Homeಮುಖಪುಟಏರ್‌ಷೋ ಹಿನ್ನೆಲೆ 22 ದಿನ ಮಾಂಸ ಮಾರಾಟ ನಿಷೇಧ: ಬಿಬಿಎಂಪಿ ಆದೇಶ

ಏರ್‌ಷೋ ಹಿನ್ನೆಲೆ 22 ದಿನ ಮಾಂಸ ಮಾರಾಟ ನಿಷೇಧ: ಬಿಬಿಎಂಪಿ ಆದೇಶ

- Advertisement -
- Advertisement -

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ‘ಏರೋ ಇಂಡಿಯಾ 2023’ ಪ್ರದರ್ಶನ ನಡೆಯಲಿರುವ ಹಿನ್ನೆಲೆಯಲ್ಲಿ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ (ಬಿಬಿಎಂಪಿ) 22 ದಿನಗಳ ಕಾಲ ಮಾಂಸ ಮಾರಾಟಕ್ಕೆ ನಿಷೇಧ ಹೇರಿದೆ.

ಕೇಂದ್ರ ರಕ್ಷಣಾ ಸಚಿವಾಲಯ ಬೆಂಗಳೂರಿನ ಯಲಹಂಕದಲ್ಲಿರುವ ವಾಯುನೆಲೆಯಲ್ಲಿ ಮುಂದಿನ ತಿಂಗಳು ಫೆಬ್ರುವರಿ 13ರಿಂದ ಫೆಬ್ರುವರಿ 17ರವರೆಗೆ ‘ಅಂತಾರಾಷ್ಟ್ರೀಯ ಏರೋ ಇಂಡಿಯಾ 2023’ (ವೈಮಾನಿಕ ಪ್ರದರ್ಶನ) ಹಮ್ಮಿಕೊಂಡಿದೆ.

ಇದರ ಅಂಗವಾಗಿ ಯಲಹಂಕ ವಲಯ ವ್ಯಾಪ್ತಿಯಲ್ಲಿರುವ ಎಲ್ಲ ಮಾಂಸದ ಮಳಿಗೆಗಳಲ್ಲಿ ಜನವರಿ 30ರಿಂದ ಫೆಬ್ರುವರಿ 20ರವರೆಗೆ ಯಲಹಂಕ ವಲಯದ ವ್ಯಾಪ್ತಿಯಲ್ಲಿ ಎಲ್ಲ ತರಹದ ಮಾಂಸ ಮಾರಾಟ ನಿಷೇಧಿಸಲಾಗಿದೆ. ಇಷ್ಟೇ ಅಲ್ಲದೇ ಹೋಟೆಲ್‌ ಹಾಗೂ ರೆಸ್ಟೋರೆಂಟ್/ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನೂ ಬಿಬಿಎಂಪಿ ನಿಷೇಧಿಸಿದೆ.

“ಆದೇಶವನ್ನು ಉಲ್ಲಂಘಿಸಿದರೆ ‘ಬಿಬಿಎಂಪಿ ಕಾಯ್ದೆ 2020’ ಮತ್ತು ‘ಇಂಡಿಯನ್‌ ಏರ್‌ಕ್ರಾಪ್ಟ್‌ ರೂಲ್ಸ್‌ 1937ರ 91ನೇ ನಿಯಮ’ದ ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುತ್ತದೆ” ಎಂದು ಬಿಬಿಎಂಪಿ ಎಚ್ಚರಿಸಿದೆ.

ಏರೋಡ್ರೋಮ್ ಸಮೀಪದಲ್ಲಿ ಪ್ರಾಣಿಗಳ ವಧೆ, ಪ್ರಾಣಿಗಳನ್ನು ಸುಲಿಯುವುದು, ಕಸ ಮತ್ತು ಇತರ ಕಲುಷಿತ ಅಥವಾ ಅಸಹ್ಯಕರ ವಸ್ತುಗಳನ್ನು ಸಂಗ್ರಹಿಸುವುದನ್ನು ನಿಷೇಧಿಸುವುದು ಎಂದು ಏರ್‌ಕ್ರಾಪ್ಟ್ ರೂಲ್ಸ್‌ 91ನೇ ನಿಯಮ ಹೇಳುತ್ತದೆ.

May be an image of text

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...