Homeಕರ್ನಾಟಕವೈಯಕ್ತಿಕ ಮಾಹಿತಿ ಸೋರಿಕೆ, ಜೀವ ಬೆದರಿಕೆ; ದೂರು ದಾಖಲಿಸಿದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್‌...

ವೈಯಕ್ತಿಕ ಮಾಹಿತಿ ಸೋರಿಕೆ, ಜೀವ ಬೆದರಿಕೆ; ದೂರು ದಾಖಲಿಸಿದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್‌ ಝುಬೈರ್

- Advertisement -
- Advertisement -

ತನ್ನ ಮನೆ ವಿಳಾಸ, ಫೋನ್ ನಂಬರ್ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಲ್ಲದೆ, ಜೀವ ಬೆದರಿಕೆ ಹಾಕಿದ ವ್ಯಕ್ತಿಗಳ ವಿರುದ್ದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಝುಬೈರ್ ದೂರು ದಾಖಲಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅವರು, “ಜನರು ನನ್ನ ಮನೆ ವಿಳಾಸ, ಮೊಬೈಲ್ ನಂಬರ್ ಲೀಕ್ ಮಾಡಿದ್ದಾರೆ ಮತ್ತು ನನ್ನ ವಿಳಾಸಕ್ಕೆ ಹಂದಿ ಮಾಂಸ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಮೊದಲ ಬಾರಿಯಲ್ಲ, ನನಗೆ ಈಗಾಗಲೇ ಜೀವ ಬೆದರಿಕೆ ಇದೆ. 2023ರಲ್ಲಿ ಇದೇ ವ್ಯಕ್ತಿ ನನ್ನ ವಿಳಾಸಕ್ಕೆ ಹಂದಿ ಮಾಂಸ ಕಳುಹಿಸಿದ್ದ ಮತ್ತು ಟ್ವಿಟರ್‌ನಲ್ಲಿ ಶಿಪ್ಪಿಂಗ್ ವಿಳಾಸವನ್ನು ಹಂಚಿಕೊಂಡಿದ್ದ. ನಾನು ಬೆಂಗಳೂರು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಈ ಬಾರಿಯಾದರೂ ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ನಂಬಿದ್ದೇನೆ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಮುಂದುವರಿದು, “ಈ ಹಿಂದೆ ನಾನು ದೂರು ದಾಖಲಿಸಿದ್ದೆ. ಕೆಲ ತಿಂಗಳುಗಳ ನಂತರ ಆ ಎಫ್‌ಐಆರ್ ರದ್ದು ಮಾಡಿದರು” ಎಂದು ಝುಬೈರ್ ತಿಳಿಸಿದ್ದಾರೆ. ತನ್ನ ಪೋಸ್ಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಎಕ್ಸ್‌ ಪೋಸ್ಟ್‌ನಲ್ಲಿ ತನ್ನ ವೈಯಕ್ತಿಕ ಮಾಹಿತಿ ಬಹಿರಂಗಪಡಿಸಿದ್ದು ಮತ್ತು ಬೆದರಿಕೆ ಹಾಕಿದ್ದಕ್ಕೆ ಸಂಬಂಧಿಸಿದಂತೆ ಕೆಲ ಸ್ಕ್ರೀನ್‌ ಶಾಟ್‌ಗಳನ್ನು ಝುಬೈರ್ ಹಂಚಿಕೊಂಡಿದ್ದಾರೆ. ಅವುಗಳನ್ನು ಕೆಳಗೆ ನೋಡಬಹುದು.

ಝುಬೈರ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ವಕೀಲ ವಿನಯ್ ಶ್ರೀನಿವಾಸ್, “ಮಾನ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರೇ, ಬೆಂಗಳೂರು ಪೊಲೀಸ್ ಆಯುಕ್ತರೇ, ಝುಬೈರ್ ಕಿರುಕುಳಕ್ಕೊಳಗಾಗಿದ್ದು ಮತ್ತು ಅವರಿಗೆ ಬೆದರಿಕೆ ಹಾಕಿರುವುದು ಇದೇ ಮೊದಲಲ್ಲ. ಅವರ ಕೆಲಸ ಸಮಾಜಕ್ಕೆ ಅತ್ಯಂತ ಅಮೂಲ್ಯವಾದುದು. ತನ್ನ ಕೆಲಸಕ್ಕೆ ಪ್ರತಿಫಲ ಪಡೆಯುವ ಬದಲು ಅವರು ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ದಯವಿಟ್ಟು ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ” ಎಂದು ಬರೆದುಕೊಂಡಿದ್ದಾರೆ.

“ಸಾಮಾಜಿಕ ಮಾಧ್ಯಮದ ಹೇಡಿಗಳು ಮತ್ತು ಕ್ರಿಮಿನಲ್‌ಗಳ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳಬೇಕು. ಝುಬೈರ್ ಅವರಿಗೆ ರಕ್ಷಣೆ ಒದಗಿಸಬೇಕು ಎಂದು” ಪತ್ರಕರ್ತೆ ಅನುರಾಧ ಸೇನ್‌ಗುಪ್ತ ಆಗ್ರಹಿಸಿದ್ದಾರೆ.

ಕೊಲೆ ಬೆದರಿಕೆ, ಗುಂಪು ಹಿಂಸೆಯನ್ನು ಪ್ರಚೋದಿಸುವುದು ಮತ್ತು ಕೋಮು ಆಧಾರದಲ್ಲಿ ತಮ್ಮನ್ನು ಗುರಿ ಮಾಡಿರುವ ಬಗ್ಗೆ ದೂರಿನಲ್ಲಿ ವಿವರಿಸಿರುವ ಝುಬೈರ್, ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ ಎಂದು ವರದಿಯಾಗಿದೆ.

ಪಿಒಕೆ, ಭಯೋತ್ಪಾದನೆ ಬಗ್ಗೆ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ: ಪ್ರಧಾನಿ ಮೋದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -