Homeಮುಖಪುಟಪಂಜಾಬ್‌ನಲ್ಲಿ ಅಭೂತಪೂರ್ವ ಜಯ ದಾಖಲಿಸಿದ ಆಪ್: ಕರ್ನಾಟಕದ ಮುಖಂಡರ ಪ್ರತಿಕ್ರಿಯೆ ಹೀಗಿದೆ...

ಪಂಜಾಬ್‌ನಲ್ಲಿ ಅಭೂತಪೂರ್ವ ಜಯ ದಾಖಲಿಸಿದ ಆಪ್: ಕರ್ನಾಟಕದ ಮುಖಂಡರ ಪ್ರತಿಕ್ರಿಯೆ ಹೀಗಿದೆ…

ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ ಚುನಾವಣೆಗಳೆ ನಮ್ಮ ಮುಂದಿನ ಗುರಿ ಎನ್ನುತ್ತಾರೆ ಆಪ್ ಮುಖಂಡರಾದ ದರ್ಶನ್ ಜೈನ್

- Advertisement -
- Advertisement -

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಜಯ ದಾಖಲಿಸಿದೆ. ಒಟ್ಟು 117 ಕ್ಷೇತ್ರಗಳಲ್ಲಿ 92 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಾರಮ್ಯ ಸಾಧಿಸಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಅಭ್ಯರ್ಥಿ ಭಗವಂತ್ ಮನ್ ಜೋಡಿಗೆ ಪಂಜಾಬ್ ಜನ ಕೆಂಪುಹಾಸು ಹಾಕಿ ಸ್ವಾಗತಿಸಿದ್ದಾರೆ. ದೆಹಲಿಯಂತೆಯೇ ಭಾರೀ ಬಹುಮತದೊಂದಿಗೆ ಪಂಜಾಬ್‌ನಲ್ಲಿ ಅಧಿಕ್ಕಾರಕ್ಕೇರಲು ಆಪ್ ಸಜ್ಜಾಗಿದೆ. ಈ ಗೆಲುವಿಗೆ ಕಾರಣವೇನು? ಬಳಸಿದ ತಂತ್ರಗಳು ಯಾವುವು ಎಂಬುದರ ಕುರಿತು ನಾನುಗೌರಿ.ಕಾಂ ಕರ್ನಾಟಕದ ಆಪ್ ನಾಯಕರನ್ನು ಮಾತನಾಡಿಸಿತು. ಕೇಜ್ರಿವಾಲ್‌ರವರ ಆಡಳಿತ ಮತ್ತು ಪಂಜಾಬ್ ಕಾರ್ಯಕರ್ತರ ಪರಿಶ್ರಮವೇ ಆಪ್ ಅಧಿಕ್ಕಾರಕ್ಕೇರಲು ಕಾರಣ ಎಂದು ಆಪ್ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮತ್ತು ಆಪ್ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್‌ ಜೈನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಕೇಜ್ರಿವಾಲ್ ಮಾದರಿಯನ್ನು ಪಂಜಾಬ್ ಜನತೆ ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಪಂಜಾಬ್‌ನಲ್ಲಿ ಜನ ನಮಗೆ ವೋಟ್ ಮಾಡಿಲ್ಲ, ಬದಲಿಗೆ ಪಂಜಾಬ್‌ನಲ್ಲಿಯೂ ಬದಲಾವಣೆ ತನ್ನಿ ಎಂದು ಒಂದು ಅವಕಾಶ ನೀಡಿದ್ದಾರೆ. ಇಷ್ಟು ದಿನದವರೆಗೆ ಪ್ರಾದೇಶಿಕ ಪಕ್ಷವಾಗಿದ್ದ ಆಪ್ ಇನ್ನು ಮುಂದೆ ಅಧಿಕೃತವಾಗಿ ರಾಷ್ಟ್ರೀಯ ಪಕ್ಷವಾಗಲಿದೆ. ಇಡೀ ದೇಶದಲ್ಲಿ ನಡೆಯಬೇಕಿರುವ ರಾಜಕೀಯ ಕ್ರಾಂತಿಗೆ ಇಂದು ಆಪ್ ಮುನ್ನುಡಿ ಬರೆದಿದೆ” ಎನ್ನುತ್ತಾರೆ ಮೋಹನ್ ದಾಸರಿ.

