Homeಅಂತರಾಷ್ಟ್ರೀಯಅಫ್ಘಾನಿಸ್ತಾನ: ಪುರುಷನ ಬೆಂಗಾವಲು ಇಲ್ಲದೆ ಮಹಿಳೆ ದೂರ ಪ್ರಯಾಣಿಸುವಂತಿಲ್ಲ- ತಾಲಿಬಾನ್

ಅಫ್ಘಾನಿಸ್ತಾನ: ಪುರುಷನ ಬೆಂಗಾವಲು ಇಲ್ಲದೆ ಮಹಿಳೆ ದೂರ ಪ್ರಯಾಣಿಸುವಂತಿಲ್ಲ- ತಾಲಿಬಾನ್

- Advertisement -
- Advertisement -

ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಅಲ್ಲಿನ ಮಹಿಳೆಯರ ಮೇಲೆ ಹಿಡಿತ ಸಾಧಿಸುತ್ತಿದ್ದು, ಮತ್ತೆ ಹೊಸ ನಿರ್ಬಂಧ ವಿಧಿಸಿದೆ. ಇಸ್ಲಾಮಿಕ್ ಹಿಜಾಬ್‌ಗಳನ್ನು ಧರಿಸದೆ, ಹತ್ತಿರದ ಪುರುಷ ಸಂಬಂಧಿ ಜೊತೆಗಿರದೇ ದೂರದ ಸ್ಥಳಗಳಿಗೆ ಪ್ರಯಾಣಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಕಡಿಮೆ ದೂರದ ಹೊರತಾಗಿ ಬೇರೆ ಯಾವುದಾದರೂ ಸ್ಥಳಕ್ಕೆ ಪ್ರಯಾಣಿಸಲು ಬಯಸುವ ಮಹಿಳೆಯರು ತಮ್ಮ ಹತ್ತಿರದ ಪುರುಷ ಸಂಬಂಧಿ ಜೊತೆಗೆ ಮಾತ್ರ ಪ್ರಯಾಣಿಸಬಹುದುದಾಗಿದೆ. ಜೊತೆಗೆ ಇಸ್ಲಾಮಿಕ್ ಹಿಜಾಬ್‌ಗಳನ್ನು ಧರಿಸದಿರುವವರಿಗೆ ಪ್ರಯಾಣಿಸಲು ಅವಕಾಶ ನೀಡಬಾರದು ಎಂದು ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ತಾಲಿಬಾನ್ ಸರ್ಕಾರದ ಸಚ್ಚಾರಿತ್ರ್ಯ ಬೆಂಬಲ ಮತ್ತು ದುರಾಚಾರ ನಿಯಂತ್ರಣ ಸಚಿವಾಲಯವು ಹೊರಡಿಸಿದ ಮಾರ್ಗಸೂಚಿಯಲ್ಲಿ, ಇಸ್ಲಾಮಿಕ್ ಹಿಜಾಬ್‌ಗಳನ್ನು ಧರಿಸಿರುವ ಮಹಿಳೆಯರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶ ನೀಡುವಂತೆ ಎಲ್ಲಾ ವಾಹನ ಮಾಲೀಕರಿಗೆ ಕರೆ ನೀಡಲಾಗಿದೆ.

ಇದನ್ನೂ ಓದಿ: ಅಫ್ಘಾನ್: ಮಹಿಳೆಯರು ಕೆಲಸಕ್ಕೆ ಹೊರ ಹೋಗುವುದು ಸುರಕ್ಷಿತವಲ್ಲ- ತಾಲಿಬಾನ್ ವಕ್ತಾರ

“45 ಮೈಲುಗಳಿಗಿಂತ ಹೆಚ್ಚು (72 ಕಿಲೋಮೀಟರ್) ಪ್ರಯಾಣಿಸುವ ಮಹಿಳೆಯರು ತಮ್ಮ ಹತ್ತಿರದ ಕುಟುಂಬದ ಸದಸ್ಯರಿಲ್ಲದೆ ಪ್ರಯಾಣ ಮಾಡಬಾರದು” ಎಂದು ಸಚಿವಾಲಯದ ವಕ್ತಾರ ಸಾದಿಕ್ ಅಕಿಫ್ ಮುಹಾಜಿರ್ ಭಾನುವಾರ AFPಗೆ ತಿಳಿಸಿದ್ದಾರೆ. ಜೊತೆಗೆ, ಮಹಿಳೆಯ ಜೊತೆ ಹೋಗುವ ಪುರುಷ ಸಂಬಂಧಿ ಹತ್ತಿರದವರೇ ಆಗಿರಬೇಕು ಎಂದು ಸೂಚಿಸಿದ್ದಾರೆ.

