Homeಚಳವಳಿಈ ದೇಶದಲ್ಲಿ ಅಂಬೇಡ್ಕರ್‌ರವರ ಸಂವಿಧಾನ ಪ್ರತಿನಿತ್ಯ ಕೊಲೆಯಾಗುತ್ತಿದೆ: ಶಿವಸುಂದರ್

ಈ ದೇಶದಲ್ಲಿ ಅಂಬೇಡ್ಕರ್‌ರವರ ಸಂವಿಧಾನ ಪ್ರತಿನಿತ್ಯ ಕೊಲೆಯಾಗುತ್ತಿದೆ: ಶಿವಸುಂದರ್

ಮರ್ಯಾದೆ ಹೀನ ಹತ್ಯೆ, ದಲಿತ- ದಮನಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಸಿಡಿದೆದ್ದ ಕೊಪ್ಪಳ ಚಲೋ ಹೋರಾಟ..

- Advertisement -
- Advertisement -

ಕೊಪ್ಪಳ ಜಿಲ್ಲೆಯ ಬರಗೂರಿನಲ್ಲಿ ನಡೆದ ಮಾರ್ಯಾದೆಗೇಡು ಹತ್ಯೆಗೆ ದಾನಪ್ಪ ಮಾತ್ರ ಸತ್ತಿಲ್ಲ, ನಾವೆಲ್ಲರೂ ಸತ್ತಿದ್ದೇವೆ, ಈ ದೇಶದ ಕಾನೂನು ಸತ್ತಿದೆ. ಈ ದೇಶದಲ್ಲಿ ಮನುವಾದಿಗಳಿಂದ ಪ್ರತಿದಿನವೂ ಅಂಬೇಡ್ಕರ್ ಬರೆದಿಟ್ಟ ಸಂವಿಧಾನ ಕೊಲೆಯಾಗುತ್ತಿದೆ ಎಂದು ಹೋರಾಟಗಾರ ಮತ್ತು ಚಿಂತಕ ಶಿವಸುಂದರ್ ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲೆಯಲ್ಲಿ ಜಾತಿ ಕಾರಣಕ್ಕೆ ಸಂಭವಿಸಿದ ದಾನಪ್ಪ ಹಾಗೂ ರಾಘವೇಂದ್ರ ಕೊಲೆ ಪ್ರಕರಣಗಳ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ದಲಿತ ದಮನಿತರ ಒಕ್ಕೂಟದ ವತಿಯಿಂದ ನಡೆದ ಬೃಹತ್ ಕೊಪ್ಪಳ ಚಲೋ ಬೃಹತ್ ಪ್ರತಿಭಟನೆ‌ಯನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ನಾವೆಲ್ಲರೂ ಪ್ರೀತಿ – ಮಮತೆಯಿಂದ ಬದುಕಬೇಕು, ಮನುಷ್ಯರ ಥರ ಬದುಕಬೇಕೆಂದು ಕನಸು ಕಂಡೆವು. ಆದರೆ ಜಾತಿ ಕಾರಣಕ್ಕೆ ಅದು ಪ್ರತಿದಿನ ಕೊಲೆಯಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹುಟ್ಟು ಯಾರ ಕೈಯಲ್ಲೂ ಇಲ್ಲ. ಹಾಗಾಗಿ ನಿಷ್ಕಲ್ಮಶವಾಗಿ ಒಂದು ಗಂಡು-ಹೆಣ್ಣು ಪ್ರೀತಿ ಮಾಡಿದರೆ ಅದನ್ನು ಗೌರವಿಸಬೇಕು. 18 ವರ್ಷ ತುಂಬಿದ ಎಲ್ಲರಿಗೂ ತಮಗಿಷ್ಟಬಂದವರನ್ನು ಪ್ರೀತಿಸುವ ಹಕ್ಕಿದೆ. 18 ವರ್ಷ ತುಂಬಿದವರಿಗೆ ಮತದಾನದ ಹಕ್ಕು ನೀಡಿರುವ ನಾವು ಪ್ರೀತಿಸುವ ಹಕ್ಕು ಕಿತ್ತುಕೊಳ್ಳುತ್ತಿರುವುದೇಕೆ ಎಂದು ಶಿವಸುಂದರ್ ಪ್ರಶ್ನಿಸಿದರು.


