Homeರಂಜನೆಕ್ರೀಡೆಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸ್ ಸಿಡಿಸಿ ಪಾಕ್ ಅನ್ನು ಗೆಲುವಿನ ದಡ ಸೇರಿಸಿದ ಆಸಿಫ್ ಅಲಿ!

ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸ್ ಸಿಡಿಸಿ ಪಾಕ್ ಅನ್ನು ಗೆಲುವಿನ ದಡ ಸೇರಿಸಿದ ಆಸಿಫ್ ಅಲಿ!

ಸತತ ಮೂರು ಪಂದ್ಯ ಗೆಲ್ಲುವುದರೊಂದಿಗೆ ಪಾಕಿಸ್ತಾನದ ಸೆಮಿಫೈನಲ್ ಹಾದಿ ಸುಗಮವಾಗಿದೆ.

- Advertisement -
- Advertisement -

ಐಸಿಸಿ ಟಿ20 ವಿಶ್ವಕಪ್‌ನ ಆಫ್ಘಾನಿಸ್ಥಾನ ಎದುರಿನ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಲು ಕೊನೆಯ 12 ಎಸೆತಗಳಲ್ಲಿ 24 ರನ್ ಬೇಕಿದೆ. ಈಗಾಗಲೇ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಪಾಕ್ ಅಭಿಮಾನಿಗಳಲ್ಲಿ ಆತಂಕ, ಎದೆಬಡಿತ. ಆಗ ಕ್ರೀಸ್‌ನಲ್ಲಿದುದ್ದು ಸ್ಫೋಟಕ ಬ್ಯಾಟ್ಸ್‌ಮನ್ ಆಸಿಫ್ ಅಲಿ. ಆಫ್ಘಾನಿಸ್ಥಾನದ ವೇಗದ ಬೌಲರ್ ಕರೀಂ ಜನತ್ 19ನೇ ಓವರ್ ಬೌಲ್ ಮಾಡಿದಾಗ ಆಸಿಫ್ ಅಲಿ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿ ಪಾಕ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಾಕ್ ಅಭಿಮಾನಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

19ನೇ ಓವರ್‌ನ ಮೊದಲ ಬಾಲ್ ಅನ್ನು ಲಾಂಗ್ ಆಫ್‌ ಮೇಲೆ ಮೂರನೇ ಎಸೆತವನ್ನು ಮಿಡ್ ವಿಕೆಟ್ ಮೇಲೆ ಸಿಕ್ಸರ್ ಎತ್ತಿದ್ದರು. ಐದನೇ ಎಸೆತವನ್ನು ನೇರ ಬೌಲರ್ ತಲೆ ಮೇಲೆ ಹೊಡೆದರೆ ಆರನೇ ಎಸೆತವನ್ನು ಕವರ್‌ನಲ್ಲಿ ಸಿಕ್ಸ್‌ಗೆ ಕಳಿಸಿದರು. ಕೇವಲ 7 ಎಸೆತಗಳಲ್ಲಿ 25 ರನ್ ಸಿಡಿಸಿ ಪಂದ್ಯ ಗೆಲುವಿಗೆ ಅಮೋಘ ಕಾಣಿಕೆ ನೀಡಿದರು.

 

View this post on Instagram

 

A post shared by ICC (@icc)

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಫ್ಘಾನಿಸ್ಥಾನ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 147 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಅದಕ್ಕೆ ಉತ್ತರವಾಗಿ ಪಾಕ್ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.

ಅಕ್ಟೋಬರ್ 26 ರಂದು ಪಾಕ್ ಮತ್ತು ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿಯೂ ಸಹ ಆಸಿಫ್ ಅಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಪಾಕ್ 5 ವಿಕೆಟ್ ಕಳೆದುಕೊಂಡು ಆತಂಕದ ಸ್ಥಿತಿಯಲ್ಲಿದ್ದಾಗ ಕ್ರೀಸ್‌ಗೆ ಬಂದ ಅವರು ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ ತಂಡದ ಗೆಲುವಿಗೆ ಸಹಾಯಕವಾಗಿದ್ದರು. ಆ ಪಂದ್ಯದಲ್ಲಿ ಅವರು 12 ಎಸೆತಗಳಲ್ಲಿ 27 ರನ್ ಗಳಿಸಿದ್ದರು.

ಭಾರತ, ನ್ಯೂಜಿಲೆಂಡ್ ಮತ್ತು ಆಫ್ಘಾನಿಸ್ಥಾನದ ಎದುರು ಸತತ ಮೂರು ಪಂದ್ಯ ಗೆಲ್ಲುವುದರೊಂದಿಗೆ ಪಾಕಿಸ್ತಾನದ ಸೆಮಿಫೈನಲ್ ಹಾದಿ ಸುಗಮವಾಗಿದೆ. ಸ್ಕಾಟ್ಲ್ಯಾಂಡ್ ಮತ್ತು ನಮೀಬಿಯಾ ಎದುರು ಎರಡು ಪಂದ್ಯಗಳು ಮಾತ್ರ ಬಾಕಿ ಇದ್ದು ಒಂದು ಗೆದ್ದರೂ ಆರಾಮಾವಾಗಿ ಸೆಮಿಫೈನಲ್ ತಲುಪುತ್ತದೆ.

ಪಾಕ್ ಎದುರು ಮೊದಲ ಪಂದ್ಯ ಸೋತಿರುವ ಭಾರತ ಅಕ್ಟೋಬರ್ 31 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಎರಡನೇ ಪಂದ್ಯ ಸೆಣಸಲಿದೆ.


ಇದನ್ನೂ ಓದಿ: ಭಾರತ -ಪಾಕಿಸ್ತಾನ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಹೀಗಾದರೆ ಹೇಗೆ..?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...