HomeUncategorizedಸತ್ಯವನ್ನೇ ಹೇಳುತ್ತಿದ್ದೇನೆ, ಮುಖ್ಯಮಂತ್ರಿಗಳೇ, ನೀವು ಒಳ್ಳೇವ್ರು..!!

ಸತ್ಯವನ್ನೇ ಹೇಳುತ್ತಿದ್ದೇನೆ, ಮುಖ್ಯಮಂತ್ರಿಗಳೇ, ನೀವು ಒಳ್ಳೇವ್ರು..!!

ರಾಜ್ಯದ ಮುಖ್ಯಮಂತ್ರಿಯನ್ನು ತಮ್ಮ ಜಾತಿಯ ಬೆಂಬಲದಿಂದ ಅವಮಾನಿಸಿದ್ದು ತೀರ ಖಂಡನೀಯ. ಇದು ಪ್ರಜಾಪ್ರಭುತ್ವದ ವಿರೋಧ ನಡೆಯೂ ಕೂಡ

- Advertisement -
- Advertisement -

ರಾಜ್ಯದ ನೂತನ ಜಗದ್ಗುರು ಪೀಠದ ಸ್ವಾಮೀಜಿಯೊಬ್ಬರು ರಾಜ್ಯದ ಮುಖ್ಯಮಂತ್ರಿಗಳಿಗೆ ಸಾವಿರಾರು ಜನತೆ ಸೇರಿರುವ ಬಹಿರಂಗ ಸಭೆಯ ವೇದಿಕೆ ಮೇಲೆ ಅಧಿಕಾರವರ್ಗವನ್ನು ‘ಅವಾಜ್’ ಹಾಕುವ ಮೂಲಕ ಅವಾಂತರ ಸೃಷ್ಟಿಸಿಕೊಂಡ‌ ಘಟನೆ ಒಂದು ರಾಜಕೀಯ‌ ವಲಯದಲ್ಲಿ ಭಾರಿ ಚರ್ಚೆಗೆ ಒಳಪಟ್ಟಿದೆ.

“ಮುಖ್ಯಮಂತ್ರಿಗಳೇ , ನೀವು ಒಳ್ಳೇವ್ರು…!
ಪಂಚಮಸಾಲಿ ಸಮುದಾಯದ ಪ್ರಶ್ನಾತೀತ ನಾಯಕ ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನ ಕೊಡಲೇಬೇಕು..! ನಿಮ್ಮ ಬೆನ್ನಿಗೆ ಬೆನ್ನೆಲುಬಾಗಿ ನಿಂತು ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವ ಮುರುಗೇಶ್ ನಿರಾಣಿಗೆ ಕೈ ಬಿಡ್ಬೇಡಿ..!
ನಮ್ಮ ಸಮುದಾಯದ 13 ಜನ ಶಾಸಕರಲ್ಲಿ ಕನಿಷ್ಠ
4 ಜನರಿಗೆ ಮಂತ್ರಿಸ್ಥಾನ ಕೊಡಲೇಬೇಕು..!
ಒಂದು ವೇಳ ನೀವು ಪಂಚಮಸಾಲಿ ಸಮುದಾಯದ ಕೈಬಿಟ್ಟರೇ ಅಖಂಡ ಪಂಚಮಸಾಲಿ ಸಮುದಾಯ ನಿಮ್ಮನ್ನು  ಕೈಬಿಡುತ್ತೆ…!!”

ಎಂದು ಪಕ್ಕದ ಕುರ್ಚಿಯ ಮೇಲೆ ಕುಳಿತ ರಾಜ್ಯದ ಮುಖ್ಯಮಂತ್ರಿಗಳಿಗೆ ಸಮುದಾಯಪರ ಬ್ಯಾಟಿಂಗ್ ನಡೆಸಿದ ಸ್ವಾಮೀಜಿಯೊಬ್ಬರ ‘ಬೆದರಿಕೆ’ಯ ಮಾತುಗಳು ಯಡಿಯೂರಪ್ಪನವರ ಕೆಂಡಾಮಂಡಲವಾಗಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಪರ – ವಿರೋಧ ವ್ಯಕ್ತವಾಗುತ್ತಿದೆ.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ‌‌ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ ತಮ್ಮ ನಾಯಕರ ಏಳಿಗೆ, ಹಿತಾಸಕ್ತಿ ಬಯಸಿ ರಾಜಕೀಯ ತೆವಲು ತೀರಿಸಿಕೊಳ್ಳಲು ಸಮುದಾಯವನ್ನು ಬಳಸಿಕೊಳ್ಳಲು ಮುಂದಾದರು.

