Homeಮುಖಪುಟಕಾಶ್ಮೀರದ ಕುರಿತು ಅಂಬೇಡ್ಕರ್ ನಿಲುವು ಏನಾಗಿತ್ತು ಗೊತ್ತೇ?

ಕಾಶ್ಮೀರದ ಕುರಿತು ಅಂಬೇಡ್ಕರ್ ನಿಲುವು ಏನಾಗಿತ್ತು ಗೊತ್ತೇ?

- Advertisement -
- Advertisement -

ಅಂಬೇಡ್ಕರ್ ಅವರು ಆರ್ಟಿಕಲ್ 370ನ್ನು ವಿರೋಧಿಸುತ್ತಿದ್ದರು. ಅವರ ಕನಸನ್ನು ಈಗ ಬಿಜೆಪಿ ಸರ್ಕಾರ ನನಸು ಮಾಡಿದೆ ಎಂಬ ಪ್ರಚಾರ ಭರದಿಂದ ನಡೆದಿದೆ. ಪ್ರಗತಿಪರ ವಲಯದಲ್ಲೂ ಇದರಿಂದ ಗೊಂದಲ ಮೂಡಿದೆ. ನೆಹರು ಸರ್ಕಾರದ ನೀತಿ ಹಾಗೂ ಧೋರಣೆಗಳಿಂದ ಬೇಸತ್ತು 1951ರಲ್ಲಿ ಕ್ಯಾಬಿನೆಟ್ಟಿಗೆ ರಾಜಿನಾಮೆ ನೀಡುತ್ತಾ ಅಂಬೇಡ್ಕರರು ನೀಡಿರುವ ಹೇಳಿಕೆಯ ಪೂರ್ಣಪಾಠವನ್ನು ಕೆಳಗೆ ಲಗತ್ತಿಸಲಾಗಿದೆ.

ತಮ್ಮ ಹೇಳಿಕೆಯಲ್ಲಿ ತಮ್ಮ ರಾಜಿನಾಮೆಗೆ ನಾಲ್ಕು ಕಾರಣಗಳನ್ನು ನೀಡುತ್ತಾ ಮೂರನೇ ಕಾರಣ ಭಾರತದ ವಿದೇಶಿ ನೀತಿ ಎನ್ನುತ್ತಾರೆ. ಭಾರತದ ತಪ್ಪು ವಿದೇಶಿ ನೀತಿಯಿಂದಾಗಿ ಪ್ರಪಂಚದಲ್ಲಿ ಸ್ನೇಹಿತರು ಇಲ್ಲದಂತೆ ಮಾಡಿಕೊಂಡಿದೆ. ಇದರಿಂದಾಗಿ ಸೈನ್ಯಕ್ಕೆ ನಮ್ಮ ಸರ್ಕಾರದ ಒಟ್ಟು ಆದಾಯದ ಅರ್ಧ ಭಾಗವನ್ನು ಖರ್ಚು ಮಾಡಬೇಕಾಗಿ ಬಂದಿದೆ. ವಿದೇಶಿ ನೀತಿಯ ದೋಷಗಳಲ್ಲಿ ಕಾಶ್ಮೀರ ಮತ್ತು ಪಶ್ಚಿಮ ಪಾಕಿಸ್ತಾನದ ವಿಚಾರದಲ್ಲಿ ಭಾರತದ ಧೋರಣೆ ಮೂಲ ಕಾರಣಗಳಾಗಿವೆ ಎಂದು ಹೇಳುತ್ತಾ ಕಾಶ್ಮೀರ ಸಮಸ್ಯೆಯ ಕುರಿತು ಮಾತನಾಡುತ್ತಾರೆ.

ಜಮ್ಮ, ಕಾಶ್ಮೀರ ಮತ್ತು ಲಡಾಕ್ ಪ್ರದೇಶಗಳನ್ನು ಇಡಿಯಾಗಿ ಭಾರತಕ್ಕೆ ಸೇರಿಸಿಕೊಳ್ಳುತ್ತಿರುವುದು ಭವಿಷ್ಯದಲ್ಲಿ ಶಾಶ್ವತ ಸಮಸ್ಯೆಗೆ ದಾರಿ ಮಾಡಿಕೊಡಲಿದೆ. ಒಂದೋ ಧರ್ಮದ ಆಧಾರದ ಮೇಲೆ ಭಾರತ ಮತ್ತು ಪಾಕಿಸ್ತಾನವನ್ನು ವಿಭಜನೆ ಮಾಡಿಕೊಂಡಂತೆ ಜಮ್ಮು ಮತ್ತು ಲಡಾಕ್ ಪ್ರದೇಶಗಳನ್ನು ಭಾರತಕ್ಕೆ ಸೇರಿಸಿ ಕಾಶ್ಮೀರಿ ಕಣಿವೆಯನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕು. ಪಾಕಿಸ್ತಾನದ ಜೊತೆಗೆ ಇರುತ್ತಾರಾ ಪ್ರತ್ಯೇಕವಾಗಿ ಇರುತ್ತಾರಾ ಎಂಬ ಕುರಿತು ಕಾಶ್ಮೀರಿಯರು ತೀರ್ಮಾನಿಸಿಕೊಳ್ಳಬೇಕು.

