Homeರಾಷ್ಟ್ರೀಯಬೆಂಗಳೂರು ಕಾರ್ಯಕ್ರಮ ರದ್ದು - ಪ್ರೇಕ್ಷಕರ ವಿಡಿಯೊ ಬಿಡುಗಡೆ ಮಾಡಿದ ಹಾಸ್ಯನಟ ವೀರ್ ದಾಸ್!

ಬೆಂಗಳೂರು ಕಾರ್ಯಕ್ರಮ ರದ್ದು – ಪ್ರೇಕ್ಷಕರ ವಿಡಿಯೊ ಬಿಡುಗಡೆ ಮಾಡಿದ ಹಾಸ್ಯನಟ ವೀರ್ ದಾಸ್!

- Advertisement -
- Advertisement -

ಬೆಂಗಳೂರಿನಲ್ಲಿ ಗುರುವಾರ ನಡೆಯಬೇಕಿದ್ದ ಸ್ಟ್ಯಾಂಡ್‌ಅಪ್ ಕಾಮೇಡಿಯನ್‌ ವೀರ್‌‌ ದಾಸ್ ಅವರ ಕಾರ್ಯಕ್ರಮ ಮುಂದೂಡಿದ ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ತನ್ನ ಕಾರ್ಯಕ್ರಮವೂ ಯಾವುದೇ ಸಮುದಾಯ, ನಾಯಕ, ಧರ್ಮದ ವಿರುದ್ಧ ಅಲ್ಲ ಎಂದು ಹೇಳಿದ್ದಾರೆ.

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಹೇಳಿ ಈ ವಾರದ ಆರಂಭದಲ್ಲಿ ಬಲಪಂಥೀಯ ಸಂಘಟನೆಯಾದ ಹಚ್‌ಜೆಎಸ್‌‌ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ, ಅವರ ವಿರುದ್ಧ ದೂರು ನೀಡಿತ್ತು. ಇದರ ನಂತರ ಅವರ ಕಾರ್ಯಕ್ರಮ ರದ್ದಾಗಿರುವ ಬಗ್ಗೆ ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ವೀರ್‌ ದಾಸ್ “ಅನಿವಾರ್ಯವಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ” ಎಂದು ಹೇಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗುರುವಾರದಂದು ಬೆಂಗಳೂರಿನ ಮಲ್ಲೇಶ್ವರಂನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ವೀರ್‌ ದಾಸ್ ಅವರ ಕಾರ್ಯಕ್ರಮ ನಡೆಯುವುದಾಗಿ ಘೋಷಣೆಯಾಗಿತ್ತು. ಈ ಬಗ್ಗೆ ಪ್ರತಿಕ್ರಿಸಿದ ಅವರು, “ನಾವು ಬೆಂಗಳೂರು ಕಾರ್ಯಕ್ರಮವನ್ನು ಮುಂದೂಡುತ್ತಿದ್ದೇವೆ. ಹೊಸ ವಿವರಗಳು ಮತ್ತು ದಿನಾಂಕಗಳು ಶೀಘ್ರದಲ್ಲೇ ಘೋಷಿಸುತ್ತೇವೆ. ಅನಾನುಕೂಲತೆಗಾಗಿ ಕ್ಷಮಿಸಿ” ಎಂದು ಇನ್ಸ್‌ಟ್ರಾಗ್ರಾಂನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕುನಾಲ್, ಮುನಾವರ್ ನಿಮಗಾಗಿ ಒಂದು ಶೋ ಏರ್ಪಡಿಸುತ್ತೇನೆ, ಆದರೆ ಒಂದೇ ಷರತ್ತು: ದಿಗ್ವಿಜಯ್ ಸಿಂಗ್

ಇದರ ನಂತರ ಅವರು ಟ್ವಿಟರ್‌ನಲ್ಲಿ ಒಂದು ವಿಡಿಯೊ ಪೋಸ್ಟ್‌ ಮಾಡಿದ್ದು, “ಯಾವುದಕ್ಕೂಇರಲಿ ಎಂದು ನನ್ನ ಶೋ ಒಂದರ ನಂತರ ನಾನು ಈ ವೀಡಿಯೊವನ್ನು ಮಾಡಿದ್ದೇನೆ. ಮಾಧ್ಯಮದ ಕನ್ನಡಕಗಳಲ್ಲಿ ಅಥವಾ ಮುಖ್ಯಾಂಶಗಳಿಗೆ ಬಳಸುವುದರಲ್ಲಿ ನನಗೆ ಆಸಕ್ತಿಯಿಲ್ಲ. ನಾನೊಬ್ಬ ಕಲಾವಿದ. ನಾನು ಸುದ್ದಿಯಲ್ಲಿ ಇರಬಾರದು. ನನ್ನ ವಿಷಯದ ಬಗ್ಗೆ ಅನೇಕ ಊಹೆಗಳನ್ನು ಮಾಡಲಾಗಿದೆ. ನನ್ನ ಕಲೆ ಮತ್ತು ನನ್ನ ಪ್ರೇಕ್ಷಕರು ನನ್ನ ಪರವಾಗಿ ಮಾತನಾಡುತ್ತಾರೆ ಎಂದು ನಾನು ನಂಬುತ್ತೇನೆ” ಎಂದು ಹೇಳಿದ್ದಾರೆ.

