Homeಮುಖಪುಟಕಳೆದ 10 ವರ್ಷಗಳಲ್ಲಿ ರೈಲು ಅಪಘಾತದಿಂದ ಸರಿಸುಮಾರು 2.6 ಲಕ್ಷ ಜನರ ಸಾವು!: ಎನ್‌ಸಿಆರ್‌ಬಿ ವರದಿ

ಕಳೆದ 10 ವರ್ಷಗಳಲ್ಲಿ ರೈಲು ಅಪಘಾತದಿಂದ ಸರಿಸುಮಾರು 2.6 ಲಕ್ಷ ಜನರ ಸಾವು!: ಎನ್‌ಸಿಆರ್‌ಬಿ ವರದಿ

- Advertisement -
- Advertisement -

ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಮೂರು ರೈಲುಗಳ ಡಿಕ್ಕಿ ಸಂಭವಿಸಿ 288 ಜನರು ಸಾವನ್ನಪ್ಪಿದರು ಮತ್ತು 1000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇದು ಭಾರತದ ಅತಿದೊಡ್ಡ ರೈಲ್ವೆ ಅಪಘಾತಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

ಈ ಘಟನೆಯು ಭಾರತದ ರೈಲ್ವೆ ಇಲಾಖೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ದಾಖಲೆಗಳನ್ನು ಗಮನಿಸಿದರೆ ಕಳೆದ 10 ವರ್ಷಗಳಲ್ಲಿ ಸರಿಸುಮಾರು 2.6 ಲಕ್ಷ ಜನರು ರೈಲು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

NCRB ಭಾರತದಲ್ಲಿ ಅಪರಾಧ ಡೇಟಾವನ್ನು ಸಂಗ್ರಹಿಸುವ ಮತ್ತು ವಿಶ್ಲೇಷಿಸುವ ಜವಾಬ್ದಾರಿಯನ್ನು ಹೊಂದಿರುವ ಭಾರತೀಯ ಸರ್ಕಾರಿ ಸಂಸ್ಥೆಯಾಗಿದೆ.

ಗಮನಾರ್ಹ ಸಂಗತಿಯೆಂದರೆ, ಬಹುಪಾಲು ರೈಲ್ವೇ ಅಪಘಾತದ ಸಾವುಗಳು ಶುಕ್ರವಾರ ಒಡಿಶಾದಲ್ಲಿ ಸಂಭವಿಸಿದ ದುರಂತದಂತೆ ಸಂಭವಿಸಿಲ್ಲ, ಬದಲಾಗಿ ಜನ ರೈಲುಗಳಿಂದ ಕೆಳಗೆ ಬೀಳುವುದು, ಅಥವಾ ರೈಲುಗಳು ಜನರ ಮೇಲೆ ಹರಿಯುವುದರಿಂದ ಹೆಚ್ಚಿನ ಸಾವು ಸಂಭವಿಸಿದೆ ಎಂದು ದಾಖಲೆಗಳು ತೋರಿಸುತ್ತವೆ. 2017-21 ರ ನಡುವಿನ ರೈಲ್ವೆ ಅಪಘಾತದ ಸಾವುಗಳಲ್ಲಿ 70 ಪ್ರತಿಶತದಷ್ಟು ಸಾವುಗಳು ಇದೇ ರೀತಿ ಸಂಭವಿಸಿವೆ ಎಂದು ಅಂಕಿಅಂಶಗಳು ಹೇಳುತ್ತವೆ.

ಕಳೆದ 10 ವರ್ಷಗಳಲ್ಲಿ ರೈಲ್ವೆ ಅಪಘಾತಗಳ ಬಗ್ಗೆ ಡೇಟಾ ಏನು ಹೇಳುತ್ತದೆ?

ಎನ್‌ಸಿಆರ್‌ಬಿ ರೈಲ್ವೇ ಅಪಘಾತದ ಸಾವುಗಳನ್ನು ಐದು ವಿಭಾಗಗಳಲ್ಲಿ ವರ್ಗೀಕರಿಸುತ್ತದೆ. ಹಳಿತಪ್ಪುವಿಕೆಗಳು, ಘರ್ಷಣೆಗಳು, ಸ್ಫೋಟಗಳು/ಬೆಂಕಿಗಳು, ರೈಲುಗಳಿಂದ ಬೀಳುವ ಜನರು ಅಥವಾ ರೈಲುಗಳು ಹಳಿಗಳ ಮೇಲೆ ಜನರಿಗೆ ಡಿಕ್ಕಿ ಹೊಡೆಯುವುದು ಮತ್ತು ‘ಇತರ ಕಾರಣಗಳು’.

ಎನ್‌ಸಿಆರ್‌ಬಿಯ ವರದಿಯ ಪ್ರಕಾರ ”ಭಾರತದಲ್ಲಿ ರೈಲ್ವೆ ಅಪಘಾತಗಳಿಂದ 2011 ರಲ್ಲಿ ಸುಮಾರು 25,872 ಜನ ಪ್ರಾಣ ಕಳೆದುಕೊಂಡಿದ್ದಾರೆ. 2012 ರಲ್ಲಿ 27,000 ಮತ್ತು 2013 ರಲ್ಲಿ 27,765 ರೈಲು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ, 2014 ರಲ್ಲಿ ಇದರ ಪ್ರಮಾಣ 25,000 ಜನರಿಗೆ ಇಳಿಯಿತು.

