Homeಮುಖಪುಟಈರುಳ್ಳಿ ಬೆಲೆ ನಿಯಂತ್ರಿಸಲು ಸರ್ಕಾರ ಮಾಡಬೇಕಾದುದೇನು? ಆದರೆ ಮಾಡುತ್ತಿರುವುದೇನು?

ಈರುಳ್ಳಿ ಬೆಲೆ ನಿಯಂತ್ರಿಸಲು ಸರ್ಕಾರ ಮಾಡಬೇಕಾದುದೇನು? ಆದರೆ ಮಾಡುತ್ತಿರುವುದೇನು?

- Advertisement -
- Advertisement -
  • ಅಶೋಕ್ ಗುಲಾತಿ, ಹರ್ಷವರ್ಧನ್
  • ಅನುವಾದ: ಟಿ.ಎಸ್‌ ವೇಣುಗೋಪಾಲ್‌

ಈರುಳ್ಳಿ ಬೆಲೆ ಏರುವುದನ್ನು ತಪ್ಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದು ಒಂದು ದೊಡ್ಡ ದುಸ್ವಪ್ನವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಹಿಂದೆ ಯುಪಿಎ ಸರ್ಕಾರವನ್ನು ಇದೇ ಕಾರಣಕ್ಕಾಗಿ ಟೀಕಿಸಿದ್ದ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಪ್ರಧಾನ ಮಂತ್ರಿಯವರು “ಈಗ ನಾವು ಈರುಳ್ಳಿಗಾಗಿಯೂ ಒಂದು ಲಾಕರ್ ತೆರೆಯಬೇಕು. ಅದರಲ್ಲಿ ಈರುಳ್ಳಿಯನ್ನು ಬೀಗ ಹಾಕಿ ಕಾಪಾಡಿಕೊಳ್ಳಬೇಕು . . . ಅತಿಥಿಗಳು ಬಂದಾಗ ಬರೀ ಅದರ ವಾಸನೆಯನ್ನು ಬಡಿಸಬೇಕು . .. ಈ ಯುಪಿಎ ಸರ್ಕಾರಕ್ಕೆ ಈರುಳ್ಳಿಯಿಲ್ಲದೆಯೇ ಕಣ್ಣೀರು ಬರಿಸುವ ಸಾಮರ್ಥ್ಯವಿದೆ. ಅವರು ಮಾಡಿರುವ ಪಾಪಗಳನ್ನು ನೋಡಿ. ಜೋಳ/ಗೋದಿ/ಬಾಜ್ರ ಇವುಗಳನ್ನು ಈರುಳ್ಳಿಯೊಂದಿಗೆ ತಿಂದು ಬದುಕುತ್ತಿದ್ದ ಭಾರತದ ಬಡವರಿಂದ ಈರುಳ್ಳಿಯನ್ನು ಕಸಿದುಕೊಂಡಿದೆ. ಅವರ ಅಧಿಕಾರವನ್ನು ಇಡೀ ಭಾರತದಿಂದ ನಿರ್ಮೂಲನ ಮಾಡಬೇಕಾಗಿದೆ.” ಈಗ ಅವರೇ ಅಧಿಕಾರದಲ್ಲಿದ್ದಾಗ ಈರುಳ್ಳಿ ಬೆಲೆ ಗಗನಕ್ಕೆ ಹೋಗಿದೆ. ಪ್ರಧಾನಿಯವರು ಮೌನವಾಗಿದ್ದಾರೆ.