ವಿಡಿಯೊದಲ್ಲಿ ಅವರು ತಮ್ಮ ಪ್ರಶ್ನೆಗಳಿಗೆ “ಹೌದು” ಅಥವಾ “ಇಲ್ಲ” ಎಂದು ಒಂದೇ ವಾಕ್ಯದಲ್ಲಿ ಉತ್ತರಿಸುವಂತೆ ಪ್ರೇಕ್ಷಕರನ್ನು ಕೇಳಿದ್ದಾರೆ. “ಇದನ್ನು ಮಾಡಲು ನಾನು ಯಾರಿಗೂ ಹಣ ನೀಡಿಲ್ಲ. ಇವರಲ್ಲಿ ಯಾರೂ ಭಯೋತ್ಪಾದಕರು ಅಥವಾ ಪಾಕಿಸ್ತಾನಿ ಏಜೆಂಟ್‌ಗಳಲ್ಲ” ಎಂದು ಅವರು ಹೇಳುತ್ತಾರೆ.

“ನಾವು ಈ ರಾತ್ರಿ ಇಲ್ಲಿ ಯಾವುದಾದರೂ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡಿದ್ದೇವೆಯೇ? ನಾವು ಇಂದು ರಾತ್ರಿ ಇಲ್ಲಿ ಯಾವುದೇ ನಿರ್ದಿಷ್ಟ ಸರ್ಕಾರ ಅಥವಾ ನಾಯಕನನ್ನು ಗುರಿಯಾಗಿಸಿಕೊಂಡಿದ್ದೇವೆಯೇ? ಈ ಕಾರ್ಯಕ್ರಮವೂ ಭಾರತವನ್ನು ಅವಮಾನಿಸಿದೆಯ? ನೀವು ಭಾರತೀಯರಾಗಿರಲು ನಾಚಿಕೆಪಡುವಂತೆ ಮಾಡಿದೆಯೇ?” ಎಂದು ಅವರು ಕೇಳುತ್ತಾರೆ. ಈ ವೇಳೆ ಪ್ರೇಕ್ಷಕರು ಇಲ್ಲ ಎಂದು ಹೇಳುತ್ತಾರೆ.

ಇದನ್ನೂ ಓದಿ: ಮುನವ್ವರ್ ಫಾರೂಕಿ ಮತ್ತು ಮಾಬ್

“ಈ ಪ್ರದರ್ಶನವು ನಿಮಗೆ ಭಾರತೀಯರಾಗಿರುವುದಕ್ಕೆ ಹೆಮ್ಮೆ ತಂದಿದೆಯೇ?’’ ಅವರು ಕೇಳುತ್ತಾರೆ. ಅದಕ್ಕೆ ಪ್ರೇಕ್ಷಕರು ‘ಹೌದು’ ಎಂದು ಕಿರುಚುತ್ತಾರೆ. ಇದರ ನಂತರ ವೀರ್‌ ದಾಸ್ ಅವರು ‘ಕೇವಲ ಪ್ರೇಕ್ಷಕರನ್ನು ನಂಬಿ’ ಎಂದು ವೀಡಿಯೊವನ್ನು ಮುಗಿಸುತ್ತಾರೆ.

ಇದನ್ನೂ ಓದಿ: ಪುನೀತ್‌ ರಾಜ್‌ಕುಮಾರ್‌‌ ಸಂಸ್ಥೆಯ ದೇಣಿಗೆಗಾಗಿ ಆಯೋಜಿಸಿದ್ದ ಕಾರ್ಯಕ್ರಮ ರದ್ದುಗೊಳಿಸಿದ ಪೊಲೀಸರು

ಬೆಂಗಳೂರಿನಲ್ಲಿ ಸ್ಟ್ಯಾಂಡ್-ಅಪ್ ಕಾಮೆಡಿ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದು ಇದೇ ಮೊದಲಲ್ಲ. ಮುನಾವರ್‌ ಫಾರೂಕಿ ಅವರ ಎರಡು ಕಾರ್ಯಕ್ರಮಗಳು ಮತ್ತು ಕುನಾಲ್ ಕಮ್ರಾ ಅವರು ಒಂದು ಕಾರ್ಯಕ್ರಮ ಈ ಹಿಂದೆ ರದ್ದುಗೊಳಿಸಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

0
ಲೋಕಸಭೆ ಚುನಾವಣೆಗೆ "ದೇವರು ಮತ್ತು ಪೂಜಾ ಸ್ಥಳಗಳ" ಹೆಸರಿನಲ್ಲಿ ಮತ ಕೇಳುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿರುವ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ...