ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಮತ್ತು ಭೇಟಿ ಹಿನ್ನೆಲೆ ಪ್ರಮುಖ ಮೂಲಸೌಕರ್ಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 24 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
ಈ 24 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆಗಳಿಗೆ ಟಾರ್ ಹಾಕುವುದು, ರಸ್ತೆ ಗುಂಡಿಗಳನ್ನು ಮುಚ್ಚುವುದು, ಹೊಸದಾಗಿ ಟಾರ್ ಹಾಕಿರುವ ರಸ್ತೆಗಳಿಗೆ ಬಿಳಿ ಪಟ್ಟಿಗಳನ್ನು ಎಳೆಯುವುದು, ಚರಂಡಿ ಸರಿಪಡಿಸುವುದು ಸೇರಿದಂತೆ ಬಹಳ ವರ್ಷಗಳಿಂದ ಹಾಗೆ ಉಳಿದಿದ್ದ ಇನ್ನಿತರ ಕೆಲಸಗಳು ಸೇರಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಮಾತನಾಡಿ, ‘ಕೋಮಘಟ್ಟ ಮತ್ತು ಹೆಬ್ಬಾಳ ಸುತ್ತಮುತ್ತಲಿನ ರಸ್ತೆಗಳನ್ನು ಸರಿಪಡಿಸಲು 14 ಕೋಟಿ ರೂಪಾಯಿ ವೆಚ್ಚವಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ: ‘ಎಷ್ಟು ಮಾಜಿ ಸೈನಿಕರಿಗೆ ಕೆಲಸ ಕೊಟ್ಟಿದ್ದೀರಿ?’: ಅನಂದ್ ಮಹೀಂದ್ರಾಗೆ ಮಾಜಿ ಸೈನಿಕರ ಗಂಭೀರ ಪ್ರಶ್ನೆ
ಈಗಿರುವ ಬೀದಿ ದೀಪಗಳನ್ನು ಸರಿಪಡಿಸಲು, ಹೊಸದಾಗಿ ಬೀದಿ ದೀಪಗಳನ್ನು ಅಳವಡಿಸಲು, ಪಾದಚಾರಿ ಮಾರ್ಗಗಳನ್ನು ನಿರ್ಮಿಸಲು ಮತ್ತು ಕಾಂಕ್ರೀಟ್ ಚಪ್ಪಡಿಗಳನ್ನು ಹಾಕಿ ಚರಂಡಿಗಳನ್ನು ಸರಿಪಡಿಸಲು 10 ಕೋಟಿ ರೂಪಾಯ ವೆಚ್ಚವಾಗಿ ಎಂದು ಮಾಹಿತಿ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಾಹಿತಿಯ ಪ್ರಕಾರ ತುರ್ತು ಸಂದರ್ಭದಲ್ಲಿ ಅನುದಾನ ಬಳಸಬಹುದಾದ ʻವಿವೇಚನ ಅನುದಾನದಡಿʼ ಈ ವೆಚ್ಚವನ್ನು ಭರಿಸಲಾಗಿದೆ. ಆದರೆ, ಕಳೆದ 1.5 ವರ್ಷಗಳಿಂದ ನಾಗರಿಕ ಸಂಸ್ಥೆಗಳು ಇಲ್ಲಿನ ರಸ್ತೆಗಳು, ರಸ್ತೆ ಗುಂಡಿಗಳು, ಚರಂಡಿಯನ್ನ ಸರಿಪಡಿಸಲು ಹಲವು ಬಾರಿ ಮನವಿ ಮಾಡಿದ್ದರೂ ಏನಾಗಿರಲಿಲ್ಲ. ಆದರೆ, ಪ್ರಧಾನಿಯವರ ಭೇಟಿ ಹಿನ್ನೆಲೆ ಕೇವಲ 4 ದಿನಗಳಲ್ಲಿ ಎಲ್ಲಾ ಕೆಲಸವಾಗಿದೆ.

ಇನ್ನು ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿಯವರು ಐಐಎಸ್‌ಸಿಯಲ್ಲಿ ಬ್ರೈನ್ ಸೆಲ್ ರಿಸರ್ಚ್ ಸೆಂಟರ್ ಮತ್ತು 800ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯವಿರುವ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ. 15 ಸಾವಿರ ಕೋಟಿ ವೆಚ್ಚದ ಸಬ್ ಅರ್ಬನ್ ರೈಲು ಯೋಜನೆ ಮತ್ತು 35 ಸಾವಿರ ಕೋಟಿ ವೆಚ್ಚದ ಬೆಂಗಳೂರು ಮತ್ತು ಹೊರ ವರ್ತುಲ ರಸ್ತೆ (ರಿಂಗ್ ರೋಡ್) ಅಭಿವೃದ್ಧಿ ಯೋಜನೆಗೆ ಅಡಿಪಾಯ ಹಾಕಿದ್ದಾರೆ.
ಇದನ್ನೂ ಓದಿ: ಹಿಂದೆ ಇದ್ದಂತೆ ಎಲ್ಲ ಕನ್ನಡ ಸಿನಿಮಾಗಳಿಗೂ ತೆರಿಗೆ ವಿನಾಯಿತಿ ನೀಡಿ: ಸಿಎಂಗೆ ನಿರ್ದೇಶಕ ಮಂಸೋರೆ ಆಗ್ರಹ