ಅಷ್ಟಕ್ಕೂ ಈ ಸ್ವಾಮೀಜಿ ಮಠಾಧೀಶರೋ ಅಥವಾ ರಾಜಕಾರಣಿಯೋ ಎಂಬ ಸಂಶಯ ರಾಜ್ಯದ ಜನತೆಗೆ ಗಾಢವಾಗಿ ಕಾಡುತ್ತದೆ. ರಾಜ್ಯದ ಮುಖ್ಯಮಂತ್ರಿಗಳ ಜೊತೆ ಹೇಗೆ ಮಾತಾಡಬೇಕೆನ್ನುವ ಕನಿಷ್ಠ ನೈತಿಕತೆ ಇಲ್ಲದವರು ಅದೇಗೆ ಸ್ವಾಮೀಜಿಯಾದರು?
ಇದು ಕಾವಿಯ ಮಹಿಮೆಯೋ ಅಥವಾ ತಮ್ಮ ಸಮುದಾಯ ಬೆಂಬಲದ ”ಅಹಂ’ ಇದಕ್ಕೆ ಮೂಲ ಕಾರಣ ಎನ್ನಬಹುದು. ಈ ರೀತಿಯ ‘ಪಾಲು’ ಕೇಳುವ ಧೈರ್ಯ ಬಹುತೇಕ ಕಾವಿಧಾರಿಗಳು ಕರಗತ ಮಾಡಿಕೊಂಡಿದ್ದಾರೆ. ಇದು ಕಾವಿ – ಖಾದಿಗಳು ಪರಸ್ಪರ ಕೊಂಡುಕೊಳ್ಳುವಿಕೆ ಪ್ರಕ್ರಿಯೆಯಾಗಿದೆ.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಮಠಾಧೀಶರಾದ ಇವರು ಅದೆಷ್ಟು ವಚನ ಓದಿದ್ದಾರೋ ಗೊತ್ತಿಲ್ಲ, ಬಹುಶಃ ಇವರು ವಚನ ಸಾಹಿತ್ಯ ಆಳವಾಗಿ ಅಧ್ಯಯನ ಕೈಗೊಂಡಿದರೆ
ಈ ರೀತಿ ಜಾತಿವಾದಿ ರಾಜಕೀಯ ಹಾಗೂ ರಾಜಕಾರಣಿಗಳ ಪರ ನಿಂತು ಅಂಗಲಾಚುತ್ತಿರಲಿಲ್ಲ ಅನ್ಸುತ್ತೆ. ಕೇವಲ ಪಂಚಮಸಾಲಿ ಸಮುದಾಯಕ್ಕೆ ಮಾತ್ರ  ಸೀಮಿತ ಎಂದು ಮಂತ್ರಿ ಸ್ಥಾನ ಕೊಡಬೇಕೆಂದು ಬೆದರಿಸುವ ಈ ಸ್ವಾಮೀಜಿಗಳು ಲಿಂಗಾಯತ ಮಠದ ಸ್ವಾಮೀಜಿ ಎಂದು ಹೇಳಲು ಸಾಧ್ಯವೇ?

