HomeUncategorizedಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ, ತೌಡು ಕುಟ್ಟುವ ಉದ್ದೇಶ ನಮಗಿಲ್ಲ : ಭಾಲ್ಕಿ ಮಠದ ಬಸವಲಿಂಗ...

ಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ, ತೌಡು ಕುಟ್ಟುವ ಉದ್ದೇಶ ನಮಗಿಲ್ಲ : ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ

- Advertisement -
- Advertisement -

ಕಳೆದ ವಿಧಾನಸಭಾ ಚುನಾವಣೆಗೆ ಮುಂಚೆ ಬಹುಚರ್ಚಿತವಾದ ಲಿಂಗಾಯಿತ ಧರ್ಮದ ವಿಚಾರವು ಮತ್ತೆ ಮುನ್ನೆಲೆಗೆ ಬಂದಿರುವುದು ಪೇಜಾವರರ ಪಂಥಾಹ್ವಾನದ ಕಾರಣಕ್ಕೆ. ಅದರ ಕುರಿತು ಲಿಂಗಾಯಿತ ಧರ್ಮದ ಚಳವಳಿಯ ಮುಂಚೂಣಿಯಲ್ಲಿದ್ದ ಹಿರಿಯರಾದ ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಅವರನ್ನು ನಾನುಗೌರಿ.ಕಾಂ ಮಾತಾಡಿಸಿತು.

ಪ್ರಶ್ನೆ: ಪೇಜಾವರ ಸ್ವಾಮಿಗಳು ಲಿಂಗಾಯತ ಧರ್ಮದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಯಾಕಿರಬಹುದು?
ಬಸವಲಿಂಗ ಪಟ್ಟದೇವರು ಸ್ವಾಮೀಜಿ: ಅವರಿಗೆ ಪ್ರತ್ಯೇಕ ಲಿಂಗಾಯತ ಧರ್ಮದ ಆಳವಾದ ತತ್ವಜ್ಞಾನದ ಕೊರತೆಯಿರಬಹದು ಅಥವಾ ತತ್ವಜ್ಞಾನ ಗೊತ್ತಿದ್ದರು ಅದು ಸ್ವತಂತ್ರ ಧರ್ಮ ಆಗಬಾರದೆಂಬ ಅಭಿಲಾಷೆಯೂ ಇರಬಹುದು. ಆದರೆ ಒಂದು ಮಾತ್ರ ಸತ್ಯ. ಲಿಂಗಾಯತ ಧರ್ಮ ಅದು ಸ್ವತಂತ್ರವಾದ ಧರ್ಮ. ಅದರದೇ ಆದ ಒಂದು ಸಿದ್ಧಾಂತ, ಗುರಿ, ಸಾಧನೆ, ದರ್ಶನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ನೀತಿಶಾಸ್ತ್ರ ಇದೆ. ಹೀಗಾಗಿ ಲಿಂಗಾಯತ ಧರ್ಮ ಯಾವತ್ತಿಗೂ ಪರಿಪೂರ್ಣ ಮತ್ತು ಸ್ವತಂತ್ರ ಧರ್ಮ. ಅದರಲ್ಲಿ ಎರಡು ಮಾತಿಲ್ಲ. ಚರ್ಚೆಗೆ ಹೋಗುವ ಪ್ರಶ್ನೆಯೇ ಇಲ್ಲ. ಕೊರತೆಯಿದ್ದರೆ ಮಾತ್ರ ಚರ್ಚೆಗೆ ಹೋಗಬೇಕು. ನಮ್ಮದು ಪ್ರತ್ಯೇಕ ಧರ್ಮ. ಹಿಂದೆಯೂ ಹೀಗೆ ಇತ್ತು. ಮುಂದೆಯೂ ಹೀಗೆಯೇ ಇರುತ್ತದೆ.