ಇದನ್ನೂ ಓದಿ: ಬರಗೂರು ಮರ್ಯಾದೆಗೇಡು ಹತ್ಯೆ ಪ್ರಕರಣ; ದುಡಿಮೆ ಬಡತನ ಕೊಟ್ಟಿತು, ಜಾತಿ ಕೊಲೆ ಮಾಡಿಸಿತು


ಪ್ರೀತಿಯನ್ನು ಕೊಲ್ಲುವುದೇ ಮನುಸ್ಮೃತಿ. ಮನುಷ್ಯತ್ವ ಉಳಿಸುವುದು ಸಂವಿಧಾನ. ಸಂವಿಧಾನವನ್ನು ಉಳಿಸಲು ಸಾರ್ವಜನಿಕ ಸಂಸ್ಥೆಗಳನ್ನು ರಚಿಸಲಾಯ್ತು. ಆದರೆ ಪ್ರತಿ ನಿತ್ಯ ನ್ಯಾಯ ಉಳಿಸಬೇಕಾದ ಜನರು ಮನುಸ್ಮೃತಿ ರಕ್ಷಿಸುತ್ತ ಸಂವಿಧಾನ ದ್ರೋಹಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿಯೇ ದಲಿತ-ದಮನಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ ಎಂದು ದೂರಿದರು.

ಪ್ರೀತಿಯನ್ನು ಕೊಲೆ ಮಾಡುವ ಕೊಲೆಗಾರರ ಜೊತೆ ನ್ಯಾಯ ನೀಡುವವರು ಶಾಮೀಲಾಗಿದ್ದಾರೆ. ಎಸ್‌ಸಿ ಎಸ್ಟಿ ಅಟ್ರಾಸಿಟಿ ಕಾಯ್ದೆಯನ್ನು ದುರ್ಬಲಗೊಳಿಸಲು ಸರ್ಕಾರ, ನ್ಯಾಯಾಂಗ ಪ್ರಯತ್ನಿಸಿತು. ಇವತ್ತು ದಲಿತರು ದಾಖಲಿಸುವ ದೂರುಗಳಲ್ಲಿ ಕೇವಲ ಶೇ.2 ರಷ್ಟು ಜನರಿಗೆ ಮಾತ್ರ ಶಿಕ್ಷೆಯಾಗುತ್ತಿದೆ. ಎಫ್‌ಐಆರ್ ದಾಖಲಾಗುವಾಗಲೇ ಪ್ರಕರಣವನ್ನು ದುರ್ಬಲಗೊಳಿಸುತ್ತದೆ. ಈ ರೀತಿಯಾಗಿ ವ್ಯವಸ್ಥಿತಿವಾಗಿ ನ್ಯಾಯ ನಿರಾಕರಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಣ್ಣ ಪುಟ್ಟ ಕೇಸುಗಳಿಗೆ ದೇಶದೋಹದ ಹೆಸರಿನಲ್ಲಿ 10-15 ವರ್ಷ ಜೈಲು ಶಿಕ್ಷೆ ವಿಧಿಸುವ ಸರ್ಕಾರಗಳು ಜಾತಿ ದೌರ್ಜನ್ಯ, ಕೊಲೆಗಳಿಗೆ ಕೇವಲ 3 ತಿಂಗಳಲ್ಲಿ ಜಾಮೀನು ಸಿಗುವಂತೆ ವರ್ತಿಸುತ್ತವೆ. ನಾನು ಎಲ್ಲರಲ್ಲಿಯೂ ಇದ್ದೀನಿ ಅಂದುಕೊಳ್ಳುವ ಧರ್ಮ ಇದ್ದರೆ ಸಂವಿಧಾನ ಉಳಿಯುತ್ತೆ. ಮೇಲು – ಕೀಳು ಪ್ರತಿಪಾದಿಸುವ ಧರ್ಮ ಬಂದರೆ ಸಂವಿಧಾನ ಸಾಯುತ್ತೆ. ಈ ದೇಶದಲ್ಲಿ ಮನುಸ್ಮೃತಿಯನ್ನು ನಾಶಗೊಳಿಸಿ, ಸಂವಿಧಾನ ಉಳಿಸುವ ಪಣ ತೊಡೋಣ ಎಂದು ಶಿವಸುಂದರ್ ಕರೆ ನೀಡಿದರು.