ಬಸವ ತತ್ವ ಸಿದ್ಧಾಂತ‌ ಸೂಕ್ಷ್ಮವಾಗಿ  ಅರ್ಥೈಸಿಕೊಳ್ಳದವರು ಮಠಾಧೀಶರಾಗಲು
ಅರ್ಹರೇ? ‘ಲಿಂಗಾಯತ’ ಎಂಬುದು ಜಾತಿಯಲ್ಲ,
ಜಾತಿ ಮತ ಪಂಥ ಹಾಗೂ ಲಿಂಗರಹಿತವಾದ ‘
ಸಕಲ ಜೀವಾತ್ಮರಿಗೂ ಲೇಸು ಬಯಸುವ’
ಮಾನವೀಯತೆ ನೆಲೆಗಟ್ಟಿನ‌ ಅದೊಂದು
ಧರ್ಮ. ಆದರೆ ಹಿರಿಯ‌ ಮಠಾಧೀಶರ ಬುದ್ಧಿವಂತಿಕೆಯಿಂದ ಲಿಂಗಾಯತ ಎನ್ನುವ ಮೂಲ ಪರಿಕಲ್ಪನೆ ಮರೆಮಾಚಿಸುವ ಮೂಲಕ ಜಾತಿಗೊಂದು ಮಠ ಸ್ಥಾಪಿಸಿದರು. ಅಂತಹ ಮಠಗಳಿಗೆ ಜಾತಿಗೊಬ್ಬ ಮಠಾಧೀಶರನ್ನು ನೇಮಿಸುವ ಮೂಲಕ ಲಿಂಗಾಯತ ಧರ್ಮವನ್ನು ವೈದಿಕ ಧರ್ಮದ ಭಾಗವಾಗಿ ಗುರುತಿಸಿದರು! ಇಂತಹ ಪೀಠಗಳಲ್ಲಿ ಪಂಚಮಸಾಲಿ ಕೂಡ ಒಂದು. ಮಾಧ್ಯಮಗಳ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿರುವ ಶ್ವಾಸಗುರು‌ ಸ್ವಾಮೀಜಿ ನಂತರದ ದಿನಗಳಲ್ಲಿ ಪಂಚಮಸಾಲಿ ಪೀಠಕ್ಕೆ ಹೊಸ ‘ಜಗದ್ಗುರು’ವಾಗಿ‌ ಬಡ್ತಿ ಪಡೆದರು.

ರಾಜ್ಯದ ಮುಖ್ಯಮಂತ್ರಿಯನ್ನು ತಮ್ಮ ಜಾತಿಯ ಬೆಂಬಲದಿಂದ ಅವಮಾನಿಸಿದ್ದು ತೀರ ಖಂಡನೀಯ. ಇದು ಪ್ರಜಾಪ್ರಭುತ್ವದ ವಿರೋಧ ನಡೆಯೂ ಕೂಡ. ಸಂವಿಧಾನ ಬದ್ಧವಾಗಿ ಆಯ್ಕೆಯಾದ ಪ್ರತಿನಿಧಿಗೆ ಕನಿಷ್ಠ ಗೌರವ ನೀಡದ ಸ್ವಾಮೀಜಿಯೊಬ್ಬರು ತನ್ನ ಮಠ ಹಾಗೂ ಸಮುದಾಯದಕ್ಕೆ ಸೀಮಿತವಾಗಿ ಬೇಡಿಕೆ ಮಂಡಿಸುವ ತಾಕತ್ತು ಧರ್ಮ ಕಲಿಸುವುದಿಲ್ಲ.

ಮಠಾಧೀಶರಾದವರು ‘ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ತತ್ವದಲ್ಲಿ ಮುನ್ನಡೆದು ಇತರರಿಗೂ ಮಾದರಿಯಾಗಬೇಕು.
ಆದರೆ ಕೂತಲ್ಲೇ ಮೈಕ್ ನಲ್ಲಿ ಅಸಭ್ಯವಾಗಿ ಏರು ದನಿಯಲ್ಲಿ ಮಾತನಾಡಿ ಮುಖ್ಯಮಂತ್ರಿಗೆ ಅವಮಾನಿಸುವ ಧೈರ್ಯ ಹೇಗೆ ಬಂದಿರಬಹುದು?

ಸರ್ಕಾರಕ್ಕೆ ತಮ್ಮ ಸಮುದಾಯ ಹಾಗೂ ಜಾತಿಗಳಿಗೆ ಸವಲತ್ತು ಕೇಳುವ ಹಕ್ಕನ್ನು ಸಂವಿಧಾನ ನೀಡಿದೆ. ಯಾವುದೇ ಸರ್ಕಾರ ಹಾಗೂ ರಾಜಕಾರಣಿಗಳಿಗೆ ಸಲಹೆ ಸೂಚನೆಗಳನ್ನು ನೀಡುವ ಅಧಿಕಾರ ಕೂಡ ಮಠಾಧೀಶರಿಗಿದೆ. ಆದರೆ ರಾಜಕೀಯ ಹಸ್ತಕ್ಷೇಪ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಕಾವಿ ಕಳಚಿಟ್ಪು ನೇರವಾಗಿ ರಾಜಕಾರಣ ಮಾಡಲು ಖಾದಿ ಧರಿಸಬೇಕು? ಆದರೆ ಧಾರ್ಮಿಕ ಬೋಧನೆಯ ಸ್ವಾಮೀಜಿ ತನ್ನ ಜಾತಿಯ ಒಬ್ಬರನ್ನ ಮಂತ್ರಿ ಮಾಡಲೇಬೇಕು ಎಂದು ಅಂತ ಧಮ್ಕಿ ಹಾಕಿ ಹಕ್ಕೊತ್ತಾಯ ಮೂಲಕ ಆಮಿಷ ತೋರಿಸೋದು ಕಾನೂನು ಬಾಹಿರ ಅಲ್ಲವೇ?

