Homeಚಳವಳಿಕೊಪ್ಪಳ: ಮಾದಿಗ ಸಮುದಾಯದ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಕಾರಟಗಿ ಬಂದ್‌ಗೆ ಕರೆ

ಕೊಪ್ಪಳ: ಮಾದಿಗ ಸಮುದಾಯದ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಕಾರಟಗಿ ಬಂದ್‌ಗೆ ಕರೆ

- Advertisement -
- Advertisement -

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಬೋರ್ಡ್‌ ವಿಷಯಕ್ಕೆ ಸಂಬಂಧಿಸಿದಂತೆ ಮಾದಿಗ ಸಮುದಾಯದ ಮೇಲೆ ಪ್ರಬಲ ಕೋಮಿನ ಜನರು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಮೇ 30ರಂದು ಕಾರಟಗಿ ಬಂದ್‌ಗೆ ಕರೆ ನೀಡಲಾಗಿದೆ.

ಮಾದಿಗ ಸಮುದಾಯ ಕೇರಿಯ ಪಕ್ಕದಲ್ಲಿ ಸ್ಥಾಪಿಸಲಾಗಿದ್ದ ವಾಲ್ಮೀಕಿ ಸಂಘದ ನಾಮಫಲಕದ ಬದಿಯಲ್ಲಿ ಅಂಬೇಡ್ಕರ್ ಯುವಕ ಸಂಘದ ಬೋರ್ಡ್ ಹಾಕುವುದನ್ನು ವಿರೋಧಿಸಿ ಬೇಡ ಸಮುದಾಯದವರು ವಿರೋಧಿಸಿದ್ದರು. ಆದರೆ ನಮ್ಮ ಕಾಲೋನಿಯಲ್ಲಿ ಅಂಬೇಡ್ಕರ್ ಬೋರ್ಡ್ ಹಾಕುತ್ತೇವೆ ಎಂದು ಮಾದಿಗ ಸಮುದಾಯದ ಯುವಕರು ಒಂದು ವರ್ಷದಿಂದ ಪ್ರಯತ್ನಿಸುತ್ತಿದ್ದರು. ಬೋರ್ಡ್ ಹಾಕಲು ಮುಂದಾದಾಗ ಮೇ 22 ರ ರಾತ್ರಿ ಗ್ರಾಮದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮಾದಿಗ ಸಮುದಾಯ ಜನರ ಮೇಲೆ ವಾಲ್ಮೀಕಿ ಮತ್ತು ಇತರ ಸಮುದಾಯದ ಜನರು ಕಟ್ಟಿಗೆ ಮತ್ತು ಮಾರಾಕಾಸ್ತ್ರಗಳಿಂದ ಥಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ 10 ದಲಿತರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹಲವರಿಗೆ ಹೊಲಿಗೆ ಹಾಕುವಷ್ಟು ಗಾಯಗಳಾಗಿದ್ದು, ಒಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 17 ಜನರನು ಬಂಧಿಸಲಾಗಿದೆ. ನಂತರ ಪ್ರಭಾವಿ ಕೋಮಿನ ಮುಖಂಡರು ಪೆಟ್ಟು ತಿಂದ ದಲಿತರು ಸೇರಿ 66 ಜನರ ಮೇಲೆ ಪ್ರತಿ ದೂರು ನೀಡಿದ್ದಾರೆ.

ದಲಿತರ ಮೇಲಿನ ಹಲ್ಲೆ ಖಂಡಿಸಿ, ಪ್ರತಿ ದೂರು ಕೈಬಿಡಬೇಕೆಂದು ಒತ್ತಾಯಿಸಿ ಮಾದಿಗ ದಂಡೋರ ಸಂಘಟನೆಯು ಮೇ 30 ರಂದು ಕಾರಟಗಿ ಬಂದ್ ಪ್ರತಿಭಟನೆಗೆ ಕರೆ ನೀಡಿದೆ. ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.

ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಕರಿಯಪ್ಪ ಗುಡಿಮನಿಯವರು ಮಾತನಾಡಿ, “ನೆರೆಯಿಂದಾಗ ಮನೆ ಕಳೆದುಕೊಂಡ ದಲಿತರಿಗೆ ಹಿಂದೆ ಸರ್ಕಾರ ಜಮೀನು ನೀಡಿತು. ಅಲ್ಲಿಯವರೆಗೂ ಜೀತ ಮಾಡುತ್ತಿದ್ದವರು ದುಡಿದು ಬದುಕಲು ಆರಂಭಿಸಿದರು. ತಮ್ಮ ಮಕ್ಕಳನ್ನು ಓದಿಸಿದರು. ಈಗ ಅಂಬೇಡ್ಕರ್ ಸಂಘ ಕಟ್ಟಿಕೊಂಡಿದ್ದಾರೆ. ಇದೆಲ್ಲವೂ ಊರಿನ ಪ್ರಬಲ ಜಾತಿಯವರಿಗೆ ನುಂಗಲಾರದ ತುತ್ತಾಗಿತ್ತು. ಅಲ್ಲದೆ ಗ್ರಾಮದ ಹೋಟೆಲ್ ಮತ್ತು ದೇವಸ್ಥಾನಕ್ಕೆ ಪ್ರವೇಶ ನೀಡಬೇಕೆಂದು ದಲಿತರು ಆಗ್ರಹಿಸಿದ್ದರು. ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಈ ಕುರಿತು ಶಾಂತಿ ಸಭೆ ನಡೆಸಿದ್ದರು. ಇವೆಲ್ಲರಿಂದ ದ್ವೇಷ ಸಾಧಿಸಿ ಮಾದಿಗ ಸಮುದಾಯದ ಮೇಲೆ ಹಲ್ಲೆ ನಡೆಸಲಾಗಿದೆ” ಎಂದಿದ್ದಾರೆ.

ಅಟ್ರಾಸಿಟಿ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಊರಿನ ಪ್ರಬಲ ಜಾತಿಗಳು ವಾಲ್ಮೀಕಿ ಸಮುದಾಯದವರನ್ನು ಮುಂದೆ ಬಿಟ್ಟು ಈ ಕೃತ್ಯ ಎಸಗಿವೆ. ಇನ್ನು ಕ್ಷೇತ್ರದ ದಲಿತ ಶಾಸಕ ಬಸವರಾಜ ದಡೇಸಗೂರು ಕೃತ್ಯವನ್ನು ಖಂಡಿಸಿಲ್ಲ ಎಂದು ಕಿಡಿಕಾರಿದ್ದಾರೆ.

ಗ್ರಾಮಕ್ಕೆ KMRV, CPI(ML), DSS ಮಾದಿಗ ದಂಡೋರ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ನೊಂದ ಕುಟುಂಬಗಳ ಕುಂದು ಕೊರತೆ ಆಲಿಸಿವೆ. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಮಂಡಳಿಯ ಅಧ್ಯಕ್ಷ ಭೇಟಿ ನೀಡಿ ಸಾಂತ್ವನ ಸೌಲಭ್ಯಗಳನ್ನು ದೊರಕಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಮಾತು ಮರೆತ ಭಾರತ; ಕರ್ನಾಟಕದಲ್ಲಿ ಅಸ್ಪೃಶ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...