Homeಮುಖಪುಟಅಶ್ವತ್ಥ ನಾರಾಯಣ್ ಮಲ್ಲೇಶ್ವರಂನಲ್ಲಿ ಗುಳಂ ನಾರಾಯಣ ಎಂದು ಖ್ಯಾತಿ ಪಡೆದಿದ್ದಾರೆ: ಬಿ.ಕೆ ಹರಿಪ್ರಸಾದ್ ಆರೋಪ

ಅಶ್ವತ್ಥ ನಾರಾಯಣ್ ಮಲ್ಲೇಶ್ವರಂನಲ್ಲಿ ಗುಳಂ ನಾರಾಯಣ ಎಂದು ಖ್ಯಾತಿ ಪಡೆದಿದ್ದಾರೆ: ಬಿ.ಕೆ ಹರಿಪ್ರಸಾದ್ ಆರೋಪ

- Advertisement -
- Advertisement -

ಮಲ್ಲೇಶ್ವರಂನಲ್ಲಿ ನಡೆಯುವ ಪ್ರತಿಯೊಂದು ಕಾಮಗಾರಿಗಳಲ್ಲಿ ಸಚಿವ ಅಶ್ವತ್ಥ ನಾರಾಯಣ್‌ಗೆ ಕಮಿಷನ್ ಹೋಗುತ್ತಿದೆ. ಮಲ್ಲೇಶ್ವರಂನ ಬಹುತೇಕ ಕಾಂಟ್ರಾಕ್ಟರ್ ಗಳು ಸಚಿವರ ಸಂಬಂಧಿಗಳೇ ಆಗಿದ್ದಾರೆ. ಅಶ್ವತ್ಥ ನಾರಾಯಣ್ ಮಲ್ಲೇಶ್ವರಂನಲ್ಲಿ ಗುಳಂ ನಾರಾಯಣ ಎಂದು ಖ್ಯಾತಿ ಪಡೆದಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಲ್ಲೇಶ್ವರಂನಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ ಎಂಬುದರಲ್ಲಿ ಸಂದೇಹವೇ ಇಲ್ಲ. ಪ್ರತಿಯೊಂದು ಯೋಜನೆ/ ಕಾಮಗಾರಿಯಲ್ಲಿ ಮಂತ್ರಿಗಳಿಗೆ ಕಮಿಷನ್ ಹೋಗ್ತಾ ಇದೆ.ಈಗ ಪಿಎಸೈ ನೇಮಕಾತಿಯಲ್ಲಿ ಸಚಿವರ ಸಹೋದರನೇ ಭಾಗಿಯಾಗಿರುವ ಗಂಭೀರ ಆರೋಪ‌ ಕೇಳಿ ಬಂದಿದೆ ಎಂದಿದ್ದಾರೆ.

ಈ ರೀತಿಯ ಭ್ರಷ್ಟಾಚಾರಕ್ಕೆ RSS ಕುಮ್ಮಕ್ಕು ಇದೆ. ಅದರ ಹಣದಿಂದಲೇ ಅದು ಇಂದು ಶ್ರೀಮಂತ ಎನ್‌ಜಿಓ ಆಗಿದೆ. ಪ್ರತಿಯೊಬ್ಬ ಸಚಿವರ ಬಳಿಯು RSS ಸಂಘಟನೆಯ ಒಎಸ್‌ಡಿ ಎಂಬುವವರು ಇದ್ದು, ಹಣ ಕಲೆಕ್ಷನ್ ಮಾಡುವುದೇ ಅವರ ವೃತ್ತಿಯಾಗಿದೆ. ಹಾವಿನಪುರದಲ್ಲಿ ಕುಳಿತು ಹಣ ಕಲೆಕ್ಷನ್ ಮಾಡುವುದರಲ್ಲಿ RSS ಚೆನ್ನಾಗಿ ಪಳಗಿದೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.

ನಿನ್ನೆ ಕರ್ನಾಟಕಕ್ಕೆ ಅಮಿತ್ ಶಾ ಬಂದಿದ್ರು. ಆದರೆ ಭ್ರಷ್ಟ ಸರ್ಕಾರದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದರೆ 40% ಕಮಿಷನ್ ಹಾಗೂ ಅಕ್ರಮ ಪಿಎಸೈ ನೇಮಕಾತಿಯಲ್ಲಿ ಅಮಿತ್ ಶಾ ಪಾಲು ತೆಗೆದುಕೊಳ್ಳಲು ಬಂದಿದ್ದಾರೆ ಎಂದರ್ಥ.ಅಮಿತ್ ಶಾ ಆಗಮನದಿಂದ ರಾಜ್ಯದ ಜನರಿಗೆ ನಯಾಪೈಸೆ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ವಿಶೇಷ ವರದಿ: ಪಿಎಸ್‌ಐ ಪರೀಕ್ಷೆ ಅಕ್ರಮ ಒಂದೇ ಅಲ್ಲ, ಶಿಕ್ಷಣದ ಅವ್ಯವಸ್ಥೆಗೆ ಕೊನೆಯೇ ಇಲ್ಲ!

ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿರುವ ಸಚಿವ ಅಶ್ವಥ್ ನಾರಾಯಣ್ ಈ ಕೂಡಲೇ ರಾಜೀನಾಮೆ ನೀಡಬೇಕು. ಸ್ವ ಇಲಾಖೆಯಲ್ಲಿ ಗಂಭೀರವಾದ ಆರೋಪ‌ ಎದುರಿಸುತ್ತಿರುವ ಗೃಹ ಸಚಿವ ಆರಗ ಜ್ಞಾನೆಂದ್ರ ಸಹ ರಾಜೀನಾಮೆ ನೀಡಬೇಕು. ಈ ಪ್ರಕರಣದಲ್ಲಿ ನಿಷ್ಪಷಪಾತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...