ಬಸವಣ್ಣರ ಕಟ್ಟಲು ಬಯಸಿದ ಲಿಂಗಾಯತ ಸಿದ್ಧಾಂತವೇ ಬೇರೆ.ಈ ಸ್ವಾಮೀಜಿಗಳ ಸಿದ್ಧಾಂತವೇ ಬೇರೆಯಾಗಿದೆ. ಮೊದಲಿಗೆ ಬಸವ ಸಿದ್ಧಾಂತದಲ್ಲಿ  ಮಠವೂ ಇಲ್ಲ, ಕಾವಿಯೂ ಇಲ್ಲ. ಆದರೆ ಜಾತಿ ಲೆಕ್ಕಾಚಾರದಲ್ಲಿ ಜಾತಿಗೊಂದು ಜಾತ್ರೆ ಮಾಡಲು ಮಠೀಯ ವ್ಯವಸ್ಥೆ ಜಾರಿಗೊಳಿಸಿದರು. ಇಂತಹ ಕಾವಿಧಾರಿಗಳ ನಡುವೆಯೂ ಸಿದ್ಧಗಂಗಾ ಶ್ರೀ, ತೋಂಟದಾರ್ಯ ಶ್ರೀಗಳು, ಭಾಲ್ಕಿಯ ಚನ್ನಬಸವ ಪಟ್ಟದೇವರ ಭಿನ್ನವಾಗಿ ಕಂಡು ಸಮನ್ವಯತೆಗೆ ಮಾದರಿಯಾದವರು.

ವಚನಾನಂದ ಶ್ರೀಗಳು ಬಹುಶಃ ತಮ್ಮ ಸಮುದಾಯದ ಏಳಿಗೆ ಬಯಸಿ ಒಂದಿಷ್ಟು ಪೂರಕ ಯೋಜನೆ ರೂಪಿಸುವಂತೆ ಸಲಹೆ ನೀಡಬಹುದಿತ್ತು. ತಮ್ಮ ಭಾಗದ ರೈತರ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಆಗ್ರಹಿಸಬಹುದಿತ್ತು. ಉಳಿದ ಜಾತಿಗಳ ಬಗ್ಗೆ ನಿರ್ಲಕ್ಷ್ಯ ತೋರಿದರೂ ತಮ್ಮ ಜಾತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪ್ರತ್ಯೇಕ ಅನುದಾನವಾದರೂ ಕೇಳಿದರೆ??  ನೀವು ನಿಜವಾಗ್ಲೂ ಜನಪರ ‘ಶ್ವಾಸಗುರು’ ಎನಿಸಿಕೊಳ್ಳುತ್ತಿದ್ದೀರಿ. ಇನ್ನಾದರೂ ಬದಲಾಗಿ ‘ಇವನಮ್ಮವ’ ಎನ್ನುವ ತತ್ವ ಸಿದ್ಧಾಂತ ಮೈಗೂಡಿಸಿಕೊಳ್ಳಬೇಕಿದೆ.

ಚುನಾವಣೆಯಲ್ಲಿ ಮಠ ಪೀಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಸಲಹೆಯಂತೆ ಟಿಕೇಟ್ ಹಂಚುವ ರಾಜಕಾರಣಿಗಳು ಕಾವಿಗೆ ಹೆದರದೆ ಇರುವವರೇ?
ಜಾತಿ‌, ಧರ್ಮಾಧಾರಿತ‌ವಾಗಿ ಬದಲಾದ ಇಂದಿನ ರಾಜಕೀಯ ವ್ಯವಸ್ಥೆಯನ್ನು ಮಠ‌ – ಪೀಠಗಳೇ ನಿರ್ಣಾಯಕವಾಗಿವೆ.