ಇದರರ್ಥ ಇಷ್ಟೆ. ಬೇರೆಯವರನ್ನು ಟೀಕಿಸುವುದು ಸುಲಭ. ನೀತಿಗಳನ್ನು ರೂಪಿಸುವುದು ಕಷ್ಟದ ಕೆಲಸ. ಅದಕ್ಕೆ ವಿನಯ ಬೇಕು. ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ಬೇಕಾದ ಸಂಪನ್ಮೂಲವನ್ನು ಕ್ರೋಡಿಕರಿಸಿಕೊಳ್ಳಬೇಕು. ಅನಂತರ ಅದಕ್ಕೆ ತಕ್ಕ ನೀತಿಯನ್ನು ಜಾರಿಗೊಳಿಸಬೇಕು. ಅದು ಬಾಳುವಂತಿರಬೇಕು.
ಅಂತಹ ನೀತಿ ರೂಪಿಸುವುದಕ್ಕೆ ಸಾಧ್ಯವಿದೆ. ಈರುಳ್ಳಿಗೆ ಸಂಬಂಧಿಸಿದ ಹಾಗೆ ಮತ್ತೆ ಇಂತಹ ಅನಾಹುತ ಆಗದ ಹಾಗೆ ಹೇಗೆ ನೋಡಿಕೊಳ್ಳಬಹುದು ಎಂಬುದನ್ನು ಚರ್ಚಿಸೋಣ.

ಈಗಿನ ಈರುಳ್ಳಿ ಬೆಲೆಯ ಏರಿಕೆಯನ್ನು ಊಹಿಸಬಹುದಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ ಈರುಳ್ಳಿ ಬೆಲೆ ಹಿಡಿದ ದಾರಿಯನ್ನು ಗಮನಿಸೋಣ. ಸೆಪ್ಟೆಂಬರ್- ಅಕ್ಟೋಬರಿನಲ್ಲಿ ಈರುಳ್ಳಿ ಬೆಲೆ ಕೆಜಿಗೆ 50-60ರೂಪಾಯಿ ಆಯಿತು. ಸರ್ಕಾರ ಕನಿಷ್ಠ ರಫ್ತು ಬೆಲೆಯನ್ನು ವಿಧಿಸಿತು (ಎಂಇಪಿ), ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳ ಸಂಗ್ರಹದ ಮೇಲೆ ಮಿತಿಯನ್ನು ಹಾಕಿತು. ಅನಂತರ ಈರುಳ್ಳಿ ರಫ್ತನ್ನು ನಿಷೇದಿಸಿತು. ಆದರೆ ಈ ಕ್ರಮಗಳಿಂದ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆಗ ವ್ಯಾಪಾರಿಗಳ ಮೇಲೆ ವರಮಾನ ತೆರಿಗೆ ದಾಳಿಯನ್ನು ಕೂಡ ನಡೆಸಲಾಯಿತು. ನೀತಿಯನ್ನು ರೂಪಿಸುವಲ್ಲಿನ ದಿವಾಳಿತನವನ್ನು ಇದು ತೋರಿಸುತ್ತದೆ.

