Homeಅಂಕಣಗಳುಬೆಂಗಳೂರಿಗರು ಓದಲೇಬೇಕಾದ ಪುಸ್ತಕ 'ಬೆಂಗಳೂರು ಪರಂಪರೆ'

ಬೆಂಗಳೂರಿಗರು ಓದಲೇಬೇಕಾದ ಪುಸ್ತಕ ‘ಬೆಂಗಳೂರು ಪರಂಪರೆ’

ಬೆಂಗಳೂರಿನಲ್ಲಿ ಅರ್ಕಾವತಿ, ದಕ್ಷಿಣ ಪಿನಾಕಿನಿ, ವೃಷಭಾವತಿ, ಕಣ್ವಾ ಮತ್ತು ಕುಮದ್ವತಿ ಎಂಬ ನದಿಗಳು ಹರಿಯುತ್ತಿದ್ದುದು, ನಾವು ಇಂದು ಅವೆಲ್ಲವನ್ನೂ ಕಳೆದುಕೊಂಡಿರುವುದು ನಮ್ಮ ಪರಿಸರಪ್ರಜ್ಞೆಯ ಬಗ್ಗೆ ನಮಗಿರುವ ಹೊಣೆಗಾರಿಕೆಯನ್ನು ಪ್ರಶ್ನಿಸುತ್ತದೆ.

- Advertisement -
- Advertisement -

ಚರಿತ್ರೆಯ ದಾಖಲೀಕರಣದ ವಿಷಯದಲ್ಲಿ ಹಲವು ಆಯಾಮಗಳಿವೆ. ಈ ಆಯಾಮಗಳು ಆಯಾ ಚರಿತ್ರಕಾರನ ಆಸಕ್ತಿ, ಒಲವು, ನಿಲುವು, ದೃಷ್ಟಿ, ತಾನು ಪ್ರತಿನಿಧಿಸುವ ಕ್ಷೇತ್ರ, ಗುಂಪು, ಸಮುದಾಯ, ರಾಜಕೀಯ ಪಕ್ಷ – ಇವೆಲ್ಲದರ ಮೇಲೆ ಅವಲಂಬಿತವಾಗಿರುವ ಸಾಧ್ಯತೆಗಳಿರುತ್ತವೆ. ಆಗ ನಿಷ್ಪಕ್ಷಪಾತವಾಗಿರದ ಚರಿತ್ರೆಯು ಅನೇಕ ಸಲ ಕೃತಕ ಮತ್ತು ಉತ್ಪ್ರೇಕ್ಷೆಯ ಬಣ್ಣಗಳನ್ನು ಪಡೆದುಕೊಂಡು ವಿಜೃಂಭಿಸುತ್ತವೆ. ಹೀಗಾಗಿ ಚರಿತ್ರೆಯ ದಾಖಲೀಕರಣದಲ್ಲಿ ಲಭ್ಯವಾಗಿರುವ ಅಂಶಗಳಿಗಿಂತ ಊಹೆಗಳನ್ನೇ ಪದೇಪದೇ ಉಲ್ಲೇಖಿಸುತ್ತಾ ಜನರ ನಡುವೆ ಮಿಥಿಕಗಳ ಸೃಷ್ಟಿಸಲಾಗುತ್ತದೆ. ತಾವು ಗುರುತಿಸಿಕೊಳ್ಳುವ ಯಾವುದೋ ಒಂದರ ಎಳೆಯೂ ಈ ಆಕರ್ಷಕವಾದ ಮಿಥ್‍ಗಳು ಜೊತೆಗೆ ನೇಯ್ಗೆಯಲ್ಲಿ ಬೆಸೆದುಕೊಂಡಿರುವುದರಿಂದ ಮಿಥಿಕಗಳನ್ನೇ ಪ್ರಚಾರ ಮಾಡುತ್ತಾ ಅದನ್ನೇ ಚರಿತ್ರೆಯನ್ನಾಗಿಸಿಬಿಡುತ್ತಾರೆ. ಇಂತಹ ಚಾರಿತ್ರಿಕ ದ್ರೋಹಗಳು ವಿಶ್ವದ ಎಲ್ಲಾ ದೇಶಗಳಲ್ಲಿ ಇದ್ದರೂ, ನಮ್ಮ ದೇಶದಲ್ಲಂತೂ ವಿಪರೀತವಾಗಿವೆ. ಸಂಶೋಧಕನಿಗಿರಬೇಕಾಗಿರುವ ಶಿಸ್ತು, ಶ್ರದ್ಧೆ ಮತ್ತು ನಿಷ್ಪಕ್ಷಪಾತ ಗುಣಗಳು ಚರಿತ್ರೆಯ ವಿದ್ಯಾರ್ಥಿಗೂ ಇರಬೇಕಾಗುತ್ತದೆ. ತಾನು ಒಪ್ಪುವ, ತಪ್ಪು ಎನ್ನಬಹುದಾದ, ಒಪ್ಪಲು ಇಷ್ಟಪಡುವ ಅಂಶಗಳಿಗೆ ವ್ಯತಿರಿಕ್ತವಾಗಿರುವಂತಹ ಸಾಕ್ಷ್ಯಗಳು, ದಾಖಲೆಗಳು ಕೂಡಾ ಅಧ್ಯಯನದಲ್ಲಿ ಎಡತಾಕಬಹುದು.