ಮೋಹನ್ ದಾಸರಿ

ದೆಹಲಿಯಲ್ಲಿ ನಮಗೆ ತುಂಬಾ ಅಡೆತಡೆಗಳಿದ್ದವು. ಏಕೆಂದರೆ ಅದು ಪೂರ್ಣ ಪ್ರಮಾಣದ ರಾಜ್ಯವಲ್ಲ. ಕಾನೂನು ಸುವ್ಯವಸ್ಥೆ ದೆಹಲಿ ಸರ್ಕಾರದ ಕೈಯಲ್ಲಿಲ್ಲ. ಭೂಮಿ ಮತ್ತು ಸಾರ್ವಜನಿಕ ನೀತಿಗಳು ದೆಹಲಿ ವ್ಯಾಪ್ತಿಯಲ್ಲಿರಲಿಲ್ಲ. ಏನೇ ಮಾಡಲು ಹೋದರೂ ಕೇಂದ್ರ ಸರ್ಕಾರ ಅಡಚಣೆ ಮಾಡುತ್ತಿತ್ತು. ಆದರೆ ಪಂಜಾಬ್‌ನಲ್ಲಿ ಬೃಹತ್ ಬಹುಮತದಿಂದ ಗೆದ್ದಿರುವುದರಿಂದ ದೇಶಕ್ಕೆ ಮಾದರಿ ರಾಜ್ಯ ಹೇಗಿರುತ್ತದೆ ಎಂಬುದನ್ನು ತೋರಿಸುತ್ತೇವೆ ಎಂದರು.

ಕೃಷಿ ಕ್ಷೇತ್ರದಲ್ಲಿ ಯಾವ ರೀತಿಯ ಕ್ರಾಂತಿಕಾರಕ ಬದಲಾವಣೆ ತರಬಹುದು ಎಂಬುದನ್ನು ನಾವು ಸಾಧಿಸಿ ತೋರಿಸುತ್ತೇವೆ. ಅದೇ ರೀತಿಯಲ್ಲಿ ದೇಶಕ್ಕೆ ಮಾದರಿಯಾದ ಕಾನೂನು ಸುವ್ಯವಸ್ಥೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳನ್ನು ಬಲಪಡಿಸುತ್ತೇವೆ. ಜನರಿಗೆ ಕಾನೂನು ಸುವ್ಯವಸ್ಥೆ ಹೇಗೆ ಇರಬೇಕೆಂದು ತೋರಿಸಿಕೊಡುತ್ತೇವೆ. ಜನರಿಗಾಗಿ ಕೆಲಸ ಮಾಡುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಎರಡು ವರ್ಷದಿಂದ ನಿರಂತರವಾಗಿ ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. 50ಕ್ಕೂ ಹೆಚ್ಚು ಕಚೇರಿಗಳಿದ್ದು 150ಕ್ಕೂ ಹೆಚ್ಚು ಅಭ್ಯರ್ಥಿ ಆಕಾಂಕ್ಷಿಗಳು ಕೆಲಸ ಮಾಡುತ್ತಿದ್ದಾರೆ. ಮುಂದಿನ 45 ದಿನಗಳಲ್ಲಿ ಕೇಜ್ರಿವಾಲ್ ಆಡಳಿತ ಮಾದರಿಯನ್ನು ಬೆಂಗಳೂರಿನ ಪ್ರತಿ ಮನೆಗೂ ತಲುಪಿಸುವ ಗುರಿ ಹೊಂದಿದ್ದೇವೆ. ಅದೇ ಮಾದರಿಯಲ್ಲಿ ಜಿಲ್ಲೆಗಳಲ್ಲಿಯೂ ಕೆಲಸ ನಡೆಯುತ್ತದೆ. ಪಂಜಾಬ್ ಫಲಿತಾಂಶ ಈ ಕೆಲಸಕ್ಕೆ ಮತ್ತಷ್ಟು ಹುರುಪು ತುಂಬುತ್ತದೆ. ಗೋವಾದಲ್ಲಿ ಎರಡು ಕ್ಷೇತ್ರಗಳಲ್ಲಿ ಭಾರೀ ಅಂತರದಲ್ಲಿ ಆಪ್‌ನ ಹಿರಿಯ ಕಾರ್ಯಕರ್ತರು ಗೆಲುವು ಸಾಧಿಸಿದ್ದಾರೆ. ಇದು ಕೂಡ ನಮಗೆ ಸ್ಫೂರ್ತಿ ಎಂದು ಮೋಹನ್ ದಾಸರಿ ತಿಳಿಸಿದರು.

