Homeಮುಖಪುಟವಿಡಿಯೋ ಮಾಡಿದರೆ ತಪ್ಪೇನು..? ರಾಹುಲ್ ಬೆಂಬಲಕ್ಕೆ ನಿಂತ ಕಪಿಲ್ ಸಿಬಲ್

ವಿಡಿಯೋ ಮಾಡಿದರೆ ತಪ್ಪೇನು..? ರಾಹುಲ್ ಬೆಂಬಲಕ್ಕೆ ನಿಂತ ಕಪಿಲ್ ಸಿಬಲ್

- Advertisement -
- Advertisement -

ಉಪ ರಾಷ್ಟ್ರಪತಿ, ರಾಜ್ಯಸಭೆ ಸಭಾಪತಿ ಜಗದೀಪ್ ಧನ್ಖರ್ ಅವರನ್ನು ಕುರಿತು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮಿಮಿಕ್ರಿ ಮಾಡಿದ್ದನ್ನು ವಿಡಿಯೋ ಮಾಡಿದ್ದ ರಾಹುಲ್ ಗಾಂಧಿ ಅವರನ್ನು ಬಿಜೆಪಿ ನಾಯಕರು ಟೀಕಿಸಿದ್ದರು. ಧನ್ಖರ್ ಅವರೂ ಸಹ ಸದನದಲ್ಲಿ ವಿಡಿಯೋ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತು ಉಪಾಧ್ಯಕ್ಷ ಜಗದೀಪ್ ಧನ್ಖರ್ ಅವರ ಮಿಮಿಕ್ರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ರಾಹುಲ್ ಗಾಂಧಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

‘ವಿಡಿಯೋ ಮಾಡುವುದರಲ್ಲಿ ತಪ್ಪೇನು? ಅವರು (ರಾಹುಲ್ ಗಾಂಧಿ) ತಾವು ಚಿತ್ರೀಕರಿಸಿದ್ದ ವೀಡಿಯೊವನ್ನು ಮತ್ತಷ್ಟು ವೈರಲ್ ಮಾಡಲು ಯಾವುದೆ ವೇದಿಕೆಯನ್ನು ಬಳಸಿಕೊಂಡಿಲ್ಲ’ ಎಂದರು.

ತಮ್ಮ ಪಕ್ಷದ ನಾಯಕನನ್ನು ಸಮರ್ಥಿಸಿಕೊಂಡಿರುವ ಸಿಬಲ್, ‘ಆದರೆ ಮಿಮಿಕ್ರಿ ಮಾಡಿದವರು ಅದರ ಬಗ್ಗೆ ಯೋಚಿಸಬೇಕಿತ್ತು’ ಎಂದು ಕಲ್ಯಾಣ್ ಬ್ಯಾನರ್ಜಿ ನಡೆಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

‘ಇದು ಕೇವಲ ರಾಜಕೀಯ ವಿಷಯ ಮಾತ್ರಲ್ಲ. ಏಕೆಂದರೆ, ಸಾಂವಿಧಾನಿಕ ಹುದ್ದೆಗಳನ್ನು ಎಷ್ಟರ ಮಟ್ಟಿಗೆ ಅವಮಾನಿಸಲಾಗುತ್ತಿದೆ ಎಂಬುದು ಆತಂಕಕಾರಿಯಾಗಿದೆ’ ಎಂದರು.

ಘಟನೆ ಹಿನ್ನೆಲೆ:

146 ಸಂಸದರ ಅಮಾನತು ವಿರೋಧಿಸಿ ಸಂಸತ್ತಿನ ಆವರಣದಲ್ಲಿ ಕಳೆದ ವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಲ್ಯಾಣ್ ಬ್ಯಾನರ್ಜಿ, ರಾಜ್ಯಸಭೆ ಜಗದೀಪ್ ಧನ್ಖರ್ ಅವರನ್ನು ಮಿಮಿಕ್ರಿ ಮಾಡಿದ್ದರು. ಅದನ್ನು ತಮ್ಮ ಮೊಬೈಲ್‌ನಲ್ಲಿ ರಾಹುಲ್ ಗಾಂಧಿ ಚಿತ್ರೀಕರಿಸಿದ್ದ ವಿಡಿಯೋ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು.
ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಧನ್ಖರ್, ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ಭಾರತದ ಉಪರಾಷ್ಟ್ರಪತಿಯಾಗಿರುವ ತಮ್ಮ ಸ್ಥಾನವನ್ನು ವಿರೋಧ ಪಕ್ಷದ ಸದಸ್ಯರು ಅವಮಾನಿಸಿದ್ದಾರೆ. ಇದು ಜಾಟ್ ಸಮುದಾಯ ಹಾಗೂ ರೈತರ ಕುಟುಂಬದಿಂದ ಬಂದಿರುವ ನನ್ನ ಹಿನ್ನೆಲೆಗೆ ಮಾಡಿದ ಅವಮಾನವಾಗಿದೆ ಎಂದು ಧನ್ಖರ್ ಹೇಳಿದ್ದಾರೆ.

ತನ್ನ ನಡೆ ಸಮರ್ಥಿಸಿಕೊಂಡ ಬ್ಯಾನರ್ಜಿ:

ಪಶ್ಚಿಮ ಬಂಗಾಳದ ಸೆರಾಂಪೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ಧನ್ಖರ್ ಅವರನ್ನು ಮಿಮಿಕ್ರಿ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದರು. ಮಿಮಿಕ್ರಿ ಮಾಡುವುದು ಒಂದು ಕಲೆ ಎಂದು ಹೇಳಿದ ಅವರು, ಅದನ್ನು ಸ್ವೀಕರಿಸುವ ಹೃದಯ ಇರಬೇಕು’ ಎಂದಿದ್ದಾರೆ.

‘ನಾನು ಮಿಮಿಕ್ರಿ ಮಾಡುತ್ತಲೇ ಇರುತ್ತೇನೆ. ಅದೊಂದು ಕಲಾ ಪ್ರಕಾರ. ಬೇಕಾದರೆ ಸಾವಿರ ಬಾರಿ ಮಾಡುತ್ತೇನೆ. ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನನಗೆ ಎಲ್ಲ ಮೂಲಭೂತ ಹಕ್ಕುಗಳಿವೆ. ನೀವು ನನ್ನನ್ನು ಜೈಲಿಗೆ ಹಾಕಬಹುದು. ನಾನು ಹಿಂದೆ ಸರಿಯುವುದಿಲ್ಲ’ ಎಂದು ಬ್ಯಾನರ್ಜಿ ಸವಾಲು ಹಾಕಿದ್ದಾರೆ.

ಇದನ್ನೂ ಓದಿ; ಮಿಮಿಕ್ರಿ ಒಂದು ಕಲೆ; ಅದನ್ನು ಮೆಚ್ಚುವ ಮನಸ್ಸು ಇಲ್ಲದಿದ್ದರೆ ನಾನೇನು ಮಾಡಲಿ: ಕಲ್ಯಾಣ್ ಬ್ಯಾನರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ: ಕೆನಡಾದಲ್ಲಿ ಶಂಕಿತ ಮೂವರು ಭಾರತೀಯರ ಬಂಧನ

0
ಸಿಖ್‌ ಪ್ರತ್ಯೇಕತವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಮೂವರು ಭಾರತೀಯರನ್ನು ಕೆನಡಾ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಕೆನಡಾದಲ್ಲಿ ಕೆಲ ತಿಂಗಳ ಹಿಂದೆಯೇ ಈ ಶಂಕಿತರನ್ನು ಪೊಲೀಸರು ಗುರುತಿಸಿದ್ದು,...