ಇಂದಿನ ಬಹುತೇಕ ಎಲ್ಲಾ ಮಠಗಳು ರಾಜಕೀಯ ತಾಣಗಳಾಗಿ ಪರಿವರ್ತನೆಯಾಗಿವೆ. ಚುನಾವಣೆಗಳಲ್ಲಿ ಪಕ್ಷಗಳ ಗೆಲುವಿಗಾಗಿ ಹರಸಾಹಸಪಟ್ಟು ಬೆಂಬಲ ಘೋಷಿಸುವ ಮಠಾಧೀಪತಿಗಳು ನಂತರದ ದಿನಗಳಲ್ಲಿ ತಮ್ಮ ಕಸರತ್ತಿನ ಪಾಲು ಕೇಳದೇ ಇರಬಹುದೇ? ಧರ್ಮದ ಹೆಸರಿನಲ್ಲಿ ಜಾತಿ ರಾಜಕಾರಣ ನಡೆಸುವ ಮಠಾಧೀಶರು ತಮ್ಮ ಮಠ – ಪೀಠ ಬೆಳವಣಿಗೆಗಾಗಿ ಎಲ್ಲಾ ರೀತಿಯ ಸಾಹಸಗಳನ್ನು ಮಾಡಲು ಮುಂದಾಗುತ್ತಾರೆ.

ಮಂತ್ರಿ ಸ್ಥಾನ ತೊರೆದು ನಾಲ್ಕು ತಿಂಗಳ ಉಪವಾಸ ವನವಾಸ ಅನುಭವಿಸಿ ಮುಖ್ಯಮಂತ್ರಿ ‌ಮಾಡಿದ
17 ಶಾಸಕರಿಗೆ ಹೇಗೆ ಸಚಿವ‌ ಸ್ಥಾನ ಕೊಡಬೇಕೆಂಬ ಸಂಕಷ್ಟದಲ್ಲಿರುವ ಯಡಿಯೂರಪ್ಪನವರಿಗೆ ವಚನಾನಂದ ಸ್ವಾಮೀಜಿಯ ‘ಗರ್ ಗುರ್’ ಮಾತುಗಳು ನಿರಾಸೆ ಮೂಡಿಸಿದವು. ಕೊನೆಗೆ
“ನನ್ನ ಪರಿ‌ಸ್ಥಿತಿ‌ ಅರ್ಥೈಸಿಕೊಳ್ಳಿ,‌ ಎಲ್ಲರೂ ‌ನನಗೆ ಅಷ್ಟೇ ಸಮ,ಸಲಹೆ ನೀಡಬಹುದು ಹೊರತು ಬೆದರಿಕೆ ಅಲ್ಲ, ನೀವು ಬಯಸಿದರೆ ನಾಳೆಯೇ ರಾಜಿನಾಮೆ ಕೊಡುತ್ತೇನೆ” ಎಂದು ಸ್ವಾಮೀಜಿಗೆ ಸರಿಯಾಗೇ ಉತ್ತರಿಸಿದರೂ ಒಳಗೊಳಗೆ ಸಂಪುಟ ವಿಸ್ತರಣೆಯ ಭಯ ಮತ್ತೆ ಕಾಡುತ್ತಿತ್ತು.

ಇಂದಿನ ರಾಜಕೀಯ ವ್ಯವಸ್ಥೆ ಕಾವಿಧಾರಿಗಳ ನಿರ್ದೇಶನದಂತೆ ಮುನ್ನಡೆಯುತ್ತಿರುವಾಗ ಇಂತಹ ಬೆಳವಣಿಗೆಗಳು ಸಾಮಾನ್ಯವಾಗಿ ಹುಟ್ಟಿಕೊಳ್ಳುತ್ತವೆ ಎಂಬುದು ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿ ‌ನೋಡಬಹುದು.

(ಲೇಖಕರು ಶಿಕ್ಷಕರು ಮತ್ತು ಬರಹಗಾರರು. ಅಭಿಪ್ರಾಯಗಳು ಅವರ ಸ್ವಂತದ್ದು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಂದು ಸಮುದಾಯಕ್ಕೆ ಸೀಮಿತವಾದ ಸ್ವಾಮೀಜಿ ಜಗದ್ಗುರು ಆಗಲು ಹೇಗೆ ಸಾಧ್ಯ?

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...