ಒಂದು ವಿಷಯ ಸ್ಪಷ್ಟೀಕರಣ ಮಾಡುತ್ತೇನೆ. ಹಿಂದೂ ಎನ್ನುವುದು ಒಂದು ಸಂಸ್ಕೃತಿ. ಯಾವಾಗ ಜೈನರು, ಬುದ್ಧರು, ಸಿಖ್ಖರು ಮುಂತಾದವರು ಹಿಂದೂ ಕಕ್ಷೆಯೊಳಗೆ ಬರುತ್ತಾರೋ ಆಗ ನಾವು ಸಹ ಹಿಂದೂ ಕಕ್ಷೆಯೊಳಗೆ ಬರುತ್ತೀವಿ. ಬೌದ್ಧ ಧರ್ಮ, ಜೈನಧರ್ಮ, ಸಿಖ್ ಧರ್ಮ ಹೆಂಗಿದೆಯೋ ಹಾಗೆಯೇ ಲಿಂಗಾಯತ ಧರ್ಮವೂ ಸ್ವತಂತ್ರ ಧರ್ಮ. ನಮ್ಮ ಸಂಸ್ಕೃತಿ ಬಿಟ್ಟು ಹೋಗುವುದಿಲ್ಲ. ಹಿಂದೂ ಎನ್ನುವುದು ಒಂದು ಸ್ವತಂತ್ರ ಧರ್ಮವಲ್ಲ. ಅದೊಂದು ಸಮಾಜ, ಸಂಸ್ಕೃತಿ.

ಪ್ರಶ್ನೆ: ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಈ ಚಳವಳಿ ಬಿರುಸಿನಿಂದ ನಡೆದಿತ್ತು. ಆನಂತರ ಇದು ಸ್ತಬ್ಧಗೊಂಡು ನಿಂತಿದೆ ಅನ್ನಿಸುತ್ತಿದೆ. ಹಾಗಾಗಿ ಇದು ರಾಜಕೀಯಪ್ರೇರಿತ ಅಂತ ಏಕೆ ಅನ್ನಿಸಲ್ಲ?
ಇದು ರಾಜಕೀಯ ಪ್ರೇರಿತ ಅಲ್ಲ. ಗಾಂಧೀಜಿಯವರ ಸ್ವತಂತ್ರ ಚಳವಳಿಯೂ ಒಂದೇಸಮನೇ ಎತ್ತರದಲ್ಲಿರಲಿಲ್ಲ. ಚಳವಳಿಗಳು ಯಾವಾಗಲೂ ಏರಿಕೆ ಇಳಿಕೆ, ಏರಿಕೆ ಇಳಿಕೆ ರೀತಿಯಲ್ಲಿಯೇ ಇರುತ್ತವೆ. ಆದರೆ ಚಟುವಟಿಕೆ ಮಾತ್ರ ಪೂರ್ಣ ಸ್ತಬ್ಧಗೊಂಡಿಲ್ಲ. ಸಣ್ಣ ಪ್ರಮಾಣದಲ್ಲಿ ನಮಗೇನು ಬೇಕು ಆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

ಪ್ರಶ್ನೆ: ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, 12ನೇ ಶತಮಾನದಲ್ಲಿಯೇ ಅಸ್ತಿತ್ವಕ್ಕೆ ಬಂತು ಎನ್ನುತ್ತೀರಿ, ಹಾಗಾದರೆ ಇದು ಯಾವಾಗ ವೈದಿಕೀಕರಣಗೊಂಡಿತು?
ಕಲ್ಯಾಣಕ್ರಾಂತಿ ಆದಮೇಲೆ ಇದಕ್ಕೆ ಸ್ವಲ್ಪ ಕತ್ತಲು ಆವರಿಸಿತು. ಬಸವಣ್ಣನವರ ಕ್ರಾಂತಿ, ಅಂತರ್ಜಾತಿವಿವಾಹ ಆದಮೇಲೆ ವೈದಿಕಶಾಹಿ ಮತ್ತು ರಾಜಶಾಹಿ ಎರಡು ಒಂದಾಗಿ ಇದರ ಮೇಲೆ ಆಕ್ರಮಣ ನಡೆಸಿದರಿಂದ 200-300 ವರ್ಷ ಅದು ಕತ್ತಲೆಯಲ್ಲಿಳಿಯಿತು. ಆನಂತರ ನಿಧಾನವಾಗಿ ವೈದಿಕೀಕರಣಗೊಳ್ಳಲಿಕ್ಕೆ ಪ್ರಾರಂಭವಾಯಿತು.