ಹೈಕೋರ್ಟ್ ವಕೀಲೆ ಮೈತ್ರೇಯಿ ಮಾತನಾಡಿ, “ಈ ಜಾತಿ ವ್ಯವಸ್ಥೆ ಎಂಬುದು ಒಂದು ರೋಗವಾಗಿದೆ. ಅದು ಎಲ್ಲಿಯವರೆಗೂ ಇರುತ್ತೋ ಅಲ್ಲಿಯವರೆಗೂ ದೇಶ ಮುಂದುವರೆಯುವುದಿಲ್ಲ. ಪ್ರೀತಿಸಿದವರನ್ನು ಮರ್ಯಾದೆ ಹೆಸರಲ್ಲಿ ಕೊಂದರೆ ಅದರಲ್ಲಿ ಮರ್ಯಾದೆ ಇರುವುದಿಲ್ಲ. ಅದು ಹೀನ ಕೊಲೆ ಎಂದು ಸವೋರ್ಚ ನ್ಯಾಯಾಲಯ ಹೇಳಿದೆ” ಎಂದರು.

ನಮ್ಮ ದೇಶದಲ್ಲಿ ಪ್ರತಿದಿನ ಸರಾಸರಿ 10 ದಲಿತ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಇಷ್ಟು ವರ್ಷವಾದರೂ ಸಮಾನತೆಯ ಸಮಾಜ ಕಟ್ಟಲು ಸಾಧ್ಯವಾಗಿಲ್ಲ. ಸಮಾನತೆಗಾಗಿ, ಭಾತೃತ್ವಕ್ಕಾಗಿ, ಜಾತಿವಿನಾಶದ ಸಮಾಜದ ವಿರುದ್ಧ ಸರ್ಕಾರ ಕೆಲಸ ಮಾಡುತ್ತಿದೆ. ಜಾತಿ ವಿನಾಶ ಆಗದೇ ನಿಜವಾದ ಪ್ರಜಾಪ್ರಭುತ್ವ ಜಾರಿಗೆ ಬರಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಕೊಪ್ಪಳ: ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಕೊಲೆ

ಸಾಹಿತಿ, ಹೋರಾಟಗಾರ ಬಸವರಾಜ್ ಸೂಲಿಬಾವಿ ಮಾತನಾಡಿ, “ಮೀಸಲು ಕ್ಷೇತ್ರಗಳಲ್ಲಿಯೇ ಇಂದು ದಲಿತ-ದಮನಿತರ ಮೇಲೆ ಹೆಚ್ಚು ದೌರ್ಜನ್ಯಗಳು ನಡೆಯುತ್ತಿರುವುದು ದೊಡ್ಡ ದುರಂತವಾಗಿದೆ. ಈ ಕ್ಷೇತ್ರಗಳಲ್ಲಿ ದಲಿತರು-ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರು ರಕ್ಷಣೆಗಾಗಿ ಆ ಕ್ಷೇತ್ರಗಳನ್ನು ಮೀಸಲು ಎಂದು ಘೋಷಿಸಲಾಯ್ತು. ಆದರೆ ಅಲ್ಲಿನ ಜನಪ್ರತಿನಿಧಿಗಳು ಈ ಸಮುದಾಯದ ಜನರ ಹಿತ ಕಾಯಲು ವಿಫಲರಾಗಿ ಮೇಲ್ಜಾತಿ ಜನರ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವುದೇ ಇಂತಹ ದೌರ್ಜನ್ಯಗಳಿಗೆ ಕಾರಣ” ಎಂದು ವಿಷಾಧ ವ್ಯಕ್ತಪಡಿಸಿದರು.

