Homeಮುಖಪುಟಯೆಸ್‌ ಬ್ಯಾಂಕ್‌ ಬಿಕ್ಕಟ್ಟು: ರಿಲಾಯನ್ಸ್‌ ಮುಖ್ಯಸ್ಥ ಅನಿಲ್‌ ಅಂಬಾನಿಗೆ ಸಮನ್ಸ್‌..!!

ಯೆಸ್‌ ಬ್ಯಾಂಕ್‌ ಬಿಕ್ಕಟ್ಟು: ರಿಲಾಯನ್ಸ್‌ ಮುಖ್ಯಸ್ಥ ಅನಿಲ್‌ ಅಂಬಾನಿಗೆ ಸಮನ್ಸ್‌..!!

- Advertisement -
- Advertisement -

ಯೆಸ್ ಬ್ಯಾಂಕ್‌ನ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಅನಿಲ್ ಅಂಬಾನಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್‌ ಜಾರಿಗೊಳಿಸಿದೆ.

ಅಂಬಾನಿಗೆ ಮುಂಬಯಿಯಲ್ಲಿರುವ ಇಡಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಯೆಸ್ ಬ್ಯಾಂಕ್ ನೀಡಿದ ಸಾಲಗಳಿಗೆ ಸಂಬಂಧಿಸಿದಂತೆ ಅವರನ್ನು ಪ್ರಶ್ನಿಸಬೇಕಾಗಿತ್ತು. ಆದರೆ ಅಂಬಾನಿ ಆರೋಗ್ಯ ಕಾರಣಗಳನ್ನು ಹೇಳಿ ಅಧಿಕಾರಿಗಳ ಮುಂದೆ ಹಾಜರಾಗಲು ಹೆಚ್ಚಿನ ಸಮಯವನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಾರದ ಕೊನೆಯಲ್ಲಿ ಇತರ ರಿಲಯನ್ಸ್ ಗ್ರೂಪ್ ಅಧಿಕಾರಿಗಳನ್ನು ವಿಚಾರಣೆಗೆ ಕರೆಯಲಾಗುವುದು ಎನ್ನಲಾಗಿದೆ.

ಆರ್‌ಬಿಐ ಹಣ ಹಿಂಪಡೆಯುವಿಕೆಯನ್ನು ತಡೆಯುವ ಹಠಾತ್ ಘೋಷಣೆಯ ನಂತರ ಯೆಸ್ ಬ್ಯಾಂಕ್ ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಮತ್ತು ಎಟಿಎಂಗಳಲ್ಲಿ ಜನರು ಪರದಾಡುವಂತಾಗಿತ್ತು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯೆಸ್ ಬ್ಯಾಂಕಿನಲ್ಲಿ ಶೇ 49 ರಷ್ಟು ಪಾಲನ್ನು ಪಡೆದುಕೊಳ್ಳಲಿದೆ. ಒಪ್ಪಂದದ ಭಾಗವಾಗಿ ಯೆಸ್ ಬ್ಯಾಂಕಿನ ಅಸ್ತಿತ್ವದಲ್ಲಿರುವ ಎಲ್ಲಾ ಉದ್ಯೋಗಿಗಳನ್ನು ಉಳಿಸಿಕೊಳ್ಳಲಾಗುತ್ತದೆ.

ಈ ತಿಂಗಳ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯೆಸ್ ಬ್ಯಾಂಕ್ ಅನ್ನು ನಿಷೇಧಕ್ಕೆ ಒಳಪಡಿಸಿತ್ತು. ಅಲ್ಲದೆ ಬ್ಯಾಂಕನ್ನು ತನ್ನ ನಿಯಂತ್ರಣಕ್ಕೆ ಒಳಪಡಿಸಿ ಎಪ್ರಿಲ್ 3 ರವರೆಗೆ ಬ್ಯಾಂಕಿನಿಂದ ಹಿಂಪಡೆಯಲು 50,000 ರೂ.ಗಳ ಮಿತಿಯನ್ನು ವಿಧಿಸಿತ್ತು. ಆದೆರೆ ಶುಕ್ರವಾರ ಕೇಂದ್ರ ಸರ್ಕಾರ ಬ್ಯಾಂಕ್‌ ಖಾತೆಗಾರರು ತಮ್ಮ ಖಾತೆಗಳಿಂದ 50,000 ರೂ.ಗಳವರೆಗೆ ಮಾತ್ರ ಹಿಂಪಡೆಯುವ ನಿರ್ಬಂಧವನ್ನು ಬುಧವಾರದೊಳಗೆ ತೆಗೆದುಹಾಕಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...