Homeಮುಖಪುಟಎಫ್‌ಐಆರ್‌ಗೂ ಮೊದಲಿನ ಹೇಳಿಕೆ ತಪ್ಪೊಪ್ಪಿಗೆ ಆಗಲಾರದು: ಸೆಕ್ಷನ್ 160 ಕುರಿತು ಸುಪ್ರೀಂ ಕೋರ್ಟ್

ಎಫ್‌ಐಆರ್‌ಗೂ ಮೊದಲಿನ ಹೇಳಿಕೆ ತಪ್ಪೊಪ್ಪಿಗೆ ಆಗಲಾರದು: ಸೆಕ್ಷನ್ 160 ಕುರಿತು ಸುಪ್ರೀಂ ಕೋರ್ಟ್

- Advertisement -
- Advertisement -

ಎಫ್‌ಐಆರ್ ದಾಖಲಿಸುವ ಮೊದಲು ಪೊಲೀಸರು ವಿವೇಚನಾಯುಕ್ತ ಅಥವಾ ಮುಕ್ತ ವಿಚಾರಣೆ ನಡೆಸುವಾಗ ಜನರಿಂದ ಪಡೆದ ಮಾಹಿತಿಯನ್ನು ಐಪಿಸಿ ಸೆಕ್ಷನ್ 160 ರ ಅಡಿಯಲ್ಲಿ ‘ಹೇಳಿಕೆ’ ಎಂದು ಗುರುತಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಆದ್ದರಿಂದ ಅವುಗಳನ್ನು ವಿಚಾರಣೆ ಸಂದರ್ಭದಲ್ಲಿ ಆರೋಪಿಗಳ ವಿರುದ್ಧ ಬಳಸಲಾಗದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ ಎಂದು ಲೈವ್ ಲಾ ವರದಿ ಮಾಡಿದೆ.

ವಿಚಾರಣೆಗೆ ಸಾಕ್ಷಿಗಳ ಹಾಜರಾತಿ ಅಗತ್ಯವಿರುವಂತೆ ನೋಡಿಕೊಳ್ಳುವ ಪೊಲೀಸ್ ಅಧಿಕಾರಿಯ ಅಧಿಕಾರವನ್ನು ಈ ಸೆಕ್ಷನ್ ನಿರ್ವಹಿಸುತ್ತದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಂ.ಆರ್. ಶಾ ಅವರಿದ್ದ ಪೀಠವು, “ಅಂತಹ ಹೇಳಿಕೆಯನ್ನು ತಪ್ಪೊಪ್ಪಿಗೆಯೆಂದು ಪರಿಗಣಿಸಲಾಗುವುದಿಲ್ಲ. ಹಾಗಿದ್ದಲ್ಲಿ, ಅದು ಸ್ವಯಂ-ದೋಷಾರೋಪಣೆಯಾಗಿದೆ ಎಂಬ ವಾದವು ಉದ್ಭವಿಸುತ್ತದೆ. ಆದ್ದರಿಂದ ಅದನ್ನು ಅನುಮತಿಸಲಾಗುವುದಿಲ್ಲ” ಎಂದು ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ: ಮೋದಿಗೆ ಪರ್ಯಾಯ ಅರವಿಂದ್ ಕೇಜ್ರಿವಾಲ್ – ಮನೀಶ್ ಸಿಸೋಡಿಯಾ ಹೇಳಿಕೆ

ಅಂತಹ ವಿಚಾರಣೆಯ ಸಂದರ್ಭದಲ್ಲಿ ಸ್ವೀಕರಿಸಿದ ಹೇಳಿಕೆಯು ಅಪರಾಧವನ್ನು ಬಹಿರಂಗಪಡಿಸಲಾಗಿದೆಯೆ ಮತ್ತು ಇಲ್ಲವೇ ಎಂಬುದನ್ನು ಕಂಡುಹಿಡಿಯುವ ಉದ್ದೇಶಕ್ಕೆ ಮಾತ್ರ ಸಹಾಯ ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವಿಚಾರಣೆಗಳಲ್ಲಿ ತಪ್ಪೊಪ್ಪಿಗೆಯ ಪಾತ್ರವು ಯಾವಾಗಲೂ ಆಕ್ಟಿವಿಸ್ಟ್‌ಗಳು ಮತ್ತು ಕಾನೂನು ತಜ್ಞರ ಟೀಕೆಗೆ ಗುರಿಯಾಗಿದೆ. ದೆಹಲಿಯಲ್ಲಿ 2020 ರ ಫೆಬ್ರವರಿಯಲ್ಲಿ ನಡೆದ ಗಲಭೆಗಳ ಬಗ್ಗೆ ದೆಹಲಿ ಪೊಲೀಸರ ತನಿಖೆಯ ಕುರಿತು ನ್ಯಾಯಮೂರ್ತಿಗಳು ಗಮನ ಸೆಳೆದಿದ್ದಾರೆ.

ಸೆಕ್ಷನ್ 160 ರ ಅಡಿಯಲ್ಲಿ ಒಬ್ಬ ವ್ಯಕ್ತಿಗೆ ನಾಗ್ಪುರ ಪೊಲೀಸರು ನೀಡಿದ ನೋಟಿಸ್ ವಿರುದ್ಧದ ಸವಾಲನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್ ವಿರುದ್ಧದ ಮೇಲ್ಮನವಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.


ಇದನ್ನೂ ಓದಿ: ತ್ರಿವಳಿ ಕೊಲೆ ಪ್ರಕರಣ: ಹೆಂಡತಿ, ಮಕ್ಕಳನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...