ಮರೆಮಾಚಿ ಕಾರ್ಯಕ್ರಮ ಪ್ರಸಾರ ಮಾಡಿದ ಆಜ್‌ತಖ್‌ ಸುದ್ದಿವಾಹಿನಿ!

- Advertisement -
- Advertisement -

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದಂತೆ ಹಿಂದಿ ಸುದ್ದಿವಾಹಿನಿ ‘ಆಜ್‌ತಖ್‌’ ರೂಪಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ನೆಹರೂ ವಿಡಿಯೊವನ್ನು ತಡೆಹಿಡಿದು (ಮುಚ್ಚಿಟ್ಟು) ಕಾರ್ಯಕ್ರಮ ಪ್ರಸಾರ ಮಾಡಿರುವುದು ಕಂಡುಬಂದಿದೆ.

“ಬಿಜೆಪಿ ನೆಹರೂ ಅವರಿಗೆ ಗೌರವವನ್ನು ಸಲ್ಲಿಸದಿರುವುದು ಏಕೆಂದು ಅರ್ಥ ಮಾಡಿಕೊಳ್ಳಬಹುದು. ಆದರೆ ಟಿ.ವಿ. ನ್ಯೂಸ್‌ ಚಾನೆಲ್‌ ಏಕೆ ಹೀಗೆ ಮಾಡುತ್ತಿವೆ?” ಎಂದು ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೈರ್‌ ಟ್ವೀಟ್ ಮಾಡಿದ್ದಾರೆ.

ಎರಡು ವಿಡಿಯೊ ತುಣುಕುಗಳನ್ನು ಹೋಲಿಕೆ ಮಾಡಿ ಅವರು ಮಾಡಿರುವ ಟ್ವೀಟ್ ಈಗ ಚರ್ಚೆಗೆ ಗ್ರಾಸವಾಗಿದೆ. ನೆಹರೂ ಅವರ ಕೊಡುಗೆಯನ್ನು ಬಿಜೆಪಿ ಮರೆಮಾಚುತ್ತಿರುವ ಹಿನ್ನೆಲೆಯಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಜನಾಕ್ರೋಶಕ್ಕೂ ಮೊದಲು ಹಾಗೂ ಆಕ್ರೋಶದ ನಂತರ ಆಜ್‌ತಖ್‌ ಪ್ರಸಾರ ಮಾಡಿರುವ ವಿಡಿಯೊವನ್ನು ಜುಬೈರ್‌ ಹೋಲಿಕೆ ಮಾಡಿದ್ದಾರೆ.

ಜನಾಕ್ರೋಶಕ್ಕೂ ಮೊದಲು ಪ್ರಸಾರ ಮಾಡಿರುವ ಕಾರ್ಯಕ್ರಮದಲ್ಲಿ ಎಲ್ಲೆಲ್ಲಿ ನೆಹರೂ ಅವರಿದ್ದಾರೋ ಆ ವಿಡಿಯೊಗಳನ್ನೆಲ್ಲ ಹೈಡ್ ಮಾಡಿ ಪ್ರಸಾರ ಮಾಡಲಾಗಿದೆ. ಜನಾಕ್ರೋಶ ಬಂದ ಬಳಿಕ ಪ್ರಸಾರ ಮಾಡಲಾದ ವಿಡಿಯೊದಲ್ಲಿ ಹೈಡ್ ಮಾಡದೆ ವಿಡಿಯೊ ಹಾಕಲಾಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರ ದಿನಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಪಂಡಿತ್ ಜವಹರಲಾಲ್‌ ನೆಹರೂ ಅವರ ಪರಿಚಯ ನೀಡದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬ್ರಿಟಿಷರಲ್ಲಿ ಹಲವು ಭಾರಿ ಕ್ಷಮಾಪಣೆಗಳನ್ನು ಕೇಳಿದ ವಿ.ಡಿ.ಸಾವರ್ಕರ್‌ ಫೋಟೋ ಜೊತೆಗೆ ವಿವರಣೆಗಳನ್ನು ನೀಡಲಾಗಿದೆ. ಆದರೆ ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ, ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಭಾರಿ ಜೈಲು ಸೇರಿದ್ದ ನೆಹರೂ ಅವರ ಕುರಿತು ಯಾವುದೇ ವಿವರಣೆಗಳು ಇಲ್ಲವಾಗಿವೆ.