ಇದನ್ನೂ ಓದಿ: ಒಡಿಶಾ ರೈಲು ದುರಂತದ ತನಿಖೆಯನ್ನು ಸಿಬಿಐಗೆ ವಹಿಸಲು ರೈಲ್ವೆ ಮಂಡಳಿ ಶಿಫಾರಸು

ಈ ಗ್ರಾಫ್ 2017 ರಿಂದ ಕ್ರಮೇಣ ಕಡಿಮೆಯಾಯಿತು – ಆ ವರ್ಷ, ಅಂತಹ ಸಾವುಗಳು 24,000ಕ್ಕೆ ಇಳಿದವು ಮತ್ತು 2019 ರವರೆಗೆ (24,619 ಆಗಿದ್ದಾಗ) ಆ ಅಂಕಿಅಂಶದ ಸುತ್ತ ಸುಳಿದಾಡಿತು. ನಿರೀಕ್ಷೆಯಂತೆ, 2020 ರಲ್ಲಿ ಅತ್ಯಂತ ಕುಸಿತವು ಸಂಭವಿಸಿತು. ಏಕೆಂದರೆ COVID-19 ಸಾಂಕ್ರಾಮಿಕದಿಂದ ರೈಲುಗಳ ಓಡಾಟ ಸ್ಥಗಿತವಾಗಿದ್ದು ಕೂಡ ಇದಕ್ಕೆ ಮುಖ್ಯ ಕಾರಣವಾಯಿತು. ಹಾಗಾಗಿ 2020ರಲ್ಲಿ ರೈಲ್ವೆ ಅಪಘಾತದ ಸಾವುಗಳು ಸುಮಾರು 11,968 ಕ್ಕೆ ಇಳಿದವು. 2021ರಲ್ಲಿ 16,431 ಕ್ಕೆ ಏರಿತು ಅಂದರೆ 27 ಪ್ರತಿಶತದಷ್ಟು ಸಾವಿನ ಸಂಖ್ಯೆ ಹೆಚ್ಚಾಯಿತು. ಆದರೂ ಇದು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.

ಸಾವಿನ ಕಾರಣಗಳು

ಹೆಚ್ಚಿನ ಸಾವುಗಳು ಜನರು ರೈಲಿನಿಂದ ಬೀಳುವುದರಿಂದ ಅಥವಾ ಅವರ ಮೇಲೆ ರೈಲು ಹರಿದು ಸಾವುಗಳು ಸಂಭವಿಸಿವೆ ಎಂದು ಡೇಟಾ ತೋರಿಸುತ್ತದೆ. ಎನ್‌ಸಿಆರ್‌ಬಿ ಪ್ರಕಾರ, 2021ರಲ್ಲಿ ಸಂಭವಿಸಿದ ಒಟ್ಟು 16,431 ಜನರು ರೈಲ್ವೆ ಅಪಘಾತದಿಂದ ಸಾವುಗಳಾಗಿದ್ದರೆ, ಅದರಲ್ಲಿ 11,036 ಜನರು ರೈಲಿನಿಂದ ಬಿದ್ದು, ರೈಲು ಹರಿದು ಸಾವಿಗೀಡಾಗಿದ್ದಾರೆ. ಇತರೆ ಕಾರಣಗಳಿಂದ 5,287 ಜನ ಸಾವನ್ನಪ್ಪಿದ್ದಾರೆ. ‘ಇತರ’ ವರ್ಗ ಎಂಬುದರ ಬಗ್ಗೆ ಎನ್‌ಸಿಆರ್ ಬಿ ಸ್ಪಷ್ಟವಾಗಿ ತಿಳಿಸಿಲ್ಲ. ರೈಲು ಡಿಕ್ಕಿಗಳಿಂದ 86 ಮತ್ತು ಹಳಿ ತಪ್ಪಿದ್ದರಿಂದ 22 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 2021ರಲ್ಲಿ ಬೆಂಕಿ ಅಥವಾ ಸ್ಫೋಟಗಳಲ್ಲಿ ಯಾರೂ ಸಾವನ್ನಪ್ಪಿಲ್ಲ.

2017-21 ರ ನಡುವೆ ವರದಿಯಾದ 1 ಲಕ್ಷ ರೈಲ್ವೆ ಅಪಘಾತ ಸಾವುಗಳಲ್ಲಿ, 71,000 ಕ್ಕೂ ಹೆಚ್ಚು ಜನರು ರೈಲಿನಿಂದ ಬಿದ್ದು ಅಥವಾ ರೈಲು ಹರಿದು ಸಾವನ್ನಪ್ಪಿದ್ದಾರೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಂಕಿಅಂಶಗಳನ್ನು ಗಮನಿಸಿದರೆ ಮಹಾರಾಷ್ಟ್ರದಲ್ಲಿ ಹೆಚ್ಚು ಸಾವು ಈ ಅವಧಿಯಲ್ಲಿ ಸಂಭವಿಸಿವೆ. ಇದು 2017 ಮತ್ತು 2021 ರ ನಡುವೆ 17,000 ಇಂತಹ ಸಾವುನೋವುಗಳು ಸಂಭವಿಸಿವೆ ಎಂದು ವರದಿ ಮಾಡಿದೆ. ಅದರ ನಂತರ ಉತ್ತರ ಪ್ರದೇಶ (13,074) ಮತ್ತು ಪಶ್ಚಿಮ ಬಂಗಾಳ (11,967). ಹೋಲಿಸಿದರೆ, ಅದೇ ಅವಧಿಯಲ್ಲಿ ಒಡಿಶಾದ ಸಂಖ್ಯೆಗಳು ಅತ್ಯಂತ ಕಡಿಮೆ, ಕೇವಲ 1,845 ಸಾವುಗಳು ಸಂಭವಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...