ಅವುಗಳೆಲ್ಲವನ್ನೂ ಸಮದೃಷ್ಟಿಯಿಂದ ಮತ್ತು ವಾಸ್ತವದ ಚಿತ್ರಣವನ್ನು ಸಾಕ್ಷೀಕರಿಸುವ ಶ್ರದ್ಧೆಯಿಂದ ಆತ್ಮದ್ರೋಹ ಮಾಡದೇ ಚರಿತ್ರೆಯ ದಾಖಲೆಗೆ ಅಥವಾ ಮರುದಾಖಲೆಗೆ ಅಥವಾ ವಿಶ್ಲೇಷಣೆಗೆ ಮುಂದಾಗಬೇಕಾಗುತ್ತದೆ. ತನ್ನ ಯಾವ ಪೂರ್ವಾಗ್ರಹಗಳೂ ತಾನು ಮಾಡುತ್ತಿರುವ ದಾಖಲೀಕರಣದಲ್ಲಿ ನುಸುಳದಂತೆ ತನ್ನನ್ನು ತಾನು ಎಚ್ಚರಿಕೆಯಿಂದ ಕಾಯ್ದುಕೊಳ್ಳುವ ಬಾಧ್ಯತೆ ಇತಿಹಾಸದ ಪುಸ್ತಕಗಳನ್ನು ಬರೆಯುವವನಿಗಿರುತ್ತದೆ. ತನ್ನಿಂದ ತಪ್ಪಾದರೂ ತಾನು ಸುಳ್ಳು ಹೇಳದಿರುವಂತಹ ವಿವೇಚನೆಯನ್ನು ಆತ ಹೊಂದಿರಬೇಕಾಗುತ್ತದೆ. ಇಂತಹ ವಿವೇಚನೆ ಮತ್ತು ಬಾಧ್ಯತೆಯಿಂದಲೇ ಬರೆದಿರುವ ಇತಿಹಾಸದ ಪುಸ್ತಕ ಎಸ್ ಕೆ ಅರುಣಿಯವರ ‘ಬೆಂಗಳೂರು ಪರಂಪರೆ’. ಇತಿಹಾಸ ಸಂಶೋಧನೆಯ ಹೊಸ ನೋಟಗಳು ನನಗೆ ಈ ಪುಸ್ತಕದಲ್ಲಿ ಕಂಡಿತು.

