Homeಮುಖಪುಟಚುನಾವಣಾ ಬಾಂಡ್‌: ತೆಲಂಗಾಣ ಮೂಲದ ಕಂಪೆನಿಯಿಂದ ಅತಿ ಹೆಚ್ಚು ದೇಣಿಗೆ ಪಡೆದಿದ್ದ ಜೆಡಿಎಸ್‌

ಚುನಾವಣಾ ಬಾಂಡ್‌: ತೆಲಂಗಾಣ ಮೂಲದ ಕಂಪೆನಿಯಿಂದ ಅತಿ ಹೆಚ್ಚು ದೇಣಿಗೆ ಪಡೆದಿದ್ದ ಜೆಡಿಎಸ್‌

- Advertisement -
- Advertisement -

ಚುನಾವಣಾ ಬಾಂಡ್‌ ಕುರಿತು ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ ಯಾವ ಯಾವ ಪಕ್ಷಗಳು ಚುನಾವಣಾ ಬಾಂಡ್‌ ಮೂಲಕ ಯಾವ ಕಂಪೆನಿಗಳಿಂದ ಎಷ್ಟು ದೇಣಿಗೆ ಪಡೆದಿದೆ ಎಂಬ ಬಗ್ಗೆ ಒಂದೊಂದಾಗಿ ಮಾಹಿತಿಗಳು ಬಯಲಾಗುತ್ತಿದೆ. ಇದೀಗ ಜೆಡಿಎಸ್‌ ಪಕ್ಷವು ಒಟ್ಟು 89.75 ಕೋಟಿ ಚುನಾವಣಾ ಬಾಂಡ್‌ ಪಡೆದಿದ್ದು, ತೆಲಂಗಾಣ ಮೂಲದ ಕಂಪೆನಿಯಿಂದ ಚುನಾವಣಾ ಬಾಂಡ್‌ ಮೂಲಕ ಅತಿ ಹೆಚ್ಚು ದೇಣಿಗೆಯನ್ನು ಪಡೆದಿದೆ ಎನ್ನುವುದು ಬಯಲಾಗಿದೆ.

ಚುನಾವಣಾ ಆಯೋಗ ನಿನ್ನೆ ರಾಜಕೀಯ ಪಕ್ಷಗಳು 2019ರಿಂದ ಸ್ವೀಕರಿಸಿದ ಚುನಾವಣಾ ಬಾಂಡ್‌ಗಳ ಬಗ್ಗೆ ಹೊಸ ಮಾಹಿತಿಯನ್ನು ಸಾರ್ವಜನಿಕಗೊಳಿಸಿದೆ. ಇದರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಅತಿ ಹೆಚ್ಚು ದೇಣಿಗೆಗಳನ್ನು ಪಡೆದಿರುವ ಪಕ್ಷಗಳ ಬಗ್ಗೆ ಕೂಡ ಮಾಹಿತಿ ಲಭ್ಯವಾಗಿದೆ. ಚುನಾವಣಾ ಬಾಂಡ್‌ ಪಡೆದ ನಾಲ್ಕು ಪ್ರಾದೇಶಿಕ ಪಕ್ಷಗಳಲ್ಲಿ ಜೆಡಿಎಸ್‌ ಕೂಡ ಸೇರಿದೆ. ಇದಲ್ಲದೆ ತಮಿಳುನಾಡಿನ ಎಐಎಡಿಎಂಕೆ ಮತ್ತು ಡಿಎಂಕೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಡೆದಿರುವ ಚುನಾವಣಾ ಬಾಂಡ್‌ ಬಗ್ಗೆ ಕೂಡ ಮಾಹಿತಿ ಈ ಮೂಲಕ ಲಭ್ಯವಾಗಿದೆ.

ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ನಿಂದ ಅತಿ ಹೆಚ್ಚು ದೇಣಿಗೆ ಪಡೆದ ಜೆಡಿಎಸ್

ಜೆಡಿಎಸ್‌ ಪಕ್ಷವು  89.75 ಕೋಟಿರೂ. ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಯನ್ನು ಪಡೆದಿದ್ದು, ಅದರಲ್ಲಿ ಹೆಚ್ಚಿನ ಅಂದರೆ  50 ಕೋಟಿ ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL)ನಿಂದ ಪಡೆದಿದೆ. ಕರ್ನಾಟಕದಲ್ಲಿ ಕಂಪನಿಗಳ ಕೊರತೆಯಿಲ್ಲ, ಆದರೆ ಕರ್ನಾಟಕ ಮೂಲದ ಪ್ರಾದೇಶಿಕ ಪಕ್ಷವು ಹೈದರಾಬಾದ್ ಮೂಲದ ಇನ್ಫ್ರಾ ಮೇಜರ್‌ನಿಂದ ದೇಣಿಗೆ ಪಡೆದಿರುವುದು ಅಚ್ಚರಿಯನ್ನು ಮೂಡಿಸಿದೆ.

ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ರಾಷ್ಟ್ರೀಯವಾಗಿ ಚುನಾವಣಾ ಬಾಂಡ್‌ಗಳ ಖರೀದಿದಾರರಲ್ಲಿ ಅಗ್ರ ಎರಡನೇ ಸ್ಥಾನದಲ್ಲಿದೆ. ಕಂಪನಿಯು 2019 ಮತ್ತು 2023ರ ನಡುವೆ 966 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. MEIL ಈಗ TV9 ನೆಟ್‌ವರ್ಕ್‌ನಲ್ಲಿ ಪ್ರಮುಖ ಪಾಲನ್ನು ಹೊಂದಿದೆ.

MEIL ನಿಂದ JD(S) ಗೆ ಮೊದಲ ಬಾಂಡ್‌ನ್ನು ಜನವರಿ 2019ರಲ್ಲಿ ನೀಡಲಾಗಿದೆ. ಉಳಿದ 40 ಕೋಟಿ ರೂ.ಗಳು ಏಪ್ರಿಲ್ 18, 2023ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ಮಧ್ಯದ ವೇಳೆ ಜೆಡಿಎಸ್‌ಗೆ ದೊರೆತಿದೆ. ಏಪ್ರಿಲ್ 21ರಂದು ತೆಲಂಗಾಣದಲ್ಲಿ ಆಡಳಿತ ಪಕ್ಷವಾಗಿದ್ದ ಕೆ. ಚಂದ್ರಶೇಖರ್ ರಾವ್ ಅವರ ಬಿಆರ್‌ಎಸ್‌ ಪಕ್ಷ ಕರ್ನಾಟಕ ಚುನಾವಣೆಯಲ್ಲಿ ಜೆಡಿಎಸ್‌ನ್ನು ಬೆಂಬಲಿಸುವುದಾಗಿ ಸಾರ್ವಜನಿಕವಾಗಿ ಘೋಷಿಸಿತ್ತು ಮತ್ತು ರಾಜ್ಯದಲ್ಲಿ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿತ್ತು. ಅಂತಿಮವಾಗಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ್ನು ಸೋಲಿಸಿ ಕಾಂಗ್ರೆಸ್ ಗೆದ್ದಿದೆ. ಆ ಬಳಿಕದ ಬೆಳವಣಿಗೆಯಲ್ಲಿ ಜೆಡಿಎಸ್ ಮೋದಿ ಪಾಳಯದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಮತ್ತು ಈಗ ಎನ್‌ಡಿಎ ಭಾಗವಾಗಿದ್ದಾರೆ. ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ.

ಜೆಡಿಎಸ್ ಸಲ್ಲಿಸಿದ ಮಾಹಿತಿ ಪ್ರಕಾರ ಪಕ್ಷವು ಬೈಕಾನ್ ಲಿಮಿಟೆಡ್‌ನಿಂದ 1 ಕೋಟಿ ರೂ. ಪಡೆದಿದೆ ಎಂದು ಹೇಳುತ್ತದೆ. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವಾರ ಹೊರಡಿಸಿದ ಬಾಂಡ್-ಖರೀದಿದಾರರ ಪಟ್ಟಿಯಲ್ಲಿ ಈ ಬಗ್ಗೆ ಮಾಹಿತಿ ಕಂಡು ಬಂದಿಲ್ಲ. ಪಕ್ಷವು ಇನ್ಫೋಸಿಸ್, ಎಂಬಸಿ ಗ್ರೂಪ್ ಆಫ್ ಕಂಪನಿಗಳು, ಹೆಲ್ತ್ ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್, ಶಾಹಿ ಎಕ್ಸ್‌ಪೋರ್ಟ್ಸ್ ಪ್ರೈ. ಲಿಮಿಟೆಡ್., ಶಂಕರನಾರಾಯಣ ಕನ್ಸ್ಟ್ರಕ್ಷನ್ಸ್ (ಪಿ) ಲಿಮಿಟೆಡ್, JSW ಸ್ಟೀಲ್ ಲಿಮಿಟೆಡ್, ಅಮರ್ ರಾಜ್ ಗ್ರೂಪ್ಸ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ನಿಂದ ಕೂಡ ದೇಣಿಗೆಯನ್ನು ಪಡೆದುಕೊಂಡಿದೆ.

2018ರಲ್ಲಿ ಜೆಡಿಎಸ್ ತನ್ನ ಹೆಚ್ಚಿನ ಚುನಾವಣಾ ಬಾಂಡ್ ಹಣವನ್ನು ಅಂದರೆ 22 ಕೋಟಿ ರೂ. ಎಂಬಸ್ಸಿ ಗ್ರೂಪ್ ಆಫ್ ಕಂಪೆನೀಸ್ ಪ್ರೈವೇಟ್‌ನಿಂದ ಪಡೆದುಕೊಂಡಿದೆ. ಇದರ ನೋಂದಾಯಿತ ಕಚೇರಿ ಬೆಂಗಳೂರಿನಲ್ಲಿದೆ. ಇದನ್ನು 1993ರಲ್ಲಿ ಸ್ಥಾಪಿಸಲಾಗಿತ್ತು. ಇದು ಭಾರತದ ಅತಿದೊಡ್ಡ ರಿಯಲ್ ಎಸ್ಟೇಟ್ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿದೆ.

ಏಪ್ರಿಲ್ 17, 2018ರಂದು ಹೆಲ್ತ್ ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಪ್ರೈವೇಟ್‌ 25 ಲಕ್ಷ ರೂ.ವನ್ನು ಜೆಡಿಎಸ್‌ಗೆ ಚುನಾವಣಾ ಬಾಂಡ್‌ ಮೂಲಕ ನೀಡಿದೆ. ಮೇ 14, 2018ರಂದು ಬೈಕಾನ್ ಲಿಮಿಟೆಡ್ 50 ಲಕ್ಷ ರೂ.ವನ್ನು ಬಾಂಡ್ ಮೂಲಕ ನೀಡಿದೆ. ಮಾರ್ಚ್ 20, 2018ರಂದು ಜೆಡಿಎಸ್‌ ಪಕ್ಷವು ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್‌ನಿಂದ 1 ಕೋಟಿ ರೂ. ಚುನಾವಣಾ ಬಾಂಡ್‌ ಮೂಲಕ ಪಡೆದುಕೊಂಡಿದೆ.

2019ರ ಸಾರ್ವತ್ರಿಕ ಚುನಾವಣೆಗಳ ಮೊದಲು ಮತ್ತು ಸಮಯದಲ್ಲಿ ಜೆಡಿಎಸ್ ಒಟ್ಟಾರೆಯಾಗಿ 25 ಕೋಟಿ ರೂ. ಚುನಾವಣಾ ಬಾಂಡ್‌ಗಳನ್ನು ಪಡೆದಿದೆ. ಜನವರಿ 9, 2019ರಂದು ಪಕ್ಷವು ,ಶಾಹಿ ಎಕ್ಸ್‌ಪೋರ್ಟ್ಸ್ ಪ್ರೈವೇಟ್‌ ಲಿಮಿಟೆಡ್‌ನಿಂದ 1.5 ಕೋಟಿ ರೂ. ಚುನಾವಣಾ ಬಾಂಡ್‌ ಪಡೆದಿದೆ. ಮೆಘಾ ಇಂಜಿನಿಯರಿಂಗ್ ಮತ್ತು ಕನ್ಸ್ಟ್ರಕ್ಷನ್ಸ್ ಪ್ರೈ.ಲಿ.ಲಿಮಿಟೆಡ್ 10 ಕೋಟಿ ರೂ. ಚುನಾವಣಾ ಬಾಂಡ್‌ ನೀಡಿದೆ. ಮಾರ್ಚ್ 20, 2019ರಂದು ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್ (ಪಿ) ಲಿಮಿಟೆಡ್‌ನಿಂದ 5 ಕೋಟಿ ರೂಪಾಯಿಗಳನ್ನು ಜೆಡಿಎಸ್‌ ಪಡೆದುಕೊಂಡಿದೆ. ಅದೇ ದಿನ ಪಕ್ಷವು ಒದಗಿಸಿದ ಮಾಹಿತಿಯಲ್ಲಿ ಬೈಕಾನ್ ಲಿಮಿಟೆಡ್‌ನಿಂದ ಮತ್ತೆ 1 ಕೋಟಿ ರೂ.ವನ್ನು ಜೆಡಿಎಸ್‌ ಚುನಾವಣಾ ಬಾಂಡ್‌ ಮೂಲಕ ಪಡೆದುಕೊಂಡಿದೆ. ಏಪ್ರಿಲ್ 6, 2019ರಂದು ಜೆಡಿಎಸ್ JSW ಸ್ಟೀಲ್ ಲಿಮಿಟೆಡ್‌ನಿಂದ 3.5 ಕೋಟಿ ರೂ.ವನ್ನು ಚುನಾವಣಾ ಬಾಂಡ್‌ ಮೂಲಕ ಪಡೆದಿದೆ ಎನ್ನುವುದು ಬಯಲಾಗಿದೆ.

ಇದನ್ನು ಓದಿ: ಚುನಾವಣಾ ಬಾಂಡ್‌ ಖರೀದಿ ಬಳಿಕ 18 ಕಂಪೆನಿಗಳು ಸೇಫ್: ‘ಹೈ ರಿಸ್ಕ್‌’ ಟು ‘ಸೇಫ್‌’-19 ಕಂಪೆನಿಗಳ ಡಿಟೇಲ್ಸ್‌… ‘

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...