ಪರಿಶ್ರಮಕ್ಕೆ ಸಿಕ್ಕ ಫಲ

ದರ್ಶನ್ ಜೈನ್ ಮಾತನಾಡಿ “ನಾವು ಪಂಜಾಬ್‌ನಲ್ಲಿ ಐದು ವರ್ಷ ಸತತ ಪರಿಶ್ರಮ ಹಾಕಿದ್ದೇವೆ. 2017, 2018 ಮತ್ತು 2019ರ ಈ ಮೂರು ವರ್ಷಗಳಲ್ಲಿ ಬಹಳ ಕಷ್ಟಗಳನ್ನು ಎದುರಿಸಿದ್ದೇವೆ. ಏಕೆಂದರೆ ಕಳೆದ ಚುನಾವಣೆಯಲ್ಲಿ ಆಪ್ ಸೋತಿದ್ದು ಕೆಟ್ಟ ಪರಿಣಾಮ ಬೀರಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಸಹ ಆಪ್ ನಾಲ್ಕು ಸ್ಥಾನದಿಂದ ಒಂದು ಸ್ಥಾನಕ್ಕೆ ಇಳಿದಿತ್ತು. ಎಚ್.ಎಸ್ ಫುಲ್ಕ ಎಂಬುವವರು ಆಪ್ ತ್ಯಜಿಸಿದರು. ಉಪಚುನಾವಣೆಯಲ್ಲಿ ಆಪ್‌ಗೆ ಕೇವಲ 3500 ಮತಗಳು ಮಾತ್ರ ಬಿದ್ದಿದ್ದವು. ಆದರೆ ನಾವು ಧೃತಿಗೆಡಲಿಲ್ಲ. ಕೋವಿಡ್ ಸಾಂಕ್ರಾಮಿಕ, ರೈತ ಹೋರಾಟದ ಸಂದರ್ಭದಲ್ಲಿ ಜನರ ಹೋರಾಟದೊಂದಿಗೆ ನಿಂತವು. ನಾವು ನಮ್ಮ ತಪ್ಪುಗಳಿಂದ ಪಾಠ ಕಲಿತು ಪಕ್ಷದ ಕಾರ್ಯಕರ್ತರಿಗೆ, ಯುವಜನರಿಗೆ ಮತ್ತು ಮಹಿಳೆಯರಿಗೆ ಹೆಚ್ಚು ಟಿಕೆಟ್ ನೀಡಿದ್ದೆವು. ಈ ಎಲ್ಲಾ ಕೆಲಸಗಳಿಗೆ ಇಂದಿನ ಫಲಿತಾಂಶವೇ ಪ್ರತಿಫಲವಾಗಿದೆ” ಎಂದರು.

ದರ್ಶನ್ ಜೈನ್

ದೆಹಲಿಯಲ್ಲಿನ ಆಪ್ ಸರ್ಕಾರದ ಕೆಲಸಗಳನ್ನು ಪಕ್ಕದ ರಾಜ್ಯ ಪಂಜಾಬ್‌ನ ಜನ ಸಾಕ್ಷಾತ್ ಆಗಿ ನೋಡಿದ್ದರು. ಹಾಗಾಗಿ ಜನ ಕೈಹಿಡಿದಿದ್ದಾರೆ. ಪಂಜಾಬ್‌ ಜನರ ಆಶೋತ್ತರಗಳನ್ನು ಈಡೇರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಕರ್ನಾಟಕ ಆಪ್ ರಾಜ್ಯಾಧ್ಯಕ್ಷರಾದ ಪೃಥ್ವಿರೆಡ್ಡಿಯವರು ಪಂಜಾಬ್ ಮತ್ತು ಗೋವಾ ಚುನಾವಣೆಯ ಉಸ್ತುವಾರಿಯಾಗಿ ಅನುಭವ ಗಳಿಸಿದ್ದಾರೆ. ಅದೇ ರೀತಿ ಸಾಕಷ್ಟು ಅನುಭವವಿರುವ ರೋಮಿ ಭಾಟಿಯವರು ಕರ್ನಾಟಕದ ವೀಕ್ಷಕರಾಗಿದ್ದಾರೆ. ಇವರ ನೇತೃತ್ವದಲ್ಲಿ ಬಿಬಿಎಂಪಿ ಚುನಾವಣೆಗೆ ಸಜ್ಜಾಗಿದ್ದೇವೆ ಎಂದರು.

