ಹಿಮಖಂಡವೆಂದು ಕರೆಯಲ್ಪಡುವ ದಕ್ಷಿಣ ದ್ರುವದಲ್ಲಿರುವ ಅಂಟಾರ್ಟಿಕದಲ್ಲಿ ಜನವಸತಿಯಿಲ್ಲ. ಮನುಷ್ಯ ವಾಸಕ್ಕೆ ಯೋಗ್ಯವಾದ ಅನುಕೂಲಕರವಾದ ಹವಮಾನವೂ ಇಲ್ಲ. ಉಷ್ಣಾಂಶ ಜೀರೋ ಡಿಗ್ರಿ ಸೆಲ್ಸಿಯಸ್‌ ಗಿಂತಲೂ ಕಡಿಮೆ ಅಥವಾ ಅದರ ಆಸುಪಾಸಿನಲ್ಲಿರುವ ನಿರ್ಜನ ಭೂಪ್ರದೇಶವೆಂದು ಅಂಟಾರ್ಟಿಕ ಪ್ರಖ್ಯಾತಿ ಪಡೆದಿದೆ. ಕೆಲವು ಸಾಹಸಿಗರು ಅಂಟಾರ್ಟಿಕಕ್ಕೆ ಪ್ರಯಾಣ ಬೆಳೆಸಿ ದಾಖಲೆ ನಿರ್ಮಿಸುತ್ತಿರುವುದನ್ನು ಇತ್ತೀಚಿನ ವರ್ಷಗಳಲ್ಲಿ ನೋಡುತ್ತಿದ್ದೇವೆ. ಅಂತಹ ಹಿಮಖಂಡದಲ್ಲಿಯೂ ತಾಪಮಾನದಲ್ಲಿ ತೀವ್ರ ಏರಿಕೆಯಾಗಿದ್ದು, ನಿನ್ನೆ ಇತಿಹಾಸದಲ್ಲಿಯೇ ಅತಿಹೆಚ್ಚು ಉಷ್ಣಾಂಶ ದಾಖಲಾಗಿದೆ.

18.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ನಿನ್ನೆ ಅಂಟಾರ್ಟಿಕಾದಲ್ಲಿ ದಾಖಲಾಗಿದ್ದು ಇದು ಇದುವರೆಗೆ ಶೀತಖಂಡದಲ್ಲಿ ದಾಖಲಾದ ಅತಿ ಹೆಚ್ಚಿನ ಉಷ್ಣಾಂಶವಾಗಿದೆ. ವಿಶ್ವ ಸಂಸ್ಥೆಯ ಅಂತರಾಷ್ಟ್ರೀಯ ಹವಾಮಾನ ಇಲಾಖೆ ಈ ವಿಷಯವನ್ನು ಬಹಿರಂಗಪಡಿಸಿದ್ದು, ಜಗತ್ತಿನಲ್ಲಿ ಅತಿ ವೇಗವಾಗಿ ಉಷ್ಣಾಂಶ ಏರಿಕೆಯಾಗುತ್ತಿರುವ ಪ್ರದೇಶದಲ್ಲಿ ಅಂಟಾರ್ಟಿಕ ಮೊದಲ ಸ್ಥಾನದಲ್ಲಿದೆ. ಕಳೆದ 50 ವರ್ಷಗಳಲ್ಲಿ ಇಲ್ಲಿನ ಸಾಮಾನ್ಯ ಉಷ್ಣಾಂಶದಲ್ಲಿ 3 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿರುವುದು ಜಗತ್ತಿಗೆ ತೀವ್ರ ಆಂತಂಕವನ್ನು ತಂದೊಡ್ಡಿದೆ ಎಂದು ವಿಶ್ವ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಅಂಟಾರ್ಟಿಕಾದಲ್ಲಿ ಸತತವಾಗಿ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿರುವುದಕ್ಕೆ ಕಾರಣ ವಾತಾವರಣದಲ್ಲಿ ಬದಲಾವಣೆ. ಭೂಮಿಯಲ್ಲಿನ ಕಾರ್ಬನ್ ಪ್ರಮಾಣ ಹೆಚ್ಚುತ್ತಿರುವ ಕಾರಣ ದಕ್ಷಿಣ ದ್ರುವ ಮತ್ತು ಉತ್ತರ ದ್ರುವದ ಅನೇಕ ಪ್ರದೇಶಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ತಾಪಮಾನ ದಾಖಲಿಸುತ್ತಿವೆ. ಅಂಟಾರ್ಟಿಕದಲ್ಲಿ ಉಷ್ಣಾಂಶ ಹೆಚ್ಚಿದಷ್ಟು ಸಮುದ್ರ ಮಟ್ಟ ಏರಿಕೆಯಾಗುತ್ತದೆ. ತಾಪಮಾನದಲ್ಲಿ ಇದೇ ರೀತಿಯ ಏರಿಕೆ ಮುಂದುವರೆದರೆ ನಿರ್ಗಡ್ಡೆಯಾದ ಅಂಟಾರ್ಟಿಕ ಮುಂದೊಂದು ದಿನ ಇಲ್ಲವಾಗಬಹುದು ಎಂದು ಹವಾಮಾನ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಶೀತ ವಾತಾವರಣಕ್ಕೆ ಹೊಂದಿಕೊಂಡು ಸಾವಿರಾರು ವರ್ಷಗಳಿಂದ ಅಂಟಾರ್ಟಿಕದಲ್ಲಿ ನೆಲೆ ಕಂಡುಕೊಂಡಿರುವ ಅರೆ ಜಲವಾಸಿಗಳಾದ ಪೆಂಗ್ವಿನ್, ಹಿಮ ಕರಡಿ, ಹಿಮ ನಾಯಿ ಸೇರಿದಂತೆ ಮುಂತಾದ ಜಲಚರಗಳು ಏರುತ್ತಿರುವ ತಾಪಮಾನದಿಂದಾಗಿ ಅಪಾಯವನ್ನು ಎದುರಿಸುತ್ತಿವೆ. ಕೆಲವು ಪ್ರಾಣಿ ಸಂಕುಲಗಳಂತೂ ಅಳಿವಿನ ಅಂಚಿಗೆ ಬಂದು ತಲುಪಿವೆ ಎಂದು ವಿಶ್ವ ಹವಾಮಾನ ಸಂಸ್ಥೆಯ ತಜ್ಞರು ಕ್ಲೈಮೇಟ್ ಚೆಂಜ್‌ನಿಂದ ಉಂಟಾಗುವ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: ಪತ್ರಿಕಾ ದಿನಾಚರಣೆ: ಕಾವಲುನಾಯಿ ಮಲಗಿದೆ… ಏಳುವುದೆಂತೋ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here