ಇಂತಹ ಪರಿಸ್ಥಿತಿ ವರ್ಷ ಬಿಟ್ಟು ವರ್ಷ ನಡೆಯುತ್ತಲೇ ಇದೆ. ಆದರೆ ನಾವು ಇದರಿಂದ ಕಲಿಯಲು ತಯಾರಿಲ್ಲ. ದಿವಂಗತ ಅರುಣ್ ಜೇಟ್ಲಿ “ಆಪರೇಷನ್ ಗ್ರೀನ್”ಗಾಗಿ 500 ಕೋಟಿ ರೂಪಾಯಿಗಳನ್ನು 2018ರ ಬಜೆಟ್ಟಿನಲ್ಲಿ ಘೋಷಿಸಿದರು. ಟೊಮೆಟೊ, ಈರುಳ್ಳಿ ಹಾಗೂ ಆಲೂಗೆಡ್ಡೆಯ ಬೆಲೆಗಳನ್ನು ಸ್ಥಿರಗೊಳಿಸುವ ಉದ್ದೇಶಕ್ಕಾಗಿ ಇದನ್ನು ಮಾಡಲಾಗಿತ್ತು. ಆಹಾರ ಸಂಸ್ಕರಣಾ ಮಂತ್ರಾಲಯ ಇದನ್ನು ಜಾರಿಗೊಳಿಸಬೇಕಾಗಿತ್ತು. ಆದರೆ ಈ ಹಣ ಇಲ್ಲಿಯವರಗೆ ಬಿಡುಗಡೆಯಾಗಿಲ್ಲ. ಮಂತ್ರಾಲಯದ ವೆಬ್ ಸೈಟ್ ನೋಡಿದರೆ ಇದು ಸ್ಪಷ್ಟವಾಗುತ್ತದೆ.
ಈಗಿನ ಈರುಳ್ಳಿ ಬೆಲೆ ಏರಿಕೆಯನ್ನು ಊಹಿಸಬಹುದಿತ್ತು. ತೋಟಗಾರಿಕಾ ಇಲಾಖೆಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಈರುಳ್ಳಿಯನ್ನು ಪ್ರಧಾನವಾಗಿ ಬೆಳೆಯುವ ರಾಜ್ಯಗಳಲ್ಲಿ (ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್ ಮತ್ತು ರಾಜಾಸ್ಥಾನ) ಈ ವರ್ಷ ಖಾರೀಫ್ ಇಳುವರಿ ಶೇಕಡ 7ರಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜು ಮಾಡಿತ್ತು. ಸೆಪ್ಟೆಂಬರ್/ಅಕ್ಟೋಬರಿನಲ್ಲಿ ಬಂದ ತೀವ್ರ ಮಳೆಯಿಂದಾಗಿ ಮಧ್ಯಪ್ರದೇಶದಲ್ಲಿ ಶೇಕಡ 58ರಷ್ಟು, ಕರ್ನಾಟಕದಲ್ಲಿ ಶೇಕಡ 18ರಷ್ಟು, ಆಂಧ್ರದಲ್ಲಿ ಶೇಕಡ 2ರಷ್ಟು ಬೆಳೆಗಳು ನಾಶವಾದವು. ನಿರಂತರ ಮಳೆಯಿಂದಾಗಿ ಮಹಾರಾಷ್ಟ್ರದಲ್ಲಿ ಈರುಳ್ಳಿ ಕುಯಿಲು ನಿಧಾನವಾಯಿತು. ಸರ್ಕಾರ ನಿಧಾನವಾಗಿ ಎಚ್ಚರಗೊಂಡಿತು. ಎಂಎಂಟಿಸಿಗೆ ಒಂದು ಲಕ್ಷ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ನಿರ್ದೇಶಿಸಿತು. ಆಫ್ಗಾನಿಸ್ತಾನ, ಟರ್ಕಿ, ಮತ್ತು ಈಜಿಪ್ಟಿನಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಯಿತು. ಈರುಳ್ಳಿಯನ್ನು ಯಾವ ಬೆಲೆಯಲ್ಲಿ ಆಮದು ಮಾಡಿಕೊಂಡು ಭಾರತದ ಮಾರುಕಟ್ಟೆಯಲ್ಲಿ ಸುರಿಯಲಾಯಿತು ಎಂಬ ಪ್ರಶ್ನೆ ಹಾಗೆ ಉಳಿಯುತ್ತದೆ.

ಇಂಡಿಯಾ ಜಗತ್ತಿನಲ್ಲೇ ಈರುಳ್ಳಿ ರಫ್ತು ಮಾಡುವ ದೊಡ್ಡ ದೇಶ. ಭಾರತ ಪ್ರತಿವರ್ಷ ಎರಡು ಮಿಲಿಯನ್ ಮೆಟ್ರಿಕ್ ಟನ್ ರಫ್ತು ಮಾಡುತ್ತದೆ (ಚಿತ್ರ 2). ರಫ್ತನ್ನು ನಿಷೇಧಿಸುವ ಬದಲು ಆಮದಿಗೆ ಅವಕಾಶವನ್ನು ಮುಕ್ತವಾಗಿ ಇಟ್ಟುಕೊಂಡರೆ, ದೇಶದಲ್ಲಿ ಈರುಳ್ಳೆ ಬೆಲೆ ಸಿಕ್ಕಾಪಟ್ಟೆ ಏರಿದ ಸಂದರ್ಭದಲ್ಲಿ, ಖಾಸಗಿ ವ್ಯಾಪಾರಿಗಳು ಬೇಕಾದಾಗ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಬಹುದು. ಸರ್ಕಾರದ ನಿಧಾನದ ತೀರ್ಮಾನಕ್ಕೆ ಕಾಯಬೇಕಾಗಿಲ್ಲ. ಹೀಗೆ ಮಾಡುವುದರಿಂದ ಭಾರತ ರಫ್ತುದಾರನಾಗಿ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದರಿಂದ ರೈತರಿಗೆ ನಿರಂತರವಾಗಿ ಒಳ್ಳೆಯ ಬೆಲೆ ಸಿಗುತ್ತದೆ. ದಿಢೀರನೆ ರಫ್ತನ್ನು ನಿಷೇದಿಸುವುದು ರೈತ ವಿರೋಧಿ ಮಾತ್ರವಲ್ಲ ಅದು ನಿಜವಾಗಿ ಸರ್ಕಾರದ ನೀತಿಯ ವೈಫಲ್ಯವನ್ನು ತೋರಿಸುತ್ತದೆ. ಗ್ರಾಹಕರ ಆಸಕ್ತಿಯನ್ನು ಈಡೇರಿಸುವ ದೃಷ್ಟಿಯಿಂದ ಭಾರತ “ಆಪರೇಷನ್ ಗ್ರೀನ್” ಯೋಜನೆಗೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು.