photo courtesy: Wikipedia

ಬೆಂಗಳೂರು ಪರಂಪರೆಯನ್ನು ಓದುವಾಗ ಬೆಂಗಳೂರಿಗರೆಂದು ಗುರುತಿಸಿಕೊಳ್ಳುವವರಿಗೆ ಹಲವು ರೀತಿಯ ಭಾವನೆಗಳು ಉಂಟಾಗುತ್ತವೆಂದು ನನಗನಿಸುತ್ತದೆ. ಒಂದು, ಇಂದಿನ ಬೆಂಗಳೂರಿನ ವಿಸ್ತೃತ ಸ್ವರೂಪದ ಮುಂಚಿನ ಮೂಲ ರೂಪದ ಪರಿಚಯ ಕುತೂಹಲವೂ ಮತ್ತು ಆಸಕ್ತಿಕರವೂ ಆಗಿರುವುದು. ಎರಡು, ಈ ಬೆಂಗಳೂರನ್ನು ರೂಪಿಸಿದ, ನಿರ್ಮಿಸಿದ, ವಿಸ್ತರಿಸಿದ ಮತ್ತು ಇದರ ಬೆಳವಣಿಗೆಗೆ ಕಾಣ್ಕೆಗಳನ್ನು ನೀಡಿದ ಹಾಗೂ ಈ ನೆಲವನ್ನು ಪರಕೀಯರಿಂದ ಉಳಿಸಲು ಹೆಣಗಾಡಿ ಹೆಣವಾದ ಅನೇಕಾನೇಕ ಮಹನೀಯರನ್ನು ಅಭಿಮಾನದಿಂದ ಸ್ಮರಿಸುವುದಾಗುತ್ತದೆ. ಮೂರು, ಪಾರಂಪರಿಕವಾಗಿ ಬೆಂಗಳೂರು ಎಷ್ಟು ಗಮನೀಯವೋ ಪರಿಸರದ ದೃಷ್ಟಿಯಿಂದಲೂ ಆಗಿರುವ ಬದಲಾವಣೆಗಳ ಸೂಕ್ಷ್ಮಗಳನ್ನು ಸಾಲುಗಳ ಅಂತರದಲ್ಲಿ ಗುರುತಿಸಲು ಸಹಾಯ ಮಾಡುವುದು. ನಾಲ್ಕು, ಬೆಂಗಳೂರೆಂಬ ಮಹಾನಗರವು ಯುದ್ಧಗಳನ್ನು, ಸಂಧಾನಗಳನ್ನು, ಏಳ್ಗೆಗಳನ್ನು, ಪಲ್ಲಟಗಳನ್ನು, ಬೀಳುಗಳನ್ನು ಸಾಕ್ಷೀಕರಿಸಿದೆ. ಅದನ್ನು ತಿಳಿಯುವ ನಮಗೆ ಹೊಣೆಯರಿತ ನಡೆಗಳನ್ನು ಹೊಂದುವ ಸ್ಫೂರ್ತಿಯನ್ನು ನೀಡುವುದು. ಐದು, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಅಂಶಗಳನ್ನೆಲ್ಲಾ ಒಳಗೊಳ್ಳುವ ಐತಿಹಾಸಿಕ ಪ್ರಜ್ಞೆಯು ವ್ಯಕ್ತಿಗತವಾಗಿ ಬಾಳುತ್ತಾ ನೆಲದ ಸಂವೇದನೆಯ ಜೊತೆಗೆ ಬೆಸೆದುಕೊಳ್ಳಲು ಪ್ರೇರಣೆ ನೀಡುತ್ತದೆ.

photo courtesy: Wikipedia

ಪ್ರಾಗೈತಿಹಾಸಿಕ ಕಾಲದ ಇತಿಹಾಸವನ್ನು ಹೇಳುತ್ತಾ ಕಬ್ಬಿಣಯುಗದ ಸಂಸ್ಕೃತಿಯ ವಿವರಗಳನ್ನು ಅರುಣಿ ನೀಡುತ್ತಾರೆ. ಲೋಹ ವಿಜ್ಞಾನದಲ್ಲಿ, ಅದರಲ್ಲಿಯೂ ಕಬ್ಬಿಣದ ವಿಷಯದಲ್ಲಿ ಕರ್ನಾಟಕ ಬಹಳ ಮುಂದುವರಿದ ಪ್ರದೇಶವಾಗಿತ್ತು. ಮೆಟಲರ್ಜಿಯು ಬಹಳ ಉನ್ನತ ಮಟ್ಟದ ಸಂಸ್ಕಾರ ಮತ್ತು ಬಳಕೆಯಲ್ಲಿರುವುದಕ್ಕೆ ಅನೇಕ ಕುರುಹುಗಳಿವೆ. ಅವನ್ನು ಈ ಕೃತಿಯಲ್ಲಿಯೂ ಸೂಚಿತವಾಗಿ ಕಾಣಿಸಿದ್ದಾರೆ.

