HomeಮುಖಪುಟJNU ಕ್ಯಾಂಪಸ್‌ನಲ್ಲಿ ಬ್ರಾಹ್ಮಣ ವಿರೋಧಿ ಗೋಡೆ ಬರಹಗಳ ಪತ್ತೆ: ತನಿಖೆಗೆ ಆದೇಶ

JNU ಕ್ಯಾಂಪಸ್‌ನಲ್ಲಿ ಬ್ರಾಹ್ಮಣ ವಿರೋಧಿ ಗೋಡೆ ಬರಹಗಳ ಪತ್ತೆ: ತನಿಖೆಗೆ ಆದೇಶ

- Advertisement -
- Advertisement -

ದೆಹಲಿಯ ಜವಾಹರ್‌ಲಾಲ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್ ವಿಭಾಗದಲ್ಲಿ ಬ್ರಾಹ್ಮಣ ವಿರೋಧಿ ಗೋಡೆ ಬರಹಗಳ ಪತ್ತೆಯಾಗಿದ್ದು, ಈ ಕುರಿತು ತನಿಖೆಗೆ ರಿಜಿಸ್ಟ್ರಾರ್ ಆದೇಶಿಸಿದ್ದಾರೆ.

ಪ್ರಾಧ್ಯಾಪಕರ ಕೊಠಡಿಯ ಬಾಗಿಲುಗಳ ಮೇಲೆ ಮತ್ತು ಹಲವು ಗೋಡೆಗಳ ಮೇಲೆ “ಬ್ರಾಹ್ಮಣರೇ ಕ್ಯಾಂಪ್ ಬಿಟ್ಟು ಹೋಗಿ, ವಾಪಸ್ ಶಾಖೆಗೆ ಹೋಗಿ, ಭಾರತ ಬಿಟ್ಟು ತೊಲಗಿ” ಎಂದು ಬರೆಯಲಾಗಿದೆ. ಇದನ್ನು ಪ್ರತ್ಯೇಕತಾ ಪ್ರವೃತ್ತಿ ಎಂದು ಕರೆದಿರುವ ಆಡಳಿತ ಮಂಡಳಿಗೆ ತನಿಖೆಗೆ ಮುಂದಾಗಿದೆ.

ಜೆಎನ್‌ಯುನಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಗೋಡೆಗಳು ಮತ್ತು ಅಧ್ಯಾಪಕರ ಕೊಠಡಿಗಳನ್ನು ವಿರೂಪಗೊಳಿಸಿದ ಘಟನೆಯನ್ನು ಕುಲಪತಿ ಪ್ರೊ.ಶಾಂತಿಶ್ರೀ ಡಿ.ಪಂಡಿತ್ ಗಂಭೀರವಾಗಿ ಪರಿಗಣಿಸಿದ್ದಾರೆ. ಆಡಳಿತವು ಕ್ಯಾಂಪಸ್‌ನಲ್ಲಿ ಈ ಪ್ರತ್ಯೇಕತಾ ಪ್ರವೃತ್ತಿಯನ್ನು ಖಂಡಿಸುತ್ತದೆ. ಜೆಎನ್‌ಯು ಎಲ್ಲರಿಗೂ ಸೇರಿದ್ದು ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ರಿಜಿಸ್ಟ್ರಾರ್ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಡೀನ್, ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ ಮತ್ತು ಕುಂದುಕೊರತೆಗಳ ಸಮಿತಿಯು ವಿಚಾರಣೆ ನಡೆಸಿ ವಿಸಿಗೆ ವರದಿಯನ್ನು ಸಲ್ಲಿಸಲು ಕೇಳಲಾಗಿದೆ. ಜೆಎನ್‌ಯು ಎಂದರೆ ಒಳಗೊಳ್ಳುವಿಕೆ ಮತ್ತು ಸಮಾನತೆ. ಕ್ಯಾಂಪಸ್‌ನಲ್ಲಿ ಯಾವುದೇ ರೀತಿಯ ಹಿಂಸಾಚಾರವನ್ನು ಕುಲಪತಿಗಳು ಸಹಿಸುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಆನಂದ್ ತೇಲ್ತುಂಬ್ಡೆ ಜಾಮೀನು ತೆರೆದಿಟ್ಟ ಪ್ರಶ್ನೆಗಳಿಗೆ ಉತ್ತರ ಹುಡುಕುವುದೆಲ್ಲಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಭಾರತೀಯ ಧರ್ಮ ಮತ್ತು ಸಮಾಜವನ್ನ ,ಜಾತಿ ಧರ್ಮದ ಆಧಾರದಲ್ಲಿ ಒಡೆದು ಸಮಾಜದ ಅಶಾಂತಿಗೆ ಕಾರಣರಾದ ಜನತಾಪಕ್ಷ ಮತ್ತು ಅದರ ಬ್ರಾಹ್ಮಣ್ಯದ ಮುಖವಾಣಿ ಸಂಘಪರಿವಾರಕ್ಕೆ ಅವರದೇ ಭಾಷೆಯ ಉತ್ತರ.

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...