Homeಮುಖಪುಟಕನ್ನಡದ ಅಪರೂಪದ ಹೋಸ್ಟೇಜ್ ಡ್ರಾಮ ಸಿನೆಮಾ ಆಕ್ಟ್-1978 ಗೆದ್ದಿದೆಯೇ?

ಕನ್ನಡದ ಅಪರೂಪದ ಹೋಸ್ಟೇಜ್ ಡ್ರಾಮ ಸಿನೆಮಾ ಆಕ್ಟ್-1978 ಗೆದ್ದಿದೆಯೇ?

ಹೊಡಿ ಬಡಿ, ಅಬ್ಬರಿಸುವ ಡೈಲಾಗ್ ಗಳನ್ನೇ ಪ್ರತಿನಿಧಿಸುವ ಸಿನಿಮಾಗಳು ರಾಶಿರಾಶಿಯಾಗಿ ಮೂಡುವ ಸಮಯದಲ್ಲಿ, ವಿಷಯಾಧಾರಿತವಾದ ಇಂಥಹ ಪ್ರಯತ್ನಗಳು ಒಂದಷ್ಟು ಕುತೂಹಲ ಹುಟ್ಟಿಸುತ್ತವೆ.

- Advertisement -
- Advertisement -

ಮೊದಲಿಗೆ ಕೋವಿಡ್ ಅವಾಂತರಗಳಿಂದ ಬೇಸತ್ತು ಒಂದಷ್ಟು ಕಾಲದ ನಂತರ ಸಿನೆಮಾ ಥಿಯೇಟರ್ ಗಳಿಗೆ ಹೋಗುವಂತಾದ ಖುಷಿಯನ್ನ ಎಲ್ಲರೂ ಹಂಚಿಕೊಳ್ಳೋಣ. ಆಕ್ಟ್-1978 ಸಿನೆಮಾ, ಬಹಳ ಹಿಂದೆ ಕನ್ನಡದಲ್ಲೇ ಬಂದ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ನಿಷ್ಕರ್ಷ’, ಆ ಸಿನೆಮಾಗೆ ಸ್ಫೂರ್ತಿಯಾಗಿದ್ದ ಅಮೆರಿಕನ್ ಚಲನಚಿತ್ರ ‘ಡೈ ಹಾರ್ಡ್’ ಇಂತಹ ಹೋಸ್ಟೇಜ್ ಡ್ರಾಮ ಸಿನೆಮಾಗಳ ಪ್ರಕಾರಕ್ಕೆ ಸೇರಿದರೂ, ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುವ ‘ಕಾರಣ’ದಿಂದಾಗಿ ವಿಭಿನ್ನ ಕಥಾವಸ್ತು ಹೊಂದಿದೆ. ಸಿನೆಮಾದ ಮೂಲ ಉದ್ದೇಶವೇ ಚಿಂತನೆಗಳನ್ನ ಹೆಚ್ಚಿಸುವುದಾದ್ದರಿಂದ, ಆ ನಿಟ್ಟಿನಲ್ಲಿ ಆಕ್ಟ್-1978 ಗೆದ್ದಿದೆಯಾ? ಮುಂದೆ ನೋಡೋಣ…

ಮೊದಲಿಗೆ ಹಿಂಸೆಯನ್ನ ಹೋರಾಟದ ಪ್ರಕ್ರಿಯೆಗಳಿಗೆ ಬಳಸೋದು, ಹಾಗೆ ಬಳಸುವಂತೆ ಪ್ರಚೋದಿಸುವುದು ಸರಿಯೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ತುಂಬು ಗರ್ಭಿಣಿಯ ಪಾತ್ರ ಸೃಷ್ಟಿಸಿ, ಆಕೆಯ ಮೂಲಕ ಕಥೆ ಹೇಳಿ, ಪ್ರೇಕ್ಷಕನನ್ನ ಭಾವನಾತ್ಮಕವಾಗಿ ಹಿಡಿದಿಡುವ ಪ್ರಯತ್ನ ಸಮಂಜಸವಾದುದಲ್ಲ.

