Homeಕರ್ನಾಟಕದಲಿತ ಮಹಿಳೆ ಮೇಲೆ ಹಲ್ಲೆ: ಸಚಿವ ಸೋಮಣ್ಣ ವಿರುದ್ಧ ವ್ಯಾಪಕ ಜನಾಕ್ರೋಶ

ದಲಿತ ಮಹಿಳೆ ಮೇಲೆ ಹಲ್ಲೆ: ಸಚಿವ ಸೋಮಣ್ಣ ವಿರುದ್ಧ ವ್ಯಾಪಕ ಜನಾಕ್ರೋಶ

- Advertisement -
- Advertisement -

ಸಹಾಯಹಸ್ತ ಕೋರಿ ಬಂದ ಮಹಿಳೆಯ ಮೇಲೆ ಸಚಿವ ವಿ.ಸೋಮಣ್ಣ ಹಲ್ಲೆ ನಡೆಸಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ನಡೆದಿದ್ದು, ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ.

ಘಟನೆಯ ಬಳಿಕ ಹಲ್ಲೆಗೊಳಗಾದ ಮಹಿಳೆಯಿಂದ ಸ್ಪಷ್ಟನೆಯನ್ನೂ ಕೊಡಿಸಲಾಗಿದೆ. “ನನ್ನ ಮೇಲೆ ಸೋಮಣ್ಣ ಹಲ್ಲೆ ಮಾಡಿಲ್ಲ” ಎಂಬ ಹೇಳಿಕೆಯನ್ನು ಸಂತ್ರಸ್ತ ಅಸಹಾಯಕ ಮಹಿಳೆಯ ಮೂಲಕ ಕೊಡಿಸಲಾಗಿದೆ. ಬಡ ಕುಟುಂಬವನ್ನು ಬೆದರಿಸಿರುವ ಅನುಮಾನಗಳು ವ್ಯಕ್ತವಾಗುತ್ತಿವೆ.

ಹಲ್ಲೆ ಮಾಡಿರುವುದು ಸ್ಪಷ್ಟವಾಗಿ ದಾಖಲಾಗಿರುವ ವಿಡಿಯೊ ವೈರಲ್ ಆಗುತ್ತಿದ್ದು, ಸೋಮಣ್ಣನವರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಪತ್ರಕರ್ತ ಮೊಹಮ್ಮದ್ ಜುಬೈರ್‌ ಟ್ವೀಟ್ ಮಾಡಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಟ್ಯಾಗ್ ಮಾಡಿದ್ದಾರೆ.

“ಬಿಜೆಪಿಯವರು ಬಾಯಲ್ಲಿ ಮಾತ್ರ ಮಾತೃ ದೇವೋಭವ ಎನ್ನುತ್ತಾರೆ. ಮಹಿಳೆಯ ಮೇಲೆ ಕೈ ಮಾಡಿದ ಸಚಿವ ಸೋಮಣ್ಣರನ್ನು ಈ ಕೂಡಲೇ ಸಚಿವ ಸ್ಥಾನದಿಂದ ತೆಗೆದು ಹಾಕಬೇಕು” ಎಂಬ ಒತ್ತಾಯಗಳನ್ನು ಜನರು ಮಾಡುತ್ತಿದ್ದಾರೆ.

“ಬಡವರಿಗೆ ಹೀಗಾಗುತ್ತದೆ. ನೀವು ಯಾವುದಕ್ಕೂ ಸಿದ್ಧರಾಗಿರಬೇಕು. ಮೊದಲನೆಯದಾಗಿ ಅವರು ನಿಮ್ಮನ್ನು ಗೌರವಿಸದೆ ಕನ್ನೆಗೆ ಭಾರಿಸುತ್ತಾರೆ. ನಂತರ ಸುಳ್ಳು ಹೇಳಿಕೆ ಕೊಡಿಸುತ್ತಾರೆ” ಎಂದು ಅಕ್ಷಯ್ ಕೆ.ಜೈನ್ ಎಂಬವರು ಟ್ವೀಟ್ ಮಾಡಿದ್ದಾರೆ.

