Homeಕರ್ನಾಟಕವಿಧಾನ ಸೌಧದಲ್ಲಿ ‘ಕರ್ತವ್ಯ’, ಉಪ್ಪಾರಪೇಟೆಯಲ್ಲಿ ‘ರೋಲ್ ಕಾಲ್’: ಪೊಲೀಸ್ ಅಮಾನತು

ವಿಧಾನ ಸೌಧದಲ್ಲಿ ‘ಕರ್ತವ್ಯ’, ಉಪ್ಪಾರಪೇಟೆಯಲ್ಲಿ ‘ರೋಲ್ ಕಾಲ್’: ಪೊಲೀಸ್ ಅಮಾನತು

- Advertisement -
- Advertisement -

ಉಪ್ಪಾರಪೇಟೆ ಠಾಣೆಯಿಂದ ವಿಧಾನಸೌಧ ಠಾಣೆಗೆ ವರ್ಗಾವಣೆಗೊಂಡು 11 ತಿಂಗಳಾದರೂ ಕೆಲಸಕ್ಕೆ ಹಾಜರಾಗದ ಸಹಾಯಕ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಅವರನ್ನು ಅಮಾನತುಗೊಳಿಸಲಾಗಿದೆ. ಅವರು ಉಪ್ಪಾರಪೇಟೆ ಠಾಣೆಯಲ್ಲಿ ಹಿರಿಯ ಅಧಿಕಾರಿಗಳಿಗೆ ತಿಳಿಯದಂತೆ ‘ಅಕ್ರಮ ಕೆಲಸ’ ಮಾಡುತ್ತಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ.

ಉಪ್ಪಾರಪೇಟೆ ಠಾಣೆಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಶ್ರೀನಿವಾಸ್ ಶೆಟ್ಟಿ ಅವರನ್ನು ಕಳೆದ ವರ್ಷದ ಆರಂಭದಲ್ಲಿ ವಿಧಾನಸೌಧ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. 11 ತಿಂಗಳು ಕಳೆದರೂ ಅವರು ಅಲ್ಲಿ ಕೆಲಸಕ್ಕೆ ಹಾಜರಾಗದೆ, ಉಪ್ಪಾರಪೇಟೆ ಠಾಣೆಯಲ್ಲೆ ಕೆಲಸ ಮುಂದುವರೆಸಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ TNIE ವರದಿ ಮಾಡಿದೆ.

“ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಉಪ್ಪಾರಪೇಟೆ ಠಾಣೆಗೆ ಬರುತ್ತಿದ್ದರು. ಬರುವಾಗ ಅಪರಾಧಗಳಲ್ಲಿ ಭಾಗಿಯಾಗಿರುವ ಕೆಲವು ವ್ಯಕ್ತಿಗಳನ್ನು ಕರೆತರುತ್ತಾರೆ. ನಂತರ ಎಫ್‌ಐಆರ್‌ಗಳನ್ನು ದಾಖಲಿಸದೆ ಹಣ ಸಂಗ್ರಹಿಸಿ ಅವರನ್ನು ಬಿಡುತ್ತಾರೆ. ಅವರು ತಮ್ಮ ಕಾನೂನುಬಾಹಿರ ವ್ಯವಹಾರವನ್ನು ನಡೆಸಲು ಮತ್ತು ಅಪರಾಧಿಗಳೊಂದಿಗೆ ಒಪ್ಪಂದಗಳನ್ನು ಮಾಡಲು ಠಾಣೆಯನ್ನು ಬಳಸಿಕೊಂಡಿದ್ದಾರೆ” ಎಂದು ಮೂಲವೊಂದು ತಿಳಿಸಿದೆ ಎಂದು TNIE ವರದಿ ಮಾಡಿದೆ.

ಹಿರಿಯ ಅಧಿಕಾರಿಗಳು ಸೇರಿದಂತೆ ಯಾರೂ ಅವರನ್ನು ಪ್ರಶ್ನಿಸಿರಲಿಲ್ಲ. ಇತ್ಯರ್ಥವಾಗದ ಕೆಲವು ಪ್ರಮುಖ ಪ್ರಕರಣಗಳ ತನಿಖೆಗೆ ಅವರ ಅಗತ್ಯವಿತ್ತು ಎಂದು ಹೇಳಿ ಉಪ್ಪಾರಪೇಟೆ ಪೊಲೀಸರು ಶ್ರೀನಿವಾಸ್ ಶೆಟ್ಟಿಯನ್ನು ಉಳಿಸಿಕೊಂಡಿದ್ದರು ಎಂದು ವಿಧಾನಸೌಧ ಠಾಣೆಯ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಇದೆಲ್ಲವೂ ಹಿರಿಯ ಅಧಿಕಾರಿಗಳ ಸೂಕ್ತ ಅನುಮತಿಯಿಲ್ಲದೆ ನಡೆದಿದೆ ಎಂದು ವರದಿಯಾಗಿದೆ.

ಬುಧವಾರ ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಗಾಂಧಿನಗರದ ಬಾರ್ ಅಂಡ್ ರೆಸ್ಟೋರೆಂಟ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ಘಟನೆಯ ನಂತರ ಶ್ರೀನಿವಾಸ್ ಶೆಟ್ಟಿ ಅವರನ್ನು ಅಮಾನತುಗೊಳಿಸಲಾಗಿದೆ.

“ಇಡೀ ಪ್ರಕರಣ ಸ್ಟೇಷನ್ ಮಟ್ಟದಲ್ಲಿ ಪೊಲೀಸ್ ಸಿಬ್ಬಂದಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಕುರಿತು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 11 ತಿಂಗಳಿಂದ ಎಎಸ್‌ಐ ಕೆಲಸಕ್ಕೆ ಹಾಜರಾಗದಿದ್ದರೂ ವಿಧಾನಸೌಧ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ. ಅವರ ಮೇಲೆ ಆರೋಪಗಳಿದ್ದರೂ ಉಪ್ಪಾರಪೇಟೆ ಠಾಣೆಯ ಅಧಿಕಾರಿಗಳು ಆತನ ಚಟುವಟಿಕೆಗಳನ್ನು ಪರಿಶೀಲಿಸಲು ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಿರುವಾಗ, ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ” ಎಂದು ಪ್ರಕರಣದ ಬಗ್ಗೆ ತಿಳಿದಿರುವ ಮೂಲಗಳನ್ನು ಉಲ್ಲೇಖಿಸಿ TNIE ವರದಿ ಮಾಡಿದೆ.

TNIE ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾಗಿ ಹೇಳಿದೆ. “ಇದರ ಬಗ್ಗೆ ವರದಿ ಮಾಡಲು ಏನಿದೆ?” ಎಂದು ವರದಿಗಾರರೊಂದಿಗೆ ಡಿಸಿಪಿ (ಆಡಳಿತ) ನಿಶಾ ಜೇಮ್ಸ್ ಪ್ರಶ್ನಿಸಿದ್ದಾರೆ ಎಂದು TNIE ತನ್ನ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: ಅಸ್ಸಾಂ: ನಿರುದ್ಯೋಗದ ಬಗ್ಗೆ ಮಾತನಾಡಿ ಸದನದಿಂದ ಅಮಾನತುಗೊಂಡ ಶಾಸಕ ಅಖಿಲ್ ಗೊಗೊಯ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...