ಹಾಗಾದರೆ ರೈತರ ಹಾಗೂ ಗ್ರಾಹಕರ ಆಸಕ್ತಿಯನ್ನು ಕಾಪಾಡುವುದಕ್ಕೆ ಏನು ಮಾಡಬೇಕು?
ಮೊದಲಿಗೆ ರಾಬಿ ಈರುಳ್ಳಿಯನ್ನು ಸಂಗ್ರಹಿಸಿಡುವುದಕ್ಕೆ ಬೃಹತ್ ಪ್ರಮಾಣದಲ್ಲಿ ಸೌಲಭ್ಯ ಕಲ್ಪಿಸಬೇಕು. ರೈತರು ಮತ್ತು ವ್ಯಾಪಾರಿಗಳ ಮಟ್ಟದಲ್ಲಿ ಇದು ನಡೆಯಬೇಕು. ಏಪ್ರಿಲ್ -ಮೇ ತಿಂಗಳಿನಲ್ಲಿ ಈರುಳ್ಳಿ ಬೆಲೆ ಕೆಜಿಗೆ 4-5 ರೂಪಾಯಿ ಇದ್ದಾಗ ಈರುಳ್ಳಿಯನ್ನು ಉದಾಹರಣೆಗೆ ಕೆಜಿಗೆ 10ರೂಪಾಯಿನಂತೆ ಕೊಂಡುಕೊಳ್ಳಬೇಕು. ಆಧುನಿಕ ಖಾಸಗೀ ಕ್ಷೇತ್ರದ ಗೋದಾಮುಗಳಲ್ಲಿ ಶೇಖರಿಸಿಡಬೇಕು. ಪದೇ ಪದೇ ಸಂಗ್ರಹಣೆಯ ಮಿತಿಯನ್ನು ಹೇರುವುದು ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸುವುದು ಇವೆಲ್ಲಾ ಆಧುನಿಕ ಶೀತಸಂಗ್ರಹದಲ್ಲಿ ಖಾಸಗಿಯವರಿಗೆ ಹಣ ಹೂಡುವ ಉತ್ಸಾಹವನ್ನು ಕುಂದಿಸುತ್ತದೆ. ಖಾಸಗಿ ಸಂಗ್ರಹವನ್ನು ಉತ್ತೇಜಿಸಬೇಕು. ಅದಕ್ಕಾಗಿ ಅವಶ್ಯಕ ಸರಕು ಕಾಯ್ದೆ ಹೋಗಬೇಕು. ವ್ಯಾಪಾರಿಗಳು ಒಂದಾಗಿ ಬೆಲೆನಿಯಂತ್ರಿಸುವುದನ್ನು ತಪ್ಪಿಸುವುದಕ್ಕೆ ಭಾರತೀಯ ಸ್ಪರ್ಧಾ ಸಮಿತಿ (ಕಾಂಪಿಟೇಷನ್ ಕಮೀಷನ್ ಆಪ್ ಇಂಡಿಯಾ) ಕಾರ್ಯೋನ್ಮುಖವಾಗಬೇಕು. ಆದಾಯ ತೆರಿಗೆ ಸಿಬ್ಬಂದಿಗಳು ಇದರಲ್ಲಿ ಕೈಹಾಕಬಾರದು.