“ನೆರವು ಕೇಳಿ ಬಂದ ಅಸಹಾಯಕ ಮಹಿಳೆಗೆ ಸಚಿವ ಸೋಮಣ್ಣ ಕೆನ್ನೆಗೆ ಬಾರಿಸಿ ಹಲ್ಲೆ ನಡೆಸಿದ ಸಾಕ್ಷಿಯಾಗಿ ವಿಡಿಯೋ ದಾಖಲೆಯಿದೆ. ಆದರೆ ಅಸಹಾಯಕ ಸಂತ್ರಸ್ತರಿಗೆ ಬೆದರಿಕೆ ಹಾಕಿ ವ್ಯತಿರಿಕ್ತವಾದ ಹೇಳಿಕೆ ಕೊಡಿಸಿದ್ದಾರೆ. ಸ್ಥಳೀಯ ಸಂಘಟನೆಗಳು ಮುಂದೆ ಬಂದು ಸಂತ್ರಸ್ತರಿಗೆ ಸಾಂತ್ವನ, ಧೈರ್ಯ ತುಂಬಿದರೆ ಸೋಮಣ್ಣನವರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಬಹುದು ಮತ್ತು ಶೋಷಿತರಿಗೆ ನ್ಯಾಯ ಒದಗಿಸಬಹುದು. ಆದರೆ ಪರಿಸ್ಥಿತಿ ಸರಳವಾಗಿಲ್ಲವಲ್ಲ? ಏನು ಮಾಡಬಹುದು?” ಎಂದು ಚಿಂತಕರಾದ ಶ್ರೀಪಾದ ಭಟ್‌ ಪೋಸ್ಟ್‌ ಮಾಡಿದ್ದಾರೆ.

ತನ್ನ ಕಷ್ಟ ಹೇಳಲು ಬಂದ ಮಹಿಳೆಯ ಮೇಲೆ ಹಲ್ಲೆ ಮಾಡಿರುವುದು ಇಡೀ ಮಹಿಳಾ ಸಂಕುಲಕ್ಕೆ ಮಾಡಿದ ಅಪಮಾನ. ಕೂಡಲೇ ಸೋಮಣ್ಣ ರಾಜೀನಾಮೆ ನೀಡಬೇಕು. ಮಹಿಳಾ ವಿರೋಧಿ ಶಾಸಕನನ್ನು ಬಿಜೆಪಿ ಅಮಾನತು ಮಾಡುವುದೇ? ಬೊಮ್ಮಾಯಿಯವರೇ ಸೋಮಣ್ಣರನ್ನು ಸಂಪುಟದಿಂದ ಕೈಬಿಡುವಿರೇ?” ಎಂದು ಬೆಂಗಳೂರು ದಕ್ಷಿಣ ಕಾಂಗ್ರೆಸ್‌ ಘಟಕ ಪ್ರಶ್ನಿಸಿದೆ.

“ಸ್ತ್ರೀ ನಿಂದನೆ, ಸ್ತ್ರೀ ಪೀಡನೆ, ಸ್ತ್ರೀ ಶೋಷಣೆ ಬಿಜೆಪಿಯವರ ಹುಟ್ಟುಗುಣ. ಮಹಿಳೆಯ ಕೆನ್ನೆಗೆ ಹೊಡೆಯುವ ಮೂಲಕ ಸ್ತ್ರೀಯರ ಬಗ್ಗೆ ಬಿಜೆಪಿಯವರ ಮನಸ್ಥಿತಿಯನ್ನು ಸೋಮಣ್ಣ ಅನಾವರಣ ಮಾಡಿದ್ದಾರೆ. ಸಾರ್ವಜನಿಕವಾಗಿಯೇ ಸೋಮಣ್ಣ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಸ್ತ್ರೀಯರ ಬಗ್ಗೆ ಗೌರವವಿಲ್ಲದ ವ್ಯಕ್ತಿಗಳಿಂದ ಮಾತ್ರ ಇಂತಹ ವರ್ತನೆ ತೋರಿಸಲು ಸಾಧ್ಯ” ಎಂದು ಕಾಂಗ್ರೆಸ್ ನಾಯಕರಾದ ದಿನೇಶ್‌ ಗೂಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.