ದಾನಪ್ಪ, ರಾಘವೇಂದ್ರ ಕೊಲೆ ಕುರಿತು ಹಾಲಿ ಶಾಸಕ ಬಸವರಾಜ್ ದಡೆಸಗೂರು, ಮಾಜಿ ಶಾಸಕ ಶಿವರಾಜ್ ತಂಗಡಗಿ ಏಕೆ ಮಾತನಾಡಿಲ್ಲ? ಅವರು ಯಾರನ್ನು ಪ್ರತಿನಿಧಿಸುತ್ತಿದ್ದಾರೆ, ಕೊಂದವರು ಮಾತ್ರವಲ್ಲದೆ ಜಾತಿ ವ್ಯವಸ್ಥೆಯನ್ನು ಸಮರ್ಥನೆ ಮಾಡುವ ಎಲ್ಲರೂ ಕೊಲೆಗಾರರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ ಮಾತನಾಡಿ “ಈ ಲಾಕ್‌ಡೌನ್‌ ಅವಧಿಯಲ್ಲಿ ಹತ್ತಾರು ಮರ್ಯಾದೆಹೀನ ಹತ್ಯೆಗಳು ಸಂಭವಿಸಿವೆ. ಬಿಜಾಪುರದ ದೇವರ ಹಿಪ್ಪರಗಿಯಲ್ಲಿ ಅಂತರ್ಜಾತಿ ಮದುವೆಯಾದ ದಂಪತಿಯನ್ನು ಇಂದು ಕೊಲ್ಲಲಾಗಿದೆ. ಮೈಸೂರಿನ ಪಿರಿಯಾಪಟ್ಟಣದಲ್ಲಿ ಕೊಲೆಯಾಗಿದೆ. ಬರಗೂರಿನಲ್ಲಿ ಹತ್ಯೆಯಾಗಿದೆ. ನಾಳೆ ಬೆಳಿಗ್ಗೆ ನಾವು ಯಾವ ಆಸ್ಪತ್ರೆಯಲ್ಲಿ ಕೋವಿಡ್ ಬಂದು ಸಾಯುತ್ತೇವೆ ಎಂಬುದು ಗೊತ್ತಿರಲಿಲ್ಲದಿದ್ದರೂ ಜನ ಜಾತಿಗಾಗಿ ಕೊಲೆ ಮಾಡುತ್ತಿದ್ದರೆ ಎಂದರೆ ಎಷ್ಟರ ಮಟ್ಟಿಗೆ ಜಾತಿ ವಿಷ ಜನರಲ್ಲಿ ಬೇರೂರಿದೆ” ಎಂದು ವಿ‍ಷಾಧ ವ್ಯಕ್ತಪಡಿಸಿದರು.

ಕೋವಿಡ್‌ಗಿಂತಲೂ ದೊಡ್ಡ ಕೊಲೆಗಡುಕ ವೈರಸ್ ಎಂದರೆ ಅದು ಜಾತಿ ವೈರಸ್ ಆಗಿದೆ. ಈ ಹಿಂದೆಯೂ ಮರ್ಯಾದೆಗೇಡು ಹತ್ಯೆಗಳು, ಜಾತಿ ದೌರ್ಜನ್ಯಗಳು ನಡೆಯುತ್ತಿದ್ದವು. ಆದರೆ ಇಂದು ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ಈ ಕೊಲೆಗಳಿಗೆ ಕಾನೂನಿನ ಮಾನ್ಯತೆ ನೀಡುವ ಕೆಲಸ ಮಾಡುತ್ತಿವೆ. ಗೋಹತ್ಯೆ ನಿಷೇಧ ಕಾಯ್ದೆಯ ಹೆಸರಿನಲ್ಲಿ ದಲಿತ ದಮನಿತರ ಶೋಷಣೆಗೆ ರಹದಾರಿ ನೀಡಿವೆ. ಈ ಮತೀಯವಾದಿ ಸರ್ಕಾರ, ಮನುವಾದ ಸರ್ಕಾರ ಕೊಲೆಗಡುಕರನ್ನು ರಕ್ಷಣೆ ಮಾಡುವಲ್ಲಿ ನಿರತವಾಗಿದೆ. ಇದರ ವಿರುದ್ಧ ನಿರಂತರವಾಗಿ ದನಿಯೆತ್ತಬೇಕಾಗಿದೆ ಎಂದರು.

ಹೋರಾಟದಲ್ಲಿ “ದಲಿತ-ದಮನಿತರ ಮೇಲಿನ ಕೊಲೆ ದೌರ್ಜನ್ಯಗಳು ನಿಲ್ಲಲೇಬೇಕು. ದಾನಪ್ಪ – ರಾಘವೇಂದ್ರರ ಕೊಲೆಯ ಪ್ರಕರಣಗಳ ನ್ಯಾಯಾಂಗ ತನಿಖೆಯಾಗಲೇಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಜಿಲ್ಲೆಯಲ್ಲಿ ದೌರ್ಜನ್ಯಗಳನ್ನು ತಡೆಗಟ್ಟದ ಜಿಲ್ಲಾಡಳಿತದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು” ಎಂಬ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಹೋರಾಟಗಾರರಾದ ಡಿ.ಎಚ್ ಪೂಜಾರ್, ಕರಿಯಪ್ಪ ಗುಡಿಮನಿ, ಭಾರದ್ವಾಜ್ ಸೇರಿದಂತೆ ಇತರರು ಮಾತನಾಡಿದರು.