ಎರಡನೆಯದಾಗಿ ಸರ್ಕಾರ ಒಣಗಿಸಿದ ಈರುಳ್ಳಿ (ಪುಡಿ, ಚೂರು ಇತ್ಯಾದಿ ರೂಪದಲ್ಲಿ) ಬಳಸುವುದಕ್ಕೆ ನಗರಗಳಲ್ಲಿ ಹಾಗೂ ದೊಡ್ಡ ಪ್ರಮಾಣದ ಬಳಕೆದಾರರನ್ನು (ಮಿಲಿಟರಿ, ಆಸ್ಪತ್ರೆ, ಹೋಟಿಲ್ ಇತ್ಯಾದಿಗಳಲ್ಲಿ) ಉತ್ತೇಜಿಸಬೇಕು. ಈರುಳ್ಳಿ ಸೂಕ್ಷ್ಮ ಸರಕಾದ್ದರಿಂದ ಸರ್ಕರ ಕೂಡ ಒಣಗಿದ ಈರುಳ್ಳಿಯನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ಅದನ್ನು ಹೆಚ್ಚು ಕಾಲ ಇಟ್ಟುಕೊಳ್ಳಬಹುದು. ಗುಜರಾತಿನ ಮಹುವಾ ಈಗಾಗಲೇ ಒಣಗಿಸಿದ ಈರುಳ್ಳಿಯ ದೊಡ್ಡ ಕೇಂದ್ರವಾಗಿದೆ. ನೂರಕ್ಕಿಂತ ಹೆಚ್ಚು ಘಟಕಗಳು ಅಲ್ಲಿ ಕೆಲಸಮಾಡುತ್ತಿವೆ. ಆದರೆ ಅದಕ್ಕೆ ಆಂತರರಾಷ್ಟ್ರೀಯ ಮಾರುಕಟ್ಟೆಯ ಕೊರತೆಯಿದೆ. ಸ್ಥಳೀಯವಾಗಿಯೂ ಬೇಡಿಕೆ ಇಲ್ಲ. ಹಾಗಾಗಿ ಕಳೆದ ವರ್ಷದ ಸಂಗ್ರಹವೇ ಇನ್ನೂ ಮಾರಾಟವಾಗದೇ ಹಾಗೇ ಉಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಜೈನ್ ಇರಿಗೇಷನ್ ಇಂದು ಭಾರತದಲ್ಲಿ ಅತಿದೊಡ್ಡ ಈರುಳ್ಳಿ ಒಣಗಿಸುವ ಕಂಪೆನಿಯಾಗಿದೆ. ರೈತರಿಗೆ ಕೊಡುವ ಬೆಲೆ ಬೀಜ ಹಾಕುವುದಕ್ಕಿಂತ ಮೊದಲೇ ನಿರ್ಧರಿತವಾಗಿರುತ್ತದೆ. ನಿರ್ಧಾರಿತ ಬೆಲೆಗಿಂತ ಮಾರುಕಟ್ಟೆಯ ಬೆಲೆ ಜಾಸ್ತಿಯಾದರೆ ರೈತರಿಗೆ ಮಾರುಕಟ್ಟೆ ಬೆಲೆಗಿಂತ 60 ಪೈಸೆ ಕಡಿಮೆಮಾಡಿಕೊಂಡು ಹಣ ಕೊಡಲಾಗುತ್ತದೆ. ಅಂತಹ ಒಪ್ಪಂದದ ಕೃಷಿ ಮಾದರಿ ಮಾರುಕಟ್ಟೆಯ ರಿಸ್ಕನ್ನು ಕಮ್ಮಿ ಮಾಡುತ್ತದೆ. ಇದನ್ನು ಹೆಚ್ಚು ವಿಸ್ತರಿಸಬೇಕಾದ ಅವಶ್ಯಕತೆಯಿದೆ.