ಸರ್ಕಾರಿ ಕಚೇರಿಯೊಂದರಲ್ಲಿ ನಡೆಯುವ ಕಥೆ, ಆ ಕಚೇರಿಯ ನೌಕರರ ಭ್ರಷ್ಟತೆಯನ್ನು ಅನಾವರಣಗೊಳಿಸುತ್ತಾ, ಅವರ ಮೇಲ್ದರ್ಜೆಯ ಅಧಿಕಾರಿಗಳನ್ನೂ ಒಳಗೊಂಡಂತೆ ಹೇಗೆ ಇವರೆಲ್ಲಾ ಭ್ರಷ್ಟ ಸಮಾಜದ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂಬುದನ್ನ ತೋರಿಸುತ್ತಾ ಸಾಗುತ್ತದೆ.

ಕಥಾನಾಯಕಿ ಅಮಾಯಕಳೇನಲ್ಲ. ಎನ್ ಸಿ ಸಿ ಯಲ್ಲಿ ತರಬೇತಿ ಪಡೆದಿರುವಾಕೆ. ಆದರೆ ಆಕೆ ಸನ್ನಿವೇಶಗಳನ್ನ ಎದುರಿಸುವ ರೀತಿಯಲ್ಲಿ ಕಟ್ಟಿಕೊಟ್ಟಿರುವ ಚಿತ್ರಣ ತಡವರಿಸಿದಂತಿದೆ. ಉದಾಹರಣೆಗೆ ಆಕೆ ಒಂದೇ ಟ್ರಿಗರ್ ಗೆ ಶೂಟ್ ಮಾಡುವಾಗ ಇರುವ ಪಕ್ವತೆಗೂ, ತನ್ನ ಬೇಡಿಕೆ ಇಡುವಾಗ ತೋರಿಸುವ ಅಮಾಯಕತೆಗೂ, ಬಹಳವೇ ಅಂತರವಿದೆ.

ಮಹಾತ್ಮ ಗಾಂಧಿಯ ಹೋಲಿಕೆಯನ್ನು ಬಳಕೆ ಮಾಡಿರುವುದು, ಸಣ್ಣ ಸಣ್ಣ ಅರ್ಥಗಳನ್ನ ಹೊಸೆಯುವಿಕೆಗೆ ಸಹಾಯವಾಗಿದೆ, ಪ್ರತೀ ಸರ್ಕಾರಿ ಕಚೇರಿಯ ಎದುರು ಹೀಗೊಂದು ಪ್ರಜ್ಞೆ ಸದಾ ಜಾಗೃತವಾಗಿದ್ದರೆ ಎಷ್ಟು ಚೆಂದವಿತ್ತು ಅನ್ನುವ ಹಾಗೆ.

ಇನ್ನು, ಕ್ರಿಶ್ಚಿಯನ್ ಮುಸ್ಲಿಂ ಧರ್ಮದಾರಿ ಪಾತ್ರಗಳನ್ನ ಕಾಮಿಡಿ ಪೀಸುಗಳನ್ನಾಗಿಸುವ ಟ್ರೆಂಡ್ ಇತ್ತೀಚಿಗೆ ಬೆಳೆಯುತ್ತಿರುವುದು ಅಪಾಯಕಾರಿ ಸಂಗತಿ. ಈ ಸಿನಿಮಾದಲ್ಲಿ ಬೆಂಜಮಿನ್ ಪಾತ್ರಧಾರಿಯನ್ನು ಹಾಸ್ಯ ಮಾಡುವುದು ಕನಿಷ್ಠ ಎಂಬಂತೆ ಬಳಕೆಯಾದರೂ ಬಹುಸಂಖ್ಯಾತ ಧಾರ್ಮಿಕವಾದ ಯಜಮಾನ್ಯ ಸಾಧಿಸುತ್ತಿರುವ ಸಮಯದಲ್ಲಿ ಅದು ಕಾಣುವ ರೀತಿ ಸಮಸ್ಯಾತ್ಮಕವಾದದ್ದು.

