Homeಮುಖಪುಟಅಣೆಕಟ್ಟು ಯೋಜನೆಯ ಟೆಂಡರ್‌ ಸಿಕ್ಕಿದ ಬೆನ್ನಲ್ಲಿ 45 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ ಖರೀದಿಸಿದ ಬಿಜೆಪಿ...

ಅಣೆಕಟ್ಟು ಯೋಜನೆಯ ಟೆಂಡರ್‌ ಸಿಕ್ಕಿದ ಬೆನ್ನಲ್ಲಿ 45 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ ಖರೀದಿಸಿದ ಬಿಜೆಪಿ ಸಂಸದನ ಮಾಲಕತ್ವದ ಕಂಪೆನಿ

- Advertisement -
- Advertisement -

ಚುನಾವಣಾ ಬಾಂಡ್‌ ಕುರಿತು ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ ಯಾವ ಯಾವ ಕಂಪೆನಿಗಳು ಚುನಾವಣಾ ಬಾಂಡ್‌ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ ಎಂಬ ಬಗ್ಗೆ ಒಂದೊಂದಾಗಿ ಮಾಹಿತಿಗಳು ಬಯಲಾಗುತ್ತಿದೆ. ಇದೀಗ ಬಿಜೆಪಿ ರಾಜ್ಯಸಭಾ ಸಂಸದ ಚಿಂತಕುಂಟಾ ಮುನುಸ್ವಾಮಿ ರಮೇಶ್ ಮಾಲಕತ್ವದ ಆಂಧ್ರಪ್ರದೇಶ ಮೂಲದ ಮೂಲಸೌಕರ್ಯ ಕಂಪನಿಯು ಹಿಮಾಚಲ ಪ್ರದೇಶದ ಪ್ರಮುಖ ಯೋಜನೆಗೆ ಟೆಂಡರ್‌ ಪಡೆದ ಮೂರೇ ತಿಂಗಳಲ್ಲಿ 45 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ ಎನ್ನುವುದು ಬಯಲಾಗಿದೆ.

ಹೈದರಾಬಾದ್-ಪ್ರಧಾನ ಕಛೇರಿಯ ರಿತ್ವಿಕ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಹಿಮಾಚಲ ಪ್ರದೇಶದಲ್ಲಿ ಸುನ್ನಿ ಜಲವಿದ್ಯುತ್ ಯೋಜನೆಯ ಒಪ್ಪಂದದ ಪತ್ರವನ್ನು ಜನವರಿ 14, 2023ರಂದು ನೀಡಲಾಗಿದೆ. ಜನವರಿ 27, 2023ರಂದು ಈ ಕಂಪೆನಿ 5 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದೆ.

ಮಾರ್ಚ್ 22 2023ರಂದು, ಸರಕಾರದ ಅಧೀನದ SVJN ಲಿಮಿಟೆಡ್, 1,098 ಕೋಟಿ ಮೌಲ್ಯದ ಯೋಜನೆಗೆ ರಿತ್ವಿಕ್ ಪ್ರಾಜೆಕ್ಟ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದಾದ ಮೂರೇ ವಾರಗಳಲ್ಲಿ ಅಂದರೆ ಏಪ್ರಿಲ್ 11, 2023ರಂದು, ರಿಥ್ವಿಕ್ ಪ್ರಾಜೆಕ್ಟ್ಸ್ ಮತ್ತೆ 40 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ನ್ನು ಖರೀದಿಸಿದೆ. SBI ಸಂಪೂರ್ಣ ಡೇಟಾವನ್ನು ಬಿಡುಗಡೆ ಮಾಡಿದಾಗ ಮಾತ್ರ ರಿತ್ವಿಕ್ ಪ್ರಾಜೆಕ್ಟ್‌ಗಳು ಯಾವ ಪಕ್ಷಕ್ಕೆ ದೇಣಿಗೆ ನೀಡಿವೆ ಎಂಬುದು ಸ್ಪಷ್ಟವಾಗುತ್ತದೆ, ಸಧ್ಯ ರಿತ್ವಿಕ್‌ ಯಾವ ಪಕ್ಷಕ್ಕೆ ಈ ದೇಣಿಗೆ ನೀಡಿದ್ದಾರೆ ಎನ್ನವುದು ಇನ್ನೂ ಸ್ಪಷ್ಟವಾಗಿಲ್ಲ.