ಕರ್ನಾಟಕದಲ್ಲಿ ಇತರ ಪಕ್ಷಗಳಲ್ಲಿಯೂ ಸಹ ಒಳ್ಳೆಯ ರಾಜಕಾರಣಿಗಳಿದ್ದಾರೆ. ಜನರಿಗೆ ಒಳ್ಳೆಯ ಕೆಲಸ ಮಾಡಬೇಕೆಂಬ ಹಂಬಲವಿರುವವರು ಬೇಕಿದ್ದಾರೆ. ಆದರೆ ಸೂಕ್ತ ವೇದಿಕೆ ಸಿಗದ ಕಾರಣ ಸಾಂಪ್ರಾದಾಯಿಕ ರಾಜಕೀಯ ಪಕ್ಷಗಳನ್ನು ಸೇರಿದ್ದಾರೆ. ಅಂತವರಿಗೆ ಆಪ್‌ ಮುಕ್ತ ಆಹ್ವಾನ ನೀಡುತ್ತದೆ. ಆದರೆ ಕೋಮುವಾದಿಗಳನ್ನು ನಾವು ಸೇರಿಸಿಕೊಳ್ಳುವುದಿಲ್ಲ. ಪಂಜಾಬ್‌ನಲ್ಲಾದಂತಹ ಬದಲಾವಣೆ ಕರ್ನಾಟಕದಲ್ಲಿಯೂ ಮಾಡುತ್ತೇವೆ ಎಂದು ದರ್ಶನ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ನಾವು ಬಿಜೆಪಿಗೆ ದೊಡ್ಡ ಶತ್ರುಗಳು- ಆಪ್ ಬಿಜೆಪಿ ಬಿ ಟೀಮ್ ಎಂಬುದು ಶುದ್ಧ ಸುಳ್ಳು  

ಇಂದು ದೇಶದಲ್ಲಿ ಬಿಜೆಪಿಗೆ ದೊಡ್ಡ ಶತ್ರುವೆಂದರೆ ಆಮ್‌ ಆದ್ಮಿ ಪಕ್ಷವಾಗಿದೆ. ನಾವು ಬಿಜೆಪಿಯನ್ನು ವಿರೋಧಿಸುವ ಮಟ್ಟಕ್ಕೆ ಬೇರೆ ಯಾವ ಪಕ್ಷಗಳು ಸಹ ವಿರೋಧಿಸುತ್ತಿಲ್ಲ. ಅದಕ್ಕೆ ಪಂಜಾಬ್ ಫಲಿತಾಂಶವೇ ತಕ್ಕ ಉತ್ತರವಾಗಿದೆ. ಅಮಿತ್ ಶಾ, ಮೋದಿ, ರಾಹುಲ್ ಗಾಂಧಿ, ಚರಣ್‌ಜಿತ್‌ ಚನ್ನಿ ಒಂದೇ ರೀತಿ ಮಾತನಾಡಿದ್ದರು. ಬಿಜೆಪಿಯ ರಾಷ್ಟ್ರೀಯ ವಕ್ತಾರ ಮುಕುಲ್ ಶರ್ಮಾನಂತಹವರು ಇಂದು ಬೆಳಿಗ್ಗೆ ಕಾಂಗ್ರೆಸ್ ಜಯಿಸಲಿ ಎಂದು ಟ್ವೀಟ್ ಮಾಡಿದ್ದರು. ಇದರಿಂದಲೇ ಅರ್ಥ ಮಾಡಿಕೊಳ್ಳಬೇಕು ಆಪ್ ಹೇಗೆ ಬಿಜೆಪಿ ವಿರೋಧಿಯಾಗಿದೆ ಎಂದು. ನಮ್ಮ ಮುಂದಿನ ಟಾರ್ಗೆಟ್ ಗುಜರಾತ್, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಆಗಿದೆ. ಈ ಮೂರು ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು, ಅವರನ್ನು ಎದುರಿಸಲು ಸಿದ್ದರಾಗಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಬಿಜೆಪಿಯ ಬಿ ಟೀಮ್‌ ಎಂಬುದು ಆಧಾರ ರಹಿತ ಮತ್ತು ಶುದ್ಧ ಸುಳ್ಳು ಎಂದು ದರ್ಶನ್ ಜೈನ್ ವಿವರಿಸಿದರು.

ಗೋವಾದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಕರಪತ್ರ ಪ್ರಿಂಟ್ ಮಾಡಿದ್ದು ಆಮ್ ಆದ್ಮಿ ಪಕ್ಷ. ಆ ರೀತಿಯ ಒಳಗೊಳ್ಳುವ ರಾಜಕಾರಣಕ್ಕೆ ಫಲ ಸಿಕ್ಕಿದ್ದು, ಎರಡು ಸ್ಥಾನ ಗೆದ್ದಿದ್ದೇವೆ. ಮುಂದೆ ಕರ್ನಾಟಕಕ್ಕೂ ಬರುತ್ತೇವೆ ಎಂದರು.


ಇದನ್ನೂ ಓದಿ: ಪಂಜಾಬ್‌: ಹಾಲಿ, ಮಾಜಿ ಸಿಎಂಗಳಿಗೆಲ್ಲ ಸೋಲಿನ ರುಚಿ ತೋರಿಸಿದ ಆಪ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...