ಇಲ್ಲವಾದರೆ ಯುದ್ಧ ವಿರಾಮ ಪ್ರದೇಶ, ಕಾಶ್ಮೀರಿ ಕಣಿವೆ ಪ್ರದೇಶ ಮತ್ತು ಜಮ್ಮು-ಲಡಾಕ್ ಪ್ರದೇಶ ಎಂದು ಮೂರಾಗಿ ವಿಭಾಗಿಸಿ, ಕಾಶ್ಮೀರಿ ಕಣಿವೆಯಲ್ಲಿ ಮಾತ್ರ ಜನಮತಗಣನೆ ನಡೆಸಿ ಅಲ್ಲಿನ ಜನರ ಅಭಿಪ್ರಾಯಕ್ಕೆ ತಕ್ಕಂತೆ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದು ಅವರ ನಿಲುವಾಗಿತ್ತು.

ಕಾಶ್ಮೀರಿಗಳ ಅಭಿಪ್ರಾಯಕ್ಕೆ ವಿರುದ್ಧವಾಗಿ ಅದನ್ನು ಭಾರತಕ್ಕೆ ಸೇರಿಸಿಕೊಳ್ಳುತ್ತಿರುವುದು ಅದನ್ನು ಸರಿದೂಗಿಸಲು ಇಡೀ ದೇಶಕ್ಕೆ ಒಂದು ಕಾನೂನಾದರೆ ಕಾಶ್ಮೀರಕ್ಕೆ ಪ್ರತ್ಯೇಕ ಕಾನೂನು ಮಾಡುವುದು ಸರಿಯಲ್ಲ ಎಂಬುದು ಅಂಬೇಡ್ಕರರ ನಿಲುವಾಗಿತ್ತು. ಹೇಗಾದರೂ ಮಾಡಿ ಕಾಶ್ಮೀರವನ್ನು ಭಾರತದಲ್ಲಿ ಉಳಿಸಿಕೊಳ್ಳಬೇಕೆಂದು ನೆಹರು ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ತೇಪೆ ಹಾಕುವ ಕೆಲಸ ಮಾಡಿದರು.

ಈಗ ಮೋದಿ – ಅಮಿತ್ ಶಾ ಕಾಶ್ಮೀರ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡುವ ಮಾತು ದೂರವಿರಲಿ, ಅವರ ನಾಗರಿಕ ಹಕ್ಕುಗಳನ್ನೂ ಕಸಿದುಕೊಂಡಿದೆ. ಕೇವಲ ಆರ್ಟಿಕಲ್ 370ನ್ನು ರದ್ದು ಮಾಡಿರುವುದು ಮಾತ್ರವಲ್ಲ, ಅದನ್ನು ರಾಜ್ಯವಾಗಿಯೂ ರದ್ದು ಮಾಡಿ, ಶಾಶ್ವತವಾಗಿ ಮಿಲಿಟರಿ ಆಡಳಿತ ಪ್ರದೇಶವನ್ನಾಗಿಸಿದೆ.

ಮೋದಿ – ಅಮಿತ್ ಶಾ ತೀರ್ಮಾನ ಅಂಬೇಡ್ಕರ್ ಎತ್ತಿದ ಆತಂಕದ ಪ್ರಶ್ನೆಯನ್ನು ನೂರ್ಮಡಿಗೊಳಿಸಿದೆ. ಸೈನ್ಯದ ಖರ್ಚುಗಳು, ನಷ್ಟಗಳು, ನಾಗರೀಕರ ಸಾವು-ನೋವುಗಳು, ಸಂಘರ್ಷ ತೀವ್ರಗೊಳ್ಳಲಿದೆ. ಇದರ ಸುಡುವ ಕಾವನ್ನು ಕಾಶ್ಮೀರಿಯರು ಮಾತ್ರವಲ್ಲ ಇಡೀ ಭಾರತೀಯರು ಅನುಭವಿಸಬೇಕಿದೆ.

