Homeಕರ್ನಾಟಕಮೊಬೈಲ್ ಅಂಗಡಿಯಲ್ಲಿ ಲೌಡ್‌ ಸ್ಪೀಕರ್‌ ವಿಚಾರಕ್ಕೆ ಹಲ್ಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಮೊಬೈಲ್ ಅಂಗಡಿಯಲ್ಲಿ ಲೌಡ್‌ ಸ್ಪೀಕರ್‌ ವಿಚಾರಕ್ಕೆ ಹಲ್ಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

- Advertisement -
- Advertisement -

ಮೊಬೈಲ್ ಅಂಗಡಿಯಲ್ಲಿ ಜೋರಾಗಿ ಸ್ಪೀಕರ್ ಶಬ್ದ ಹಾಕಿದ್ದಕ್ಕೆ ಕೋಪಗೊಂಡು ಅಂಗಡಿ ಮಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಹಲಸೂರು ಗೇಟ್ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸುಲೇಮಾನ್(25), ಶಾನವಾಝ್(25) ರೋಹಿತ್(25) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ದಾನಿಶ್ ಮತ್ತು ತರುಣ ಎಂಬವರಿಗೆ ಶೋಧ ಕಾರ್ಯ ಮುಂದುವರಿದಿದೆ. ಅರೋಪಿಗಳ ವಿರುದ್ಧ ಐಪಿಸಿ ಸೆಕ್ಸನ್‌ 506, 504, 149, 307, 323 ಹಾಗೂ 324ರಡಿಯಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.

ನಗರದ ಸಿದ್ದಣ್ಣ ಗಲ್ಲಿಯ ನಗರ್ತಪೇಟೆಯಲ್ಲಿ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಮುಖೇಶ್ ಅಂಗಡಿಗೆ ಬಂದ ಯುವಕರ ಗುಂಪಿನ ಜೊತೆ ಮಾತಿನ ಚಕಮಕಿಯಲ್ಲಿ ತೊಡಗಿರುವುದು, ಮಾತಿಗೆ ಮಾತು ಬೆಳೆದು ಗುಂಪಿನಲ್ಲಿದ್ದ ಯುವಕನೊಬ್ಬ ಮುಖೇಶ್‍ ಮೇಲೆ ಹಲ್ಲೆ ಮಾಡುವುದು. ಈ ವೇಳೆ ಅಂಗಡಿಯಿಂದ ಹೊರ ಬರುವ ಮುಖೇಶ್ ಯುವಕರ ಮೇಲೆ ಪ್ರತಿ ಹಲ್ಲೆ ನಡೆಸುವುದು ಸೆರೆಯಾಗಿದೆ.

ಆದರೆ ಈ ಬಗ್ಗೆ ಸುಳ್ಳು ಆಯಾಮಗಳನ್ನು ನೀಡಿ ಕನ್ನಡ ಮಾದ್ಯಮಗಳು ಮತ್ತು ಬಿಜೆಪಿ ಪ್ರಚಾರವನ್ನು ಮಾಡಿತ್ತು. ಸಂಜೆ ನಮಾಜ್ ಟೈಂನಲ್ಲಿ ಹನುಮಾನ್‌ ಚಾಲೀಸ್ ಹಾಕ್ತಿಯಾ ಎಂದು ಯುವಕನಿಗೆ ಥಳಿಸಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಬಿತ್ತಲಾಗಿತ್ತು. ದೂರುದಾರ ನೀಡಿದ ದೂರಿನಲ್ಲಿಯೂ ಆಝಾನ್, ಹನುಮಾನ್ ಚಾಲಿಸಾದ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಆದರೆ ಬಿಜೆಪಿ ಚುನಾವಣೆ ಹೊಸ್ತಿಲಲ್ಲ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಿ ರಾಜಕೀಯ ಲಾಭವನ್ನು ಪಡೆಯಲು ಮುಂದಾಗಿರುವುದು ವಿಪರ್ಯಾಸವಾಗಿದೆ. ಇದಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಎಫ್‍ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಇದು ಸುಳ್ಳು ಆರೋಪ ಎನ್ನುವುದು ಬಯಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ?

ಎಫ್‌ಐಆರ್‌ನಲ್ಲಿ ಹೇಳಿರುವಂತೆ, ‘ದೂರುದಾರ ಮುಖೇಶ್ ಅವರು ದಿನಾಂಕ 17 ಮಾರ್ಚ್ 2024ರಂದು ಸಂಜೆ 6:25ಕ್ಕೆ ಜುಮಾ ಮಸೀದಿ ರಸ್ತೆ ಸಿದ್ದಣ್ಣಗಲ್ಲಿ ನಂ.25 ಕೃಷ್ಣ ಟೆಲಿಕಾಂ ಅಂಗಡಿಯಲ್ಲಿರುವಾಗ ಸುಲೇಮಾನ್, ಶಾನವಾಜ್, ರೋಹಿತ್, ಡ್ಯಾನಿಶ್, ತರುಣಾ ಹಾಗೂ ಇತರರು ಸೇರಿಕೊಂಡು ಅಂಗಡಿಯ ಬಳಿ ಬಂದು “ಜೋರಾಗಿ ಸ್ಪೀಕರ್ ಏಕೆ ಹಾಕಿದ್ದೀಯ? ನಮಗೆ ತೊಂದರೆಯಾಗುತ್ತಿದೆ” ಎಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಏಕಾಏಕಿ ಶಾನವಾಜ್ ಕೈಯಿಂದ ಮುಖೇಶ್ ಅವರ ಮುಖಕ್ಕೆ ಗುದ್ದಿದ್ದಾನೆರ. ನಂತರ ಸುಲೇಮಾನ್ ಕೈಗಳಿಂದ ಹೊಡೆಯಲು ಶುರು ಮಾಡಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ನಂತರ ಮುಖೇಶ್ ಅವರನ್ನು ಅಂಗಡಿಯಿಂದ ಹೊರಗೆ ಎಳೆದು ಕೆಳಗೆ ಬೀಳಿಸಿ ರಕ್ತಸ್ರಾವ ಆಗುವ ರೀತಿಯಲ್ಲಿ ಹೊಡೆದಿದ್ದಾರೆ’ ಎಂದು ತಿಳಿಸಲಾಗಿದೆ.

ಇದನ್ನು ಓದಿ: ‘ಹಿಪಾಕ್ರಸಿಗೆ ಮತ್ತೊಂದು ಹೆಸರೇ ಮೋದಿ..’; ಬಿಎಸ್‌ವೈ ಕುಟುಂಬ ರಾಜಕಾರಣವನ್ನು ಟೀಕಿಸಿದ ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...