ಇದನ್ನೂ ಓದಿ: ಕೊಪ್ಪಳದಲ್ಲಿ ಕ್ರೌರ್ಯ: ಕ್ಷೌರಕ್ಕೆ ಬಂದ ದಲಿತ ಯುವಕರ ಮೇಲೆ ಹಲ್ಲೆ – ಆತ್ಮಹತ್ಯೆಗೆ ಯತ್ನಿಸಿದ ಸಂತ್ರಸ್ತ ಯುವಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ ಹಾಡಿದ ಪ್ರಕರಣ : ತನಿಖೆಗೆ ಆದೇಶಿಸಿದ ಸರ್ಕಾರ

ಹೊಸದಾಗಿ ಚಾಲನೆ ನೀಡಲಾದ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ಸಂಚಾರದ ವೇಳೆ ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ (ಗಾನ ಗೀತಂ) ಹಾಡಿದ ಬಗ್ಗೆ ತನಿಖೆಗೆ ಕೇರಳದ ಪ್ರಾಥಮಿಕ ಶಿಕ್ಷಣ ಸಚಿವ...

ಬಿಹಾರ ಚುನಾವಣೆ | ಎಲ್‌ಜೆಪಿ ಸಂಸದೆಯ ಎರಡೂ ಕೈಗಳಲ್ಲಿ ಮತದಾನದ ಶಾಯಿ ಗುರುತು; ಮತಗಳ್ಳತನ ಆರೋಪ

ಬಿಹಾರದಲ್ಲಿ ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಎನ್‌ಡಿಎ ಭಾಗವಾಗಿರುವ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಸಂಸದೆ ಶಾಂಭವಿ ಚೌಧರಿ ಅವರ ಎರಡೂ ಕೈಗಳಲ್ಲಿ ಮತದಾನದ ಗುರುತಿನ ಶಾಯಿ ಕಂಡುಬಂದಿದೆ. ಈ...

ಗೋಲ್ಪಾರದಲ್ಲಿ ತೆರವು ಕಾರ್ಯಾಚರಣೆ ಪುನರಾರಂಭಿಸಿದ ಅಸ್ಸಾಂ ಸರ್ಕಾರ : ನೆಲೆ ಕಳೆದುಕೊಳ್ಳಲಿರುವ 600 ಕುಟುಂಬಗಳು

ದಹಿಕಾಟಾ ಮೀಸಲು ಅರಣ್ಯದೊಳಗಿನ 1,140 ಬಿಘಾ (376 ಎಕರೆಗೂ ಹೆಚ್ಚು) ಅರಣ್ಯ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲು ಅಸ್ಸಾಂ ಸರ್ಕಾರ ಭಾನುವಾರ (ನ.9) ಗೋಲ್ಪಾರ ಜಿಲ್ಲೆಯಲ್ಲಿ ತನ್ನ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಇದರಿಂದ...

ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಆರೋಪ : ತನಿಖೆಗೆ ಆದೇಶಿಸಿದ ಸರ್ಕಾರ

ತಿರುವನಂತಪುರದ ಕೇರಳ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪದ ಕುರಿತ ತನಿಖೆಗೆ ಉನ್ನತ ಶಿಕ್ಷಣ ಸಚಿವೆ ಆರ್‌.ಬಿಂದು ಶನಿವಾರ (ನ.8) ಆದೇಶಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ...

ಅಂಡಮಾನ್, ನಿಕೋಬಾರ್ ದ್ವೀಪಗಳಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು (ನ.9, 2025) ಮಧ್ಯಾಹ್ನ 12:06ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಭೂಮಿಯ 90 ಕಿಲೋ ಮೀಟರ್ ಆಳದಲ್ಲಿ...

