Homeಮುಖಪುಟರಾಷ್ಟ್ರೀಯ ಖೋ ಖೋ ಪಂದ್ಯಾವಳಿಗೆ ಬಿಡುಗಡೆಯಾಗಿರುವ 19 ಲಕ್ಷದ ಮೇಲೆ ಎಲ್ಲರ ಕಣ್ಣು

ರಾಷ್ಟ್ರೀಯ ಖೋ ಖೋ ಪಂದ್ಯಾವಳಿಗೆ ಬಿಡುಗಡೆಯಾಗಿರುವ 19 ಲಕ್ಷದ ಮೇಲೆ ಎಲ್ಲರ ಕಣ್ಣು

- Advertisement -
- Advertisement -

ರಾಷ್ಟ್ರೀಯ ಮಟ್ಟದ ಖೋ ಖೋ ಪಂದ್ಯಾವಳಿ ತುಮಕೂರು ನಗರದಲ್ಲಿ ನಡೆಸಲು ಭರದ ಸಿದ್ದತೆ ನಡೆದಿದೆ. ಇದೇ ತಿಂಗಳ 27 ರಿಂದ ಮೂರು ದಿನಗಳು ಪಂದ್ಯಾವಳಿ ನಡೆಯಲಿದೆ. ಇದಕ್ಕಾಗಿ 19 ಲಕ್ಷ ರೂ ಹಣವೂ ಬಿಡುಗಡೆ ಆಗಿದೆ. ತುಮಕೂರು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಈ ಹಣ ಬಂದಿದ್ದು ಇದರ ಮೇಲೆ ಕೆಲವರ ಕಣ್ಣು ಬಿದ್ದಿದೆ. ಖೋ ಖೋ ಪಂದ್ಯಾವಳಿ ಯಶಸ್ವಿಯಾಗಿ ನಡೆಸಬೇಕು. ಜಿಲ್ಲೆಗೆ ಕಿರ್ತಿ ತರಬೇಕು ಎಂಬುದಕ್ಕಿಂತ ಹೂಣ ಲೂಟಿ ಮಾಡುವ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಜನಪ್ರತಿನಿಧಿಗಳು ತಮಗೆ ಬೇಕಾದವರಿಗೆ ಖೋ ಖೋ ಪಂದ್ಯಾವಳಿ ಉಸ್ತುವಾರಿ ವಹಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.

ದೇಶದ ಎಲ್ಲಾ ರಾಜ್ಯಗಳಿಂದ ಪುರುಷರು ಮತ್ತು ಮಹಿಳೆಯರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಪುರುಷ ವಿಭಾಗದಲ್ಲಿ 29 ತಂಡಗಳು ಮತ್ತು 29 ಮಹಿಳಾ ತಂಡಗಳು  ಭಾಗವಹಿಸಲಿವೆ. ಅಂದರೆ ಸುಮಾರು ಒಂದು ಸಾವಿರ ಮಂದಿ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ದೇಶದ ವಿವಿಧ ರಾಜ್ಯ ಗಳಿಂದ ಬರುವ ಖೋ ಖೋ ತಂಡಗಳಿಗೆ ಸೂಕ್ತ ವಸತಿ, ತಿಂಡಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಬೇಕು. ಹೀಗಾಗಿ ನೂರಾರು ಕ್ರೀಡಾಪಟುಗಳಿಗೆ ಸಿದ್ದಗಂಗಾ ಮಠದಲ್ಲಿ  ಉಚಿತ ವಸತಿ ಮತ್ತು ಊಟದ ವ್ಯವಸ್ಥೆ  ಕಲ್ಪಿಸಿದರೆ ಲಕ್ಷಾಂತರ ರೂಪಾಳಿ ಹಣ ಉಳಿಸುವ ಲೆಕ್ಕಹಾಕಲಾಗುತ್ತಿದೆ.

ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿ ತುಮಕೂರಿನಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಂದ ಮತ್ತು ಅಧಿಕಾರಿಗಳಿಂದ ಹಣ ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ. ಪಂದ್ಯಾವಳಿಗೆ ಬೇಕಾದ ಊಟದ ವ್ಯವಸ್ಥೆಯನ್ನು ಕೆಲವು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ವಹಿಸಿದ್ದು ಅಚ್ಚುಕಟ್ಟಾಗಿ ನಿರ್ವಹಿಸಲು ಜನಪ್ರತಿನಿಧಿಗಳು ಸೂಚಿಸಿದ್ದಾರೆ. ಇದಕ್ಕೆ ಆ ಅಧಿಕಾರಿಗಳು ಎಸ್ ಎಂದಿದ್ದಾರೆ. ಇದರಿಂದ ಊಟದ ಖರ್ಚಿನ ಹಣವೂ ಉಳಿಸಿ ಜೇಬಿಗಿಳಿಸುವ ಹುನ್ನಾರಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಖೋ ಖೊ ಪಂದ್ಯಾವಳಿಗೆ ಬರುವ ರೆಫರಿಗಳಿಗೆ ಫೈವ್ ಸ್ಟಾರ್ ಹೋಟೆಲ್ ಗಳಲ್ಲೇ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಬೇಕೆಂಬ ನಿಯಮವಿದೆ.ಆದರೆ ತುಮಕೂರಿನಲ್ಲಿ ಒಂದೇ ಒಂದು ಸ್ಟಾರ್ ಹೋಟೆಲ್ ಕೂಡ ಇಲ್ಲ ಹಾಗಾಗಿ ರೆಫರಿಗಳಿಗೆ ಬೆಂಗಳೂರಿನಲ್ಲೇ ವ್ಯವಸ್ಥೆ ಕಲ್ಪಿಸಬೇಕು. ಆದರೆ ಆಯೋಜಕರು ತುಮಕೂರಿನಲ್ಲಿ ಸ್ವಲ್ಪಮಟ್ಟಿಗೆ ಹೇಳಿಕೊಳ್ಳುವಂತಹ ಎಸಿ ಇರುವ ಹೋಟೆಲ್ ಗಳಿಗೆ ಫೈವ್ ಸ್ಟಾರ್ ನಾಮಫಲಕ ಹಾಕಿ ದೇಶದ ವಿವಿಧ ಭಾಗಗಳಿಂದ ಬರುವ ರೆಫರಿಗಳನ್ನು ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಈ ಯೋಜನೆ ಕೂಡ ಜನಪ್ರತಿನಿಧಿಗಳೇ ರೂಪಿಸಿರುವುದು ಎಂದು ಆಪ್ತಮೂಲಗಳು ತಿಳಿಸಿವೆ.

ಸಂಸದರು ಮತ್ತು ಶಾಸಕರು ತಮ್ಮ ಆಪ್ತನಾದ ಬಸವರಾಜು ಎಂಬುವರಿಗೆ ಖೋ ಖೋ ಪಂದ್ಯಾವಳಿಯ ಜವಾಬ್ದಾರಿ ವಹಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಉಪನಿರ್ದೇಶಕರು ಮುಕ್ತವಾಗಿ ಕೆಲಸ ಮಾಡಲು ಕೂಡ ಬಿಡದೆ ಸಂಸದರು ಮತ್ತು ಶಾಸಕರು ತಮ್ಮ ಆಪ್ತರನ್ನೇ ಖೋ ಖೋ ಪಂದ್ಯಾವಳಿಯ ಉಸ್ತುವಾರಿಗೆ ನೇಮಕ ಮಾಡುವಂತೆ ಒತ್ತಡ ಹೇರುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆ ಬಹಿಷ್ಕರಿಸಬೇಡಿ: ಜಮ್ಮು-ಕಾಶ್ಮೀರದ ಜನತೆಗೆ ಮೆಹಬೂಬಾ ಮುಫ್ತಿ ಮನವಿ

0
'ದಕ್ಷಿಣ ಕಾಶ್ಮೀರದಲ್ಲಿ ಚುನಾವಣೆಯನ್ನು ಬಹಿಷ್ಕರಿಸಲು, ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳನ್ನು ಬಂಧಿತ ಕಾರ್ಮಿಕರನ್ನಾಗಿ ಮಾಡಲು ಅನಾಮಧೇಯ ಶಕ್ತಿಗಳು ಪ್ರಯತ್ನಿಸುತ್ತಿವೆ' ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆತಂಕ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ರಜೌರಿ...