ಬೆಂಗಳೂರಿನಲ್ಲಿ ಅರ್ಕಾವತಿ, ದಕ್ಷಿಣ ಪಿನಾಕಿನಿ, ವೃಷಭಾವತಿ, ಕಣ್ವಾ ಮತ್ತು ಕುಮದ್ವತಿ ಎಂಬ ನದಿಗಳು ಹರಿಯುತ್ತಿದ್ದುದು, ನಾವು ಇಂದು ಅವೆಲ್ಲವನ್ನೂ ಕಳೆದುಕೊಂಡಿರುವುದು ನಮ್ಮ ಪರಿಸರಪ್ರಜ್ಞೆಯ ಬಗ್ಗೆ ನಮಗಿರುವ ಹೊಣೆಗಾರಿಕೆಯನ್ನು ಪ್ರಶ್ನಿಸುತ್ತದೆ.

ಶಿಲಾಯುಗದಿಂದ ಪ್ರಾರಂಭವಾಗುವ ಬೆಂಗಳೂರಿನ ಪರಿಚಯದ ಈ ಕೃತಿ ಕೌತುಕ ಮತ್ತು ಆಸಕ್ತಿಯಿಂದ ಓದಿಸಿಕೊಳ್ಳುವ ಪುಸ್ತಕವಾಗಿದೆ. ನಿರ್ದಿಷ್ಟ ಕ್ಷೇತ್ರದ ಅಧ್ಯಯನಶೀಲ ವಿದ್ಯಾರ್ಥಿಗೆ ಅದೆಷ್ಟು ಉಪಯುಕ್ತವೋ, ಹಾಗೆಯೇ ಸಾಮಾನ್ಯ ಓದಿಗೆ ಕೂಡಾ ಕುತೂಹಲಕರವಾಗಿದೆ.

1537ರಲ್ಲಿ ನಾಡಪ್ರಭು ಹಿರಿಯ ಕೆಂಪೇಗೌಡರು ನಿರ್ಮಾಣ ಮಾಡಿದ ಬೆಂಗಳೂರು ಪ್ರಮುಖ ವಾಣಿಜ್ಯಕೇಂದ್ರವಾಗಿದ್ದರಿಂದ ಹಂತಹಂತವಾಗಿ ಬೆಳೆದುಬಂದ ಬಗೆಯನ್ನು ರೋಚಕ ಭಾಷೆಯಲ್ಲಿ ಅರುಣಿ ವಿವರಿಸುತ್ತಾ ಬರುತ್ತಾರೆ. ಈಗಲೂ ನಾವು ನಿತ್ಯ ನೋಡುತ್ತಿರುವ ಬೆಂಗಳೂರಿನ ವಿವಿಧ ಕಟ್ಟಡಗಳು, ದೇವಸ್ಥಾನಗಳು, ಕೋಟೆಗಳ ವೈಶಿಷ್ಟ್ಯ ಮತ್ತು ಸ್ವಂತಿಕೆಯ ದೃಷ್ಟಿಯ ಕತೆಗಳು ತೆರೆದುಕೊಳ್ಳುವ ರೀತಿ ಸಾಮಾನ್ಯ ಓದುಗನ ಆಕರ್ಷಣೆಯನ್ನು ಹಿಡಿದಿಡುತ್ತದೆ. ನಮ್ಮ ಬೆಂಗಳೂರು ಎಂದು ಹೆಮ್ಮೆಯಿಂದ ಅಭಿಮಾನಿಸುವವರು ಕೊಡುಗೆಯಾಗಿ ಈ ಪುಸ್ತಕವನ್ನು ಇತರರಿಗೆ ನೀಡುವಮಟ್ಟಿಗಿನ ಗುಣಮಟ್ಟವನ್ನು ಈ ಕೃತಿ ಕಾಯ್ದುಕೊಂಡಿದೆ.