“ಗುಂಡ್ಲುಪೇಟೆಯ ಹಂಗಳದಲ್ಲಿ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯೊಬ್ಬರ ಮೇಲೆ ಸಚಿವ ಸೋಮಣ್ಣ ಕಪಾಳಮೋಕ್ಷ ಮಾಡಿದ್ದಾರೆ. ಸೋಮಣ್ಣ ಒಬ್ಬ ಹಿರಿಯ ಸಚಿವ. ನಾಲ್ಕು ಜನರಿಗೆ ಬುದ್ಧಿ ಹೇಳುವ ಸ್ಥಾನದಲ್ಲಿದ್ದು ಈ ರೀತಿ ವರ್ತಿಸುವುದು ಶೋಭೆಯಲ್ಲ. ಸ್ತ್ರೀಯರೊಂದಿಗೆ ಸಂಸ್ಕಾರಯುತವಾಗಿ ವರ್ತಿಸಬೇಕು ಅನ್ನೋ ಕನಿಷ್ಠ ಜ್ಞಾನವೂ ಸೋಮಣ್ಣರಗಿಲ್ಲವೇ?” ಎಂದು ಕೇಳಿದ್ದಾರೆ.

“ಸ್ತ್ರೀ ಉದ್ಧಾರಕರಂತೆ ಮಾತಾಡುವ ಬಿಜೆಪಿಗರೇ, ಇದೆನಾ ನಿಮ್ಮ ಸಂಸ್ಕೃತಿ? ನಿವೇಶನ ಹಂಚಿಕೆಯಲ್ಲಾದ ಅನ್ಯಾಯದ ಬಗ್ಗೆ ಅಹವಾಲು ಸಲ್ಲಿಸಲು ಬಂದ ಹೆಣ್ಣುಮಗಳ ಜೊತೆ ಸಚಿವ ಸೋಮಣ್ಣ ನಡೆದುಕೊಂಡ ರೀತಿ ಇದು. ಮಹಿಳೆಗೆ ಕೆನ್ನೆಗೆ ಹೊಡೆದ ಸಚಿವ ಸೋಮಣ್ಣ ಈ ಕ್ಷಣವೇ ರಾಜೀನಾಮೆ ನೀಡಬೇಕು. ಅವರ ಮೇಲೆ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು” ಎಂದು ಕಾಂಗ್ರೆಸ್ ಮುಖಂಡರಾದ ದಿವ್ಯಪ್ರಭಾ ಗೌಡ ಆಗ್ರಹಿಸಿದ್ದಾರೆ.

“ಸಂತ್ರಸ್ತೆಯೊಬ್ಬರ ನೋವನ್ನು ಕೇಳಿಸಿಕೊಳ್ಳುವ ವ್ಯವಧಾನವೂ ನಿಮಗೆ ಇಲ್ಲವಾಯಿತೇ ಸಚಿವರೇ? ಜನಪ್ರತಿನಿಧಿಯಾಗಿ ನಿಮ್ಮದು ಇದೆಂಥ ನಡವಳಿಕೆ? ಜನರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸುವ ಯೋಗ್ಯತೆ ಇಲ್ಲದ ಮಹಿಳಾ ವಿರೋಧಿ ಬಿಜೆಪಿ ಸರಕಾರದಿಂದ ಎಂದಿಗೂ ನಾಡಿನ ಅಭಿವೃದ್ಧಿ ಸಾಧ್ಯವಿಲ್ಲ” ಎಂದಿದ್ದಾರೆ.

ಇದೇನಿದು ಗುಂಡಾರಾಜ್ಯ. ಅಂದು ಅರವಿಂದ ಲಿಂಬಾವಳಿ. ಇಂದು ವಿ.ಸೋಮಣ್ಣ. ಸಾರ್ವಜನಿಕವಾಗಿ ಮಹಿಳೆ ಮೇಲೆ ಹಲ್ಲೆ ಮಾಡುವ ಮನಸ್ಥಿತಿ ಇದೇ ಅಂದ್ರೆ ಎಲ್ಲಿದೆ ಪ್ರಜಾಪ್ರಭುತ್ವ?” ಎಂದು ಚೇತನ್ ಸೂರ್ಯ ಎಸ್. ಎಂಬವರು ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...