Homeಕರ್ನಾಟಕಬೆಂಗಳೂರು: ಅರ್ಚನಾ ರೆಡ್ಡಿ ಬರ್ಬರ ಹತ್ಯೆ ಪ್ರಕರಣದಲ್ಲಿ ಹೆತ್ತ ಮಗಳು, ಪತಿ ಸೇರಿ 7 ಮಂದಿ...

ಬೆಂಗಳೂರು: ಅರ್ಚನಾ ರೆಡ್ಡಿ ಬರ್ಬರ ಹತ್ಯೆ ಪ್ರಕರಣದಲ್ಲಿ ಹೆತ್ತ ಮಗಳು, ಪತಿ ಸೇರಿ 7 ಮಂದಿ ಬಂಧನ

- Advertisement -
- Advertisement -

ಬೆಂಗಳೂರಿನ ಆನೇಕಲ್-ಜಿಗಣಿ ರಸ್ತೆಯಲ್ಲಿ ಸೋಮವಾರ (ಡಿಸೆಂಬರ್ 27) ರಾತ್ರಿ 38 ವರ್ಷದ ಅರ್ಚನಾ ರೆಡ್ಡಿಯವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಆಕೆಯ ಎರಡನೇ ಪತಿ, ಹೆತ್ತ ಮಗಳು ಸೇರಿದಂತೆ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಕರಣವನ್ನು ಬೇಧಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ನೂರಾರು ಕೋಟಿ ಮೌಲ್ಯದ ಆಸ್ತಿಗೆ ವಾರಸುದಾರರಾಗಿದ್ದ ಅರ್ಚನಾ ರೆಡ್ಡಿಯವರ ಆಸ್ತಿ ಕಬಳಿಕೆ ಮಾಡಲು ಹತ್ಯೆಗೆ ಸಂಚು ರೂಪಿಸಿದ್ದ ಮಗಳು ಯುವಿಕಾ ರೆಡ್ಡಿ, ಎರಡನೇ ಪತಿ ನವೀನ್ ಕುಮಾರ್‌ ಮತ್ತು ಆತನ ಸಹಚರ ಸಂತೋಷ್ ಸೇರಿ 7 ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು 21 ವರ್ಷದ ಯುವಿಕಾ ರೆಡ್ಡಿ, ನವೀನ್ ಕುಮಾರ್‌, ಸಂತೋಷ್, ಅನೂಪ್, ಆನಂದ್, ದೀಪಕ್, ನರೇಂದ್ರ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಹೊಸ ವರ್ಷದ ಸಂಭ್ರಮಾಚರಣೆಗೆ ನಿರ್ಬಂಧ: ಇಂದು ಸಂಜೆ 6 ರಿಂದ ಬೆಂಗಳೂರಿನಲ್ಲಿ ಕರ್ಫ್ಯೂ ಜಾರಿ

ಅರ್ಚನಾ ರೆಡ್ಡಿ ಮಗಳು ಯುವಿಕಾ ಮತ್ತು ಎರಡನೇ ಪತ್ನಿ ನವೀನ್ ಕುಮಾರ್‌ ನಡುವೆ ಸಲುಉಗೆ ಬೆಳೆದಿತ್ತು. ಇದರಿಂದ ಕೊಪಗೊಂಡಿದ್ದ ಆಕೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಣಕಾಸಿನ ವಿಷಯ ಮತ್ತು ವೈಯಕ್ತಿಕ ಕಾರಣಗಳಿಂದ ಆಗ್ಗಾಗೆ ಮೂವರ ನಡುವೆ ಜಗಳವಾಗುತ್ತಿತ್ತು.

ಮಗಳು ಮತ್ತು ನವೀನ್ ಕುಮಾರ್‌ ಮನೆ ಬಿಟ್ಟು ಹೊರಟುಹೊಗಿದ್ದರು. ಇದರಿಂದ ಕೋಪಗೊಂಡಿದ್ದ ಮೃತ ಅರ್ಚನಾ, ಮಗಳ ಬ್ಯಾಂಕ್ ಖಾತೆಗಳನ್ನು ಬಂದ್ ಮಾಡಿಸಿದ್ದರು. ಅರ್ಚನಾ ಹೆಸರಲ್ಲಿ ಕೋಟಿಗಟ್ಟಲೆ ಆಸ್ತಿ ಇದದ್ದರಿಂದ ಆಸ್ತಿ ಕಬಳಿಸಲು ಆಕೆಯ ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಬೆಂಗಳೂರು: ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಮಹಿಳೆಯ ಬರ್ಬರ ಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...