ಯಜ್ಞಾಶೆಟ್ಟಿಯವರು ಒಬ್ಬ ಗರ್ಭಿಣಿ ಸ್ತ್ರೀ ಹೇಗೆ ನೆಡೆಯುತ್ತಾಳೆ, ಹೇಗೆ ನೋವನ್ನು ಅನುಭವಿಸುತ್ತಾಳೆ ಎನ್ನುವ ರೀತಿಗಳನ್ನು ಬಹಳ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ, ಡೈಲಾಗ್ ಹೇಳುವಾಗ ಒಂದಷ್ಟು ಹೆಚ್ಚಿನ ಶ್ರಮ ಹಾಕಿದ್ದರೆ ನಟನೆ ಇನ್ನೂ ಆಪ್ತವಾಗಿರುತ್ತಿತ್ತು. ಸಂಚಾರಿ ವಿಜಯ್, ಅವಿನಾಶ್, ಅಚ್ಚುತ್ , ಶ್ರುತಿ, ಇವರೆಲ್ಲರೂ ಕಡಿಮೆ ಸಮಯದಲ್ಲಿಯೇ ಬಂದರೂ , ಯಜ್ಞಾಶೆಟ್ಟಿಯವರನ್ನೂ ಮರೆಸುವಂತೆ ಕಾಣುತ್ತಾರೆ.
ಇದೆಲ್ಲದರ ಹೊರತಾಗಿ ಸಿನೆಮಾ ಕಡೆಗಾಣಿಸುವಂಥಹ ಪ್ರಯತ್ನವಾ?  ಖಂಡಿತಾ ಇಲ್ಲ….

ಹೊಡಿ ಬಡಿ, ಅಬ್ಬರಿಸುವ ಡೈಲಾಗ್ ಗಳನ್ನೇ ಪ್ರತಿನಿಧಿಸುವ ಸಿನಿಮಾಗಳು ರಾಶಿರಾಶಿಯಾಗಿ ಮೂಡುವ ಸಮಯದಲ್ಲಿ, ವಿಷಯಾಧಾರಿತವಾದ ಇಂಥಹ ಪ್ರಯತ್ನಗಳು ಒಂದಷ್ಟು ಕುತೂಹಲ ಹುಟ್ಟಿಸುತ್ತದೆ. ಆದರೆ ವಿಷಯವನ್ನು ಕಟ್ಟುವಾಗ ಇನ್ನಷ್ಟು ಗಂಭೀರತೆ ಅವಶ್ಯಕವಾಗಿತ್ತು ಅನ್ನುವುದೂ ನಿಜ.

ಈ ವಿಷಯಾಧಾರಿತ ಸಿನೆಮಾಗಳು, ಸಾಮಾನ್ಯ ಕಮರ್ಷಿಯಲ್ ಸಿನೆಮಾಗಳಿಗಿಂತ ತುಸು ಹೆಚ್ಚಾಗಿಯೇ ಸಿನೆಮಾ ಗ್ರಾಮರ್ ಅನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗೆ ಪ್ರಯೋಗಿಸಿದ ಮತ್ತಷ್ಟು ಫೈನ್ ಟ್ಯೂನ್ ಚಿತ್ರಗಳು ಹೆಚ್ಚಾಗಿ ಬಂದರೆ, ನಾವುಗಳು (ಕನ್ನಡ ಸಿನೆಮಾದವರು) ಇನ್ನೂ ಹೆಚ್ಚಿಗೆ ಬೆಳೆಯಬಹುದು, ಸಿನೆಮಾ ಕ್ಷೇತ್ರವನ್ನ ಒಂದು ಚರ್ಚಾ ಮಾಧ್ಯಮವನ್ನಾಗಿ ಬಳಸಿಕೊಳ್ಳಬಹುದು.


ಇದನ್ನೂ ಓದಿ: ಆಕ್ಟ್-1978: ಘನತೆ ಮತ್ತು ನ್ಯಾಯಕ್ಕಾಗಿ ಸಿಡಿದೇಳಿ ಎನ್ನುವ ಸಿನಿಮಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...