ಮೂರನೆಯದಾಗಿ, ರೈತ-ಉತ್ಪಾದಕರ ಸಂಘಟನೆಯಲ್ಲಿ ಸಣ್ಣ ರೈತರನ್ನು ಸಂಘಟಿಸಬೇಕು ಮತ್ತು ಸಂಘಟಿತ ಚಿಲ್ಲರೆ ವ್ಯಾಪಾರಿಗಳು ಒಪ್ಪಂದದ ಬೇಸಾಯದ ಮೂಲಕ ನೇರವಾಗಿ ಕೊಳ್ಳಲು ಪ್ರೋತ್ಸಾಹಿಸಬೇಕು. ಮಂಡಿ ವ್ಯವಸ್ಥೆಯನ್ನು ಮೀರಿಕೊಳ್ಳುವುದಕ್ಕೆ ಸಾಧ್ಯವಾಗಬೇಕು. ಜೊತೆಗೆ ಈಗಿರುವ ಎಪಿಎಂಸಿ ಮಂಡಿಗಳ ಮೂಲಸೌಕರ್ಯವನ್ನು ಸಂಪೂರ್ಣ ಸುಧಾರಿಸಬೇಕು. ಇದರೊಂದಿಗೆ ಮಾರುಕಟ್ಟೆ ಸುಧಾರಣೆಯನ್ನು ತರಬೇಕು. ಮೋದಿ ಸರ್ಕಾರ ತನ್ನ ಆಳ್ವಿಕೆಯಲ್ಲಿರುವ ಹಲವಾರು ರಾಜ್ಯಗಳಲ್ಲಿ ಎಪಿಎಂಸಿ ಸುಧಾರಣೆಯನ್ನು ಮಾಡುವುದಕ್ಕೆ ಇದ್ದ ಸೊಗಸಾದ ಅವಕಾಶವನ್ನು ಕಳೆದುಕೊಂಡಿದೆ. ಅಷ್ಟೇ ಅಲ್ಲ ಅಂತಹ ಅವಕಾಶಗಳು ದಿನದಿಂದ ದಿನಕ್ಕೆ ಕೈತಪ್ಪಿಹೋಗುತ್ತಿದೆ. ಅದು ಸಾಧ್ಯವಾಗದೆ ಎಲ್ಲವನ್ನೂ ಸೇರಿಸಿಕೊಂಡು ರಾಷ್ಟ್ರೀಯ ಮಾರುಕಟ್ಟೆಗಳನ್ನು ಸ್ಥಾಪಿಸುವ, ಬೆಲೆಗಳನ್ನು ಸ್ಥಿರಗೊಳಿಸುವುದಾಗಲಿ ಅಥವಾ ರೈತರಿಗೆ ಮತ್ತು ಗ್ರಾಹಕರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವ ಸಾಧ್ಯತೆ ಕಡಿಮೆ. ಇನ್ನಾದರೂ ಈರುಳ್ಳಿ ದುಸ್ವಪ್ನದಿಂದ ಎಚ್ಚರಗೊಂಡು ಬಾಳಿಕೆಯ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಒಳ್ಳೆಯದು. ಯೋಚನೆ ಮಾಡದೆ ತಕ್ಷಣಕ್ಕೆ ತೆಗೆದುಕೊಳ್ಳುವ ಕ್ರಮಗಳಿಂದ ಏನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ.

(ಈ ಲೇಖನವು ಮೊದಲ ಬಾರಿಗೆ ಡಿಸೆಂಬರ್ 23, 2019 ರಂದು “ಕೆಲವು ಈರುಳ್ಳಿ ಪಾಠಗಳು” ಎಂಬ ಶೀರ್ಷಿಕೆಯಡಿಯಲ್ಲಿ ಮುದ್ರಣ ಆವೃತ್ತಿಯಲ್ಲಿ ಪ್ರಕಟವಾಯಿತು. ಗುಲಾತಿ ಇನ್ಫೋಸಿಸ್ ಚೇರ್ ಪ್ರೊಫೆಸರ್ ಫಾರ್ ಅಗ್ರಿಕಲ್ಚರ್ ಮತ್ತು ಹರ್ಷವರ್ಧನ್ ಐಸಿಆರ್‌ಐಇಆರ್ ನಲ್ಲಿ ಸಲಹೆಗಾರರಾಗಿದ್ದಾರೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...