ಆಮೇಲೆ ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ಪ್ರೌಢದೇವರಾಯನ ಕಾಲಕ್ಕೆ ಮತ್ತದು ಸ್ವಲ್ಪ ಚೇತರಿಕೆ ಕಂಡು ನೂರೊಂದು ವಿರಕ್ತರು, ಯಡಿಯೂರು ಸಿದ್ಧಲಿಂಗೇಶ್ವರರ ಕಾಲಕ್ಕೆ ಇದು ಪುನರುಜ್ಜೀವನಗೊಂಡಿತು. ಮತ್ತೆ ಸ್ವಲ್ಪ 100 ವರ್ಷ ಇಳಿಮುಖವಾಯಿತು. ನಂತರ ಹಳಕಟ್ಟಿ ಶರಣರು ಬಂದಮೇಲೆ, ವಚನಸಾಹಿತ್ಯ ಎಲ್ಲಾ ಹೊರಗೆ ತಂದಮೇಲೆ ಇದು ನಮ್ಮತನ ಏನು ಎಂಬುದು ನಮಗೆ ಗೊತ್ತಾಯಿತು. ವಚನಸಾಹಿತ್ಯವೇ ನಮಗೆ ಮಹತ್ವ. ಅದನ್ನು ಅಧ್ಯಯನ ಮಾಡುತ್ತಾ ಹೋದಂಗೆ ನಾವು ನಿಜವಾಗಿ ಯಾರು ಎಂಬುದು ತಿಳಿಯಿತು.

ಪ್ರಶ್ನೆ: ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕೇವಲ ಮೀಸಲಾತಿಗಾಗಿಯೋ ಅಥವಾ ಮೂಲ ಅಸ್ಮಿತೆಗಾಗಿಯೋ?
ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿಯೇ ಈ ಹೋರಾಟ. ಇದೇ ನಮ್ಮ ಗಟ್ಟಿ ನಿಲುವು. ಮೀಸಲಾತಿದು ಎರಡನೇ ಪ್ರಶ್ನೆ. ಧರ್ಮಕ್ಕೆ ಮಾನ್ಯತೆ ಸಿಕ್ಕಿದ ಮೇಲೆ ಮೀಸಲಾತಿ ಸಿಗಬಹುದು, ಬಿಡಬಹುದು. ಆ ಪ್ರಶ್ನೆ ಬೇರೆ. ಆದರೆ ನಮಗೆ ಮಾನ್ಯತೆಯೇ ಮಹತ್ವದ್ದು.

ಪ್ರಶ್ನೆ: ಲಿಂಗಾಯತ ಧರ್ಮದ ಹೋರಾಟದ ನೇತೃತ್ವ ರಾಜಕಾರಣಿಗಳ ಕೈಯಲ್ಲಿರಬೇಕೊ ಅಥವಾ ಸ್ವಾಮಿಜೀಗಳ ಕೈಯಲ್ಲಿರಬೇಕೊ? ಅಥವಾ ಮಾಸ್ ಚಳವಳಿಯಾಗಿ ಜನಸಾಮಾನ್ಯರ ಕೈಯಲ್ಲಿರಬೇಕೊ?

ಹೋರಾಟಕ್ಕೆ ಎಲ್ಲರೂ ಬೇಕು. ಇವರೇ ಬೇಕು ಅವರಿರಬಾರದು ಎಂಬ ಪ್ರಶ್ನೆಯೇ ಹೋರಾಟದಲ್ಲಿ ಉದ್ಭವಿಸುವುದಿಲ್ಲ. ಹೋರಾಟದಾಗೆ ಎಲ್ಲರೂ ಇದ್ರೆ ಶಕ್ತಿ ಇರುತ್ತದೆ. ರಥ ಎಳೆಯಬೇಕಾದರೆ ಎಲ್ಲರ ಕೈಗೂಡಬೇಕು. ಒಬ್ಬರೇ ರಥ ಎಳೆಯಲಾಗುವುದಿಲ್ಲ.

ಪ್ರಶ್ನೆ: ಲಿಂಗಾಯತ ಚಳವಳಿಯು ಮಂಟೇಸ್ವಾಮಿ, ಮಲೆ ಮಹದೇಶ್ವರ ಪರಂಪರೆಯನ್ನು ಹೇಗೆ ನೋಡುತ್ತದೆ? ಆ ಪರಂಪರೆ ಯಾಕೆ ಮುನ್ನೆಲೆಗೆ ಬರಲಿಲ್ಲ?
ಮೈಸೂರು ಭಾಗದಲ್ಲಿ ಅವರ ಕೊಡುಗೆ ಮಹತ್ವದ್ದು. ಆ ಭಾಗದಲ್ಲಿ ಬಸವ ತತ್ವ, ಲಿಂಗತತ್ವ ಉಳಿದು ಬೆಳೆಯಲ್ಲಿಕ್ಕೆ ಅವರ ಅಪಾರ ಕೊಡುಗೆ ಇದೆ. ಮಂಟೇಸ್ವಾಮಿ, ಮಲೆ ಮಹದೇಶ್ವರರು ಸಹ ಶರಣ ಪರಂಪರೆಯವರೆ ಅಲ್ಲವೇ? ಆದರೆ ಅದನ್ನು ಪೌರಾಣೀಕರಿಸಲಾಗಿದೆ. ಈ ಭಾಗದಲ್ಲಿ ಷಣ್ಮುಗ ಶಿವಯೋಗಿಗಳು ಬಂದು ಈ ಸುತ್ತಾಮುತ್ತಾ ಜಾಗೃತಿ ಹೇಗೆ ಮಾಡಿದರೋ ಹಾಗೆಯೇ ಮೈಸೂರು ಭಾಗಕ್ಕೆ ಅವರು ಜಾಗೃತಿ ಮಾಡಿದ್ದಾರೆ. ಅವರು ಶರಣ ಪರಂಪರೆಯ ಭಾಗವೇ ಹೊರತು ಬೇರೆ ಅಲ್ಲ.

ಪ್ರಶ್ನೆ: ಲಿಂಗಾಯತ ತತ್ವ. ಜೀವಪರ ಮತ್ತು ಜನಪರ ತತ್ವ. ಎಲ್ಲರನ್ನು ಒಳಗೊಳ್ಳುತ್ತದೆ. ಮೌಢ್ಯಾಚರಣೆಯ ಬಗ್ಗೆಯೂ, ಜಾತ್ಯತೀತತೆಯ ಬಗ್ಗೆಯೂ ಮಾತಾಡುತ್ತೀರಿ. ಆದರೆ ಇದು ಬೋಧನೆ ಮಟ್ಟದಲ್ಲಿ ಜಾಸ್ತಿಯಿದ್ದು ಆಚರಣೆಯಲ್ಲಿ ಕಡಿಮೆ ಇದೆ ಎಂದು ನಿಮಗೆ ಅನ್ನಿಸುವುದಿಲ್ಲವೇ?
ತತ್ವ ತಿಳಿದವರು ಆಚರಣೆಯಲ್ಲಿ ನಿಧಾನ ಮಾಡುತ್ತಿದ್ದಾರೆ ನಿಜ. ಒಂದೇದಿನ ಒಂದೇ ಸಮಯದಲ್ಲಿ ಬದಲಾವಣೆಯಾಗುವುದಿಲ್ಲ. ಮೊದಲು ಜಾಗೃತಿ ಬೇಕು. ಒಂದೇ ದಿನದಲ್ಲಿ ಶರಣ ತತ್ವ ಆಚರಣೆಗೆ ಬರಲು ಸಾಧ್ಯವಿಲ್ಲ. ಕ್ರಮವಾಗಿ ನಡೆದು ಬಸವತತ್ವ ಪಾಲಕರು ಆಗುತ್ತಾರೆ.

ಪ್ರಶ್ನೆ: ಮುಂದಿನ ಹೋರಾಟದ ರೂಪುರೇಷೆಯೇನು?
ಮೊದಲು ಜಾಗೃತಿ ಮಾಡುವುದು. ಅಲ್ಲಲ್ಲಿ ಸಮಾವೇಶ ನಡೆಸುವುದು ಸಮಾವೇಶದ ಗುರಿಯಾಗಿದೆ. ಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ ತೌಡು ಕುಟ್ಟುವ ಉದ್ದೇಶ ನಮಗಿಲ್ಲ. ನಮ್ಮ ತತ್ವ ಸಿದ್ದಾಂತ ಇದೆ. ಅದರ ಪ್ರಕಾರ ನಾವು ಹೋಗುತ್ತೇವೆ.

ಪ್ರಶ್ನೆ: 99 ಪಂಗಡಗಳು ನಿಮ್ಮ ಜೊತೆಗಿದ್ದಾವೆಯೇ?
ಎಲ್ಲರೂ ಜೊತೆಗಿದ್ದಾರೆ. ಹಡಪದ ಅಪ್ಪಣ್ಣ, ಮಾದಾರ ಚನ್ನಯ್ಯ, ಡೋಹಾರ ಕಕ್ಕಯ್ಯ ಎಲ್ಲರೂ ನಮ್ಮ ಜೊತೆಗಿದ್ದಾರೆ.

ಸಂದರ್ಶನ: ಸಿದ್ದಪ್ಪ ಮೂಲಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...