Homeಮುಖಪುಟನೈಜೀರಿಯಾದಲ್ಲಿ ಜನಾಂಗೀಯ ಸಂಘರ್ಷ: 100ಕ್ಕೂ ಅಧಿಕ ಜನರ ಹತ್ಯೆ

ನೈಜೀರಿಯಾದಲ್ಲಿ ಜನಾಂಗೀಯ ಸಂಘರ್ಷ: 100ಕ್ಕೂ ಅಧಿಕ ಜನರ ಹತ್ಯೆ

- Advertisement -
- Advertisement -

ನೈಜೀರಿಯಾದಲ್ಲಿ ಮತ್ತೊಮ್ಮೆ ಧಾರ್ಮಿಕ ಮತ್ತು ಜನಾಂಗೀಯ ಉದ್ವಿಗ್ನತೆ ಉಂಟಾಗಿದ್ದು, ಸಶಸ್ತ್ರ ಗುಂಪುಗಳು ಮಧ್ಯ ನೈಜೀರಿಯಾದಾದ್ಯಂತ ಪಟ್ಟಣಗಳನ್ನು ಗುರಿಯಾಗಿಸಿಕೊಂಡು ನಡೆಸಿ ಸರಣಿ ದಾಳಿಗಳಲ್ಲಿ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಲ್‌-ಜಝೀರಾ ವರದಿ ಮಾಡಿದೆ.

ಸ್ಥಳೀಯ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಕಳೆದ ಭಾನುವಾರ ಸಶಸ್ತ್ರ ಗುಂಪುಗಳ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ.

ಶನಿವಾರ ಮತ್ತು ಭಾನುವಾರ ಮಧ್ಯ ನೈಜೀರಿಯಾದಾದ್ಯಂತ ಸುಮಾರು 20 ಸಮುದಾಯಗಳನ್ನು ಗುರಿಯಾಗಿಸಿಕೊಂಡು ಶಸಸ್ತ್ರ ಗುಂಪುಗಳು ನಡೆಸಿದ ದಾಳಿಗಳಲ್ಲಿ 16 ಜನರು ಮೃತಪಟ್ಟಿದ್ದರು ಎಂದು ನೈಜೀರಿಯಾ ಸೇನೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಸೋಮವಾರ ಮುಂಜಾನೆಯ ವೇಳೆಗೆ ಮೃತಪಟ್ಟವರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ಸುಮಾರು 300 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಮುಗ್ಧ ನಾಗರಿಕರ ವಿರುದ್ಧ ನಡೆಯುತ್ತಿರುವ ದಾಳಿಗಳನ್ನು ತಡೆಯಲು ಸರ್ಕಾರವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ನೈಜೀರಿಯಾದ ಪ್ಲೇಟೂ ರಾಜ್ಯದ ಗವರ್ನರ್ ಕ್ಯಾಲೆಬ್ ಮುಟ್ಫ್ವಾಂಗ್ ಅವರ ವಕ್ತಾರ ಗ್ಯಾಂಗ್ ಬೆರೆ ತಿಳಿಸಿದ್ದಾರೆ.

ಪ್ಲೇಟೂ ಮಧ್ಯ ನೈಜೀರಿಯಾದ ಒಂದು ರಾಜ್ಯವಾಗಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿದ್ಯತೆ ಇಲ್ಲಿದೆ. ಆದರೆ, ಇದೇ ವೈವಿದ್ಯತೆ ಕೃಷಿಯನ್ನು ಅವಲಂಭಿಸಿರುವ ಮುಸ್ಲಿಮರು, ಕ್ರೈಸ್ತರು ಮತ್ತು ಸ್ಥಳೀಯ ಕುರಿಗಾಹಿಗಳ ನಡುವೆ ಆಗಾಗ ಸಂಘರ್ಷಕ್ಕೆ ಕಾರಣವಾಗ್ತಿದೆ. ಕಳೆದ ಮೇ ತಿಂಗಳಿನಲ್ಲಿ ಇದೇ ಪ್ರದೇಶದಲ್ಲಿ ನಡೆದ ಜನಾಂಗೀಯ ಸಂಘರ್ಷದಲ್ಲಿ 100ಕ್ಕೂ ಅಧಿಕ ಜನರು ಮೃತಪಟ್ಟಿದ್ದರು.

ಮಧ್ಯ ನೈಜೀರಿಯಾದಲ್ಲಿ ಪದೇ ಪದೇ ನಡೆಯುತ್ತಿರುವ ಜನಾಂಗೀಯ ಸಂಘರ್ಷವನ್ನು ತಡೆಯುವಲ್ಲಿ ಅಲ್ಲಿನ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಹೇಳಿದೆ.

ಈ ತಿಂಗಳ ಆರಂಭದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರ ಮೇಲೆ ನಡೆದ ಮಿಲಿಟರಿ ಡ್ರೋನ್ ದಾಳಿಯಲ್ಲಿ 85 ನಾಗರಿಕರು ಕೊಲ್ಲಲ್ಪಟ್ಟಿದ್ದರು.ಈ ಘಟನೆ ಕುರಿತು ನೈಜೀರಿಯಾದ ಅಧ್ಯಕ್ಷ ಬೋಲಾ ಟಿನುಬು ತನಿಖೆಗೆ ಆದೇಶಿಸಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ್ದ ನೈಜೀರಿಯಾದ ಮತ್ತೊಂದು ರಾಜ್ಯ ಕಡುನಾದ ಗವರ್ನರ್ ಉಬಾ ಸಾನಿ ಅವರು, ಸೇನಾ ಸಿಬ್ಬಂದಿ ‘ಭಯೋತ್ಪಾದಕರು ಮತ್ತು ಡಕಾಯಿತರನ್ನು’ ಗುರಿಯಾಗಿಸಿ ಬಿಟ್ಟ ಡ್ರೋನ್‌ ತಪ್ಪಿ ನಾಗರಿಕರ ಮೇಲೆ ಬಿದ್ದಿದೆ ಎಂದು ಹೇಳಿದ್ದರು.

ಇದನ್ನೂ ಓದಿ : ವಾಮಾಚಾರದ ಶಂಕೆಯಲ್ಲಿ ಆದಿವಾಸಿ ಮಹಿಳೆಯ ಸಜೀವ ದಹನ: ಕೊನೆಗೊಳ್ಳದ ‘ಮಾಟಗಾತಿ’ ಹಣೆಪಟ್ಟಿಯ ಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...