ಕಾಶ್ಮೀರದ ಕುರಿತು ಅಂಬೇಡ್ಕರ್ ನಿಲುವು ಅವರದೇ ಬರಹ ಈ ಕೆಳಗೆ ಇಂಗ್ಲಿಷ್ ನಲ್ಲಿದೆ. ಶೀಘ್ರದಲ್ಲಿಯೇ ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸುತ್ತೇವೆ.

Below is a selected part in which ambedkar talked about his position on Kashmir issue sighting it as a one important aspect for his resignation from the union cabinet. [full text of his resignation provided separately]

The third matter which has given me cause, not merely for dissatisfaction but for actual anxiety and even worry, is the foreign policy of the country.  Any one, who has followed the course of our foreign policy and along with it the attitude of other countries towards India, could not fail to realize the sudden change that has taken place in their attitude towards us.

On 15th of August, 1947 when we began our life as an independent country, there was no country which wished us ill. Every country in the world was our friend.  Today, after four years, all our friends have deserted us.  We have no friends left.  We have alienated ourselves.  We are pursuing a lonely furrow with no one even to second our resolutions in the U.N.O.  When I think of our foreign policy, I am reminded of what Bismark and Bernard Shaw have said.  Bismark has said that “politics is not a game of realizing the ideal.  Politics is the game of the possible.”  Bernard Shaw not very long ago said that good ideals are good but one must not forget that it is often dangerous to be too good.  Our foreign policy is in complete opposition to these words of wisdom uttered by two of the world’s greatest men.
How dangerous it has been to us this policy of doing the impossible and of being too good is illustrated by the great drain on our resources made by our military expenditure, by the difficulty of getting food for our starving millions and by difficulty of getting aid for the industrialization of our country.

Out of 350 crores of rupees of revenue we raise annually, we spend about Rs. 180 crores of rupees on the Army.  It is a colossal expenditure which has hardly any parallel.  This colossal expenditure is the direct result of our foreign policy.  We have to foot the whole of our Bill for our defence ourselves because we have no friends on which we can depend for help in any emergency that may arise.  I have been wondering whether this is the right sort of foreign policy.

Our quarrel with Pakistan is a part of our foreign policy about which I feel deeply dissatisfied.  There are two grounds which have disturbed our relations with Pakistan – one is Kashmir and the other is the condition of our people in East Bengal.  I felt that we should be more deeply concerned with East Bengal where the condition of our people seems from all the newspapers intolerable than with Kashmir.  Notwithstanding this we have been staking our all on the Kashmir issue.  Even then I feel we have been fighting on an unreal issue.  The issue on which we have been fighting most of the time is, who is in the right and who is in the wrong.  The real issue to my mind is not who is right but what is right.  Taking that to be the main question, my view has always been that the right solution is to partition Kashmir.  Give the Hindu and Buddhist part to India and the Muslim part to Pakistan as we did in the case of India.  We are really not concerned with the Muslim part of Kashmir.  It is a matter between the Muslims of Kashmir and Pakistan.  They may decide the issue as they like.  Or if you like, divide into three parts; the Cease fire zone, the Valley and the Jammu-Ladhak Region and have a plebiscite only in the Valley.  What I am afraid of is that in the proposed plebiscite, which is to be an overall plebiscite, the Hindus and Buddhists of Kashmir are likely to be dragged into Pakistan against their wishes and we may have to face same problems as we are facing today in East Bengal.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಅಲ್ಲ ಕಣಯ್ಯಾ ಜ್ಞಾನಿ ಅಂಬೇಡ್ಕರ್ ಅವರು ನೀನು ಹೇಳಿದ್ದೆ ಆಗಿದೆ ಅಂದುಕೊಳ್ಳೋಣ ಹಾಗಾದರೆ ಕಾಶ್ಮೀರ ಭಾರತದಿಂದ ಬಿಟ್ಟುಕೊಡಬೇಕಾ..?? ನಾಥುರಾಮ್ ಗೋಡ್ಸೆ ಜೀ ಪರವಾಗಿ ಕೂಡ ಅವರು ವಾದ ಮಾಡುತ್ತೇನೆ ಅವರು ತಪ್ಪು ಮಾಡಿಲ್ಲ ಅನ್ಯ ಹೇಳಿದ್ದರು the letter of ambedkar ಅಲ್ಲಿ ಹಾಗಾದರೆ ನಾಥುರಾಮ್ ಪರವಾಗಿ ಅಂಬೇಡ್ಕರ್ ಜೀ ಇದ್ದರು ಅನ್ನುವುದನ್ನು ಲೇಖನದ ಮೂಲಕ ಪ್ರಕಟ ಮಾಡಿ ನೋಡೋಣ..

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...