ತರಬೇತಿ ನಿರತ ಪೊಲೀಸರಿಗೆ ಭಗವದ್ಗೀತೆ ಪಠಿಸಲು ಆದೇಶ : ಇಲಾಖೆಯ ಕೇಸರೀಕರಣ ಎಂದ ಕಾಂಗ್ರೆಸ್

ಎಂಟು ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಮಧ್ಯಪ್ರದೇಶದ ಸುಮಾರು 4,000 ಹೊಸದಾಗಿ ನೇಮಕಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಿಂದೂ ಮಾಸದ ಮಾರ್ಗಶಿರದಲ್ಲಿ ಪ್ರತಿದಿನ ಸಂಜೆ 'ಭಗವದ್ಗೀತೆ'ಯ ಅಧ್ಯಾಯಗಳನ್ನು ಓದಲು ನಿರ್ದೇಶಿಸಲಾಗಿದೆ. ತರಬೇತಿಯಲ್ಲಿರುವ ಕಾನ್‌ಸ್ಟೆಬಲ್‌ಗಳಿಗೆ ನೀತಿವಂತ ಮತ್ತು ಶಿಸ್ತಿನ...

ಪಶ್ಚಿಮ ಬಂಗಾಳ : ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ

ನಾಲ್ಕು ವರ್ಷ ವಯಸ್ಸಿನ ಹೆಣ್ಣು ಮಗುವನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಶುಕ್ರವಾರ (ನ.7) ರಾತ್ರಿ ಈ ಘಟನೆ ನಡೆದಿದೆ. ಅಪರಿಚಿತರು ದುಷ್ಕೃತ್ಯವೆಸಗಿದ್ದಾರೆ. ಮಗುವಿನ...

ವಂದೇ ಭಾರತ್‌ ರೈಲಿನಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಮಕ್ಕಳು, ವಿಡಿಯೋ ಹಂಚಿಕೊಂಡ ರೈಲ್ವೆ : ತೀವ್ರ ವಿರೋಧ

ಶನಿವಾರ (ನ.8) ಎರ್ನಾಕುಲಂ-ಬೆಂಗಳೂರು ನಡುವಿನ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಆರ್‌ಎಸ್‌ಎಸ್‌ ಗೀತೆ ಹಾಡಿರುವ ವಿಡಿಯೋವನ್ನು ದಕ್ಷಿಣ ರೈಲ್ವೆ ಹಂಚಿಕೊಂಡಿದ್ದು, ಕೇರಳದಲ್ಲಿ ತೀವ್ರ ಆಕ್ಷೇಪ...

ಶಾಲಾ ಮಕ್ಕಳಿಗೆ ನ್ಯೂಸ್ ಪೇಪರ್‌ನಲ್ಲಿ ಬಿಸಿಯೂಟ ಬಡಿಸಿದ ವಿಡಿಯೋ ವೈರಲ್ : ಪ್ರಧಾನಿ, ಸಿಎಂಗೆ ನಾಚಿಕೆಯಾಗ್ಬೇಕು ಎಂದ ರಾಹುಲ್ ಗಾಂಧಿ

ಮಧ್ಯಪ್ರದೇಶದ ಶಾಲೆಯೊಂದರ ಮಕ್ಕಳು ನ್ಯೂಸ್‌ ಪೇಪರ್‌ನಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, "ಇಂತಹ ದಯನೀಯ ಸ್ಥಿತಿಯಲ್ಲಿ ಭಾರತದ ಭವಿಷ್ಯ ಬೆಳಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮೋಹನ್...

ಬಿಹಾರ ಚುನಾವಣೆ : ರಸ್ತೆ ಬದಿ ಪತ್ತೆಯಾದ ವಿವಿಪ್ಯಾಟ್‌ ಸ್ಲಿಪ್‌ಗಳು

ಬಿಹಾರದ ಸಮಸ್ತಿಪುರ ಜಿಲ್ಲೆಯ ಶೀತಲ್‌ಪಟ್ಟಿ ಗ್ರಾಮದ ಎಸ್‌ಆರ್ ಕಾಲೇಜು ಬಳಿ ಭಾರೀ ಸಂಖ್ಯೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್‌) ಸ್ಲಿಪ್‌ಗಳು ಪತ್ತೆಯಾಗಿದ್ದು, ಭಾರತೀಯ ಚುನಾವಣಾ ಆಯೋಗ (ಇಸಿಐ) ಶನಿವಾರ...