ರಾಷ್ಟ್ರನಾಯಕರಾದ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಸ್‌, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಚಂದ್ರಶೇಖರ್‌ ಆಜಾದ್‌, ಲಾಲಾ ಲಜ್‌ಪತ್‌ ರಾಯ್‌, ಬಾಲ ಗಂಗಾಧರ್‌ ತಿಲಕ್‌, ಬಿಪಿನ್‌ ಚಂದ್ರ ಪಾಲ್‌, ಡಾ.ಬಿ.ಆರ್‌.ಅಂಬೇಡ್ಕರ್‌, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಲಾಲ್‌ ಬಹುದ್ದೂರ್‌ ಶಾಸ್ತ್ರಿ, ಮೌಲಾನ ಅಬ್ದುಲ್‌ ಕಲಾಂ ಆಜಾದ್‌ ಫೋಟೋಗಳ ಜೊತೆಗೆ ಕಿರುಪರಿಚಯವನ್ನು ನೀಡಲಾಗಿದೆ. ಹಾಗೆಯೇ ಸಾವರ್ಕರ್‌ ಫೋಟೋವನ್ನು ಹಾಕಿ, ‘ಕ್ರಾಂತಿಕಾರಿ’ ಎಂಬ ಬಿರುದನ್ನು ನೀಡಿ ಪರಿಚಯ ನೀಡಲಾಗಿದೆ.

ರೇಖಾ ಚಿತ್ರದ ರೀತಿಯಲ್ಲಿ ರಾಷ್ಟ್ರನಾಯಕರ ಚಿತ್ರಗಳನ್ನು ಬಳಸಲಾಗಿದ್ದು, ಅಲ್ಲಿ ಮಾತ್ರ ನೆಹರೂ ಅವರ ಚಿತ್ರವನ್ನು ಕಿರುದಾಗಿ ಬಳಸಲಾಗಿದೆ. ಸರ್ಕಾರದ ಸಣ್ಣತನವನ್ನು ಗಮನಿಸಿರುವ ನಾಡಿನ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರೂ ಫೋಟೋ- ಪರಿಚಯ ಕಿತ್ತೆಸೆದ ಬಿಜೆಪಿ ಸರ್ಕಾರ; ಜನಾಕ್ರೋಶ

ಹಿರಿಯ ಪತ್ರಕರ್ತ ಸನತ್‌ಕುಮಾರ್‌ ಬೆಳಗಲಿಯವರು ಪ್ರತಿಕ್ರಿಯಿಸಿ, “ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಧ್ಯಗಳಿಗೆ ನೀಡಿದ ಜಾಹೀರಾತಿನಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪಟ ಇಲ್ಲ. ಅಂದಿನ ಹೋರಾಟದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಸೆರೆಮನೆ ವಾಸ ಅನುಭವಿಸಿದ ಅಪಾರ ತ್ಯಾಗ ಮಾಡಿದ ನೆಹರೂ ಅವರನ್ನು ಕಡೆಗಣಿಸುವಷ್ಟು ಸಣ್ಣತನ ಒಳ್ಳೆಯದಲ್ಲ. ಬ್ರಿಟಿಷ್ ಸರಕಾರಕ್ಕೆ ಕ್ಷಮಾಪಣೆ ಕೇಳಿ ಜೈಲಿನಿಂದ ಹೊರಗೆ ಬಂದವರ ಪಟ ಹಾಕುವ ಸಿ.ಎಂ.ಬಸವರಾಜ ಬೊಮ್ಮಾಯಿಯವರೇ ನಿಮ್ಮ ಅಧಿಕಾರಾವಧಿಯಲ್ಲಿ ಇಂಥ ಅಪಚಾರ ನಡೆಯಬಾರದಿತ್ತು” ಎಂದಿದ್ದಾರೆ.

ಚಿಂತಕ ಶ್ರೀನಿವಾಸ್ ಕಾರ್ಕಳ ಅವರು, “ನೆಹರೂವನ್ನು ಕಡೆಗಣಿಸುವುದರಿಂದ, ಅವಮಾನಿಸುವುದರಿಂದ ನೆಹರೂಗೆ ಏನೂ ಆಗುವುದಿಲ್ಲ. ಅವರಿಗೆ ಅದು ತಿಳಿಯುವುದೂ ಇಲ್ಲ. ಅವರು ತಮ್ಮ ಕರ್ತವ್ಯ ನಿಭಾಯಿಸಿ, ಬದುಕು ಸಾರ್ಥಕಪಡಿಸಿ, ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ದಾಖಲಿಸಿ ಹೊರಟು ಹೋಗಿದ್ದಾರೆ. ಸಣ್ಣವರಾಗುವುದು ಬದುಕಿರುವ ನೀವು. ನೀವು ಹೆಸರಾಗುವುದು, ಇತಿಹಾಸದ ಪುಟಗಳಲ್ಲಿ ಉಳಿಯುವುದು ನಿಮ್ಮ ಸಣ್ಣತನಕ್ಕಾಗಿ” ಎಂದು ಟೀಕಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...