photo courtesy: Banglore Mirror

1791ರಲ್ಲಿ ಬೆಂಗಳೂರಿನ ರಕ್ಷಣೆಗೆ ಬಲಿದಾನ ಮಾಡಿದ ಕಿಲ್ಲೆದಾರ ಬಹದ್ದೂರ್ ಖಾನ್‍ನ ಅಧ್ಯಾಯವನ್ನು ಓದಿ ಹೇಳುತ್ತಿದ್ದರೆ ಕೇಳುಗರ ಕಣ್ಣಾಲಿಗಳು ತುಂಬಿಬರುವಷ್ಟು ಭಾವುಕವೂ ಮತ್ತು ಆಪ್ತವೂ ಆಗಿದೆ. 1791-92ರ ಮೂರನೆಯ ಆಂಗ್ಲೋ ಮೈಸೂರು ಯುದ್ಧವೆಂದರೆ ಅದು ಮರಾಠರು, ಹೈದರಾಬಾದ್ ನಿಜಾಮರು ಮತ್ತು ಬ್ರಿಟಿಷರು ಟಿಪ್ಪುಸುಲ್ತಾನನ ವಿರುದ್ಧ ಕೈಗೊಂಡ ಸಮರ. ಆಗ ಬೆಂಗಳೂರನ್ನು ವಶಪಡಿಸಿಕೊಳ್ಳುವ ಭರಾಟೆಯಲ್ಲಿ ಅತ್ಯಂತ ಶೂರನಾದ ಕಿಲ್ಲೆದಾರ ಈ ಬಹುದ್ದೂರ್ ಖಾನ್. ಅವನು ಟಿಪ್ಪುನಿಂದ ನೇಮಿಸಲ್ಪಟ್ಟವನು. ಭಾರೀ ಪ್ರಮಾಣದಲ್ಲಿ ಆಕ್ರಮಣಕಾರರಿಗೆ ಹಿನ್ನಡೆಯನ್ನುಂಟುಮಾಡಿದ ಬಹುದ್ದೂರ್ ಖಾನ್ ಕೊನೆಗೆ ಬಲಿಯಾಗುತ್ತಾನೆ. ತನ್ನ ಎಪ್ಪತ್ತನೆಯ ವಯಸ್ಸಿನಲ್ಲಿಯೂ ಖಡ್ಗ ಹಿಡಿದು ಹೋರಾಡಿದ ಈ ವೀರನನ್ನು ಬ್ರಿಟಿಷರೂ ಗೌರವಿಸುತ್ತಾರೆ. ಬೆಂಗಳೂರಿನ ಕೆ ಆರ್ ಮಾರ್ಕೆಟ್ ಬಳಿಯೇ ಇವರ ಸಮಾಧಿ ಅಥವಾ ದರ್ಗಾ ಇದೆ. ಮರಣಿಸಿದರೂ ಯುದ್ಧದ ನಾಯಕನಾಗಿ ಹೊಮ್ಮಿದ ಬಹುದ್ದೂರ್ ಖಾನ್‍ನ ಕತೆಗಳಂತೆಯೇ ಅನೇಕಾನೇಕ ವಿಷಯಗಳು ಬೆಂಗಳೂರನ್ನು ಅಭಿಮಾನದಿಂದ ಆಪ್ತವಾಗಿಸಿಕೊಳ್ಳಲು ನಮಗೆ ಈ ಪುಸ್ತಕ ನೆರವಾಗುತ್ತದೆ.

ಸಾವಿರ ಸಲ ತಿರುಗಾಡಿದ್ದರೂ ನಮ್ಮ ಕಣ್ತಪ್ಪಿಹೋಗಿರುವ ಅನೇಕಾನೇಕ ಸ್ಮಾರಕಗಳು ಈಗಲೂ ಉಸಿರಾಡುತ್ತಿವೆ. ಬೆಂಗಳೂರು ಪರಂಪರೆ ಅವುಗಳ ಕಡೆಗೆ ದೃಷ್ಟಿ ಹರಿಸುವಂತೆ ಮಾಡುವುದಲ್ಲದೇ, ಇತಿಹಾಸವನ್ನೂ ಬಿಚ್ಚಿಡುತ್ತಾ ಹೋಗುತ್ತದೆ. ಅಧ್ಯಯನಶೀಲರನ್ನು ಮತ್ತು ಸಾಮಾನ್ಯ ಓದುಗರನ್ನು ಸಮಾನವಾಗಿ ಗಮನ ಸೆಳೆಯುವ ಕೃತಿ ಇದು.


ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಮೇಲೆ ಪೊಲೀಸರ ದೌರ್ಜನ್ಯ, ಪ್ರತಿಭಟನೆಗೆ ಅಡ್ಡಿ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...