ನಟಿಯರಿರುವ ಜಾಹೀರಾತು, ಧಾರಾವಾಹಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಅಫ್ಘಾನಿಸ್ತಾನದ ಟಿವಿ ಚಾನೆಲ್‌ಗಳಿಗೆ ಕಳೆದ ವಾರ ಸೂಚನೆ ನೀಡಲಾಗಿತ್ತು. ಇನ್ನು ಮಹಿಳಾ ಟಿವಿ ಪತ್ರಕರ್ತರು ಸುದ್ದಿ ಓದುವಾಗ ಹಿಜಾಬ್ ಧರಿಸುವಂತೆ ಸಚಿವಾಲಯವು ಕರೆ ನೀಡಿದೆ. ಇನ್ನು ಜನರು ತಮ್ಮ ವಾಹನಗಳಲ್ಲಿ ಹಾಡು ಕೇಳುವುದನ್ನು ನಿಲ್ಲಿಸುವಂತೆ ತಿಳಿಸಲಾಗಿದೆ.

ಕಳೆದ ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡ ತಾಲಿಬಾನ್‌ಗಳು 1990 ರ ದಶಕದಲ್ಲಿನ ಅಧಿಕಾರದಲ್ಲಿದ್ದಾಗ ನಡೆದುಕೊಂಡಂತೆ ನಡೆಯುವುದಿಲ್ಲ ಎಂದು ತಿಳಿಸಿದ್ದರು. ಆದರೆ, ಈಗ ಮಹಿಳೆಯರು ಮತ್ತು ಹುಡುಗಿಯರ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಿದ್ದಾರೆ. ಹಲವು ಹೆಣ್ಣು ಮಕ್ಕಳು ಶಾಲೆಯಿಂದ ವಂಚಿತರಾಗಿದ್ದಾರೆ.

ಈ ಹಿಂದೆ ಮಹಿಳೆಯರಿಗೆ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳಿಂದ ಬ್ಯಾನ್ ಮಾಡಲಾಗಿದೆ. ಆಸ್ಟ್ರೇಲಿಯಾದ ಎಸ್‌ಬಿಎಸ್ ಟಿವಿಗೆ ಹೇಳಿಕೆ ನೀಡಿರುವ ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್, “ಕ್ರಿಕೆಟ್‌ನಲ್ಲಿ, ಮಹಿಳೆಯರು ತಮ್ಮ ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳದಂತಹ ಪರಿಸ್ಥಿತಿಯನ್ನು ಎದುರಿಸಬಹುದು. ಮಹಿಳೆಯರನ್ನು ಈ ರೀತಿ ನೋಡಲು ಇಸ್ಲಾಂ ಅನುಮತಿಸುವುದಿಲ್ಲ” ಎಂದು ಹೇಳಿದ್ದರು.


ಇದನ್ನೂ ಓದಿ: ಅಫ್ಘಾನ್: ಮಹಿಳೆಯರನ್ನು ಕ್ರಿಕೆಟ್ ಸೇರಿ ಹಲವು ಕ್ರೀಡೆಗಳಿಂದ ಹೊರಗಿಟ್ಟ ತಾಲಿಬಾನ್‌ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ತಾಲಿಬಾನಿಗಳ ಅಟ್ಟಹಾಸ ಅತಿಯಾಗುತ್ತಿದೆ.

    ಇವರನ್ನು ಸರಿ ದಾರಿಗೆ ತರಲು ವಿಶ್ವ ನಾಯಕರಿಗೆ ಏಕೆ ಆಗುತ್ತಿಲ್ಲ

    ಈ ಒಂದು ವಿಷಯದಲ್ಲಿಯಾದರೂ ಒಗ್ಗೂಡಿ ಕೆಲಸ ಮಾಡಬಹುದಲ್ಲಾ

    Biden ತಪ್ಪು ಮಾಡಿದರೇ……

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...