ರಿಥ್ವಿಕ್ ಪ್ರಾಜೆಕ್ಟ್ಸ್ ಮುಖ್ಯಸ್ಥರೂ ಆಗಿರುವ ಸಂಸದ ಚಿಂತಕುಂಟಾ ಮುನುಸ್ವಾಮಿ ರಮೇಶ್, 2018ರಲ್ಲಿ 74 ಕೋಟಿ ರೂಪಾಯಿಗಳ ಅವ್ಯವಹಾರದ ಬಗ್ಗೆ ಆದಾಯ ತೆರಿಗೆ ಇಲಾಖೆ ಆಪಾದಿಸಿದ ಕೆಲವೇ ತಿಂಗಳ ನಂತರ, ಟಿಡಿಪಿಯಿಂದ ಬಿಜೆಪಿಗೆ ಸೇರಿದ್ದರು.

ರಿಥ್ವಿಕ್ ಪ್ರಾಜೆಕ್ಟ್ಸ್ ಗಣಿಗಾರಿಕೆ ಮತ್ತು ನೀರಾವರಿಯಿಂದ ಹೆದ್ದಾರಿಗಳು ಮತ್ತು ಮೂಲಸೌಕರ್ಯಗಳವರೆಗಿನ ಪ್ರಾಜೆಕ್ಟ್‌ಗಳನ್ನು ಮಾಡುತ್ತದೆ. ಕಂಪನಿಯು ಜಮ್ಮುವಿನ ಜಗ್ತಿ ನಗ್ರೋಟಾದಲ್ಲಿ ಕಾಶ್ಮೀರಿ ವಲಸಿಗರಿಗೆ ಮಿನಿ ಟೌನ್‌ಶಿಪ್ ಮತ್ತು ಆಂಧ್ರಪ್ರದೇಶದ ಪಲೇರು ಅಣೆಕಟ್ಟಿನಂತಹ ಯೋಜನೆಗಳ ಟೆಂಡರ್‌ ಕೂಡ ಪಡೆದಿದೆ.

2012ರಿಂದ ರಿತ್ವಿಕ್ ಪ್ರಾಜೆಕ್ಟ್‌ಗಳ ವ್ಯವಹಾರಗಳಲ್ಲಿ ಯಾವುದೇ ಭಾಗಿಯಾಗಿಲ್ಲ ಎಂದು ರಮೇಶ್ ಹೇಳಿಕೊಂಡಿದ್ದಾರೆ. ಆದರೆ, ಅವರ ಸಹೋದರ ಇನ್ನೂ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ ಮತ್ತು ಅವರ ಮಗ ರಿತ್ವಿಕ್ ಸಂಸ್ಥೆಯ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ವಹಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯು 2018ರಲ್ಲಿ ರಿಥ್ವಿಕ್ ಪ್ರಾಜೆಕ್ಟ್‌ಗಳು 74 ಕೋಟಿ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿ ಸಂಸ್ಥೆಯ ಮೇಲೆ ದಾಳಿ ಮಾಡಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಕಳೆದ ವರ್ಷ, ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿಯು ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಘೋಷಿತ ಸಂಪತ್ತು ಹೊಂದಿರುವ ಸಂಸದರಲ್ಲಿ ಅವರ ಹೆಸರನ್ನು ಉಲ್ಲೇಖಿಸಿತ್ತು. ರಮೇಶ್ ಅವರು 258 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದರು.

ಇದನ್ನು ಓದಿ: ಚುನಾವಣಾ ಬಾಂಡ್‌: ತೆಲಂಗಾಣ ಮೂಲದ ಕಂಪೆನಿಯಿಂದ ಅತಿ ಹೆಚ್ಚು ದೇಣಿಗೆ ಪಡೆದಿದ್ದ ಜೆಡಿಎಸ್‌

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...